For Quick Alerts
  ALLOW NOTIFICATIONS  
  For Daily Alerts

  "ಬೆಡ್‌ ಮೇಲೆ ಯಾವ ಹೀರೊ ಹಾಟ್ ಅಂದ್ರೆ..?" 'ನಾನು ಮತ್ತು ವರಲಕ್ಷ್ಮಿ' ಚಿತ್ರದ ನಟಿ ಎಡವಟ್ಟು!

  |

  ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು ಎಂದು ದೊಡ್ಡವರು ಹೇಳಿದ್ದಾರೆ. ಮಾತನಾಡುವಾಗ ಹಿಂದೆ ಮುಂದೆ ಯೋಚನೆ ಮಾಡಿ ಮಾತನಾಡಬೇಕು, ಇಲ್ಲ ಅಂದರೆ ಹೀಗೆ ಆಗೋದು. ಬಹುಭಾಷಾ ನಟಿ ಮಾಳವಿಕಾ ಮೋಹನನ್ ಸಂದರ್ಶನವೊಂದರಲ್ಲಿ ಇದೇ ರೀತಿ ಏನೋ ಕೇಳಿಸಿಕೊಂಡು ಮತ್ತೇನೋ ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.

  ಮಾಳವಿಕಾ ಮೋಹನನ್ ಅಂದಾಕ್ಷಣ 'ಮಾಸ್ಟರ್', 'ಪೇಟಾ' ಸಿನಿಮಾಗಳು ನೆನಪಾಗುತ್ತದೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಹಾಟ್ ಫೋಟೊಶೂಟ್‌ಗಳಿಂದ ಈ ಚೆಲುವೆ ಸದ್ದು ಮಾಡುತ್ತಿರುತ್ತಾರೆ. ಕೆಲ ದಿನಗಳ ಹಿಂದೆ ಯಶ್19 ಚಿತ್ರಕ್ಕೆ ಈಕೆನೇ ನಾಯಕಿ ಎನ್ನುವ ಸುದ್ದಿ ಕೂಡ ಹರಿದಾಡಿತ್ತು. ಸದ್ಯ ಬಾಲಿವುಡ್ ಅಂಗಳಕ್ಕೂ ಚೆಲುವೆ ಕಾಲಿಟ್ಟಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಆಕೆಯ ಬಾಯಿ ತಪ್ಪಿ ಆಡಿದ ಮಾತು ಸಿಕ್ಕಾಪಟ್ಟೆ ವೈರಲ್ ಆಗಿಬಿಟ್ಟಿದೆ. ಯಾವಾಗಲೂ ಅದೇ ಯೋಚನೆಯಲ್ಲಿ ಇರುತ್ತಾರೆ ಎನ್ನಿಸುತ್ತದೆ. ಅದಕ್ಕೆ ಈ ರೀತಿ ಹೇಳಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ.

  11 ಜನ ಸಹೋದರಿಯರ ಮದುವೆ ಮಾಡಿಸಿದ ನಟ ವಿಶಾಲ್ ತಮ್ಮ ಮದುವೆ ಬಗ್ಗೆ ಹೇಳಿದ್ದೇನು?11 ಜನ ಸಹೋದರಿಯರ ಮದುವೆ ಮಾಡಿಸಿದ ನಟ ವಿಶಾಲ್ ತಮ್ಮ ಮದುವೆ ಬಗ್ಗೆ ಹೇಳಿದ್ದೇನು?

