For Quick Alerts
  ALLOW NOTIFICATIONS  
  For Daily Alerts

  11 ಜನ ಸಹೋದರಿಯರ ಮದುವೆ ಮಾಡಿಸಿದ ನಟ ವಿಶಾಲ್ ತಮ್ಮ ಮದುವೆ ಬಗ್ಗೆ ಹೇಳಿದ್ದೇನು?

  |

  ಮದುವೆ ಸುದ್ದಿಯಿಂದ ಪದೇ ಪದೇ ತಮಿಳು ನಟ ವಿಶಾಲ್ ಸುದ್ದಿ ಆಗುತ್ತಿರುತ್ತಾರೆ. 3 ವರ್ಷಗಳ ಹಿಂದೆ ಹೈದರಾಬಾದ್‌ ಮೂಲದ ಅನಿಶಾ ರೆಡ್ಡಿ ಎನ್ನುವ ಯುವತಿ ಜೊತೆ ವಿಶಾಲ್ ಮದುವೆ ನಿಶ್ಚಿತಾರ್ಥ ಆಗಿತ್ತು. ನಂತರ ಅದು ಮುರಿದು ಬಿದ್ದಿತ್ತು. ಇನ್ನು ಸಾಕಷ್ಟು ನಟಿಯರ ಜೊತೆಗೂ ಕಾಲಿವುಡ್ ನಟನ ಹೆಸರು ತಳುಕು ಹಾಕಿಕೊಂಡಿತ್ತು. ಇದೀಗ ಮದುವೆ ಬಗ್ಗೆ ಮಾತನಾಡಿರುವ ನಟ 'ನಾನು ಲವ್ ಮ್ಯಾರೇಜ್ ಆಗುತ್ತೀನಿ' ಎಂದಿದ್ದಾರೆ.

  ಆಕ್ಷನ್ ಸಿನಿಮಾಗಳ ಮೂಲಕ ನಟ ವಿಶಾಲ್ ಕಾಲಿವುಡ್‌ನಲ್ಲಿ ಧೂಳೆಬ್ಬಿಸಿದ್ದಾರೆ. ತೆಲುಗಿಗೂ ಸಿನಿಮಾಗಳು ಡಬ್ ಆಗಿ ರಿಲೀಸ್ ಆಗುತ್ತಿದೆ. 'ಲಾಠಿ' ಎನ್ನುವ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ವಿಶಾಲ್ ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಡುತ್ತಿದ್ದಾರೆ. ನಟನಾಗಿ ಮಾತ್ರವಲ್ಲದೇ ನಟಿಗರ್ ಸಂಘದ ಕಾರ್ಯದರ್ಶಿಯಾಗಿ ವಿಶಾಲ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊನ್ನೆ ಒಂದು ಚಾರಿಟಬಲ್ ಟ್ರಸ್ಟ್ ಸಹಾಯದಿಂದ ನಟ ವಿಶಾಲ್ 11 ಬಡ ಜೋಡಿಯ ಮದುವೆ ಖರ್ಚನ್ನು ವಹಿಸಿಕೊಂಡಿದ್ದರು. ತಾಳಿಯ ಜೊತೆಗೆ ಮನೆಗೆ ಬೇಕಾದ ಅವಶ್ಯಕ ವಸ್ತುಗಳನ್ನು ನೀಡಿದ್ದಾರೆ. "ನನಗೆ 11 ಜನ ತಂಗಿಯರು ಸಿಕ್ಕಿದ್ದಾರೆ. ಇವರನ್ನು ಚೆನ್ನಾಗಿ ನೋಡಿ ನೋಡಬೇಕು. ನಾನು ಇವರ ಯೋಗಕ್ಷೇಮದ ಬಗ್ಗೆ ವಿಚಾರಿಸುತ್ತಲೇ ಇರುತ್ತೀನಿ" ಎಂದಿದ್ದಾರೆ.

