For Quick Alerts
  ALLOW NOTIFICATIONS  
  For Daily Alerts

  ಮದುವೆ ನಂತರ ಆ ನಿಯಮ ಮುರಿದ ನಯನತಾರ: ಇದ್ಯಾವ ನ್ಯಾಯ ಎಂದ ನೆಟ್ಟಿಗರು

  |

  ನಟಿ ನಯನತಾರ ಮದುವೆ ನಂತರ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಸರೋಗಸಿ ವಿಧಾನದಲ್ಲಿ ನಯನ್-ವಿಕ್ಕಿ ದಂಪತಿ ಅವಳಿ ಮಕ್ಕಳನ್ನು ಪಡೆದಿದ್ದರು. ಮಕ್ಕಳ ಲಾಲನೆ ಪಾಲನೆ ಜೊತೆ ಜೊತೆಗೆ ಇಬ್ಬರು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

  ನಯನತಾರ ಪತಿ ವಿಘ್ನೇಶ್ ಶಿವನ್ ಒಂದಷ್ಟು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ತಮ್ಮದೇ ರೌಡಿ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಇದೀಗ 'ಕನೆಕ್ಟ್' ಎನ್ನುವ ಹಾರರ್ ಥ್ರಿಲ್ಲರ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಲೀಡ್ ರೋಲ್‌ನಲ್ಲಿ ನಯನತಾರಾ ಮಿಂಚಿದ್ದಾರೆ. ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಒಬ್ಬ ಡಾಕ್ಟರ್ ಕುಟುಂಬದಲ್ಲಿ ಏನೆಲ್ಲಾ ನಡೀತು ಎನ್ನುವ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ಈ ಸಿನಿಮಾ ಕಟ್ಟಿಕೊಡಲಾಗಿದೆ. ಅಶ್ವಿನ್ ಸರವಣನ್ ನಿರ್ದೇಶನದ ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ.

  ಮದುವೆ ನಂತರ ನಯನತಾರಾ ಒಂದು ರೂಲ್ ಬ್ರೇಕ್ ಮಾಡಿದ್ದಾರೆ. 'ಕನೆಕ್ಟ್' ಚಿತ್ರಕ್ಕಾಗಿ ಸಂದರ್ಶನಗಳನ್ನು ನೀಡಿ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಅಲ್ಲಾ ಸಿನಿಮಾ ಪ್ರಚಾರ ಮಾಡುವುದರಲ್ಲಿ ತಪ್ಪೇನು? ಎಂದು ಕೇಳಿದ್ರಾ? ಪ್ರಚಾರ ಮಾಡುವುದರಲ್ಲಿ ತಪ್ಪಿಲ್ಲ. ಆದರೆ ಇಷ್ಟು ದಿನ ಯಾವುದೇ ಸಿನಿಮಾ ಪ್ರಚಾರಕ್ಕೆ ಬಾರದ ನಟಿ ತಮ್ಮ ಸಿನಿಮಾ ಎನ್ನುವ ಕಾರಣಕ್ಕೆ ಪ್ರಚಾರಕ್ಕಿ ಇಳಿದಿದ್ದಾರೆ ಎನ್ನುವುದು ಕೆಲವರ ವಾದ. ನಯನತಾರ ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿ ಆಗುತ್ತಿರಲಿಲ್ಲ. ಆ ಬಗ್ಗೆ ಕಂಡೀಷನ್ ಹಾಕಿಯೇ ಚಿತ್ರಕ್ಕೆ ಸಹಿ ಹಾಕುತ್ತಿದ್ದರು.

  actress-nayanthara-connect-movie-special-interviews-goes-viral

  ಕಲಾವಿದರು ಒಂದು ಚಿತ್ರದಲ್ಲಿ ನಟಿಸೋದು ಮಾತ್ರವಲ್ಲ, ಅದರ ಪ್ರಚಾರದಲ್ಲೂ ಭಾಗಿ ಆಗಬೇಕು. ಪ್ರೇಕ್ಷಕರಿಗೆ ಸಿನಿಮಾ ತಲುಪಿಸಬೇಕು. ಆದರೆ ಕೆಲ ವರ್ಷಗಳಿಂದ ನಯನತಾರ ಇದಕ್ಕೆ ಒಪ್ಪುತ್ತಿರಲಿಲ್ಲ. ನಾನು ನಟಿಸುತ್ತೇನೆ ನೀವೇ ಪ್ರಚಾರ ಮಾಡಿಕೊಳ್ಳಿ ಎನ್ನುತ್ತಿದ್ದರು. ಆಕೆ ನಟಿಸಿದ ಸಿನಿಮಾಗಳ ಸುದ್ದಿಗೋಷ್ಠಿ, ಆಡಿಯೋ ಲಾಂಚ್, ಪ್ರೀ ರಿಲೀಸ್ ಈವೆಂಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ 'ಕನೆಕ್ಟ್' ಚಿತ್ರಕ್ಕಾಗಿ ಸಂದರ್ಶನಗಳಲ್ಲಿ ಮಾತನಾಡಿದ್ದಾರೆ. ತೆಲುಗಿನಲ್ಲಿ ನಿರೂಪಿ ಸುಮಾ ಹಾಗೂ ತಮಿಳಿನಲ್ಲಿ ದಿವ್ಯ ದರ್ಶಿನಿ ನಯನತಾರ ಸಂದರ್ಶನ ಮಾಡಿದ್ದಾರೆ.

  ಹಾರರ್ ಥ್ರಿಲ್ಲರ್ 'ಕನೆಕ್ಟ್' ಟ್ರೈಲರ್ ಭಯ ಹುಟ್ಟಿಸುವಂತಿದೆ. ಈಗಾಗಲೇ ಪ್ರೀಮಿಯರ್ ಶೋಗಳು ನಡೆದಿದ್ದು, ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಚಿತ್ರದಲ್ಲಿ ನಯನತಾರಾ ಜೊತೆಗೆ ಸತ್ಯರಾಜ್, ಅನುಪಮ್ ಕೇರ್ ಹಾಗೂ ವಿನಯ್ ರೈ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇಂಟರ್‌ವಲ್ ಇಲ್ಲದೇ 98 ನಿಮಿಷದ ಈ ಹಾರರ್ ಥ್ರಿಲ್ಲರ್ ಸಿನಿಮಾ ಹೇಗೆ ಸದ್ದು ಮಾಡುತ್ತೆ ಕಾದು ನೋಡಬೇಕು.

  English summary
  Actress Nayanthara Connect Movie Special Interviews Goes Viral. Lady Super star Also talks about her husband Vignesh Sivan. horror Movie Connect Releasing Today. know more.
  Thursday, December 22, 2022, 7:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X