»   » 5 ಕಾರಣಗಳು: 'ಪುಷ್ಪಕ ವಿಮಾನ' ನೋಡಲು ಬೇಡಿಕೆ ಹೆಚ್ಚು

5 ಕಾರಣಗಳು: 'ಪುಷ್ಪಕ ವಿಮಾನ' ನೋಡಲು ಬೇಡಿಕೆ ಹೆಚ್ಚು

Posted By:
Subscribe to Filmibeat Kannada

ರಮೇಶ್ ಅರವಿಂದ್ ಅಭಿನಯದ 'ಪುಷ್ಪಕ ವಿಮಾನ' ಚಿತ್ರ ನಾಳೆ (6 ಜನವರಿ) ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಾಣುತ್ತಿದೆ. ಟ್ರೈಲರ್, ಹಾಡು, ಪೋಸ್ಟರ್‌ ಗಳ ಮೂಲಕ ವಿಶೇಷ ಎನಿಸಿರುವ ಚಿತ್ರ ಹಲವು ವಿಶೇಷ ಪಾತ್ರಗಳನ್ನು ಸಹ ಒಳಗೊಂಡಿದೆ.

Pushpaka Vimana (U): ನಿಮ್ಮ ಟಿಕೆಟ್‌ ಅನ್ನು ಈಗಲೇ ಬುಕ್ ಮಾಡಿಕೊಳ್ಳಿ!

ನವ ನಿರ್ದೇಶಕ ಎಸ್‌.ರವೀಂದ್ರನಾಥ್ ಆಕ್ಷನ್‌ ಕಟ್ ಹೇಳಿರುವ ತಮ್ಮ ಚೊಚ್ಚಲ 'ಪುಷ್ಪಕ ವಿಮಾನ' ಚಿತ್ರವನ್ನು ಆಸ್ಕರ್‌ ಗೆ ನಾಮ ನಿರ್ದೇಶನ ಮಾಡುವ ಪ್ರಚಾರ ಕಾರ್ಯ ಹೆಚ್ಚಿರುವುದರಿಂದ, ರಮೇಶ್ ಅರವಿಂದ್ ಅಭಿಮಾನಿಗಳು ಚಿತ್ರ ನೋಡಲು ಹೆಚ್ಚು ಕಾತುರರಾಗಿದ್ದಾರೆ.[ಆಸ್ಕರ್ ಗೆ ಅಂಗಳಕ್ಕೆ ಹಾರಲಿದೆಯೇ 'ಪುಷ್ಪಕ ವಿಮಾನ'?]

ಹಾಲಿವುಡ್‌ ನ ಕೆಲ ಚಿತ್ರಗಳನ್ನ ಸ್ಫೂರ್ತಿಯಾಗಿ ಇಟ್ಟುಕೊಂಡು ನಿರ್ದೇಶಿಸಲಾದ 'ಪುಷ್ಪಕ ವಿಮಾನ' ಚಿತ್ರಕ್ಕೆ ಚರಣ್‌ ರಾಜ್ ಸಂಗೀತ ನಿರ್ದೇಶನವಿದೆ. ಅಂದಹಾಗೆ ಈಗ ಹೇಳಿದ ಇಷ್ಟು ವಿಶೇಷತೆಗಳ ಜೊತೆಗೆ 'ಪುಷ್ಪಕ ವಿಮಾನ' ಚಿತ್ರ ನೋಡಲು ಹಲವು ಬಲವಾದ ಕಾರಣಗಳು ಇವೆ. ಆ ಕಾರಣಗಳು ಇಲ್ಲಿವೆ ನೋಡಿ...['ಪುಷ್ಪಕ ವಿಮಾನ' ರೀಮೇಕ್ ಸಿನಿಮಾನಾ? ಕ್ಲಾರಿಟಿ ಇಲ್ಲಿದೆ!]

