For Quick Alerts
  ALLOW NOTIFICATIONS  
  For Daily Alerts

  ವಿಜಯ್ ದಂಪತಿಯ ವಿವಾಹ ವಾರ್ಷಿಕೋತ್ಸವ: ಯಾವ ಸಿನಿಮಾಗೂ ಕಮ್ಮಿ ಇಲ್ಲ ದಳಪತಿ ಲವ್ ಸ್ಟೋರಿ

  By ಫಿಲ್ಮಿಬೀಟ್ ಡೆಸ್ಕ್
  |

  ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ದಂಪತಿಗೆ ಇಂದು (ಆಗಸ್ಟ್ 25) ವಿಶೇಷವಾದ ದಿನ. ಹೌದು, ವಿಜಯ್ ಪ್ರೀತಿಸಿದ ಹುಡುಗಿಯನ್ನು ಮದುವೆಯಾದ ಸುದಿನ. ಇಂದು ವಿಜಯ್ ಮತ್ತು ಸಂಗೀತಾ ದಂಪತಿಯ ಮದುವೆ ವಾರ್ಷಿಕೋತ್ಸವ ಸಂಭ್ರಮ. ಅಭಿಮಾನಿಗಳ ನೆಚ್ಚಿನ ಜೋಡಿ 22ನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಜಯ್ ದಂಪತಿಗೆ ಶುಭಾಶಯಗಳ ಸುರಿಮಳೆಯೇ ಬರುತ್ತಿದೆ.

  ಜೋಸೆಫ್ ವಿಜಯ್ ಚಂದ್ರಶೇಖರ್ ಅಂದರೆ ಥಟ್ ಅಂತ ಗೊತ್ತಾಗಲಿಕ್ಕಿಲ್ಲ. ಆದರೆ ದಳಪತಿ ವಿಜಯ್ ಅಂದರೆ ಪರಿಚಯ ಮಾಡಿಕೊಡಬೇಕಾಗಿಲ್ಲ. ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಎಂದು ಹೇಳುತ್ತಾರೆ. ವಿಜಯ್ ಪಾಲಿಗೆ ಇದು ಅಕ್ಷರಶಃ ನಿಜ. 1999ರಲ್ಲಿ ವಿಜಯ್, ತನ್ನ ಅಭಿಮಾನಿ ಸಂಗೀತಾ ಸೋರ್ನಲಿಂಗಂ ಅವರನ್ನು ಮದುವೆಯಾದರು.

  2021ರಲ್ಲಿ ಅತಿ ಹೆಚ್ಚು ಬಳಕೆಯಾದ ಹ್ಯಾಷ್‌ಟ್ಯಾಗ್ ಯಾವ ಸಿನಿಮಾದ್ದು?2021ರಲ್ಲಿ ಅತಿ ಹೆಚ್ಚು ಬಳಕೆಯಾದ ಹ್ಯಾಷ್‌ಟ್ಯಾಗ್ ಯಾವ ಸಿನಿಮಾದ್ದು?

  ವಿಜಯ್ ಮತ್ತು ಸಂಗೀತಾ ಅವರದ್ದು ಸಾಮಾನ್ಯವಾದ ಪ್ರೇಮ ಕಥೆಯಲ್ಲ. ಪ್ರೀತಿ ಮತ್ತು ಹಣೆ ಬರಹವನ್ನು ನಂಬುವಂತೆ ಮಾಡುವ ಕಥೆಯಾಗಿದೆ. ಇವರ ಪ್ರೇಮ ಕಥೆ ಯಾವ ಸಿನಿಮಾಗೂ ಕಮ್ಮಿ ಇಲ್ಲ. ಅಂದಹಾಗೆ ನಟ ವಿಜಯ್, ಅಭಿಮಾನಿ ಸಂಗೀತಾ ಅವರ ಪ್ರೀತಿಯಲ್ಲಿ ಬಿದ್ದಿದ್ದು ಹೇಗೆ? ಯುಕೆ ನಲ್ಲಿ ನೆಲೆಸಿದ್ದ ಸಂಗೀತಾ ಚೆನ್ನೈನಲ್ಲಿದ್ದ ವಿಜಯ್ ಅವರ ಪರಿಚಯವಾಗಿದ್ದು ಹೇಗೆ? ಮುಂದೆ ಓದಿ...

  ವಿಜಯ್ ಅವರ ಅಭಿಮಾನಿ ಸಂಗೀತಾ

  ವಿಜಯ್ ಅವರ ಅಭಿಮಾನಿ ಸಂಗೀತಾ

  ನಟ ವಿಜಯ್ ಪತ್ನಿ ಸಂಗೀತಾ ಅವರನ್ನು ಮೊದಲು 1996ರಲ್ಲಿ ಭೇಟಿಯಾದರು. ಸಂಗೀತಾ, ವಿಜಯ್ ಅವರ ದೊಡ್ಡ ಅಭಿಮಾನಿ. ವಿಜಯ್ ನಟನೆಯ ಪೂವೆ ಉನಕ್ಕಗ ಸಿನಿಮಾ ನೋಡಿ ಸಂಗೀತ ಫಿದಾ ಆಗಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈ ಸಿನಿಮಾ ಬಳಿಕ ವಿಜಯ್ ನೋಡಬೇಕು, ಅವರ ಜೊತೆ ಮಾತನಾಡಬೇಕೆಂದು ಸಂಗೀತಾ ಹರಸಾಹಸ ಪಡುತ್ತಿದ್ದರು.