  ಆಂಕರ್ ಬಿಯರ್ಡ್ ಲುಕ್‌ನಲ್ಲಿ ಯಾವ ನಟ ಹಾಟ್ ಆಗಿ ಕಾಣಿಸ್ತಾರೆ ಎನ್ನುವ ಪ್ರಶ್ನೆಗೆ ಬೆಡ್‌ ಮೇಲೆ ಯಾವ ನಟ ಹಾಟ್ ಎಂದು ಕೇಳಿಸಿ ನಟಿ ಅವಕ್ಕಾಗಿದ್ದಾರೆ. ನಂತರ ಅಸಲಿ ವಿಷಯ ಗೊತ್ತಾಗಿ ಬಿದ್ದು ಬಿದ್ದು ನಕ್ಕಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

  ಏನೋ ಕೇಳಿಸಿಕೊಂಡು ನಟಿ ಎಡವಟ್ಟು

  ಏನೋ ಕೇಳಿಸಿಕೊಂಡು ನಟಿ ಎಡವಟ್ಟು

  ಸಂದರ್ಶನದಲ್ಲಿ ಆಂಕರ್ "ನಿಮಗೆ ಬಿಯರ್ಡ್(ಗಡ್ಡ) ಇರುವ ಯಾವ ಹೀರೊ ಹಾಟ್ ರಣ್‌ವೀರ್ ಸಿಂಗ್ ಅಥವಾ ವಿಕ್ಕಿ ಕೌಶಲ್"? ಎಂದು ಕೇಳಿದ್ದಾರೆ. ಆದರೆ ಮಾಳವಿಕಾಗೆ ಮಾತ್ರ "ಬೆಡ್‌ ಮೇಲೆ ಯಾವ ಹೀರೊ ಹಾಟ್" ಎಂದು ಕೇಳಿಸಿ, "ಬೆಡ್‌ ಮೇಲೆ ಯಾವ ಹೀರೊ ಹಾಟ್ ಅಂದ್ರೆ" ಎಂದು ನಟಿ ಉತ್ತರಿಸೋಕೆ ಹೋಗಿದ್ದಾರೆ. ಕೂಡಲೇ ಆಂಕರ್, ನಾನು ಕೇಳಿದ್ದು ಬಿಯರ್ಡ್, ಬೆಡ್ ಅಲ್ಲ ಅನ್ನುತ್ತಿದ್ದಂತೆ ನಾಲಿಗೆ ಕಚ್ಚಿಕೊಂಡು, ನನಗೆ ಬೆಡ್ ಅಂತ ಕೇಳಿಸಿತು ಎಂದು ಆಕೆ ನಕ್ಕಿದ್ದಾರೆ. ಅಷ್ಟಕ್ಕೂ ಅಂತಾದೊಂದು ಪ್ರಶ್ನೆ ಕೇಳಿದರೆ ಆಕೆ ಉತ್ತರಿಸೋಕೆ ಹೊರಟ್ಟಿದ್ದರಾ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮಾಳವಿಕಾ ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

  Exclusive: ನಯನತಾರಾ ಮಗು ವಿವಾದದಿಂದ ನಮಗಂತೂ ಒಳ್ಳೆಯದಾಯ್ತು ಎಂದ ಸಮಂತಾ!Exclusive: ನಯನತಾರಾ ಮಗು ವಿವಾದದಿಂದ ನಮಗಂತೂ ಒಳ್ಳೆಯದಾಯ್ತು ಎಂದ ಸಮಂತಾ!

  ವಿಕ್ರಂ KGF ಚಿತ್ರದಲ್ಲಿ ಮಾಳವಿಕಾ

  ವಿಕ್ರಂ KGF ಚಿತ್ರದಲ್ಲಿ ಮಾಳವಿಕಾ

  ಇನ್ನು ಮಾಳವಿಕಾ ಮೋಹನನ್ ಸಿನಿಮಾಗಳ ಬಗ್ಗೆ ಹೇಳುವುದಾದರೆ ಚಿಯಾನ್ ವಿಕ್ರಂ ನಟನೆಯ 'ತಂಗಳಾನ್' ಚಿತ್ರದಲ್ಲಿ ನಟಿಸ್ತಿದ್ದಾರೆ. ಪಾ. ರಂಜಿತ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶತಮಾನದ ಹಿಂದೆ KGFನಲ್ಲಿ ನಡೆದಿದ್ದ ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದೆ. ಚಿತ್ರದಲ್ಲಿ ಡೀ ಗ್ಲಾಮರಸ್ ರೋಲ್‌ನಲ್ಲಿ ಮಾಳವಿಕಾ ಮಿಂಚಿದ್ದಾರೆ. 'ಯುದ್ರ' ಬಾಲಿವುಡ್ ಚಿತ್ರದಲ್ಲೂ ಈ ಕೇರಳ ಕುಟ್ಟಿ ಬಣ್ಣ ಹಚ್ಚಿದ್ದಾರೆ.

