For Quick Alerts
  ALLOW NOTIFICATIONS  
  For Daily Alerts

  KGF 2 First Half Review: ರಾಕಿ ಭಾಯ್-ಅಧೀರನ ಕಾದಾಟ, ತಾಯಿ ಸೆಂಟಿಮೆಂಟ್ ಮೊದಲಾರ್ಧ

  |

  ಸುಮಾರು ನಾಲ್ಕು ವರ್ಷ ಇದೊಂದು ಘಳಿಗೆಗಾಗಿ ಸಿನಿಪ್ರಿಯರು ಕಾದು ಕೂತಿದ್ದರು. 'ಕೆಜಿಎಫ್ 2' ಸಿನಿಮಾ ನೋಡಲೇ ಬೇಕು ಅಂತ ತುದಿಗಾಲಲ್ಲಿ ನಿಂತಿದ್ದರು. ಒಂದೇ ಒಂದು ಸಿನಿಮಾಗಾಗಿ ಇಷ್ಟು ಕಾದಿದ್ದಕ್ಕೂ ಇಂದು ಸಿನಿಮಾಗೆ ಬೆಸ್ಟ್ ರಿಸಲ್ಟ್ ಸಿಕ್ಕಿದೆ. ಥಿಯೇಟರ್‌ ಸೀಟ್‌ನ ತುತ್ತ ತುದಿಯಲ್ಲಿ ಕೂತಿದ್ದವರಿಗೆ 'ಕೆಜಿಎಫ್ 2' ಮತ್ತಷ್ಟು ಕಿಕ್ ಕೊಟ್ಟಿದೆ.

  Rating:
  3.5/5

  ರಾಕಿ ಭಾಯ್ ಆರ್ಭಟ ನೋಡಬೇಕು. ರಾಕಿ ಹಿಡಿತದ ನರಾಚಿ ಕೋಟೆಯನ್ನು ಕಣ್ತುಂಬಿಕೊಳ್ಳಬೇಕು. ರಾಕಿ-ಅಧೀರನ ಕಾದಾಟಕ್ಕೆ ಥಿಯೇಟರ್ ಒಳಗೆ ಸಾಕ್ಷಿಯಾಗಬೇಕು ಅಂತ ಇಷ್ಟು ದಿನ ಕಾದವರಿಗೆ ಮೋಸ ಆಗಿಲ್ಲ. 'ಕೆಜಿಎಫ್ 2' ಮೊದಲಾರ್ಧ ಸಿನಿಪ್ರಿಯರಿಗೆ ನಿರಾಸೆ ಮಾಡಿಲ್ಲ.

  KGF 2 Review | 'KGF 2 ' ಸಿನಿಮಾದಲ್ಲಿ ಏನಿದೆ ? ಏನಿಲ್ಲ? | Yash | First Day First Show Review

  ಹಾಗಿದ್ದರೆ, 'ಕೆಜಿಎಫ್ 2' ಫಸ್ಟ್ ಹಾಫ್ ಹೇಗಿದೆ? ಮೊದಲಾರ್ಧ ಮೆಚ್ಚಿಕೊಂಡಾಡುವಂತಹ ಯಾವ ಅಂಶಗಳು ಸಿನಿಮಾದಲ್ಲಿವೆ. ಯಾವ ಪಾತ್ರ, ಯಾವ ದೃಶ್ಯ ಕಾಡುತ್ತಾ ಮನಸ್ಸಿನಲ್ಲಿ ಉಳಿಯುತ್ತೆ. ಅಸಲಿಗೆ ಫಸ್ಟ್ ಹಾಫ್ ಹೈಲೈಟ್ ಏನು ಎಂದು ತಿಳಿಯಲು ಮುಂದೆ ಓದಿ.

