For Quick Alerts
  ALLOW NOTIFICATIONS  
  For Daily Alerts

  'ಯುವರತ್ನ' ನಾಯಕಿ ಸಯೇಶಾ ಮಗಳ ನಾಮಕರಣ, ಹೆಸರೇನು?

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ 'ಯುವರತ್ನ' ಚಿತ್ರದೊಂದಿಗೆ ಕನ್ನಡ ಇಂಡಸ್ಟ್ರಿ ಪ್ರವೇಶಿಸಿದ್ದ ನಟಿ ಸಯೇಶಾ ಸೈಗಲ್ ಕಳೆದ ಜುಲೈ ತಿಂಗಳಲ್ಲಿ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದರು. ಜುಲೈ 24 ರಂದು ಹೆಣ್ಣು ಮಗುವನ್ನು ಸ್ವಾಗತಿಸಿದ್ದರು. ಆ ಮಗುವಿಗೆ ಈಗ ನಾಮಕರಣ ಮಾಡಲಾಗಿದೆ.

  ದಕ್ಷಿಣದ ಖ್ಯಾತ ಚಿತ್ರ ವಿಶ್ಲೇಷಕ ಮನೋಬಾಲ ವಿಜಯಬಾಲನ್ ಟ್ವೀಟ್ ಮಾಡಿರುವ ಪ್ರಕಾರ, ನಟಿ ಸಯೇಶಾ ಮತ್ತು ನಟ ಆರ್ಯನ ದಂಪತಿಯ ಮಗಳಿಗೆ 'ಅರಿಯಾನ' ಎಂದು ಹೆಸರಿಡಲಾಗಿದೆ. 'ಅರಿಯಾನ' ಅಂದ್ರೆ ಶುದ್ಧ ಎಂದರ್ಥ.

  ತಾಯಿಯಾದ ಸಂಭ್ರಮದಲ್ಲಿ 'ಯುವರತ್ನ' ನಟಿ ಸಯೇಶಾ ಸೈಗಲ್ತಾಯಿಯಾದ ಸಂಭ್ರಮದಲ್ಲಿ 'ಯುವರತ್ನ' ನಟಿ ಸಯೇಶಾ ಸೈಗಲ್

  ಮಗಳಿಗೆ ಏನೆಂದು ಹೆಸರಿಡಲಾಗಿದೆ ಎಂದು ಸಯೇಶಾ ಅಥವಾ ಆರ್ಯ ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ, ಮೂಲಗಳಿಂದ ಈ ಕುರಿತು ಮಾಹಿತಿ ಸಿಕ್ಕಿರುವುದಾಗಿ ಸುದ್ದಿ ವರದಿಯಾಗಿದೆ.

  ಅಂದ್ಹಾಗೆ, ಆರ್ಯ ಮತ್ತು ಸಯೇಶಾ ಇಬ್ಬರೂ 2019ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮಾರ್ಚ್ 19, 2019ರಲ್ಲಿ ಮುಸ್ಲಿಂ ಸಂಪ್ರದಾಯದಂತೆ ನಟ ಆರ್ಯ ಜೊತೆ ಹೊಸ ಜೀವನ ಆರಂಭಿಸಿದ್ದರು. ಈ ಮದುವೆ ಸಮಾರಂಭದಲ್ಲಿ ಸ್ನೇಹಿತರು, ಕುಟುಂಬದರು ಮತ್ತು ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು.

  ಅಂದ್ಹಾಗೆ, ಸಯೇಶಾ ಸೈಗಲ್ ಹಿರಿಯ ನಟ ಸುಮಿತ್ ಸೈಗಲ್ ಮತ್ತು ಶಾಹೀನ್ ದಂಪತಿಯ ಮಗಳು. ಲೆಜೆಂಡ್ ನಟ ದಿಲೀಪ್ ಕುಮಾರ್ ಮತ್ತು ಸೈರಾ ಬಾನು ಅವರ ಮೊಮ್ಮಗಳು.

  ಇನ್ನು ಸಿನಿಮಾ ವಿಚಾರಕ್ಕೆ ಬಂದ್ರೆ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದ್ದರು. ಈ ಚಿತ್ರ ಏಪ್ರಿಲ್ 1, 2021ರಂದು ತೆರೆಕಂಡಿತ್ತು. ಇದು ಈಕೆಯ ಚೊಚ್ಚಲ ಕನ್ನಡ ಸಿನಿಮಾ.

  2015ರಲ್ಲಿ ಅಖಿಲ್ ಅಕ್ಕಿನೇನಿ ನಟನೆಯ 'ಅಖಿಲ್' ಚಿತ್ರದ ಮೂಲಕ ಸಯೇಶಾ ಸೈಗಲ್ ಚಿತ್ರರಂಗ ಪ್ರವೇಶಿಸಿದ್ದರು. ನಂತರ ಅಜಯ್ ದೇವಗನ್ ಜೊತೆ ಶಿವಾಯ್, ಆರ್ಯ ಜೊತೆ ಗಜನಿಕಾಂತ್, ಕಾಪ್ಪಾನ್, ಟೆಡ್ಡಿ, ವಿಜಯ್ ಸೇತುಪತಿ ಜೊತೆ ಜುಂಗಾ ಅಂತಹ ಚಿತ್ರಗಳಲ್ಲಿ ನಟಿಸಿದ್ದಾರೆ.

  English summary
  Actor arya and sayyeshaa have named their new born daughter Ariana - which means pure.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X