TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಬಾಹುಬಲಿ ವಿಮರ್ಶೆ : ಓಕೆ, ಆದರೆ ಅಂಥ ನಿರೀಕ್ಷೆ ಬೇಡ
ಬಾಹುಬಲಿ ಚಿತ್ರ ಮಯೂರ ಚಿತ್ರದ ಕಥೆಯಿಂದ ಸ್ಪೂರ್ತಿ ಪಡೆದ ಚಿತ್ರವೆಂದು ಸುದ್ದಿಯಾಗಿತ್ತು. ಆದರೆ ಕೆಲವು ದೃಶ್ಯಗಳು ಮಯೂರ ಚಿತ್ರದ ಕಥೆಯನ್ನು ಹೋಲುತ್ತದೆ ಎನ್ನುವುದನ್ನು ಬಿಟ್ಟರೆ, ಒಟ್ಟಾರೆಯಾಗಿ ಇದು ಬೇರೇನೇ ಕಥಾನಕವನ್ನು ಹೊಂದಿರುವ ಚಿತ್ರ.
ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡುವ ನಿರ್ದೇಶಕ ಎಂದೇ ಹೆಸರಾಗಿರುವ ರಾಜಮೌಳಿ, ಬಾಹುಬಲಿ ಪೌರಾಣಿಕ ಹಿನ್ನಲೆಯ ಚಿತ್ರವಾಗಿರುವುದರಿಂದ ಕಥೆ, ಚಿತ್ರಕಥೆಗಿಂತ ತುಸು ಹೆಚ್ಚು ತಂತ್ರಜ್ಞಾನದ ಮೆಲೆ ತನ್ನ ಒಲವನ್ನು ತೋರಿದ್ದಾರೆ.
ಚಿತ್ರದ ಮೊದಲಾರ್ಥ ಪ್ರೇಕ್ಷಕನ ತಾಣ್ಮೆ ಪರೀಕ್ಷಿಸಿದರೆ, ದ್ವಿತೀಯಾರ್ಥದಲ್ಲಿ ತುಸು ವೇಗ ಪಡೆಯುತ್ತೆ. ಚಿತ್ರ ಇನ್ನೇನು ಫುಲ್ ಸ್ಪೀಡಿನಲ್ಲಿ ಸಾಗಲು ಆರಂಭವಾಯಿತು ಎನ್ನುವಷ್ಟರಲ್ಲೇ 'The conclusion 2016' ಎಂದು ಚಿತ್ರ ಮುಕ್ತಾಯಗೊಳ್ಳುತ್ತದೆ.
ಇದೇನು ರಾಜಮೌಳಿಗಾರು ಹೀಗೆ ಮಾಡ್ಬಿಟ್ರು ಎಂದು ಪ್ರೇಕ್ಷಕ ಮಾತಾಡಿಕೊಂಡು ಹೊರಬರುತ್ತಾನೆಂದರೆ ನಿರ್ದೇಶಕರು ಬೇಸರಿಸಿಕೊಳ್ಳಬಾರದು. ಬಾಹುಬಲಿ ಚಿತ್ರದ ಕಥೆ ಏನು? ಕಲಾವಿದರ ನಟನೆ ಹೇಗಿದೆ? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಬಾಲಕ ಶಿವುಡುನನ್ನು (ಪ್ರಭಾಸ್) ರಮ್ಯಕೃಷ್ಣ ನೀರಿನಿಂದ ರಕ್ಷಿಸಿಕೊಂಡು ಬರುವ ದೃಶ್ಯದೊಂದಿಗೆ ಚಿತ್ರ ಆರಂಭಗೊಳ್ಳುತ್ತದೆ. ಬಾಲಕನನ್ನು ಬುಡಕಟ್ಟು ಜನಾಂಗದವರು ನೀರಿನಿಂದ ರಕ್ಷಿಸಿದರೆ, ರಮ್ಯಕೃಷ್ಣಳನ್ನು ಕಾಪಾಡುವಲ್ಲಿ ವಿಫಲವಾಗುತ್ತಾರೆ. ಅಲ್ಲೇ ಹುಟ್ಟಿಬೆಳೆಯುವ ಶಿವುಡು ನಾಯಕಿ ಆವಂತಿಕಾ (ತಮನ್ನಾ) ಮೇಲೆ ಆಕರ್ಷಿತನಾಗುತ್ತಾನೆ. ಚಿತ್ರದ ಕಥೆ ಶಿವುಡು ಪಾತ್ರದಿಂದ ಅಮರೇಂದ್ರ ಬಾಹುಬಲಿ (ಪ್ರಭಾಸ್), ಅಮರೇಂದ್ರ ಬಾಹುಬಲಿ ಪತ್ನಿ, ದೇವಸೇನ (ಅನುಷ್ಕಾ), ಅಮರೇಂದ್ರ ಸೋದರ ಸಂಬಂಧಿ ಬಲ್ಲಾಳದೇವ (ರಾಣಾ ದಗ್ಗುಬಾಟಿ) ಕಥೆಯತ್ತ ಸಾಗುತ್ತದೆ. ಬಲ್ಲಾಳದೇವ ತಾನೇ ರಾಜನಾಗಬೇಕೆನ್ನುವ ಕನಸನ್ನು ಹೊಂದಿರುತ್ತಾನೆ. ಇವನ ಕನಸು ನಿಜವಾಗುತ್ತಾ? ಚಿತ್ರಮಂದಿರದಲ್ಲಿ ವೀಕ್ಷಿಸಿ ಬಾಹುಬಲಿ ಚಿತ್ರ ಒಟ್ಟಾರೆಯಾಗಿ ಪಾತ್ರಧಾರಿಗಳನ್ನು ಪರಿಚಯಿಸುವ ಚಿತ್ರದಂತಿದೆ, ಚಿತ್ರದ ಕ್ಲೈಮ್ಯಾಕ್ಸ್ ಅಸ್ಪಷ್ಟ. ಅದು ತಿಳಿಯಬೇಕೆಂದರೆ ಬಾಹುಬಲಿ ಪಾರ್ಟ್ 2 ನೋಡಲೇ ಬೇಕು ಎನ್ನುವ ಕ್ಲೈಮ್ಯಾಕ್ಸ್ ನೊಂದಿಗೆ ರಾಜಮೌಳಿ ಬಾಹುಬಲಿ ಚಿತ್ರಕ್ಕೆ ತೆರೆ ಎಳಿದಿದ್ದಾರೆ. ಶಿವುಡು ಮತ್ತು ಅಮರೇಂದ್ರ ಬಾಹುಬಲಿ ಪಾತ್ರದಲ್ಲಿ ಪ್ರಭಾಸ್ ಅಭಿನಯ ಸೂಪರ್. ಅಲ್ಲಲ್ಲಿ ಡಬ್ಬಿಂಗ್ ವಿಚಾರದಲ್ಲಿ ಇನ್ನೂ ಪಳಗಬಹುದಿತ್ತು ಅನ್ನುವುದನ್ನು ಬಿಟ್ಟರೆ ಪೌರಾಣಿಕ ಪಾತ್ರಕ್ಕೆ ಬೇಕಾದ ಬಾಡಿ ಲಾಂಗ್ವೇಜ್, ಹಾವಭಾವ ಮತ್ತು ನಟನೆಯಲ್ಲಿ ಪ್ರಭಾಸ್ ಸೈ ಎನಿಸಿಕೊಂಡಿದ್ದಾರೆ. ರಾಣಾ ನಟನೆ ಪ್ರಭಾಸ್ ನಟನೆಯನ್ನು ಮೀರಿಸುವಂತಿದೆ. ಆಜಾನುಬಾಹು ಮೈಕಟ್ಟು ಪಾತ್ರಕ್ಕೆ ಹೇಳಿ ಮಾಡಿಸಿದಂತಿದೆ. ರಾಣಾಗೆ ನಟನೆ ಸರಿಯಾಗಿ ಬರುವುದಿಲ್ಲ ಎನ್ನುವವರಿಗೆ ಈ ಚಿತ್ರದ ಮೂಲಕ ಉತ್ತರ ನೀಡಿದ್ದಾರೆ. ಪೌರಾಣಿಕ ಚಿತ್ರದಲ್ಲಿ ನಟಿಸುವುದೆಂದರೆ ಅದಕ್ಕೆ ವಿಶೇಷ ಪರಿಶ್ರಮ ಅಗತ್ಯ ಎಂದು ಅರಿತಿರುವ ರಾಣಾ ದಗ್ಗುಬಾಟಿ ಉತ್ತಮ ನಟನೆ ನೀಡಿದ್ದಾರೆ. ಅನುಷ್ಕಾ ಶೆಟ್ಟಿ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿದ್ದರೂ ಪ್ರಮುಖವಾಗಿ ಕೆಲವೊಂದು ದೃಶ್ಯಗಳಲ್ಲಿ ಆಕೆಯ ಮೇಕಪ್ ತೀರಾ ಅತಿರೇಕಾ ಎಂದನಿಸದೇ ಇರದು ಮತ್ತು ಚಿತ್ರದಲ್ಲಿ ಈಕೆಯ ಪಾತ್ರ ಆಟಕ್ಕುಂಟು, ಲೆಕ್ಕಕ್ಕಿಲ್ಲ. ಇನ್ನು ಮಿಲ್ಕಿಬ್ಯೂಟಿ ತಮನ್ನಾ ನಟನೆ ಸೊಗಸಾಗಿದೆ. ಸಹಕಲಾವಿದರಾದ ರಮ್ಯಕೃಷ್ಣ, ನಾಸರ್, ಸತ್ಯರಾಜ್ ನಟನೆ ಸೂಪರ್ ಆಗಿದೆ. ಅದರಲ್ಲೂ ರಮ್ಯಕೃಷ್ಣ ಮತ್ತು ಸತ್ಯರಾಜ್ ಅವರ ನಟನೆ ಪ್ರೇಕ್ಷಕರ ಮನಸಿನಲ್ಲಿ ಅಚ್ಚಳಿಯದಂತೆ ಮಾಡುತ್ತದೆ. ಎಂ ಎಂ ಕೀರವಾಣಿಯವರ ಸಂಗೀತ, ಸೆಂಥಿಲ್ ಅವರ ಕ್ಯಾಮರಾ ಕೈಚಳಕ ಚೆನ್ನಾಗಿ ಮೂಡಿ ಬಂದಿದೆ. ಪ್ರಮುಖವಾಗಿ ಮಹಿಷ್ಮತಿ ಸಾಮ್ರಾಜ್ಯವನ್ನು ಸೆರೆಹಿಡಿದ ರೀತಿ ಅದ್ಭುತ. ಅರಮನೆಯಿಂದ ದೇವಸೇನ ಪರಾರಿಯಾಗುವ ದೃಶ್ಯ, ಯುದ್ದದ ದೃಶ್ಯಗಳನ್ನು ಉತ್ತಮವಾಗಿ ಸೆರೆಹಿಡಿಯಲಾಗಿದೆ. ಪರ್ಷಿಯನ್ ಶಸ್ತ್ರಾಸ್ತ್ರ ಪೂರೈಕೆದಾರ (ಅಸ್ಲಂ ಖಾನ್) ಪಾತ್ರದಲ್ಲಿ ಸುದೀಪ್ ಹೀಗೆ ಬಂದು, ಹಾಗೇ ಹೋಗುತ್ತಾರೆ. ಇವರು ಕೇವಲ ಎರಡು ನಿಮಿಷ ಸ್ಕ್ರೀನಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಬಹುಷಃ ಬಾಹುಬಲಿ - 2 ಚಿತ್ರದಲ್ಲಿ ಇವರಿಗೆ ಗಮನಾರ್ಹ ಪಾತ್ರ ಇರಬಹುದೇನೋ? ತಾಂತ್ರಿಕವಾಗಿ ಅದ್ಭುತವಾಗಿರುವ ಬಾಹುಬಲಿ ಸಿನಿಮಾವನ್ನು ಒಮ್ಮೆ ನೋಡಲಡ್ಡಿಯಿಲ್ಲ. ಆದರೆ ತೀರಾ expectation ಇಟ್ಟುಕೊಂಡು ಹೋಗಬಾರದು ಎಂದು ನಮ್ಮ ಕಡೆಯಿಂದ ಒಂದು ಮನವಿ.ಚಿತ್ರದ ಆರಂಭ
ಅಮರೇಂದ್ರ ಬಾಹುಬಲಿ
ಫೈನಲ್ ಟಚಪ್ ಇಲ್ಲದ ಚಿತ್ರ
ಪ್ರಭಾಸ್ ಅಭಿನಯ
ರಾಣಾ ದಗ್ಗುಬಾಟಿ
ಅನುಷ್ಕಾ ಆಟಕ್ಕುಂಟು ಲೆಕ್ಕಕ್ಕಿಲ್ಲ, ತಮನ್ನಾ
ರಮ್ಯಕೃಷ್ಣ, ನಾಸರ್, ಸತ್ಯರಾಜ್ ನಟನೆ ಸೂಪರ್
ತಂತ್ರಜ್ಞಾನ
ಸುದೀಪ್
ಫೈನಲ್ ವರ್ಡಿಕ್ಟ್