ರಮೇಶ್ ಅರವಿಂದ್ ನಟನೆಯ ನೂರನೇ ಸಿನಿಮಾ

ಸಿನಿಮಾ ಕ್ಷೇತ್ರದಲ್ಲಿ ಗಾಡ್‌ ಫಾದರ್ ಇಲ್ಲ ಅಂದ್ರೆ ತುಂಬಾ ದಿನಗಳು ಉಳಿಯುವುದೇ ಕಷ್ಟ. ಅಂತದರಲ್ಲಿ ಸಿನಿಮಾ ರಂಗಕ್ಕೆ ಯಾವುದೇ ಗಾಡ್ ಫಾದರ್ ಗಳಿಲ್ಲದೇ ಕಾಲಿಟ್ಟವರು 'ರಮೇಶ್ ಅರವಿಂದ್'. ಈಗ ರಮೇಶ್ ರವರು ನಟಿಸಿರುವ ನೂರನೇ ಸಿನಿಮಾ 'ಪುಷ್ಪಕ ವಿಮಾನ' ನಾಳೆ ಬಿಡುಗಡೆ ಗೊಳ್ಳುತ್ತಿದೆ. ವಿಶೇಷ ಅಂದ್ರೆ ಸಿನಿಮಾ ಟ್ರೈಲರ್ ನಲ್ಲಿ ರಮೇಶ್ ಅರವಿಂದ್ ರವರಿಗೆ 'ಮೋಸ್ಟ್ ಹ್ಯಾಪಿಯೆಷ್ಟ್ ಮ್ಯಾನ್‌ ಇನ್‌ ದ ವರ್ಲ್ಡ್' ಎಂದು ಪರಿಚಯಿಸಿರುವುದು ಇನ್ನಷ್ಟು ಕುತೂಹಲ ಹುಟ್ಟಿಸಿದೆ.[ಯು-ಪ್ರಮಾಣ ಪತ್ರ ಪಡೆದ 'ಪುಷ್ಪಕ ವಿಮಾನ: ರಿಲೀಸ್ ಗೆ ದಿನಗಣನೆ]

ಬುದ್ಧಿಮಾಂದ್ಯ ಪಾತ್ರದಲ್ಲಿ ರಮೇಶ್ ಅರವಿಂದ್

ರಮೇಶ್ ಅರವಿಂದ್ ಈ ವರೆಗೆ ತಾವು ನಟಿಸಿದ ಎಲ್ಲಾ ಸಿನಿಮಾಗಳಲ್ಲಿ ನಟ ಹಾಗು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ವಿಶೇಷದಲ್ಲಿ ವಿಶೇಷವಾಗಿ ಅಪ್ಪನ ಪಾತ್ರದಲ್ಲಿ ಕಾಣಿಸಿಕೊಂಡಿರುವುದರ ಜೊತೆಗೆ, ಬುದ್ಧಿಮಾಂದ್ಯ ವ್ಯಕ್ತಿಯಾಗಿ ಅತಿ ಹೆಚ್ಚು ಮುಗ್ಧತೆಯಿಂದ ಅಭಿನಯಿಸಿದ್ದಾರೆ. ಇವರ ಈ ಪಾತ್ರ ಬಿಡುಗಡೆಗೂ ಮುನ್ನ ಎಲ್ಲರ ಮೆಚ್ಚುಗೆ ಗಳಿಸಿಕೊಂಡಿದೆ. 'ಪುಷ್ಪಕ ವಿಮಾನ' ಚಿತ್ರ ನೋಡಲು ಅಭಿಮಾನಿಗಳು ಹೆಚ್ಚು ಕಾತುರರಾಗಿರಲು ಇವರ ಈ ಪಾತ್ರ ಬಲವಾದ ಕಾರಣವಾಗಿದೆ.