  ಚಿತ್ರೀಕರಣ ಸೆಟ್ ಗೆ ಭೇಟಿನೀಡಿದ ಸಂಗೀತಾ

  ಚಿತ್ರೀಕರಣ ಸೆಟ್ ಗೆ ಭೇಟಿನೀಡಿದ ಸಂಗೀತಾ

  ವಿಜಯ್ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲು ವೈಯಕ್ತಿಕವಾಗಿ ಭೇಟಿಯಾಗಬೇಕೆಂದು ಸಂಗೀತಾ ಪ್ರಯತ್ನಿಸುತ್ತಿದ್ದರು. ಒಂದು ದಿನ ಚೆನ್ನೈನಲ್ಲಿ ಶೂಟಿಂಗ್ ನಲ್ಲಿದ್ದ ವಿಜಯ್ ನೋಡಲು ಸಂಗೀತಾ ದೂರದ ಯುಕೆಯಿಂದ ಬಂದರು. ಯುಕೆ ಯಿಂದ ಬಂದ ಅಭಿಮಾನಿ ಸಂಗೀತಾ ಅವರನ್ನು ವಿಜಯ್ ಪ್ರೀತಿಯಿಂದ ಸ್ವಾಗತಿಸಿ ಕೆಲವು ಸಮಯ ಅವರ ಜೊತೆ ಮಾತನಾಡಿದ್ದರು.

  ಅತಿ ಹೆಚ್ಚು ಸಂಭಾವನೆ: ದಾಖಲೆ ಬರೆದ ವಿಜಯ್!ಅತಿ ಹೆಚ್ಚು ಸಂಭಾವನೆ: ದಾಖಲೆ ಬರೆದ ವಿಜಯ್!

  ವಿಜಯ್ ಕುಟುಂಬದವ ಮನಗೆದ್ದ ಸಂಗೀತಾ

  ವಿಜಯ್ ಕುಟುಂಬದವ ಮನಗೆದ್ದ ಸಂಗೀತಾ

  ಆಗಲೇ ವಿಜಯ್ ದೊಡ್ಡ ನಟನಾಗಿ ಗುರುತಿಸಿಕೊಂಡಿದ್ದರು. ಅಲ್ಲದೆ ಸಾಲು ಸಾಲು ಸಿನಿಮಾಗಳಲ್ಲಿ ವಿಜಯ್ ಬ್ಯುಸಿ ಇದ್ದರು. ಆ ಸಮಯದಲ್ಲಿ ಸಂಗೀತಾ, ವಿಜಯ್ ನೋಡಲು, ಮಾತನಾಡಿಸಲು ಹರಸಾಹಸ ಪಡುತ್ತಿದ್ದರು. ಸಂಗೀತಾ ಅವರ ಅಭಿಮಾನಕ್ಕೆ ಮನಸೋತ ವಿಜಯ್, ಸಂಗೀತಾ ಜೊತೆ ಸ್ನೇಹ ಬೆಳೆಸಿಕೊಂಡರು. ಇಬ್ಬರು ಪರಿಚಿತರಾಗಿ ಸ್ನೇಹಿತರಾದ ಬಳಿಕ ವಿಜಯ್ ಕುಟುಂಬದವರನ್ನೆಲ್ಲ ಪರಿಚಯ ಮಾಡಿಕೊಡುವುದಾಗಿ ಸಂಗೀತಾಗೆ ಹೇಳಿದರು. ವಿಜಯ್ ಮಾತಿನಿಂದ ಸಂತೋಷಗೊಂಡ ಸಂಗೀತಾ, ವಿಜಯ್ ಫ್ಯಾಮಿಲಿಯವರನ್ನು ಭೇಟಿಯಾದರು. ವಿಜಯ್ ಕುಟುಂಬದವರಿಗೆ ಸಂಗೀತಾ ತುಂಬಾ ಇಷ್ಟವಾಗಿ, ಸಂಗೀತಾನೆ ಮನೆಯ ಸೊಸೆ ಎಂದು ನಿರ್ಧರಿಸಿಬಿಟ್ಟರು. ಆದರೆ ಸಂಗೀತಾ ಬಳಿ ಈ ವಿಚಾರ ಪ್ರಸ್ತಾಪ ಮಾಡಿರಲಿಲ್ಲ.

