Just In
Don't Miss!
- Automobiles
ನ್ಯೂ ಜನರೇಷನ್ ಟಾಟಾ ಸಫಾರಿ ಖರೀದಿಗೆ ಇಷ್ಟು ದಿನಗಳ ಕಾಲ ಕಾಯಲೇಬೇಕು!
- Finance
ಮಾರ್ಚ್ 09ರ ಪೆಟ್ರೋಲ್, ಡೀಸೆಲ್ ದರ ಹೀಗಿದೆ
- News
ಪ್ರಯಾಣಿಕರ ಗಮನಕ್ಕೆ: ಇದು ಭಾರತೀಯ ರೈಲ್ವೆ ಹೊಸ ಸಹಾಯವಾಣಿ
- Sports
ದಿಲ್ಶನ್ ಅಬ್ಬರದಾಟ, ಸೌತ್ ಆಫ್ರಿಕಾ ಲೆಜೆಂಡ್ಸ್ ವಿರುದ್ಧ ಶ್ರೀಲಂಕಾ ಲೆಜೆಂಡ್ಸ್ಗೆ ಭರ್ಜರಿ ಜಯ
- Lifestyle
ದಿನ ಭವಿಷ್ಯ: ನಿಮ್ಮ ರಾಶಿಯ ಪ್ರಕಾರ ಮಂಗಳವಾರ ನಿಮಗೆ ಹೇಗಿರಲಿದೆ
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಚ್ಚರಿಯ ಸುದ್ದಿ ನೀಡಿದ 'ಹೆಬ್ಬುಲಿ' ನಾಯಕಿ ಅಮಲಾ ಪೌಲ್
'ಹೆಬ್ಬುಲಿ' ಚಿತ್ರದಲ್ಲಿ ಸುದೀಪ್‌ಗೆ ನಾಯಕಿಯಾಗಿದ್ದ ಅಮಲಾ ಪೌಲ್ ಬಾಲಿವುಡ್‌ನ ಗಾಯಕರೊಬ್ಬರ ಜತೆಗೆ ಲಿವ್ ಇನ್ ರಿಲೇಷನ್‌ಷಿಪ್‌ನಲ್ಲಿರುವ ಸಂಗತಿ ಇತ್ತೀಚೆಗಷ್ಟೇ ಹೊರಬಿದ್ದಿತ್ತು. ಒಮ್ಮೆ ಮದುವೆಯಾಗಿ ವಿಚ್ಛೇದನ ಪಡೆದಿದ್ದ ಅಮಲಾ, ಮತ್ತೆ ಮದುವೆಯಾಗುತ್ತಾರಾ ಅಥವಾ ಲಿವ್ ಇನ್ ರಿಲೇಷನ್‌ಷಿಪ್‌ನಲ್ಲಿಯೇ ಮುಂದುವರಿಯುತ್ತಾರಾ ಎಂಬ ಕುತೂಹಲಗಳು ಮೂಡಿದ್ದವು.
'ನಾನು ಯಾರನ್ನೋ ನೋಡುತ್ತಿದ್ದೇನೆ' ಎಂದು ಗೋಡೆ ಮೇಲೆ ದೀಪ ಇರಿಸಿದ್ದಂತೆ ಹೇಳಿದ್ದ ಅಮಲಾ, ಭವ್ನಿಂದರ್ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಹಾಗಿದ್ದರೂ ತಮ್ಮ ಬಗ್ಗೆ ತಾಯಿಯಂತೆ ಕಾಳಜಿ ಮಾಡುವ ವ್ಯಕ್ತಿ ಬಗ್ಗೆ ಹೇಳಿಕೊಂಡಿದ್ದರು. ಆದರೆ ಅಮಲಾ ಪೌಲ್ ಮತ್ತು ಗಾಯಕ ಭವ್ನಿಂದರ್ ಸಿಂಗ್ ನಡುವಿನ ಸಂಬಂಧದ ಸುದ್ದಿ ಹೊರಬಂದ ಕೆಲವೇ ದಿನಗಳಲ್ಲಿ ಇಬ್ಬರೂ ಅಚ್ಚರಿ ನೀಡಿದ್ದಾರೆ.

ಗುಟ್ಟಾಗಿ ಮದುವೆಯಾದ ಜೋಡಿ
ಕೊರೊನಾ ವೈರಸ್ ಭೀತಿಯ ನಡುವೆ ನಿಗದಿಯಾಗಿದ್ದ ಮದುವೆಗಳು ಮುಂದಕ್ಕೆ ಹೋಗುತ್ತಿದ್ದರೆ, ಅಮಲಾ ಮತ್ತು ಭವ್ನಿಂದರ್, ಈ ಗೋಜಿನ ನಡುವೆಯೇ ಗುಟ್ಟಾಗಿ ವೈವಾಹಿಕ ಬದುಕಿಗೆ ಕಾಲಿರಿಸಿದ್ದಾರೆ.

ಭವ್ನಿಂದರ್ ಫೋಟೊಗಳು
ಖಾಸಗಿ ಸಮಾರಂಭವೊಂದರಲ್ಲಿ ಇಬ್ಬರೂ ಹಸೆಮಣೆ ಏರಿದ್ದಾರೆ ಎನ್ನಲಾಗಿದೆ. ಮದುವೆಯ ನಂತರ ಇಬ್ಬರೂ ಬಹಳ ಆಪ್ತತೆಯಿಂದ ತೆಗೆಸಿಕೊಂಡ ಕೆಲವು ಚಿತ್ರಗಳನ್ನು ಭವ್ನಿಂದರ್ ಸಿಂಗ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಅದಕ್ಕೆ 'ಮದುವೆಯ ಚಿತ್ರಗಳು... ಹಿಂದಿನವು' ಎಂಬ ಕ್ಯಾಪ್ಷನ್ ನೀಡಿದ್ದರು.

ಮದುವೆ ಫೋಟೊಗಳು ವೈರಲ್
ಭವ್ನಿಂದರ್ ಹೀಗೆ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಅವುಗಳನ್ನು ಡಿಲೀಟ್ ಮಾಡಿದ್ದಾರೆ. ಆದರೆ ಅವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಲು ಕೆಲವೇ ಕೆಲವು ನಿಮಿಷಗಳು ಸಾಕಾಗಿತ್ತು. ಅಮಲಾ ಅವರ ಫ್ಯಾನ್ಸ್ ಪುಟಗಳಲ್ಲಿ ಈ ಫೋಟೊಗಳು ರಾರಾಜಿಸುತ್ತಿವೆ.

ಹಲವು ವರ್ಷಗಳಿಂದ ಲಿವ್ ಇನ್
ಇಬ್ಬರೂ ಅತ್ಯಂತ ಗೋಪ್ಯವಾಗಿ ಮದುವೆಯಾಗಿದ್ದಾರೆ. ಅವರ ಕುಟುಂಬದವರು ಬಿಟ್ಟು ಬೇರೆ ಯಾರೂ ಅದರಲ್ಲಿ ಭಾಗವಹಿಸಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಇದನ್ನೂ ಮುನ್ನ ಮುಂಬೈ ಮೂಲದ ಭವ್ನಿಂದರ್ ಹಾಗೂ ಅಮಲಾ ಹಲವು ವರ್ಷಗಳಿಂದ ಲಿವ್ ಇನ್ ಸಂಬಂಧದಲ್ಲಿದ್ದರು ಎನ್ನಲಾಗಿದೆ. ಆದರೆ ಇದರ ಬಗ್ಗೆ ಅಮಲಾ ಬಹಿರಂಗವಾಗಿ ಮಾತನಾಡಿರಲಿಲ್ಲ.

ತ್ಯಾಗ ಮಾಡಬಲ್ಲ ವ್ಯಕ್ತಿ
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅಮಲಾ ಪೌಲ್, ತಮ್ಮನ್ನು ಬೆಂಬಲಿಸುವ ಸಲುವಾಗಿಯೇ ತಮ್ಮ ಬಾಯ್‌ಫ್ರಂಡ್ ತನ್ನ ವೃತ್ತಿ ಬದುಕನ್ನು ತ್ಯಾಗ ಮಾಡಿದ್ದಾನೆ ಎಂದು ಹೇಳಿಕೊಂಡಿದ್ದರು. 'ಒಬ್ಬ ತಾಯಿ ಮಾತ್ರ ಅಂತಹ ಬೇಷರತ್ ಪ್ರೀತಿ ಮತ್ತು ತ್ಯಾಗ ಮಾಡಬಲ್ಲಳು. ನನ್ನ ಜತೆ ಇದ್ದು ನನಗೆ ಬೆಂಬಲ ನೀಡುವ ಸಲುವಾಗಿಯೇ ಈ ವ್ಯಕ್ತಿ ತ್ಯಾಗ ಮಾಡಬಲ್ಲೆ ಮತ್ತು ತನ್ನ ಕೆಲಸ ಬಿಡಬಲ್ಲದೆ ಎಂಬುದನ್ನು ಸಾಬೀತುಪಡಿಸಿದ್ದಾನೆ. ಏಕೆಂದರೆ ಆತನಿಗೆ ನನ್ನ ಪ್ಯಾಷನ್ ಗೊತ್ತಿದೆ ಎಂದು ಅಮಲಾ ಹೇಳಿದ್ದಾರೆ.

ಅಮಲಾಗೆ ಎರಡನೆಯ ಮದುವೆ
ಅಮಲಾ ಪೌಲ್ 2014ರಲ್ಲಿ ಎಎಲ್ ವಿಜಯ್ ಅವರನ್ನು ಅದ್ಧೂರಿ ಸಮಾರಂಭದಲ್ಲಿ ಮದುವೆಯಾಗಿದ್ದರು. ಆದರೆ ಇಬ್ಬರ ನಡುವಿನ ಮನಸ್ತಾಪದಿಂದ 2017ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಹುಟ್ಟಿನಿಂದ ಕ್ರೈಸ್ತ ಧರ್ಮಕ್ಕೆ ಸೇರಿರುವ ಅಮಲಾ, ಹಿಂದೂ ಧರ್ಮ ಪಾಲಿಸುತ್ತಿರುವುದಾಗಿ ತಿಳಿಸಿದ್ದರು. 'ಆದೈ' ಬಿಡುಗಡೆ ವೇಳೆ ಭವ್ನಿಂದರ್, 'ನಿನ್ನ ಬಗ್ಗೆ ಬಹಳ ಹೆಮ್ಮೆಯಾಗುತ್ತಿದೆ. ಮತ್ತಷ್ಟು ಎತ್ತರಕ್ಕೇರು ಮತ್ತು ಪ್ರೇಕ್ಷಕರನ್ನು ಮುದಗೊಳಿಸುವುದನ್ನು ಮುಂದುವರಿಸು' ಎಂದು ಹಾರೈಸಿದ್ದರು.