For Quick Alerts
  ALLOW NOTIFICATIONS  
  For Daily Alerts

  ಲಾಕ್‌ಡೌನ್‌ನಲ್ಲಿ ಸಿಂಪಲ್ಲಾಗಿ ಮೂರನೇ ಮದುವೆಯಾದ ಜನಪ್ರಿಯ ನಟಿ

  By Avani Malnad
  |

  ಲಾಕ್ ಡೌನ್ ಅವಧಿಯಲ್ಲಿ ಸೆಲೆಬ್ರಿಟಿಗಳೂ ಅತ್ಯಂತ ಸರಳವಾಗಿ ಮದುವೆಯಾಗುತ್ತಿದ್ದಾರೆ. ಅವರ ಸಾಲಿಗೆ ಖ್ಯಾತ ನಟಿ ವನಿತಾ ವಿಜಯ್ ಕುಮಾರ್ ಸೇರಿದ್ದಾರೆ. ವಿಎಫ್‌ಎಕ್ಸ್ ತಂತ್ರಜ್ಞ ಪೀಟರ್ ಪೌಲ್ ಜತೆಗೆ ಶನಿವಾರ ಸಂಜೆ ನಡೆದ ಸಮಾರಂಭದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ವನಿತಾ ವಿಜಯ್ ಕುಮಾರ್ ವಿವಾಹ ಬಂಧನಕ್ಕೆ ಒಳಗಾದರು. ಅಂದಹಾಗೆ, ಇದು ವನಿತಾ ಅವರ ಮೂರನೇ ಮದುವೆ.

  Darshan made a mistake while wishing Kempegowda Jayanthi to his fans | Filmibeat Kannada

  ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಇಬ್ಬರೂ ವೈವಾಹಿಕ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಕುಟುಂಬದವರು ಮತ್ತು ಕೆಲವೇ ಆಪ್ತರು ಮದುವೆಗೆ ಸಾಕ್ಷಿಯಾದರು. ಈ ಲಾಕ್ ಡೌನ್ ಮದುವೆಯ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೂವಿನ ಚಿತ್ತಾರವುಳ್ಳ ಬಿಳಿ ಬಣ್ಣದ ದಿರಿಸಿನಲ್ಲಿ ವನಿಯಾ ಮಿಂಚಿದರೆ, ಪೀಟರ್ ಕಪ್ಪು ಬಣ್ಣದ ಸೂಟ್‌ನಲ್ಲಿ ಕಾಣಿಸಿಕೊಂಡರು.

  ಟಗರು ಸರೋಜ ಜೊತೆ ಚಿಕ್ಕಣ್ಣ ಮದುವೆ ಆಗಿರುವುದು ನಿಜವೇ?

  ವಿಶೇಷವೆಂದರೆ ವನಿತಾ ಅವರ ಮಕ್ಕಳಾದ ಜೋವಿಕಾ ಮತ್ತು ಜಯನಿತಾ, ವಧು ಅಮ್ಮನಿಗೆ ಸಹಾಯಕಿಯರಾಗಿದ್ದರು! ಮುಂದೆ ಓದಿ...

  ಮದುವೆಯ ವಿವರ!

  ಮದುವೆಯ ವಿವರ!

  ಇದು ವನಿತಾ ಅವರ ಮೂರನೇ ಮದುವೆಯಾಗಿದೆ. ಈ ಮೊದಲು ಅವರು 2000ದಲ್ಲಿಕಿರುತೆರೆ ನಟ ಆಕಾಶ್ ಜತೆ ಮದುವೆಯಾಗಿದ್ದರು. ಮೊದಲ ಮದುವೆಯಿಂದ ಮಗ ವಿಜಯ್ ಶ್ರೀ ಹರಿ ಹಾಗೂ ಮಗಳು ಜೋವಿಕಾರನ್ನು ಪಡೆದಿದ್ದರು. ನಂತರ ಅವರಿಗೆ ವಿಚ್ಚೇದನ ನೀಡಿ 2007ರಲ್ಲಿ ಉದ್ಯಮಿ ಆನಂದ್ ಜೇ ರಾಜನ್ ಅವರನ್ನು ವಿವಾಹವಾಗಿದ್ದ ವನಿತಾ ಅವರಿಗೆ ಜಯನಿತಾ ಜನಿಸಿದ್ದರು. 2012ರಲ್ಲಿ ಅವರಿಂದಲೂ ದೂರವಾಗಿದ್ದರು. 2013-2017ರವರೆಗೆ ನಿರ್ದೇಶಕ ರಾಬರ್ಟ್ ಜತೆಗೆ ಅವರು ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದರು ಎನ್ನಲಾಗಿದೆ.