  ಫಸ್ಟ್ ಹಾಫ್‌ನಲ್ಲೇ ಅಧೀರ ಎಂಟ್ರಿ

  ಫಸ್ಟ್ ಹಾಫ್‌ನಲ್ಲೇ ಅಧೀರ ಎಂಟ್ರಿ

  ಸಾಮಾನ್ಯವಾಗಿ ಸಿನಿಮಾ ಹೀರೊ ಅಷ್ಟೆ ಇನ್ನೊಂದು ಪಾತ್ರ ಇತ್ತು ಅಂದ್ರೆ, ಆ ಪಾತ್ರ ತೆರೆಮೇಲೆ ಎಂಟ್ರಿ ಕೊಡುವುದೇ ಸೆಕೆಂಡ್ ಹಾಫ್‌ನಲ್ಲಿ. ಆದರೆ, 'ಕೆಜಿಎಫ್ 2'ನಲ್ಲಿ ಹಾಗಿಲ್ಲ ಅನ್ನೋದೇ ರೋಚಕ. ರಾಕಿಭಾಯ್ ಹಾಗೂ ಅಧೀರನ ನಡುವೆ ಮೊದಲಾರ್ಧದಲ್ಲಿಯೇ ಕಾದಾಟ ಶುರುವಾಗುತ್ತೆ. ಅಧೀರ ರಗಡ್ ಎಂಟ್ರಿ, ರಾಕಿ ಭಾಯಿ ಮಾಸ್ ಲುಕ್ ಮಿಕ್ಸ್ ಆಗಿ ಪ್ರೇಕ್ಷಕರಿಗೆ ಸಿನಿಮಾ ಮತ್ತಷ್ಟು ರೋಚಕ ಅನಿಸುವುದರಲ್ಲಿ ಅನುಮಾನವೇ ಇಲ್ಲ.

  ರಾಕಿ ಭಾಯ್ ವೇಗಕ್ಕೆ ಅಧೀರ ಅಡ್ಡಿ

  ರಾಕಿ ಭಾಯ್ ವೇಗಕ್ಕೆ ಅಧೀರ ಅಡ್ಡಿ

  'ಕೆಜಿಎಫ್ ಚಾಪ್ಟರ್ 1' ರಾಕಿ ಬಾಯ್ ಗರುಡನ ರುಂಡ ಕತ್ತರಿಸಿ, ನರಾಚಿ ಕೋಟೆಯನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದಾಗಿತ್ತು. ಇಲ್ಲಿಂದ ರಾಕಿ ಭಾಯ್ ತನ್ನ ಸಾಮ್ರಾಜ್ಯ ವಿಸ್ತರಣೆಗೆ ಮುಂದಾಗುತ್ತಾನೆ. ರಾಕಿಯ ಮಹಾಕನಸು ನನಸು ಮಾಡಿಕೊಳ್ಳಲು ಹೊರಡುವಾಗ ಎದುರಾಗುವುದೇ ಈ ಅಧೀರ. ಹೀಗಾಗಿ ಫಸ್ಟ್ ಹಾಫ್‌ನಲ್ಲಿಯೇ ಭರ್ಜರಿ ಆಕ್ಷನ್ ಸೀನ್‌ಗಳು ನೋಡಲು ಸಿಗುತ್ತೆ. ಅದ್ಭುತ ಆಕ್ಷನ್ ಸೀನ್‌ಗಳು ಸಿನಿಪ್ರಿಯರ ಕಣ್ಣಿಗೆ, ಮಾಸ್ ಸಿನಿಮಾ ಪ್ರಿಯರಿಗೆ ಮಸ್ತ್ ಮನರಂಜನೆ ನೀಡುವುದು ಗ್ಯಾರಂಟಿ.

  ಅಧೀರನದ್ದೇ ಮೇಲು ಗೈ

  ಅಧೀರನದ್ದೇ ಮೇಲು ಗೈ

  'ಕೆಜಿಎಫ್ 2'ನಲ್ಲಿ ಹಳೆಯ ಗೆಳೆಯರು ಈಗ ದುಶ್ಮನ್‌ಗಳಾಗಿ ಬದಲಾಗಿದ್ದಾರೆ. ಹಳೆಯ ದುಶ್ಮನ್‌ಗಳು ಈಗ ದೋಸ್ತ್‌ಗಳಾಗಿದ್ದಾರೆ. ರಾಕಿ ಭಾಯ್ ಗರುಡನ ಸಾಯಿಸಿದ ಬಳಿಕ ಕೆಜಿಎಫ್ ವಾತಾವರಣವನ್ನೇ ಬದಲಿಸಿದ್ದಾಗಿದೆ. ಆದರೆ, ಸಾಮ್ರಾಜ್ಯ ವಿಸ್ತರಣೆ ವೇಳೆ ಎದುರಾಗುವ ಅಧೀರ ಪ್ರತಿ ಹಂತದಲ್ಲೂ ಮೇಲುಗೈ ಸಾಧಿಸಿದ್ದಾನೆ. ಫಸ್ಟ್ ಹಾಫ್ ಬಹುತೇಕ ಅಧೀರನದ್ದೆ ಮೇಲುಗೈ. ಆದರೆ, ಇಂಟರ್‌ವೆಲ್ ವೇಳೆ ಅಧೀರನ ವಿರುದ್ಧ ರಾಕಿ ಭಾಯ್ ತಿರುಗಿಬೀಳುತ್ತಾನೆ. ಇಲ್ಲಿಂದ ಸೆಕೆಂಡ್ ಹಾಫ್ ಹೇಗಿರುತ್ತೆ ಅನ್ನುವುದೇ ರೋಚಕ.

