»   » 'ಪುಷ್ಪಕ ವಿಮಾನ' ಚಿತ್ರ ನೋಡಲು ಕರ್ಚೀಫ್ ತೆಗೆದುಕೊಂಡು ಹೋಗಿ

'ಪುಷ್ಪಕ ವಿಮಾನ' ಚಿತ್ರ ನೋಡಲು ಕರ್ಚೀಫ್ ತೆಗೆದುಕೊಂಡು ಹೋಗಿ

Posted By:
Subscribe to Filmibeat Kannada

'ಡೆಡಿಕೇಟೆಡ್ ಟು ಆಲ್ ಫಾದರ್ಸ್‌' ಎಂದು ಸೂಕ್ಷ್ಮ ಸೂಚನೆ ನೀಡಿ ಕ್ಲಾಸ್ ಮಾತ್ರವಲ್ಲದೇ ಮಾಸ್ ಪ್ರೇಕ್ಷಕರಲ್ಲೂ ಚಿತ್ರ ನೋಡಲು ಆಸಕ್ತಿ ಹುಟ್ಟಿಸಿದ್ದ 'ಪುಷ್ಪಕ ವಿಮಾನ' ಇಂದು ರಾಜ್ಯಾದ್ಯಂತ ತೆರೆಕಂಡಿದೆ.

Pushpaka Vimana (U): ನಿಮ್ಮ ಟಿಕೆಟ್‌ ಅನ್ನು ಈಗಲೇ ಬುಕ್ ಮಾಡಿಕೊಳ್ಳಿ!

ಗಾಡ್ ಫಾದರ್ ಇಲ್ಲದೇ ಚಿತ್ರರಂಗದಲ್ಲಿ ನೂರನೇ ಸಿನಿಮಾದಲ್ಲಿ ಅಭಿನಯಿಸಿರುವ ರಮೇಶ್ ಅರವಿಂದ್ ರವರ 'ಪುಷ್ಪಕ ವಿಮಾನ' ಚಿತ್ರ, ಅವರ ಬುದ್ಧಿಮಾಂದ್ಯ ನಟನೆಯಿಂದ ರಿಲೀಸ್ ಗೂ ಮುನ್ನ ಚಿತ್ರ ಜಗತ್ತಿನಲ್ಲಿ ಸೆನ್ಸೇಷನ್ ಹುಟ್ಟುಹಾಕಿತ್ತು. ರಚಿತಾ ರಾಮ್‌ ಲಾಯರ್ ಪಾತ್ರದಲ್ಲಿ, ವಿಶೇಷ ಪಾತ್ರದಲ್ಲಿ ಜೂಹಿ ಚಾವ್ಲಾ ಅಭಿನಯಿಸಿರುವ 'ಪುಷ್ಪಕ ವಿಮಾನ' ಚಿತ್ರದ ಬಗ್ಗೆ ಪ್ರೇಕ್ಷಕರಿಗಿದ್ದ ಕುತೂಹಲಕ್ಕೆ ಇಂದು ಬ್ರೇಕ್ ಬಿದ್ದಿದೆ.[5 ಕಾರಣಗಳು: 'ಪುಷ್ಪಕ ವಿಮಾನ' ನೋಡಲು ಬೇಡಿಕೆ ಹೆಚ್ಚು]

ತಂದೆ-ಮಗಳ ಬಾಂಧವ್ಯವನ್ನು ವಿವರಿಸುವ ವಿಶೇಷ ಚಿತ್ರಕಥೆಯ 'ಪುಷ್ಪಕ ವಿಮಾನ' ಚಿತ್ರವನ್ನು ಫಸ್ಟ್‌ ಡೇ, ಫಸ್ಟ್ ಶೋ ನೋಡಿದ ಪ್ರೇಕ್ಷಕರು ಟ್ವಿಟರ್‌ ನಲ್ಲಿ ಏನಂದ್ರು ನೋಡೋಣ ಬನ್ನಿ...

ಕಪಾಲಿ ಚಿತ್ರಮಂದಿರದಲ್ಲಿ 'ಪುಷ್ಪಕ ವಿಮಾನ'

ರಮೇಶ್ ಅರವಿಂದ್ ರವರ 'ಪುಷ್ಪಕ ವಿಮಾನ' ಬೆಂಗಳೂರಿನ ಪ್ರಧಾನ ಥಿಯೇಟರ್ ಕಪಾಲಿಯಲ್ಲಿ ಗ್ರ್ಯಾಂಡ್ ರಿಲೀಸ್ ಆಗಿದೆ.

