For Quick Alerts
  ALLOW NOTIFICATIONS  
  For Daily Alerts

  ಪರೀಕ್ಷೆ ಬರೆಯಲು ಕಾಲೇಜಿಗೆ ಹೋದ ಸಾಯಿ ಪಲ್ಲವಿ: ಸೆಲ್ಫಿಗಾಗಿ ಮುಗಿಬಿದ್ದ ವಿದ್ಯಾರ್ಥಿಗಳು

  |

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಸಾಯಿ ಪಲ್ಲವಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. 'ಪ್ರೇಮಂ' ಸಿನಿಮಾ ಮೂಲಕ ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಸಂಚಲನ ಮೂಡಿಸಿದ್ದ ನಟಿಗೆ ಚಿತ್ರಪ್ರಿಯರು ಫಿದಾ ಆಗಿದ್ದಾರೆ. ಸಾಯಿ ಪಲ್ಲವಿ ನೋಡಲು, ಮಾತನಾಡಿಸಲು, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಕಾಯುತ್ತಿರುತ್ತಾರೆ.

  ಅಡುಗೆ ಮಾಡೋಕಂತೂ ಬರಲ್ಲ ನೆಟ್ಟುಗೆ ತಿನ್ನು ಅಂತ ಬೈತಿದ್ರು ಸುದೀಪ್ | Filmibeat Kannada

  ಒಂದು ವೇಳೆ ಸಾಯಿ ಪಲ್ಲವಿ ದಿಢೀರ್ ಪ್ರತ್ಯಕ್ಷರಾದರೆ ಅಭಿಮಾನಿಗಳ ಸಂಭ್ರಮ, ಸಂತಸ ಕೇಳಬೇಕಾ? ಇತ್ತೀಚಿಗೆ ಸಾಯಿ ಪಲ್ಲವಿ ಕಾಲೇಜು ಆವರಣದಲ್ಲಿ ದಿಢೀರ್ ಪ್ರತ್ಯಕ್ಷರಾಗಿದ್ದಾರೆ. ನೆಚ್ಚಿನ ನಟಿಯನ್ನು ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ. ಮುಂದೆ ಓದಿ...

  ವೆಬ್ ಸೀರಿಸ್ ಲೋಕದಲ್ಲಿ 'ಫಿದಾ' ಸುಂದರಿ: ಸಾಯಿ ಪಲ್ಲವಿ ಅಪ್ಪನ ಪಾತ್ರದಲ್ಲಿ ಖ್ಯಾತ ನಟವೆಬ್ ಸೀರಿಸ್ ಲೋಕದಲ್ಲಿ 'ಫಿದಾ' ಸುಂದರಿ: ಸಾಯಿ ಪಲ್ಲವಿ ಅಪ್ಪನ ಪಾತ್ರದಲ್ಲಿ ಖ್ಯಾತ ನಟ

   ಪರೀಕ್ಷೆ ಬರೆಯಲು ಕಾಲೇಜಿಗೆ ಹೋಗಿದ್ದ ಸಾಯಿ ಪಲ್ಲವಿ

  ಪರೀಕ್ಷೆ ಬರೆಯಲು ಕಾಲೇಜಿಗೆ ಹೋಗಿದ್ದ ಸಾಯಿ ಪಲ್ಲವಿ

  ಸಾಯಿ ಪಲ್ಲವಿ ಇತ್ತೀಚಿಗೆ ಪರೀಕ್ಷೆಗೆ ಹಾಜರಾಗಿದ್ದಾರೆ. ತಮಿಳುನಾಡಿನ ತಿರುಚಿಯ ಎಂಎಎಂ ಕಾಲೇಜಿನಲ್ಲಿ ಸಾಯಿ ಪಲ್ಲವಿ ವೈದ್ಯಕೀಯ ಪರೀಕ್ಷೆ ಬರೆದಿದ್ದಾರೆ. 2016ರಲ್ಲಿ ವಿದೇಶದಲ್ಲಿ ಎಂಬಿಬಿಎಸ್ ಮುಗಿಸಿದ್ದ ಸಾಯಿ ಪಲ್ಲವಿ ಈಗ ಪರೀಕ್ಷೆ ಬರೆಯುತ್ತಿದ್ದಾರೆ.