  ವಿಜಯ್ ಕುಟುಂಬದಿಂದ ಮದುವೆ ಪ್ರಸ್ತಾಪ

  ವಿಜಯ್ ಕುಟುಂಬದಿಂದ ಮದುವೆ ಪ್ರಸ್ತಾಪ

  ಅಷ್ಟರಲ್ಲೇ ವಿಜಯ್, ಸಂಗೀತಾ ಅವರನ್ನು ಇಷ್ಟಪಡಲು ಪ್ರಾರಂಭಿಸಿದ್ದರು. ಕೆಲವು ದಿನಗಳ ಬಳಿಕ ವಿಜಯ್ ಕುಟುಂಬದವರು ಸಂಗೀತಾ ಬಳಿ ಮದುವೆ ಪ್ರಸ್ತಾಪ ಮಾಡಿದರು. ವಿಜಯ್ ನನ್ನು ತುಂಬಾ ಇಷ್ಟಪಡುತ್ತಿದ್ದ ಸಂಗೀತಾಗೆ ವಿಜಯ್ ನನ್ನು ಮದುವೆ ಆಗಲು ಇಷ್ಟವಿಲ್ಲ ಎಂದು ಹೇಳಲು ಸಂಗೀತಾಗೆ ಕಾರಣನೇ ಇರಲಿಲ್ಲ. ಸಂಗೀತಾ ಪೋಷಕರು ಲಂಡನ್ ನಲ್ಲಿ ನೆಲೆಸಿದ್ದರು. ಬಳಿಕ ಇಬ್ಬರ ಕುಟುಂಬವು ಲಂಡನ್ ನಲ್ಲಿ ಭೇಟಿಯಾಗಿ ಮದುವೆ ಮಾತುಕತೆ ಮಾಡಿದರು.

  1999ರಲ್ಲಿ ಮದುವೆ, ಇಬ್ಬರು ಮಕ್ಕಳು

  1999ರಲ್ಲಿ ಮದುವೆ, ಇಬ್ಬರು ಮಕ್ಕಳು

  1999 ಆಗಸ್ಟ್ 25ರಂದು ವಿಜಯ್ ಮತ್ತು ಸಂಗೀತಾ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಂಗೀತಾ ಹಿಂದೂ ಸಂಪ್ರದಾಯ ಕುಟುಂಬದ ಹುಡುಗಿ. ವಿಜಯ್ ಕ್ರಿಶ್ಚಿಯನ್. ಹಾಗಾಗಿ ಇಬ್ಬರ ಮದುವೆ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ನಡೆಯಿತು. ಮದುವೆಯಾಗಿ ಒಂದು ವರ್ಷದ ಬಳಿಕ ಸಂಗೀತಾ ಮೊದಲ ಮಗುವಿಗೆ ಜನ್ಮ ನೀಡಿದರು. ಜಾಸನ್ ಸಂಜಯ್ ಎಂದು ಮಗನಿಗೆ ನಾಮಕರಣ ಮಾಡಿದರು. 2005ರಲ್ಲಿ ಎರಡನೇ ಮಗು ದಿವ್ಯಾ ಸಾಶಾ ಜನಿಸಿದರು. ವಿಜಯ್ ಸಂಗೀತಾ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

  ಸಂತೋಷ ಜೀವನ ನಡೆಸುತ್ತಿರುವ ವಿಜಯ್ ದಂಪತಿ

  ಸಂತೋಷ ಜೀವನ ನಡೆಸುತ್ತಿರುವ ವಿಜಯ್ ದಂಪತಿ

  ವಿಜಯ್ ಮತ್ತು ಸಂಗೀತಾ ಇಬ್ಬರೂ ತಮಿಳು ಸಿನಿಮಾರಂಗದ ನೆಚ್ಚಿನ ಜೋಡಿಗಳಲ್ಲಿ ಒಂದಾಗಿದೆ. ಇಬ್ಬರೂ ಸಂತೋಷದ ಜೀವನ ನಡೆಸುತ್ತಿದ್ದಾರೆ. ಅನೇಕ ಯುವ ಜೋಡಿಗಳಿಗೆ ವಿಜಯ್ ಮತ್ತು ಸಂಗೀತ ಜೋಡಿ ಮಾದರಿಯಾಗಿದ್ದಾರೆ. 22 ವರ್ಷಗಳ ನಂತರವು ಅವರ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ. ವಿಜಯ್ ದಂಪತಿ ಚೆನ್ನೈನಲ್ಲಿ ನೆಲೆಸಿದ್ದಾರೆ.

  ವಿಜಯ್ ಸಿನಿಮಾಗಳು

  ವಿಜಯ್ ಸಿನಿಮಾಗಳು

  ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ವಿಜಯ್ ಸದ್ಯ ಬೀಸ್ಟ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಟಿ ಪೂಜಾ ಹೆಗ್ಡೆ ವಿಜಯ್ ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ನಡುವೆ ವಿಜಯ್ ಪುತ್ರನ ಸಿನಿಮಾ ಎಂಟ್ರಿ ಕೂಡ ಆಗಾಗ ಸದ್ದು ಮಾಡುತ್ತಿದೆ. ಆದರೆ ಈ ಬಗ್ಗೆ ವಿಜಯ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  English summary
  Thalapathy Vijay And Sangeetha Celebrating Their 22nd Wedding Anniversary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X