For Quick Alerts
  ALLOW NOTIFICATIONS  
  For Daily Alerts

  ಸ್ವಚ್ಛಂದ ಹಕ್ಕಿಯಾಗಿ ಹಾರಾಡಲು ಪ್ರಣೀತಾ ತುಡಿತ!

  By Rajendra
  |

  ಯಾರ ಹಂಗು ಇಲ್ಲದೆ ಸ್ವಚ್ಛಂದವಾಗಿ ಹಕ್ಕಿಯಂತೆ ಹಾರಾಡಬೇಕು ಎಂದು ಎಲ್ಲರೂ ಒಂದಿಲ್ಲ ಒಂದು ಸಲ ಅಂದುಕೊಳ್ಳುತ್ತಾರೆ. ಆದರೆ ಎಲ್ಲರಿಗೂ ಅದು ಸಾಧ್ಯವಾಗುವುದಿಲ್ಲ. ಆದರೆ ತಾರೆ ಪ್ರಣೀತಾ ವಿಚಾರದಲ್ಲಿ ಅದು ಸಾಧ್ಯವಾಗುವ ದಿನಗಳು ಹತ್ತಿರದಲ್ಲೇ ಇವೆಯಂತೆ.

  ತಮಿಳಿನ 'ಸಗುನಿ' ಚಿತ್ರದ ಬಳಿಕ ಪ್ರಣೀತಾ ಗ್ರಾಫು ಒಂಚೂರು ಮೇಲಕ್ಕೆ ಏರಿದೆ. ಈ ಚಿತ್ರದ ಬಳಿಕ ತಮಿಳಿನಲ್ಲಿ ಸಾಕಷ್ಟು ಅವಕಾಶಗಳು ಬರುತ್ತಿವೆಯಂತೆ. ಆದರೆ ಬಂದಂತಹ ಎಲ್ಲಾ ಆಫರ್ ಗಳನ್ನು ಒಪ್ಪಿಕೊಳ್ಳಲು ಪ್ರಣೀತಾ ಸಿದ್ಧರಿಲ್ಲವಂತೆ. ಕನ್ನಡದಲ್ಲಿ ಪ್ರಣೀತಾ ಅಭಿನಯದ ಭೀಮಾ ತೀರದಲ್ಲಿ (ಚೆಂದಪ್ಪ) ಚಿತ್ರವೂ ಬಾಕ್ಸಾಫೀಸಲ್ಲಿ ಸದ್ದು ಮಾಡಿದ ಚಿತ್ರವೇ.

  ಸದ್ಯಕ್ಕೆ ಕನ್ನಡದಲ್ಲಿ ಎರಡು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಒಂದು ಬಹುತಾರಾಗಣದ 'ಸ್ನೇಹಿತರು', ಎರಡನೆಯದು '420'. ಹಾಗೆಯೇ 'ಸಗುನಿ' ಚಿತ್ರ ನಿರ್ಮಿಸಿದ ಸಂಸ್ಥೆಯಿಂದ ಮೂರು ಚಿತ್ರಗಳಲ್ಲಿ ಅಭಿನಯಿಸುವ ಚಾನ್ಸ್ ಕೂಡ ಸಿಕ್ಕಿದೆ.

  ತಾವು ಸಾಕಷ್ಟು ಬಿಜಿಯಾಗಿದ್ದರೂ ಈ ಮೂರು ಚಿತ್ರಗಳನ್ನು ಬೇಡ ಎನ್ನಲು ಸಾಧ್ಯವಾಗುತ್ತಿಲ್ಲ. ಕಾರಣ 'ಸಗುನಿ' ಚಿತ್ರದ ಮೂಲಕ ನನ್ನ ವೃತ್ತಿಜೀವನಕ್ಕೆ ಮಹತ್ತರ ತಿರುವು ನೀಡಿದ ಸಂಸ್ಥೆ. ಹಾಗಾಗಿ ಈ ಮೂರು ಚಿತ್ರಗಳನ್ನು ಹೇಗಾದರೂ ಮಾಡಿ ಮುಗಿಸುತ್ತೇನೆ ಎನ್ನುತ್ತಾರೆ ಪ್ರಣೀತಾ.

  ಸ್ನೇಹಿತರು ಚಿತ್ರ ಶೂಟಿಂಗ್ ಮುಗಿದಿದೆ. ಈ ಚಿತ್ರದ ಬಿಡುಗಡೆಗಾಗಿ ಕುತೂಹಲದಿಂದ ತಾನೂ ಎದುರುನೋಡುತ್ತಿದ್ದೇನೆ. ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗಿನ '420' ಚಿತ್ರದ ಕೆಲವೊಂದು ಹಾಡುಗಳನ್ನು ಮುಗಿಸಿಕೊಡಬೇಕಾಗಿದೆ. ಇಷ್ಟು ಮುಗಿದರೆ ಅಬ್ಬಬ್ಬಾ ನಾನು ಫ್ರೀ ಬರ್ಡ್. ಆಗ ಸ್ವಚ್ಛಂದ ಹಾರಾಡುತ್ತೇನೆ ಎನ್ನುತ್ತಾರೆ ಪ್ರಣೀತಾ. (ಏಜೆನ್ಸೀಸ್)

  English summary
  Actress Pranitha is busy in Kannada and Tamil films. Her last big screen outing in the Kannada film industry was the critically-acclaimed Bheema Theeradalli. Snehitaru and 420 are two other Kannada films in the pipeline. After finishing these films then Pranitha will be a free bird.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X