For Quick Alerts
  ALLOW NOTIFICATIONS  
  For Daily Alerts

  ಖ್ಯಾತ ತಮಿಳು ನಟ ಕಮಲ್ ಹಾಸನ್ ಆಸ್ಪತ್ರೆಗೆ ದಾಖಲು

  |

  ಭಾರತೀಯ ಚಿತ್ರರಂಗದ ಖ್ಯಾತ ನಟ, ರಾಜಕಾರಣಿ, ಮಕ್ಕಳ ನಿಧಿ ಮೈಯಮ್ ಸ್ಥಾಪಕ ಕಮಲ್ ಹಾಸನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಕಮಲ್ ನಾಳೆ ಶುಕ್ರವಾರ ಬಲಗಾಲಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ. 2016 ಜುಲೈನಲ್ಲಿ ಸಂಭವಿಸಿದ ಅಪಘಾತದಲ್ಲಿ ಕಮಲ್ ಹಾಸನ್ ಬಲಗಾಲಿನ ಮೂಳೆ ಮುರಿದಿತ್ತು. ಈ ಸಮಯದಲ್ಲಿ ಕಾಲಿಗೆ ಕಸಿ ಹಾಕಲಾಗಿತ್ತು.

  ನಾಳೆ( 22 ನವೆಂಬರ್) ಶುಕ್ರವಾರ ಶಸ್ತ್ರಚಿಕಿತ್ಸ ನಡೆಸಿ ಈ ಕಸಿ ತೆಗೆಯಲಾಗುವುದು ಎಂದು ಎಂಎನ್ಎಂ ಉಪಾಧ್ಯಕ್ಷ ಡಾ. ಆರ್ ಮಹೇಂದ್ರನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಕಲಕಲಾವಲ್ಲಭ ಕಮಲ್ ಹಾಸನ್ ರಾಜಕೀಯ ಮತ್ತು ಚಲನಚಿತ್ರಗಳಲ್ಲಿ ಬ್ಯುಸಿಯಿದ್ದ ಕಾರಣ ಶಸ್ತ್ರ ಚಿಕಿತ್ಸೆಯನ್ನು ಮುಂದೂಡುತ್ತ ಬಂದಿದ್ದರು.

  22 ವರ್ಷದ ಹಿಂದೆ ವಿಷ್ಣು ಜೊತೆ ಕಮಲ್ ಮಾಡಬೇಕಿದ್ದ ಚಿತ್ರಕ್ಕೆ ಮತ್ತೆ ಮರುಜೀವ.!22 ವರ್ಷದ ಹಿಂದೆ ವಿಷ್ಣು ಜೊತೆ ಕಮಲ್ ಮಾಡಬೇಕಿದ್ದ ಚಿತ್ರಕ್ಕೆ ಮತ್ತೆ ಮರುಜೀವ.!

  ಈಗ ವೈದ್ಯರ ಸಲಹೆಯ ಮೇರೆಗೆ ಕಮಲ್ ನಾಳೆ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಚಿತ್ರರಂದಲ್ಲಿ 60 ವರ್ಷ ಪೂರೈಸಿದ ಕಮಲ್ ಹಾಸನ್, ಸಂಭ್ರಮಾಚರಣೆಯನ್ನು ಇತ್ತಿಚೀಗಷ್ಟೆ ಅದ್ದೂರಿಯಾಗಿ ಮಾಡಲಾಗಿತ್ತು. ಸೂಪರ್ ಸ್ಟಾರ್ ರಜನಿಕಾಂತ್, ಸಂಗೀತ ನಿರ್ದೇಶಕ ಇಳೆಯರಾಜ, ದೇವಿಶ್ರೀಪ್ರಸಾದ್, ಎ.ಆರ್ ರೆಹಮಾನ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

  1960ರಲ್ಲಿ 'ಕಲತೂರ್ ಕನ್ನಮ್ಮ' ಚಿತ್ರದ ಮೂಲಕ ಬಾಲನಟನಾಗಿ (ಆಗಿನ್ನು ಕಮಲ್ ಗೆ 5 ವರ್ಷ) ಕಮಲ್ ಹಾಸನ್ ಚಿತ್ರರಂಗಕ್ಕೆ ಅಡಿಯಿಟ್ಟರು. ತಮಿಳು, ತೆಲುಗು, ಮಲಯಾಳಂ, ಬೆಂಗಾಳಿ, ಕನ್ನಡ ಸೇರಿ ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಮಲ್ ಬಣ್ಣಹಚ್ಚಿದ್ದಾರೆ. ಕಮಲ್ ಸದ್ಯ ಇಂಡಿಯನ್-2 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಕಮಲ್ ಕೆಲವು ದಿನಗಳ ಕಾಲ ಸಂಪೂರ್ಣವಾಗಿ ರೆಸ್ಟ್ ನಲ್ಲಿ ಇರಲಿದ್ದಾರೆ. ಇತ್ತೀಚಿಗಷ್ಟೆ ಕಮಲ್ 65ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.

  English summary
  India Famous actor and Politician Kamal Haasan to undergo surgery in Chennai hospital.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X