  ನಟ ವಿಶಾಲ್ ಜೊತೆ ನಟಿ ಅಭಿನಯ ಡೇಟಿಂಗ್? ಶೀಘ್ರದಲ್ಲೇ ಮದುವೆ? ಸ್ಪಷ್ಟನೆ ನೀಡಿದ ಚೆನ್ನೈ ಚೆಲುವೆನಟ ವಿಶಾಲ್ ಜೊತೆ ನಟಿ ಅಭಿನಯ ಡೇಟಿಂಗ್? ಶೀಘ್ರದಲ್ಲೇ ಮದುವೆ? ಸ್ಪಷ್ಟನೆ ನೀಡಿದ ಚೆನ್ನೈ ಚೆಲುವೆ

  ಮದುವೆ ಸಮಾರಂಭದ ನಂತರ ನಟ ವಿಶಾಲ್ ತಮ್ಮ ಮದುವೆಯ ಬಗ್ಗೆಯೂ ಮಾತನಾಡಿದ್ದಾರೆ. ಇತ್ತೀಚೆಗೆ ನಟಿ ಅಭಿನಯ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಇಬ್ಬರು ಮದುವೆ ಆಗುತ್ತಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಇದೆಲ್ಲಾ ಸುಳ್ಳು ಎಂದು ವಿಶಾಲ್ ಹೇಳಿದ್ದಾರೆ.

  'ನಾನು ಲವ್ ಮ್ಯಾರೇಜ್ ಆಗ್ತೀನಿ'- ವಿಶಾಲ್

  'ನಾನು ಲವ್ ಮ್ಯಾರೇಜ್ ಆಗ್ತೀನಿ'- ವಿಶಾಲ್

  ನಟನಾಗಿ ಮಾತ್ರವಲ್ಲದೇ ತಮ್ಮ ಸಾಮಾಜಿಕ ಕೆಲಸಗಳಿಂದಲೂ ವಿಜಯ್ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ನೆಚ್ಚಿನ ನಟನ ಮದುವೆ ಯಾವಾಗ ಎಂದು ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ತಮ್ಮ ಮದುವೆ ಬಗ್ಗೆ ಮಾತನಾಡಿರುವು ನಟ ವಿಶಾಲ್, "ನಾನು ಪ್ರೀತಿಸಿ ಮದುವೆಯಾಗಲು ಬಯಸುತ್ತೇನೆ. ಅರೆಂಜ್ಡ್ ಮ್ಯಾರೇಜ್ ನನಗೆ ಸೂಟ್ ಆಗುವುದಿಲ್ಲ. ನಾನು ಪ್ರೀತಿಸಿದ ಹುಡುಗಿ ಜೊತೆ ಸಪ್ತಪದಿ ತುಳಿಯುತ್ತೇನೆ. ಆ ಹುಡುಗಿ ಯಾರು ಎನ್ನುವುದನ್ನು ಶೀಘ್ರದಲ್ಲೇ ನಿಮಗೆ ಪರಿಚಯ ಮಾಡಿಸುತ್ತೇನೆ" ಎಂದು ಹೇಳಿದ್ದಾರೆ.

  ಕಾರಿನಲ್ಲಿ ಬಂದ ನಿಗೂಢ ವ್ಯಕ್ತಿಗಳಿಂದ ತಮಿಳು ನಟ ವಿಶಾಲ್ ಮನೆ ಮೇಲೆ ದಾಳಿ!ಕಾರಿನಲ್ಲಿ ಬಂದ ನಿಗೂಢ ವ್ಯಕ್ತಿಗಳಿಂದ ತಮಿಳು ನಟ ವಿಶಾಲ್ ಮನೆ ಮೇಲೆ ದಾಳಿ!

  ವರಲಕ್ಷ್ಮಿ ಜೊತೆ ವಿಶಾಲ್ ಡೇಟಿಂಗ್!

  ವರಲಕ್ಷ್ಮಿ ಜೊತೆ ವಿಶಾಲ್ ಡೇಟಿಂಗ್!

  ಕೆಲ ವರ್ಷಗಳ ಹಿಂದೆ ತಮಿಳು ನಟಿ ವರಲಕ್ಷ್ಮಿ ಶರತ್‌ಕುಮಾರ್ ಜೊತೆ ವಿಶಾಲ್ ಹೆಸರು ತಳುಕು ಹಾಕಿಕೊಂಡಿತ್ತು. ಇಬ್ಬರು ಮದುವೆ ಕೂಡ ಆಗುತ್ತಾರೆ ಎನ್ನಲಾಗಿತ್ತು. 'ಮದಗದ ರಾಜ' ಹಾಗೂ 'ಸಂಡೈ ಕೋಳಿ- 2' ಸಿನಿಮಾಗಳಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದಾರೆ. ಆದರೆ ಯಾರೊಬ್ಬರು ಕೂಡ ಡೇಟಿಂಗ್ ವಿಚಾರವನ್ನು ಒಪ್ಪಿಕೊಳ್ಳಲಿಲ್ಲ.

  ಮುರಿದು ಬಿದ್ದಿದ್ದ ವಿಶಾಲ್ ಮದುವೆ

  ಮುರಿದು ಬಿದ್ದಿದ್ದ ವಿಶಾಲ್ ಮದುವೆ

  2019ರಲ್ಲಿ ಹೈದರಾಬಾದ್ ಮೂಲದ ಅನಿಷಾ ಅಲ್ಲಾ ರೆಡ್ಡಿ ಜತೆಗೆ ನಟ ವಿಶಾಲ್ ಮದುವೆ ನಿಶ್ಚಯವಾಗಿತ್ತು. ಅದ್ಧೂರಿ ಸಮಾರಂಭದಲ್ಲಿ ಇಬ್ಬರು ಉಂಗುರ ಬದಲಿಸಿಕೊಂಡಿದ್ದರು. ಶೀಘ್ರದಲ್ಲೇ ಇಬ್ಬರು ಮದುವೆ ಆಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ನಂತರ ಇವರ ನಿಶ್ಚಿತಾರ್ಥ ಮುರಿದು ಬಿದ್ದಿದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಇದನ್ನು ವಿಶಾಲ್ ಪೋಷಕರು ಒಪ್ಪಿಕೊಳ್ಳಲಿಲ್ಲ. ಇಬ್ಬರು ಮದುವೆ ಆಗುವುದು ಗ್ಯಾರೆಂಟಿ ಎಂದಿದ್ದರು. ಆದರೆ ವಿಶಾಲ್- ಅನಿಷಾ ಹಸೆಮಣೆ ಏರಲೇಯಿಲ್ಲ.

  3 ಸಿನಿಮಾಗಳಲ್ಲಿ ವಿಶಾಲ್ ಬ್ಯುಸಿ

  3 ಸಿನಿಮಾಗಳಲ್ಲಿ ವಿಶಾಲ್ ಬ್ಯುಸಿ

  ವಿಶಾಲ್ ಸದ್ಯ 'ಲಾಠಿ', 'ತುಪ್ಪಾಲಿವಾಲನ್ - 2', ಹಾಗೂ 'ಮಾರ್ಕ್ ಆಂಟನಿ' ಎನ್ನುವ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಲಾಠಿ ಸಿನಿಮಾ ಚಿತ್ರೀಕರಣದ ವೇಳೆ ಪೆಟ್ಟಾಗಿತ್ತು. ಈ ಸಿನಿಮಾ ಕನ್ನಡ, ತೆಲುಗು, ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗುತ್ತಿದೆ. 'ಮಾರ್ಕ್ ಆಂಟನಿ' ಚಿತ್ರದಲ್ಲಿ ವಿಶಾಲ್ ಪತ್ನಿ ಪಾತ್ರದಲ್ಲಿ ನಟಿ ಅಭಿನಯ ಬಣ್ಣ ಹಚ್ಚಿದ್ದಾರೆ. ಅದೇ ಕಾರಣಕ್ಕೆ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ, ಶೀಘ್ರದಲ್ಲೇ ಮದುವೆ ಆಗುತ್ತಾರೆ ಎನ್ನುವ ಗುಸು ಗುಸು ಕೇಳಿಬಂದಿತ್ತು.

  English summary
  Tamil Actor Vishal Interesting Comments On Love Marriage. He Said to Medai that He will soon announce his wedding date. and also introduce his girlfriend. Know more.
  Wednesday, November 9, 2022, 16:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X