  ತಾಯಿ ಸೆಂಟಿಮೆಂಟ್ ಹೈಲೈಟ್

  ತಾಯಿ ಸೆಂಟಿಮೆಂಟ್ ಹೈಲೈಟ್

  'ಕೆಜಿಎಫ್ ಚಾಪ್ಟರ್ 2' ಫಸ್ಟ್ ಹಾಫ್‌ನ ಮತ್ತೊಂದು ಹೈಲೈಟ್ ಅಂದರೆ, ಅದು ತಾಯಿ ಸೆಂಟಿಮೆಂಟ್. ಪ್ಲ್ಯಾಶ್ ಬ್ಯಾಕ್‌ ಸ್ಟೋರಿಯಲ್ಲಿ ತಾಯಿ ಸೆಂಟಿಮೆಂಟ್ ಅನ್ನು ಪ್ರಶಾಂತ್ ನೀಲ್ ಅದ್ಭುತವಾಗಿ ತೆರೆಮೇಲೆ ತಂದಿದ್ದಾರೆ. ಆಕ್ಷನ್ ಜೊತೆ ಜೊತೆಯಲ್ಲಿಯೇ ತಾಯಿ ಸೆಂಟಿಮೆಂಟ್ ಕೂಡ ಬೆರೆತುಕೊಂಡಿದೆ. ಇದು ಫಸ್ಟ್ ಹಾಫ್‌ನ ಮತ್ತೊಂದು ಹೈಲೈಟ್.

  ರಮಿಕಾ ಸೇನ್ ಎಂಟ್ರಿ ಕೊಟ್ಟಿಲ್ಲ

  ರಮಿಕಾ ಸೇನ್ ಎಂಟ್ರಿ ಕೊಟ್ಟಿಲ್ಲ

  ಕುತೂಹಲ ಕೆರಳಿಸಿದ್ದ ಎರಡು ಪಾತ್ರಗಳಲ್ಲಿ ಅಧೀರನ ಎಂಟ್ರಿ ಈಗಾಗಲೇ ಆಗಿದೆ. ಆದರೆ, ಮೊದಲಾರ್ಧದಲ್ಲಿ ರಮಿಕಾ ಸೇನ್ ಉರ್ಫ್ ರವೀನಾ ಟಂಡನ್ ಎಂಟ್ರಿ ಕೊಟ್ಟಿಲ್ಲ. ಹೀಗಾಗಿ ದ್ವಿತೀಯಾರ್ಧದಲ್ಲಿ ರಮಿಕಾ ಎಂಟ್ರಿ ಬಳಿಕ ಪ್ರೇಕ್ಷಕರಿಗೆ ಮತ್ತೊಂದು ಟ್ವಿಸ್ಟ್ ಸಿಗಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅನಂತ್ ನಾಗ್ ಮಗನ ಪಾತ್ರದಲ್ಲಿ ಪ್ರಕಾಶ್ ರೈ ಕಾಣಿಸಿಕೊಳ್ಳಿದ್ದಾರೆ. ನಾಯಕಿ ಶ್ರೀನಿಧಿ ಶೆಟ್ಟಿಗೆ ಫಸ್ಟ್ ಹಾಫ್‌ನಲ್ಲಿ ಹೆಚ್ಚಿಗೆ ಕೆಲಸವಿಲ್ಲ. ಹೀಗಾಗಿ ಸೆಕೆಂಡ್ ಹಾಫ್‌ನಲ್ಲಿ ಶ್ರೀನಿಧಿ ಹಾಗೂ ರವೀನಾ ಪಾತ್ರಗಳು ಮೇಜರ್ ಟ್ವಿಸ್ಟ್‌ಗೆ ಸಾಕ್ಷಿಯಾಗಬಹುದು.

  English summary
  Yash Starrer KGF 2 Pan India Movie First Half Review. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion