For Quick Alerts
  ALLOW NOTIFICATIONS  
  For Daily Alerts

  28 ವರ್ಷ ಆದರೂ ಗಂಡನಿಗೆ 'ಐಲವ್ ಯು' ಹೇಳಿಲ್ಲ: ಪ್ರೇಮ್ ಕಹಾನಿ ಬಿಚ್ಚಿಟ್ಟ 'ರಣಧೀರ'ನ ರಾಣಿ!

  |

  ಬಹುಭಾಷಾ ನಟಿ ಖುಷ್ಬೂ ಸಿನಿಮಾಗಳ ಜೊತೆ ಜೊತೆಗೆ ರಾಜಕೀಯರಂಗದಲ್ಲೂ ಗುರ್ತಿಸಿಕೊಂಡಿದ್ದಾರೆ. ಸದ್ಯ ತೆಲುಗು ಕಿರುತೆರೆಯ 'ಜಬರ್ದಸ್ತ್' ಕಾಮಿಡಿ ಶೋ ತೀರ್ಪುಗಾರರಾಗಿ ಕೂಡ ಬ್ಯುಸಿಯಾಗಿದ್ದಾರೆ. ನಟಿ ಇಂದ್ರಜಾ ಜೊತೆ ಸೇರಿ ಕಾಮಿಡಿ ಪಂಚ್‌ಗಳ ಮೂಲಕ ವೀಕ್ಷಕರನ್ನು ರಂಜಿಸ್ತಿದ್ದಾರೆ. ಇದೇ ಶೋನಲ್ಲಿ ಖುಷ್ಬೂ ತಮ್ಮ ಲವ್‌ ಸ್ಟೋರಿಯನ್ನು ರಿವೀಲ್ ಮಾಡಿದ್ದಾರೆ. ಹಾಸ್ಯ ಕಲಾವಿದರು ಕಾಮಿಡಿ ಸ್ಕಿಟ್ ಮಾಡಿ ನಿಮ್ಮ ಲವ್ ಸ್ಟೋರಿ ಹೇಳಿ ಮೇಡಂ ಎಂದು ಕೇಳಿದ್ದಾರೆ.

  ತಮಿಳು ಸಿನಿಮಾ ನಿರ್ದೇಶಕ ಸುಂದರ್‌. ಸಿ ಜೊತೆ 22 ವರ್ಷಗಳ ಹಿಂದೆ ನಟಿ ಖುಷ್ಬೂ ಹಸೆಮಣೆ ಏರಿದ್ದರು. ಅವಂತಿಕಾ ಹಾಗೂ ಆನಂದಿಕಾ ಅನ್ನುವ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. 90ರ ದಶಕದಲ್ಲೇ ತಮಿಳು ನಟ ಪ್ರಭು ಜೊತೆ ಖುಷ್ಭೂ ಲಿವ್‌ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದರು ಎನ್ನುವ ಗಾಳಿಸುದ್ದಿ ಕೇಳಿಬಂದಿತ್ತು. ಸುಂದರ್. ಸಿ ನಿರ್ದೇಶನದ ಮೊದಲ ಸಿನಿಮಾ 'ಮುರೈ ಮಾಮನ್'. 1995ರಲ್ಲಿ ರಿಲೀಸ್ ಆಗಿದ್ದ ಈ ಚಿತ್ರದಲ್ಲಿ ಖುಷ್ಬೂ ನಾಯಕಿಯಾಗಿ ನಟಿಸಿದ್ದರು. ಶೂಟಿಂಗ್‌ ಸಮಯದಲ್ಲೇ ಖುಷ್ಬೂನ ನೋಡಿ ಫಿದಾ ಆಗಿದ್ದ ಸುಂದರ್‌ ಪ್ರಪೋಸ್ ಮಾಡಿದ್ದರು. ಸ್ಟಾರ್ ನಟಿಯಾಗಿ ಮೆರೆಯುತ್ತಿದ್ದರೂ ಆಕೆಯೂ ಮನ ಸೋತಿದ್ದರು. ಅಲ್ಲಿಂದ ಇವರ ಲವ್‌ಸ್ಟೋರಿ ಶುರುವಾಗಿತ್ತು.

  ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡಲ್ಲ 'ಪೊನ್ನಿಯಿನ್ ಸೆಲ್ವನ್': ಆ ವಿಚಾರದಲ್ಲಿ ಮಣಿರತ್ನಂ ಸಕ್ಸಸ್!ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡಲ್ಲ 'ಪೊನ್ನಿಯಿನ್ ಸೆಲ್ವನ್': ಆ ವಿಚಾರದಲ್ಲಿ ಮಣಿರತ್ನಂ ಸಕ್ಸಸ್!

  'ಜಬರ್ದಸ್ತ್' ಶೋನಲ್ಲಿ ತಮ್ಮ ಲವ್‌ ಸ್ಟೋರಿಯನ್ನು ಹೇಳುತ್ತಾ ಖುಷ್ಬೂ ನಾಚಿ ನೀರಾಗಿದ್ದಾರೆ. ಮದುವೆ ಆಗಿ 22 ವರ್ಷ ಆದರೂ ಈವರೆಗೆ ತಾವು ಗಂಡನಿಗೆ ಒಂದು ಸಲ ಕೂಡ 'ಐಲವ್ ಯೂ' ಹೇಳಿಲ್ಲ ಎಂದಿದ್ದಾರೆ. ಇದನ್ನು ನೋಡಿದವರು ಈಗ ಮಾಡಿ ಫೋನ್ ಮಾಡಿ ಹೇಳಿ ಮೇಡಂ ಎಂದು ಸೆಟ್‌ನಲ್ಲಿ ಕೇಳಿದ್ದಾರೆ. ಕೂಡಲೇ ಸರಿ ಎಂದು ಗಂಡನಿಗೆ ಫೋನ್ ಮಾಡಿದ್ದಾರೆ. ಇದನ್ನು 'ಎಕ್ಸ್ಟ್ರಾ ಜಬರ್ದಸ್ತ್' ಶೋ ಪ್ರೋಮೊದಲ್ಲಿ ಇದನ್ನು ನೋಡಬಹುದು. ಸುಂದರ್ ಫೋನ್ ರಿಸೀವ್ ಮಾಡಿದ್ರಾ? ಇಲ್ವಾ? ಅನ್ನೋದು ಶೋ ಪ್ರಸಾರ ಆದಾಗ ಗೊತ್ತಾಗಲಿದೆ. ಸುಂದರ್ ಸಿನಿಮಾ ನಿರ್ದೇಶನದ ಜೊತೆಗೆ ನಟನಾಗಿ, ನಿರ್ಮಾಪಕರಾಗಿಯೂ ಕಾಲಿವುಡ್‌ನಲ್ಲಿ ಗುರ್ತಿಸಿಕೊಂಡಿದ್ದಾರೆ

  ಅಂದಹಾಗೆ ನಟಿ ಖುಷ್ಬು ತಮ್ಮ ಮೊಬೈಲ್ ಫೋನ್‌ನಲ್ಲಿ ಗಂಡನ ಹೆಸರನ್ನು 'ಸ್ವೀಟ್ ಹಾರ್ಟ್' ಎಂದು ಸೇವ್ ಮಾಡಿಕೊಂಡಿದ್ದಾರೆ. ಇದನ್ನು ಕೇಳಿ ಶೋನಲ್ಲಿದ್ದರೆಲ್ಲಾ ಓ ಓ ಎಂದು ಕೂಗಿ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನು ನೋಡಿ ಖುಷ್ಬೂ ಮತ್ತಷ್ಟು ನಾಚಿಕೊಂಡಿದ್ದಾರೆ. ಸದ್ಯ ಖುಷ್ಬೂ ತಮಿಳಿನಲ್ಲಿ ಎರಡು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಇಳಯ ದಳಪತಿ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ವಾರಿಸು' ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ.

  Actress Kushboo reveals her love story with director Sundar C

  ಕನ್ನಡದಲ್ಲಿ ಖುಷ್ಬು 'ರಣಧೀರ', 'ಅಂಜದ ಗಂಡು', 'ಯುಗಪುರುಷ', 'ಶಾಂತಿ ಕ್ರಾಂತಿ', 'ಜೀವನದಿ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 90ರ ದಶಕದಲ್ಲಿ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಹಾಗೂ ಖುಷ್ಬೂ ಜೋಡಿ ಸೂಪರ್ ಹಿಟ್ ಆಗಿತ್ತು. ಹಿಂದಿ, ತೆಲುಗು, ಮಲಯಾಳಂನ ಸೂಪರ್ ಸ್ಟಾರ್‌ಗಳ ಜೊತೆ ತೆರೆ ಹಂಚಿಕೊಂಡು ಸಕ್ಸಸ್ ಕಂಡಿದ್ದಾರೆ.

  English summary
  Actress Kushboo reveals her love story with director Sundar C. Know More.
  Thursday, September 15, 2022, 10:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X