ಪುಷ್ಪಕ ವಿಮಾನ ನಗಿಸುತ್ತೆ, ಅಳಿಸುತ್ತೆ

ಪುಷ್ಪಕ ವಿಮಾನ ಮೊದಲ ಅರ್ಧದಲ್ಲಿ ಅಳಿಸುತ್ತದೆ, ನಗಿಸುತ್ತದೆ, ಉಗುರುಗಳನ್ನು ಕಚ್ಚುವಂತೆ ಮಾಡುತ್ತದೆ.

ಪುಷ್ಪಕ ವಿಮಾನ ನೋಡಲು ಮಿಸ್ ಮಾಡದಿರಿ

ಪುಷ್ಪಕ ವಿಮಾನ ಚಿತ್ರ ನೋಡಲು ಕರ್ಚೀಫ್ ತೆಗೆದುಕೊಂಡು ಹೋಗಬೇಕಂತೆ. ಮಿಸ್‌ ಮಾಡದೇ ನೋಡಿ.

ಬಳಕೆದಾರರಿಂದ ಶೇ.80 ವೋಟ್ಸ್‌

'ಪುಷ್ಪಕ ವಿಮಾನ' ಶೇ.80 ಯೂಸರ್ ವೋಟಿಂಗ್ ಮತ್ತು 4.7/5 ಯೂಸರ್ ರೇಟಿಂಗ್ ಪಡೆದುಕೊಂಡಿದೆ.

ಅಭಿಮಾನಿಗಳ ಪೋಸ್ಟ್

'ಪುಷ್ಪಕ ವಿಮಾನ' ಸಿನಿಮಾ ನೋಡುತ್ತಿರುವ ಅಭಿಮಾನಿ ಚಿತ್ರ ಪೋಸ್ಟರ್ ಅನ್ನು ಟ್ವೀಟ್‌ ಮಾಡಿದ್ದಾರೆ.

ಚಿತ್ರ ನೋಡಿದವರ ಕಣ್ಣು ಕೆಂಪಾದವು

ಪುಷ್ಪಕ ವಿಮಾನ ನೋಡಿದ ಪ್ರೇಕ್ಷಕರು ಥಿಯೇಟರ್‌ ನಿಂದ ಹೊರಗೆ ಬರುವಾಗ ನೀರವಮೌನ, ಎಲ್ಲರ ಕಣ್ಣುಗಳು ಕೆಂಪು, ಒಂದು ಸಣ್ಣ ನಗು ಎಲ್ಲರ ಮುಖದ ಮೇಲೆ.

ಚಿತ್ರಕ್ಕೆ ಪ್ರೇಕ್ಷಕ ಕ್ಲೀನ್ ಬೋಲ್ಡ್

'ಪುಷ್ಪಕ ವಿಮಾನ' ಚಿತ್ರಕ್ಕೆ ಪ್ರೇಕ್ಷಕ ಕ್ಲೀನ್ ಬೋಲ್ಡ್. ರಮೇಶ್ ಅರವಿಂದ್ ನಟನೆಯನ್ನು ಪದಗಳಿಂದ ವಿವರಿಸಲು ಸಾಧ್ಯವಿಲ್ಲ.

ನನಗೆ ಅಳು ತರಿಸಿದ ಮೊದಲ ಸಿನಿಮಾ

ಪುಷ್ಪಕ ವಿಮಾನ ಸಿನಿಮಾ ನನಗೆ ಅಳು ತರಿಸಿದ ಮೊದಲ ಸಿನಿಮಾ. ಗ್ರೇಟ್ ಮೂವಿ. ರಮೇಶ್ ಅರವಿಂದ್ ಅಭಿನಯವನ್ನು ಪದಗಳಿಂದ ವಿವರಿಸಲು ಸಾಧ್ಯವಿಲ್ಲ.

English summary
Ramesh Aravind, Rachita Ram, Baby Yuvina Starerr 'Pushpaka Vimana' is releasing tomorrow. Here is Twitter Review of Ramesh Aravind 100th film 'Pushpaka Vimana'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada