For Quick Alerts
  ALLOW NOTIFICATIONS  
  For Daily Alerts

  ಹಾಲಿವುಡ್‌ ನಿರ್ದೇಶಕನ ಚಿತ್ರದಲ್ಲಿ ಧನುಶ್: ಶುಭಕೋರಿದ ನಟ ಸೂರ್ಯ

  |

  'ಅವೇಂಜರ್ಸ್‌;ಎಂಡ್ ಗೇಮ್', 'ಅವೇಂಜರ್ಸ್‌; ಇನ್‌ಫಿನಿಟಿ ವಾರ್', ಕ್ಯಾಪ್ಟನ್ ಅಮೆರಿಕಾ; ಸಿವಿಲ್ ವಾರ್, ಕ್ಯಾಪ್ಟನ್ ಅಮೆರಿಕಾ; ವಿಂಟರ್ ಸೋಲ್ಜರ್, 'ಎಕ್ಸ್‌ಟ್ರಾಕ್ಷನ್' ಸಿನಿಮಾಗಳನ್ನು ನಿರ್ದೇಶಿಸಿರುವ ಅಂಟೋನಿ ರೊಸ್ಸೊ ಹಾಗೂ ಜೋ ರೊಸ್ಸೊ ನಿರ್ದೇಶಿಸುತ್ತಿರುವ ಹೊಸ ಥ್ರಿಲ್ಲರ್ ಸಿನಿಮಾದಲ್ಲಿ ತಮಿಳು ನಟ ಧನುಷ್ ನಟಿಸಲಿದ್ದಾರೆ.

  ಈ ಕುರಿತು ಸ್ವತಃ ಧನುಶ್ ಶುಕ್ರವಾರ ಬೆಳಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಧಿಕೃತ ಪ್ರಕಟಣೆ ಮಾಡಿದ್ದರು. ಹಾಲಿವುಡ್ ನಿರ್ದೇಶಕನ ಚಿತ್ರದಲ್ಲಿ ನಟಿಸುತ್ತಿರುವುದಕ್ಕಾಗಿ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದರು.

  ಹಾಲಿವುಡ್ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರದಲ್ಲಿ ನಟಿಸುತ್ತಿರುವ ಧನುಶ್‌ಗೆ ನಟ ಸೂರ್ಯ ಶುಭಕೋರಿದ್ದಾರೆ. ಧನುಶ್ ಅವರ ಪೋಸ್ಟ್‌ಗೆ ಕಂಗ್ರ್ಯಾಟ್ಸ್ ತಿಳಿಸಿದ್ದಾರೆ.

  'ಸೂರರೈ ಪೊಟ್ರು' ಚಿತ್ರವನ್ನು ಹಾಡಿ ಹೊಗಳಿದ ಮಹೇಶ್ ಬಾಬು: ಸೂರ್ಯ ನಟನೆಗೆ ಫಿದಾ ಆದ ಪ್ರಿನ್ಸ್

  ಕ್ಯಾಪ್ಟನ್ ಅಮೆರಿಕಾ ಖ್ಯಾತಿಯ ಸೂಪರ್ ಹೀರೋ ನಟ ಕ್ರಿಸ್ ಇವಾನ್ಸ್ ಹಾಗೂ 'ಲಾಲಾ ಲ್ಯಾಂಡ್', ದಿ ಬಿಗ್ ಶಾರ್ಟ್‌ ಸಿನಿಮಾಗಳಲ್ಲಿ ನಟಿಸಿರುವ ರ್ಯಾನ್ ಗೋಸ್ಲಿಂಗ್ 'ದಿ ಗ್ರೇ ಮ್ಯಾನ್' ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಇಬ್ಬರು ಸ್ಟಾರ್ ನಟರೊಂದಿಗೆ ಧನುಶ್ ಸಹ ತೆರೆ ಹಂಚಿಕೊಳ್ಳಲಿದ್ದಾರೆ.

  'ಅವೇಂಜರ್ಸ್' ನಾಯಕನ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ದಕ್ಷಿಣದ ಸ್ಟಾರ್ ನಟ!

  'ದಿ ಗ್ರೇ ಮ್ಯಾನ್' ಸಿನಿಮಾ ಅದೇ ಹೆಸರಿನ ಕಾದಂಬರಿ ಆಧರಿಸಿದ್ದಾಗಿದೆ. ಮಾರ್ಕ್ ಗ್ರೀನೆ ಬರೆದಿರುವ ಈ ಕಾದಂಬರಿಯನ್ನು ಸಿನಿಮಾ ಮಾಡಲಿದ್ದಾರೆ ರೊಸ್ಸೊ ಸಹೋದರರು. ಸಿನಿಮಾಕ್ಕೆ ನೆಟ್‌ಫ್ಲಿಕ್ಸ್ ಬಂಡವಾಳ ಹೂಡುತ್ತಿದ್ದು, ನೆಟ್‌ಫ್ಲಿಕ್ಸ್‌ನಲ್ಲಿಯೇ ಬಿಡುಗಡೆಯಾಗಲಿದೆ.

  ಇನ್ನು ಧನುಶ್ ಕೈಯಲ್ಲಿ ನಾಲ್ಕೈದು ತಮಿಳು ಪ್ರಾಜೆಕ್ಟ್ ಇದೆ. ಕಾರ್ತಿಕ್ ಸುಬ್ಬರಾಜು ನಿರ್ದೇಶನದ ಜಗಮೇ ತಂಥಿರಮ್ ಬಿಡುಗಡೆಗೆ ಸಜ್ಜಾಗಿದೆ. ಮರಿ ಸೆಲ್ವರಾಜ್ ನಿರ್ದೇಶನದ ಕರ್ಣನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಾರ್ತಿಕ್ ನರೇನ್ ಜೊತೆ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ್ದು, ಈ ಚಿತ್ರದಲ್ಲಿ ಮಾಳವಿಕಾ ಮೋಹನ್ ನಾಯಕಿ.

  ಮತ್ತೊಂದೆಡೆ ಸುಧಾ ಬಂಗೇರಾ ನಿರ್ದೇಶನದಲ್ಲಿ ಮೂಡಿಬಂದ ಸೂರರೈ ಪೊಟ್ರು ಸಿನಿಮಾ ಅದ್ಭುತವಾಗಿ ಪ್ರದರ್ಶನ ಕಾಣುತ್ತಿದೆ. ಅಮೇಜಾನ್ ಪ್ರೈಂನಲ್ಲಿ ತೆರೆಕಂಡಿದ್ದ ಚಿತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.

  English summary
  Tamil Actor Surya Congratulate To Dhanush For starring in The Grey Man.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X