ಅಪ್ಪ-ಮಗಳ ಸಂಬಂಧ ಕುರಿತ ವಿಶೇಷ ಚಿತ್ರಕಥೆ

'ಪುಷ್ಪಕ ವಿಮಾನ' ಚಿತ್ರ 'ಡೆಡಿಕೇಟೆಡ್ ಟು ಆಲ್ ಫಾದರ್ಸ್' ಎಂದು ಟ್ರೈಲರ್ ನಲ್ಲಿ ಹೇಳಲಾಗಿದೆ. ಪೂರ್ಣ ಚಿತ್ರ ಅಪ್ಪ ಮಗಳ ಬಾಂಧವ್ಯವನ್ನು ವಿವರಿಸುವ ವಿಶೇಷ ಚಿತ್ರಕಥೆ ಹೊಂದಿದ್ದು, ಬಾಂಧವ್ಯವನ್ನು ಮುಗ್ಧವಾಗಿ ಫೀಲ್ ಮಾಡಲು ಅಷ್ಟೇ ಇಂಪಾದ ಸಂಗೀತವನ್ನು ಚರಣ್‌ ರಾಜ್‌ ನೀಡಿದ್ದಾರೆ. ಈ ರೀತಿಯ ವಿಶೇಷತೆ ಇರುವುದರಿಂದ ಫ್ಯಾಮಿಲಿ ಸಮೇತ ಚಿತ್ರ ನೋಡಲು ಯಾವುದೇ ಅಡ್ಡಿಯಿಲ್ಲ ಎಂಬುದು ಖಚಿತವಾಗಿದೆ. ಅಲ್ಲದೇ ಎಲ್ಲಾ ತಂದೆಯರಿಗೂ ಚಿತ್ರ ನೋಡುವ ಕುತೂಹಲ ಹೆಚ್ಚಾಗಿದೆ.

ಮಗಳು ಮತ್ತು ಲಾಯರ್‌ ಆಗಿ ರಚಿತಾ ರಾಮ್

ಸ್ಟಾರ್ ನಟರ ಜೊತೆ ಯಾವಾಗಲು ಡ್ಯುಯೆಟ್ ಹಾಡುವ ಗುಳಿ ಕೆನ್ನೆ ಬೆಡಗಿ ರಚಿತಾ ರಾಮ್‌ ಚಿತ್ರದ ಇನ್ನೊಂದು ಆಕರ್ಷಣೆ. ರಚಿತಾ ರಾಮ್‌ ಈ ಚಿತ್ರದಲ್ಲಿ ರಮೇಶ್ ಅರವಿಂದ್ ಮಗಳಾಗಿ ಮತ್ತು ಲಾಯರ್ ಪಾತ್ರದಲ್ಲೂ ಅಭಿನಯಿಸಿದ್ದಾರೆ. ಲಾಯರ್ ಆಗಿ ವಾದ ಹೇಗ್‌ ಮಾಡ್ತಾರೆ ಎಂಬುದನ್ನು ನೋಡುವ ಕುತೂಹಲ ರಚಿತ ರಾಮ್‌ ಅಭಿಮಾನಿಗಳು ಹೆಚ್ಚಿದೆ.

ವಿಶೇಷ ಪಾತ್ರದಲ್ಲಿ ಜೂಹಿ ಚಾವ್ಲಾ

'ಪ್ರೇಮಲೋಕ' ದ ಅರಗಿಣಿ ಜೂಹಿ ಚಾವ್ಲಾ 20 ವರ್ಷಗಳ ನಂತರ ಮತ್ತೆ ಕಾಣಿಸಿಕೊಳ್ಳುತ್ತಿರುವುದು 'ಪುಷ್ಪಕ ವಿಮಾನ' ಚಿತ್ರದಲ್ಲಿ. ಈ ಸಿನಿಮಾದಲ್ಲಿ ಜೂಹಿ ಚಾವ್ಲಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವುದರ ಜೊತೆಗೆ ಸ್ಯಾಂಡಲ್‌ ವುಡ್ ಸಾಂಸ್ಕೃತಿಕ ತೊಡುಗೆಯಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಈ ಚಿತ್ರದ ಮೂಲಕ 'ಪ್ರೇಮಲೋಕ' ದ ಏಂಜೆಲ್ ಅನ್ನು ಮತ್ತೊಮ್ಮೆ ನೋಡುವ ಅವಕಾಶ ಸಿನಿ ಪ್ರಿಯರಿಗೆ ಖಂಡಿತ ಇದೆ.

'ಪುಷ್ಪಕ ವಿಮಾನ'ದಲ್ಲಿ ಮೇಲಿನ ಇಷ್ಟು ವಿಶೇಷ ಪಾತ್ರಗಳು ಕಾಣಿಸಿಕೊಂಡಿರುವುದರಿಂದ ಚಿತ್ರ ನೋಡಲು ಸಿನಿ ಪ್ರಿಯರಿಗೆ ಕಾತುರ ಹೆಚ್ಚಾಗಿದೆ.

English summary
Ramesh Aravind, Rachita Ram, Baby Yuvina Starerr 'Pushpaka Vimana' is releasing tomorrow. Here is five reasons to watch 'Pushpaka Vimana'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada