For Quick Alerts
  ALLOW NOTIFICATIONS  
  For Daily Alerts

  ಭದ್ರತೆ ನೀಡಿ: ಮುರಳೀಧರನ್ ಜೀವನ ಕುರಿತ ಸಿನಿಮಾ ನಿರ್ದೇಶಕನ ಮನವಿ

  |

  ಕ್ರಿಕೆಟಿಗ ಮುರಳೀಧರನ್ ಜೀವನ ಕುರಿತ ಸಿನಿಮಾ ಘೋಷಣೆಯಾದ ಬೆನ್ನಲ್ಲೇ ಸಾಕಷ್ಟು ವಿವಾದಗಳು ಸಿನಿಮಾವನ್ನು ಸುತ್ತಿಕೊಂಡಿವೆ.

  ಮುರಳೀಧರನ್ ಜೀವನ ಕುರಿತ ಸಿನಿಮಾಕ್ಕೆ 800 ಎಂದು ಹೆಸರಿಟ್ಟು ಪೋಸ್ಟರ್ ಸಹ ಬಿಡುಗಡೆ ಮಾಡಲಾಗಿದೆ. ಸಿನಿಮಾಕ್ಕೆ ವಿಜಯ್ ಸೇತುಪತಿ ನಾಯಕ ಎಂದು ಘೋಷಣೆ ಸಹ ಮಾಡಲಾಗಿತ್ತು. ಆದರೆ ಹಲವರು ಸಿನಿಮಾಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

  ಕೊನೆಗೆ ಮುರಳೀಧರನ್ ಮನವಿ ಮೇರೆಗೆ ವಿಜಯ್ ಸೇತುಪತಿ 800 ಸಿನಿಮಾದಿಂದ ಹಿಂದೆ ಸರಿದರು. ನಂತರ ಅವರ ಮಗಳಿಗೆ ಅತ್ಯಾಚಾರ ಬೆದರಿಕೆಗಳನ್ನು ಹಾಕಲಾಯಿತು. ಈಗ 800 ಸಿನಿಮಾದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದ ಸೀನು ರಾಮಸ್ವಾಮಿ ಗೆ ಬೆದರಿಕೆ ಕರೆಗಳು ಬರುತ್ತಿವೆಯಂತೆ.

  ಸೀನು ರಾಮಸ್ವಾಮಿಗೆ ಬೆದರಿಕೆ ಕರೆಗಳು

  ಸೀನು ರಾಮಸ್ವಾಮಿಗೆ ಬೆದರಿಕೆ ಕರೆಗಳು

  800 ಸಿನಿಮಾದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದ ಸೀನು ರಾಮಸ್ವಾಮಿಗೆ ಹಲವಾರು ಬೆದರಿಕೆ ಕರೆಗಳು ಬರುತ್ತಿವೆಂತೆ. ಹಾಗಾಗಿ ಅವರು ತಮಿಳುನಾಡು ಮುಖ್ಯಮಂತ್ರಿಗೆ ತಮಗೆ ಭದ್ರತೆ ನೀಡುವಂತೆ ಮನವಿ ಮಾಡಿದ್ದಾರೆ.

  ನನ್ನ ಜೀವ ಅಪಾಯದಲ್ಲಿದೆ: ಸೀನು ರಾಮಸ್ವಾಮಿ

  ನನ್ನ ಜೀವ ಅಪಾಯದಲ್ಲಿದೆ: ಸೀನು ರಾಮಸ್ವಾಮಿ

  'ನನ್ನ ಜೀವ ಅಪಾಯದಲ್ಲಿದೆ, ನನಗೆ ಸತತ ಬೆದರಿಕೆ ಕರೆಗಳು ಬರುತ್ತೀವೆ, ಕೊಲ್ಲುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ದಯವಿಟ್ಟು ನನಗೆ ಭದ್ರತೆ ನೀಡಿ' ಎಂದು ಸೀನು ರಾಮಸ್ವಾಮಿ ತಮಿಳುನಾಡು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

  ಚೆನ್ನೈ ಪೊಲೀಸರಿಗೆ ದೂರು ನೀಡಲಿರುವ ರಾಮಸ್ವಾಮಿ

  ಚೆನ್ನೈ ಪೊಲೀಸರಿಗೆ ದೂರು ನೀಡಲಿರುವ ರಾಮಸ್ವಾಮಿ

  ಬೆದರಿಕೆ ಕರೆಗಳ ಕುರಿತಂತೆ ಚೆನ್ನೈ ಪೋಲೀಸರಿಗೆ ದೂರು ಸಹ ನೀಡಲಿದ್ದಾರಂತೆ ರಾಮಸ್ವಾಮಿ. 800 ಸಿನಿಮಾದಿಂದ ಹಿಂದೆ ಸರಿವಂತೆ ವಿಜಯ್ ಸೇತುಪತಿಗೆ ಸಹ ಬೆದರಿಕೆಗಳು ಬಂದಿದ್ದವು. ಸಿನಿಮಾದಿಂದ ಹಿಂದೆ ಸರಿದ ಬಳಿಕವೂ ಸಹ ಸೇತುಪತಿ ಮಗಳಿಗೆ ಅತ್ಯಾಚಾರ ಬೆದರಿಕೆಗಳು ಬಂದಿದ್ದವು. ಆದರೆ ಸೇತುಪತಿ ಮಗಳಿಗೆ ಅತ್ಯಾಚಾರ ಬೆದರಿಕೆ ಹಾಕಿದ್ದ ಶ್ರೀಲಂಕಾ ವ್ಯಕ್ತಿಯನ್ನು ಬಂಧಿಸಲಾಗಿದೆ.

  ಮತ್ತೆ ನಿಖಿಲ್ ಎದುರಾಗಿ ನಿಂತ ಡಿ ಬಾಸ್ ದರ್ಶನ್ | Filmibeat Kannada
  ಅಡಕತ್ತರಿಯಲ್ಲಿ 800 ಸಿನಿಮಾ

  ಅಡಕತ್ತರಿಯಲ್ಲಿ 800 ಸಿನಿಮಾ

  800 ಸಿನಿಮಾವು ಶ್ರೀಲಂಕಾದ ಖ್ಯಾತ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಜೀವನ ಕುರಿತದ್ದಾಗಿತ್ತು. ಆದರೆ ಮುರಳೀಧರನ್, ಲಂಕಾದ ತಮಿಳರ ಪರ ನಿಲವು ಹೊಂದಿರಲಿಲ್ಲ ಎಂಬ ಕಾರಣಕ್ಕೆ ಸಿನಿಮಾವನ್ನು ಕೆಲವು ತಮಿಳರು ವಿರೋಧಿಸಿದರು. 800 ಸಿನಿಮಾವು ಈಗ ಅಡಕತ್ತರಿಯಲ್ಲಿದೆ.

  English summary
  800 movie director Seenu Ramaswamy said he receiving threat calls and requested Tamil Nadu CM for protection.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X