For Quick Alerts
ALLOW NOTIFICATIONS  
For Daily Alerts

  ನೆನಪಿಗೆ ಬರದೆ ನಿರಾಶೆ ಹುಟ್ಟಿಸುವ 'ಎರಡು ಕನಸು'

  By Suneel
  |

  ಚಿನ್ನಾರಿಮುತ್ತ ವಿಜಯ ರಾಘವೇಂದ್ರ ಮತ್ತು ಕಾರುಣ್ಯ ರಾಮ್ ಅಭಿನಯದ 'ಎರಡು ಕನಸು' ಚಿತ್ರ ನಿನ್ನೆ(ಮಾರ್ಚ್ 17) ಬಿಡುಗಡೆ ಆಗಿದೆ. ಮೊದಲರ್ಧದಲ್ಲಿ ರೌಡಿಸಂ ಮತ್ತು ಸೆಕೆಂಡ್ ಆಫ್ ನಲ್ಲಿ ಪ್ರೇಮಕತೆ ಏಳೆಯುವ ಚಿತ್ರವನ್ನು ರಾಜ್ಯಾದ್ಯಂತ ಪ್ರೇಕ್ಷಕರು ಕಣ್ತುಂಬಿಕೊಂಡಿದ್ದಾರೆ.

  ಮದನ್ ಎ ನಿರ್ದೇಶನ ಇರುವ ಚಿತ್ರದಲ್ಲಿ ಇತರೆ ತಾರಾಗಣದ ಸಪೋರ್ಟ್ ಕೊಂಚ ಮಂಕಾಗಿದ್ದರೂ, ವಿಜಯ ರಾಘವೇಂದ್ರ ತಮ್ಮ ನಟನೆಯಲ್ಲಿ ಬೇಸ್ ಎನಿಸಿಕೊಂಡಿದ್ದಾರೆ. ಚಿತ್ರವನ್ನು ಪ್ರೇಕ್ಷಕರಂತೆ ನಮ್ಮ ವಿಮರ್ಶಕರು ಮೆಚ್ಚಿಕೊಂಡ್ರಾ? 'ಎರಡು ಕನಸು' ಚಿತ್ರಕ್ಕೆ ವಿಮರ್ಶಕರ ಅಭಿಪ್ರಾಯವೇನು? ಉತ್ತರ ಇಲ್ಲಿದೆ..

  ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ಎರಡು ಕನಸು' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ ಓದಿ...

  ಇದು ಬರಡು ಕನಸು- ಪ್ರಜಾವಾಣಿ

  ನಿರ್ದೇಶಕ 'ಎರಡು ಕನಸು' ಸುಂದರವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿಲ್ಲ. ಆದರೆ ಮುತ್ತನಾಗಿ ವಿಜಯ ರಾಘವೇಂದ್ರ ಅವರದು ಸಮತೂಕದ ಅಭಿನಯ. ಕುರಿಪ್ರತಾಪ್ ಮತ್ತು ಪವನ್ ಜುಗಲ್ಬಂದಿ ಪ್ರೇಕ್ಷಕರನ್ನು ನಗಿಸುವಲ್ಲಿ ಕೊಂಚ ಗೆದ್ದಿದ್ದಾರೆ. ತಾಂತ್ರಿಕವಾಗಿಯೂ ಸಿನಿಮಾ ಗಮನಸೆಳೆಯುವುದಿಲ್ಲ. ಸ್ವೀವ್ ಕೌಶಿಕ್ ಸಂಯೋಜನೆಯ ಹಾಡುಗಳಲ್ಲಿ 'ನೂರು ಕಂಪನ..' ಕೆಲವು ಜನಪ್ರಿಯ ಗೀತೆಗಳನ್ನು ದಟ್ಟವಾಗಿ ನೆನಪಿಸುತ್ತದೆ. ಉಳಿದಂತೆ ಯಾವ ಹಾಡುಗಳು ನೆನಪಿನಲ್ಲಿ ಉಳಿಯುವದಿಲ್ಲ.

  ಕಣ್ಣಿಗೆ ಕಾಣದ ಸುಂದರ ಕನಸು- ವಿಜಯ ಕರ್ನಾಟಕ

  ಡಾ. ರಾಜ್ ಅಭಿನಯದ 'ಎರಡು ಕನಸು' ಇವತ್ತಿಗೂ ಜನರ ನೆನಪಲ್ಲಿ ಉಳಿದಿದೆ. ಅದೇ ಗುಂಗಲ್ಲಿ ಹೊಸ 'ಎರಡು ಕನಸು' ನೋಡಲು ಹೋದರೆ ನಿರಾಶೆ ಕಟ್ಟಿಟ್ಟ ಬುತ್ತಿ. ಚಿತ್ರ ದುರ್ಬಲ ನಿರ್ದೇಶನದಿಂದ ನಲುಗಿದೆ. ಚಿತ್ರದ ಮೊದಲರ್ಧದಲ್ಲಿ ರೌಡಿಗಳ ಜತೆಗಿನ ಸೆಣಸಾಟವಿದ್ದರೆ, ದ್ವಿತಿಯಾರ್ಧದಲ್ಲಿ ಪ್ರೇಮದ ಕತೆ ಇದೆ. ಮೊದಲು ಸಪ್ಪೆಯಾಗಿ ಸಾಗುವ ಚಿತ್ರ ಇಂಟರ್ ವಲ್ ನಂತರ ಇನ್ನೂ ಮಂದಗತಿಗೆ ವಾಲುತ್ತದೆ. ಕಥೆ ಓಕೆ. ನಿರೂಪಣೆಯಲ್ಲಿ ಸ್ವಾರಸ್ಯವಿಲ್ಲ. ತಾಂತ್ರಿಕವಾಗಿಯೂ ಚಿತ್ರ ದುರ್ಬಲವಾಗಿದೆ. ವಿಜಯ ರಾಘವೇಂದ್ರ ನಟನೆ ಚೆನ್ನಾಗಿದ್ರು, ಇತರರ ಸಾಥ್ ಸಿಕ್ಕಿಲ್ಲ. ಅನವಶ್ಯಕ ಸನ್ನಿವೇಶ, ಬೋರ್ ಹೊಡೆವ ಮಾತುಗಳು ಇವೆ. ಮಾನವೀಯ ಮೌಲ್ಯ ಹೇಳುವ ಅಂಶಗಳಿರುವುದೇ ಚಿತ್ರದ ಹೆಗ್ಗಳಿಕೆ.

  ಕನಸೆಂಬ ಕುದರೆಯನೇರಿ-ಉದಯವಾಣಿ

  ನಿರ್ದೇಶಕ ಮದನ್ ಎ ತಮ್ಮ ಚೊಚ್ಚಲ ಸಿನಿಮಾ ಪ್ರೀತಿಯಿಂದ ಎಲ್ಲವನ್ನು ಒಂದೇ ಸಿನಿಮಾದಲ್ಲಿ ನೀಡಲು ಹೋಗಿ, ಈ ಪ್ರಯತ್ನವೇ ಚಿತ್ರದ ಮೈನಸ್ ಪಾಯಿಂಟ್ ಆಗಿದೆ. ಆದರೆ ಅನಾಥ ಮಕ್ಕಳನ್ನು ಕುರಿತ ಒನ್ ಲೈನ್ ಕಥೆ ಚೆನ್ನಾಗಿದೆ. ನಿರೂಪಣೆ ವಿಷಯದಲ್ಲಿ ನಿರ್ದೇಶಕರ ಕೆಲಸ ಕೊಂಚ ಮೆಚ್ಚಬಹುದು. ನಿರ್ದೇಶಕರ ಕಾಮಿಡಿ ಪ್ರೀತಿ ಮೆಚ್ಚುವಂತದ್ದು. ಫ್ಯಾಮಿಲಿ ಡ್ರಾಮಾ ಇಷ್ಟಪಡುವವರಾದರೆ 'ಎರಡು ಕನಸು' ನೋಡಲಡ್ಡಿಯಿಲ್ಲ. ನಾಯಕನಾಗಿ ಮುತ್ತದ ಆಕ್ಷನ್ ಚೆನ್ನಾಗಿದೆ. ಉಳಿದಂತೆ ಎಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

  'ಎರಡು ಕನಸು' ವಿಮರ್ಶೆ: ದಿ ಟೈಮ್ಸ್ ಆಫ್ ಇಂಡಿಯಾ

  The title of the film has allusions to the evergreen Dr Rajkumar film, but the similarity ends just there. This contemporary film by the same title is bipolar in its treatment as it starts off as a hard core commercial drama in the first half, but shifts into being an emotional tale soon thereafter. The film could have been something much more than just a regular film had the filmmaker concentrated on either the commercial aspect or the emotional journey. Instead one gets a mishmash of both that isn't of good measure. While Vijay Raghavendra has given his all for this film, one wishes the story did justice to his talent, especially after his winning performance in Chowka this year.

  English summary
  Kannada Actor Vijay Raghavendra Starrer Kannada Movie 'Eradu Kanasu' has hit the screens Yesterday(March 17th). Here is the Critics review of 'Eradu Kanasu' movie.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more