   ಸಾಯಿ ಪಲ್ಲವಿ ಗುರುತಿಸಿದ ಅಭಿಮಾನಿಗಳು

  ಸಾಯಿ ಪಲ್ಲವಿ ಗುರುತಿಸಿದ ಅಭಿಮಾನಿಗಳು

  ಸಾಯಿ ಪಲ್ಲವಿ ಯಾರಿಗೂ ತಿಳಿಯದ ಹಾಗೆ ದುಪಟ್ಟ ತಲೆಗೆ ಸುತ್ತಿಕೊಂಡು, ಮಾಸ್ಕ್ ಧರಿಸಿ ಎಕ್ಸಾಮ್ ಹಾಲ್ ಗೆ ಎಂಟ್ರಿ ಕೊಟ್ಟಿದ್ದಾರೆ. ಆದರೂ ವಿದ್ಯಾರ್ಥಿಗಳು ಸಾಯಿ ಪಲ್ಲವಿಯನ್ನು ಗುರುತಿಸಿದ್ದಾರೆ. ಸಾಯಿ ಪಲ್ಲವಿ ನೋಡಿ ವಿದ್ಯಾರ್ಥಿಗಳು ಫುಲ್ ಖುಷ್ ಆಗಿದ್ದಾರೆ.

  ವೆಬ್ ಸೀರಿಸ್ ಲೋಕದಲ್ಲಿ 'ಫಿದಾ' ಸುಂದರಿ: ಸಾಯಿ ಪಲ್ಲವಿ ಅಪ್ಪನ ಪಾತ್ರದಲ್ಲಿ ಖ್ಯಾತ ನಟವೆಬ್ ಸೀರಿಸ್ ಲೋಕದಲ್ಲಿ 'ಫಿದಾ' ಸುಂದರಿ: ಸಾಯಿ ಪಲ್ಲವಿ ಅಪ್ಪನ ಪಾತ್ರದಲ್ಲಿ ಖ್ಯಾತ ನಟ

   ಸೆಲ್ಫಿಗಾಗಿ ಮುಗಿಬಿದ್ದ ವಿದ್ಯಾರ್ಥಿಗಳು

  ಸೆಲ್ಫಿಗಾಗಿ ಮುಗಿಬಿದ್ದ ವಿದ್ಯಾರ್ಥಿಗಳು

  ಸಾಯಿ ಪಲ್ಲವಿ ಅಂತ ಗೊತ್ತಾಗುತ್ತಿದ್ದಂತೆ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದಿದ್ದಾರೆ. ಸಾಯಿ ಪಲ್ಲವಿ ಸಂತೋಷದಿಂದ ಎಲ್ಲಾ ವಿದ್ಯಾರ್ಥಿಗಳ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

   ಸಾಯಿ ಪಲ್ಲವಿ ಸಿನಿಮಾಗಳು

  ಸಾಯಿ ಪಲ್ಲವಿ ಸಿನಿಮಾಗಳು

  ಸಾಯಿ ಪಲ್ಲವಿ ಸದ್ಯ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟ ನಾಗಚೈತನ್ಯ ಜೊತೆ ನಾಯಕಿಯಾಗಿ ಕಾಣಿಸಿಕೊಂಡಿರುವ 'ಲವ್ ಸ್ಟೋರಿ' ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಬಾಕಿಯುಳಿದಿದೆ. ಜೊತೆ 'ವಿರಾಟ ಪರ್ವಂ' ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾಗಳ ಜೊತೆಗೆ ಮೊದಲ ಬಾರಿಗೆ ವೆಬ್ ಸೀರಿಸ್ ನಲ್ಲಿ ಮಿಂಚಲು ಸಜ್ಜಾಗುತ್ತಿದ್ದಾರೆ.

  English summary
  Actress Sai Pallavi takes medical exam in Trichy colleges. Students clicking photo with Sai Pallavi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X