  ಸೋಶಿಯಲ್ ಮೀಡಿಯಾದಲ್ಲಿ ಸಖತ್ ಕ್ರೇಜ್

  ಸೋಶಿಯಲ್ ಮೀಡಿಯಾದಲ್ಲಿ ಸಖತ್ ಕ್ರೇಜ್

  ಮಾಳವಿಕಾ ಮೋಹನನ್‌ಗೆ ಈವರೆಗೆ ದೊಡ್ಡ ಬ್ರೇಕ್ ಮಾತ್ರ ಸಿಕ್ಕಿಲ್ಲ. ನಟಿಸಿರೋದು ಐದಾರು ಸಿನಿಮಾಗಳಾದರೂ ಈಕೆಯ ಕ್ರೇಜ್‌ ಮಾತ್ರ ಜೋರಾಗಿದೆ. ಸೆಕ್ಸಿ ಫೋಟೊಶೂಟ್‌ಗಳಿಂದ ಚೆಲುವೆ ಸದಾ ಸದ್ದು ಮಾಡುತ್ತಿರುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ ದೊಡ್ಡ ಅಭಿಮಾನಿಗಳ ಬಳಗ ಕೂಡ ಇದೆ. ಈಕೆಯ ಪ್ರತಿ ಪೋಸ್ಟ್ ಲಕ್ಷ ಲಕ್ಷ ವೀವ್ಸ್ ಗಿಟ್ಟಿಸಿಕೊಳ್ಳುತ್ತದೆ.

  ಕನ್ನಡ ಚಿತ್ರದಲ್ಲೂ ನಟನೆ

  ಕನ್ನಡ ಚಿತ್ರದಲ್ಲೂ ನಟನೆ

  6 ವರ್ಷಗಳ ಹಿಂದೆ 'ನಾನು ಮತ್ತು ವರಲಕ್ಷ್ಮಿ' ಚಿತ್ರದಲ್ಲಿ ಮಾಳವಿಕಾ ಮೋಹನನ್ ನಾಯಕಿಯಾಗಿ ಮಿಂಚಿದ್ದರು. ಪ್ರೀತಂ ಗುಬ್ಬಿ ನಿರ್ದೇಶನದ ಚಿತ್ರದಲ್ಲಿ ಟೈಟಲ್ ರೋಲ್ ಪ್ಲೇ ಮಾಡಿದ್ದರು. ಆದರೆ ಸಿನಿಮಾ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಹಾಗಾಗಿ ಈಕೆಯ ಬಗ್ಗೆ ಕನ್ನಡ ಪ್ರೇಕ್ಷಕರಿಗೆ ಅಷ್ಟಾಗಿ ಪರಿಚಯವಿಲ್ಲ. ಕೆಲ ದಿನಗಳ ಹಿಂದೆ ಯಶ್ ನಟನೆಯ ಮುಂದಿನ ಚಿತ್ರಕ್ಕೆ ಈಕೆಯೇ ನಾಯಕಿ ಎನ್ನುವ ಗುಸುಗುಸು ಕೂಡ ಕೇಳಿಬಂದಿತ್ತು.

  English summary
  Actress Malavika Mohanan Tongue Slip At interview her Hot Comments Goes Viral. People on social media are having fun watching this clip. Know More.
  Thursday, November 10, 2022, 22:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X