For Quick Alerts
  ALLOW NOTIFICATIONS  
  For Daily Alerts

  ಅವಳಿ ಮಕ್ಕಳ ಪೋಷಕರಾದ ನಯನತಾರಾ- ವಿಘ್ನೇಶ್ ಶಿವನ್ ದಂಪತಿ: ಅಚ್ಚರಿಯಿಂದಲೇ ಕಂಗ್ರಾಟ್ಸ್ ಹೇಳಿದ ಫ್ಯಾನ್ಸ್!

  |

  ನಟಿ ನಯನತಾರ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ದಂಪತಿ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಅವಳಿ ಮಕ್ಕಳಿಗೆ ಪೋಷಕರಾಗಿ ಬಡ್ತಿ ಪಡೆದಿರುವುದಾಗಿ ಘೋಷಿಸಿದ್ದಾರೆ. 4 ತಿಂಗಳ ಹಿಂದೆಯಷ್ಟೇ ಜೋಡಿ ಹಸೆಮಣೆ ಏರಿತ್ತು. ಮದುವೆ ಆಗಿ 4 ತಿಂಗಳಾಯ್ತು ಇಷ್ಟು ಬೇಗ ಮಗುನಾ ಎಂದು ಕೆಲವರು ಎಂದು ಆಶ್ಚರ್ಯಪಡುತ್ತಿದ್ದಾರೆ. ಸರೋಗಸಿ ಪದ್ಧತಿ ಮೂಲಕ ಜೋಡಿ ಮಕ್ಕಳನ್ನು ಪಡೆದಿರುವುದಾಗಿ ಹೇಳಲಾಗುತ್ತಿದೆ. "ನಯನ್ ಹಾಗೂ ನಾನು ಅಪ್ಪ, ಅಮ್ಮ ಆಗಿದ್ದೀವಿ. ನಮಗೆ ಅವಳಿ ಗಂಡು ಮಕ್ಕಳು ಹುಟ್ಟಿದ್ದಾರೆ. ನಮ್ಮ ಪ್ರಾರ್ಥನೆ ಹಾಗೂ ಹಿರಿಯರ ಆರ್ಶಿರ್ವಾದದಿಂದ ಎಲ್ಲ ಶುಭವಾಗಿದೆ. ಇಬ್ಬರು ಮಕ್ಕಳು ಹುಟ್ಟಿದ್ದಾರೆ ನಿಮ್ಮೆಲ್ಲರ ಆಶಿರ್ವಾದ ಬೇಕು" ಎಂದು ಬರೆದು ಅವಳಿ ಮಕ್ಕಳ ಕಾಲುಗಳಿಗೆ ಮುತ್ತು ನೀಡುತ್ತಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

  ಕಾಲಿವುಡ್ ತಾರಾ ಜೋಡಿಯ ಪೋಸ್ಟ್‌ಗೆ ಅಭಿಮಾನಿಗಳು ಕಂಗ್ರಾಟ್ಸ್ ಹೇಳುತ್ತಿದ್ದಾರೆ. ಕೆಲವರು ಮದುವೆ ಆಗಿ 4 ತಿಂಗಳಿಗೆ ಮಕ್ಕಳಾ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ನಯನತಾರಾ ಗರ್ಭಿಣಿ ಎನ್ನು ಗುಸುಗುಸು ಶುರುವಾಗಿತ್ತು. ಆರೇಳು ತಿಂಗಳ ಹಿಂದೆಯೇ ಬಾಡಿಗೆ ತಾಯ್ತನದ ಮೂಲಕ ಜೋಡಿ ಮಗು ಪಡೆಯುವ ಬಗ್ಗೆ ಮಾತುಗಳು ಕೇಳಿಬಂದಿತ್ತು. ಆಗ ಎಲ್ಲರೂ ಇದ ಬರೀ ಅಂತೆ ಕಂತೆ ಸುದ್ದಿ ಅಷ್ಟೇ ಎಂದು ಅಂದುಕೊಂಡಿದ್ದರು. ಆದರೆ ಈಗ ಅದೇ ಸುದ್ದಿ ನಿಜವಾಗಿದೆ. ಕೆಲ ವರ್ಷಗಳಿಂದ ಪ್ರೀತಿಲಿ ಮುಳುಗಿದ್ದ ಜೋಡಿ ಜೂನ್ 9ರಂದು ಮಹಾಬಲೀಪುರಂಜ ರೆಸಾರ್ಟ್‌ವೊಂದರಲ್ಲಿ ಅದ್ಧೂರಿಯಾಗಿ ಮದುವೆ ಆಗಿದ್ದರು. ಸೂಪರ್ ಸ್ಟಾರ್ ರಜನಿಕಾಂತ್, ಶಾರೂಖ್ ಖಾನ್ ಸೇರಿದಂತೆ ಸಾಕಷ್ಟು ಗಣ್ಯರು ಮದುವೆ ಸಮಾರಂಭದಲ್ಲಿ ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದರು. ನಂತರ ಹನಿಮೂನ್‌ಗಾಗಿ ಜೋಡಿ ವಿದೇಶಗಳಲ್ಲಿ ಸುತ್ತಾಡಿ ಬಂದಿತ್ತು.

  actress-nayanthara-welcomes-twin-boys-with-husband-vignesh-shivan

  ಕೆಲ ದಿನಗಳ ಹಿಂದೆಯಷ್ಟೇ ವಿಘ್ನೇಶ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಮೂವರು ಮಕ್ಕಳೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದರು. "ನಾವು ಮಕ್ಕಳೊಂದಿಗೆ ಸಮಯ ಕಳೆಯುತ್ತಿದ್ದೇವೆ. ಭವಿಷ್ಯಕ್ಕಾಗಿ ಅಭ್ಯಾಸ ಮಾಡಬೇಕಲ್ಲವೇ?" ಎಂದು ಬರೆದುಕೊಂಡಿದ್ದರು. ಆಗಲೇ ಕೆಲವರಿಗೆ ಅನುಮಾನ ಮೂಡಿತ್ತು. ನಯನತಾರಾ ಗರ್ಭಿಣಿ ಆಗಿರುವ ಸುದ್ದಿಯನ್ನು ಈ ರೀತಿ ಹೇಳುತ್ತಿದ್ದಾರಾ ಎಂದು ಅಂದುಕೊಂಡಿದ್ದರು. ಸದ್ಯ ನಯನತಾರಾ ನಟನೆಯ ತೆಲುಗಿನ 'ಗಾಡ್‌ಫಾದರ್' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಶಾರೂಕ್ ಖಾನ್ ಜೊತೆ 'ಜವಾನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ಕೆಲವೇ ದಿನಗಳ ಹಿಂದೆ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಾಸ್ ದಂಪತಿ ಸಾರೋಗಸಿ ಪದ್ಧತಿ ಮೂಲಕ ಹೆಣ್ಣು ಮಗುವನ್ನು ಪಡೆದಿದ್ದರು.

  English summary
  Actress Nayanthara Welcomes Twin Boys With Husband Vignesh shivan. Nayanthara and Vignesh Shivan, who got married on June 9 this year, have announced welcoming twins through surrogacy. know more
  Sunday, October 9, 2022, 19:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X