  ಮಕ್ಕಳು ಒಪ್ಪಿಕೊಂಡರು

  ಮಕ್ಕಳು ಒಪ್ಪಿಕೊಂಡರು

  ಪೀಟರ್ ಅವರನ್ನು ಭೇಟಿ ಮಾಡಿದಾಗ ಪ್ರೀತಿಯಲ್ಲಿ ಬಿದ್ದೆ ಎಂದು ವನಿತಾ ಹೇಳಿಕೊಂಡಿದ್ದರು. 'ಮದುವೆಯಲ್ಲಿ ನನ್ನ ಕೈ ನೀಡುವಂತೆ ಅವರು ಕೇಳಿದಾಗ ನಾನು ಮೂಕವಿಸ್ಮಿತಳಾದೆ. (ಒಳಗೊಳಗೆ ನಾನು ಜೋರಾಗಿ ಖುಷಿಯಿಂದ ಕಿರಿಚುತ್ತಿದ್ದೆ). ನನ್ನ ಮಕ್ಕಳು ಇದಕ್ಕೆ ಅನುಮತಿ ನೀಡಬೇಕು ಎಂದು ನಾನು ಹೇಳಿದೆ. ಮಕ್ಕಳೆದರು ಪೀಟರ್ ಬಗ್ಗೆ ಹೇಳಿದಾಗ ಅವರು ಖುಷಿಯಾಗಿ ಯೆಸ್ ಎಂದು ಕೂಗಿದರು. ನನ್ನ ಪಾಲಿಗೆ ಸಂಭವಿಸುತ್ತಿರುವ ಅತ್ಯುತ್ತಮ ಗಳಿಗೆ ಎಂದು ಮಕ್ಕಳು ಹೇಳಿದಾಗ ನನ್ನ ಕಣ್ಣಂಚಲಿ ನೀರು ಜಿನುಗಿತು. ತಮ್ಮ ಬದುಕಿನಲ್ಲಿ ಪೀಟರ್ ಹಾಜರಿಯನ್ನು ಅವರೂ ಬಯಸಿದ್ದಾರೆ ಎಂದು ವನಿತಾ ಬರೆದುಕೊಂಡಿದ್ದಾರೆ.

  ಮಯೂರಿ ಮದುವೆಯಲ್ಲಿ ಜೆ ಕೆ ತಂದೆ-ತಾಯಿ ಕನ್ಯಾದಾನ ಮಾಡಿದ್ದೇಕೆ?

  ಮದುವೆಯಲ್ಲಿ ನಂಬಿಕೆ ಇದೆ

  ಮದುವೆಯಲ್ಲಿ ನಂಬಿಕೆ ಇದೆ

  'ಪ್ರತಿಯೊಬ್ಬರಿಗೂ ಪ್ರೀತಿಯಲ್ಲಿ ಅರ್ಹತೆ ಇರುತ್ತದೆ ಎಂಬುದನ್ನು ನಾನು ನಿಜಕ್ಕೂ ನಂಬುತ್ತೇನೆ. ನನ್ನ ಜೀವನದಲ್ಲಿ ಎಲ್ಲ ಕಹಿ ಅನುಭವಗಳ ನಂತರವೂ ನಾನು ಮದುವೆಯೆಂಬ ಸಾಂಸ್ಥಿಕತೆಯಲ್ಲಿ ಆಳವಾಗಿ ನಂಬಿಕೆ ಹೊಂದಿದ್ದೆ. ಇಬ್ಬರು ವ್ಯಕ್ತಿಗಳು ಪರಸ್ಪರ ಪ್ರೀತಿಸುವಾಗ ಅದು ಸಂಬಂಧವೊಂದರ ಆರಂಭ. ಆದರೆ ಅವರು ಮದುವೆಯಾಗಲು ತೀರ್ಮಾನಿಸಿದಾಗ ಅದು ಜತೆಯಾಗಿ ತಮ್ಮ ಜೀವನವನ್ನು ಸಂಭ್ರಮಿಸುವ ಮತ್ತು ತಮ್ಮ ಗಂಭೀರ ಬದ್ಧತೆಯನ್ನು ಜಗತ್ತಿಗೆ ಪ್ರಕಟಿಸುವ ಗಳಿಗೆ ಎಂದಿದ್ದಾರೆ.

  ತಾರಾ ದಂಪತಿ ಮಗಳು

  ತಾರಾ ದಂಪತಿ ಮಗಳು

  ತಮಿಳು ಚಿತ್ರರಂಗದ ಹಿರಿಯ ನಟ ವಿಜಯ್ ಕುಮಾರ್ ಮತ್ತು ನಟಿ ಮಂಜುಳಾ ದಂಪತಿಯ ಮಗಳಾದ ವನಿತಾ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. ಚಂದ್ರಲೇಖ, ಮಣಿಕ್ಕಂ, ಹಿಟ್ಲರ್ ಬ್ರದರ್ಸ್ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಅವರು, ಕಿರುತೆರೆಯಲ್ಲಿಯೂ ಕಾಣಿಸಿಕೊಂಡಿದ್ದಾರೆ. ಪೀಟರ್ ಪೌಲ್ ಬಾಲಿವುಡ್ ಮತ್ತು ಹಾಲಿವುಡ್ ಚಿತ್ರಗಳಿಗೆ ವಿಎಫ್ಎಕ್ಸ್ ತಂತ್ರಜ್ಞರಾಗಿ ಕೆಲಸ ಮಾಡಿದ್ದಾರೆ.

  ಕೊರೊನಾ ಪರಿಣಾಮ ಮುಂದಕ್ಕೆ ಹೋಗಿದ್ದ ನಟ ನಿತಿನ್ ಮದುವೆ ದಿನಾಂಕ ನಿಗದಿ

  ಕಲಾವಿದರ ಕುಟುಂಬ

  ಕಲಾವಿದರ ಕುಟುಂಬ

  ವನಿತಾ ಸಹೋದರ ಅರುಣ್ ವಿಜಯ್ ಕೂಡ ನಟರಾಗಿದ್ದು, ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ 'ಚಕ್ರವ್ಯೂಹ' ಚಿತ್ರದಲ್ಲಿ ನಟಿಸಿದ್ದಾರೆ. ಸಹೋದರಿಯರಾದ ಪ್ರೀತಾ, ಶ್ರೀದೇವಿ ಕೂಡ ನಟಿಯರು. ಶ್ರೀದೇವಿ ಅವರು ಶ್ರೀ ಮುರಳಿ ನಿರ್ದೇಶನ ಪ್ರೀತಿಗಾಗಿ, ಶಿವರಾಜ್ ಕುಮಾರ್ ನಟನೆಯ ಕಾಂಚನಗಂಗಾ, ರವಿಚಂದ್ರನ್ ನಟನೆಯ ಲಕ್ಷ್ಮಣ ಚಿತ್ರಗಳಲ್ಲಿ ನಟಿಸಿದ್ದಾರೆ. ಮತ್ತೊಬ್ಬ ಸಹೋದರಿ ಪ್ರೀತಾ, ಸಾಯಿಕುಮಾರ್ ಜತೆ 'ಓಂ ನಮಃ ಶಿವಾಯ' ಚಿತ್ರದಲ್ಲಿ ನಟಿಸಿದ್ದರು.

  English summary
  Tamil actress Vanitha Vijaykumar ties knot with Peter Paul on Saturday. This is her third marriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X