For Quick Alerts
  ALLOW NOTIFICATIONS  
  For Daily Alerts

  ತಮಿಳಿನ ಖ್ಯಾತ ನಟನ ಕುಟುಂಬದ ಜೊತೆ ಐಶ್ವರ್ಯಾ ರೈ ದಂಪತಿ

  |

  ಮಾಜಿ ವಿಶ್ವ ಸುಂದರಿ, ಬಾಲಿವುಡ್ ನ ಖ್ಯಾತ ನಟಿ ಐಶ್ವರ್ಯಾ ರೈ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ವರ್ಷಗಳ ಬಳಿಕ ಮತ್ತೆ ಚಿತ್ರೀಕರಣದಲ್ಲಿ ನಿರತರಾಗಿರುವ ಐಶ್ವರ್ಯಾರನ್ನು ನೋಡಲು ಅಭಿಮಾನಿಗಳು ಕಾತರರಾಗಿರುತ್ತಾರೆ. ಅಂದಹಾಗೆ ಐಶ್ವರ್ಯಾ ಸದ್ಯ ತಮಿಳು ಸಿನಿಮಾದಲ್ಲಿ ನಟಸಿದ್ದಾರೆ. ಖ್ಯಾತ ನಿರ್ದೇಶಕ ಮಣಿರತ್ನಂ ಸಾರಥ್ಯದಲ್ಲಿ ಮೂಡಿಬರುತ್ತಿರುವ 'ಪೊನ್ನಿಯಮ್ ಸೆಲ್ವನ್' ಚಿತ್ರದಲ್ಲಿ ಐಶ್ವರ್ಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಸದ್ಯ ಈ ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಪಾಂಡಿಚೆರಿಯಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು ಐಶ್ವರ್ಯಾ ರೈ ಪತಿ ಅಭಿಷೇಕ್ ಬಚ್ಚನ್ ಮತ್ತು ಮಗಳು ಆರಾಧ್ಯಾ ಜೊತೆ ಪಾಂಡಿಚೆರಿಯಲ್ಲಿ ಬೀಡುಬಿಟ್ಟಿದ್ದಾರೆ. ಈ ಸಮಯದಲ್ಲಿ ಐಶ್ವರ್ಯಾ ಪತಿ ಅಭಿಷೇಕ್ ಜೊತೆ ತಮಿಳಿನ ಖ್ಯಾತ ನಟನ ಕುಟುಂಬವನ್ನು ಭೇಟಿ ಮಾಡಿದ್ದಾರೆ.

  ಅಂದಹಾಗೆ ಆ ಖ್ಯಾತ ನಟ ಮತ್ಯಾರು ಅಲ್ಲ ಶರತ್ ಕುಮಾರ್. ಹೌದು, ಐಶ್ವರ್ಯಾ ರೈ, ಶರತ್ ಕುಮಾರ್ ಕುಮಾರ್ ಕುಟುಂಬವನ್ನು ಭೇಟಿ ಮಾಡಿ ಕೆಲವು ಸಮಯ ಕಾಲಕಳೆದಿದ್ದಾರೆ. ಅಂದಹಾಗೆ ಶರತ್ ಕುಮಾರ್ ಕುಟುಂಬದ ಜೊತೆ ಐಶ್ವರ್ಯಾ ಕುಟುಂಬ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಈ ಫೋಟೋವನ್ನು ಶರತ್ ಕುಮಾರ್ ಮಗಳು, ನಟಿ ವರಲಕ್ಷ್ಮಿ ಶರತ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಮತ್ತು ಪುತ್ರಿ ಆರಾಧ್ಯಾ ಬಚ್ಚನ್ ಮೂವರು ಶರತ್ ಕುಮಾರ್ ಕುಟುಂಬದ ಜೊತೆ ಕಳೆದ ಸಂತಸದ ಕ್ಷಣಗಳ ಫೋಟೋವನ್ನು ವರಲಕ್ಷ್ಮಿ ಶೇರ್ ಮಾಡಿದ್ದಾರೆ.

  ಫೋಟೋ ಜೊತೆಗೆ ಐಶ್ವರ್ಯಾ ದಂಪತಿಯ ಸರಳತೆ, ಪ್ರೀತಿಗೆ ಆಶ್ವರ್ಯವಾಯಿತು ಎಂದಿದ್ದಾರೆ. "ನೀವು ನಮ್ಮನ್ನು ಭೇಟಿಯಾಗಿದ್ದು ಮತ್ತು ನಮ್ಮ ಜೊತೆ ಸಮಯ ಕಳೆದಿದ್ದು ತುಂಬಾ ಸುಂದರವಾಗಿತ್ತು. ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ" ಎಂದು ಹೇಳಿದ್ದಾರೆ.

  Aishwarya Rai, Abhishek and Aaradhya meet Sarathkumar family in Puducherry
  ಜೀವನ ಪಯಣ ಮುಗಿಸಿದ ಕನ್ನಡದ ಯಶಸ್ವಿ ನಾಯಕಿ

  ಅಂದಹಾಗೆ ಮಣಿರತ್ನಂ ಸಿನಿಮಾದಲ್ಲಿ ಶರತ್ ಕುಮಾರ್ ಕೂಡ ನಟಿಸುತ್ತಿದ್ದಾರೆ. ಹಾಗಾಗಿ ಶರತ್ ಕುಮಾರ್ ಕುಟುಂಬ ಸಹ ಪಾಂಡಿಚೆರಿಯಲ್ಲಿ ಬೀಡುಬಿಟ್ಟಿದೆ. ಇದೇ ಸಮಯದಲ್ಲಿ ಎರಡು ಕುಟುಂಬದವರು ಭೇಟಿಯಾಗಿ ಮಾತುಕತೆ ನಡೆಸಿ ಕೆಲವು ಸಮಯ ಕಳೆದಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇನ್ನು ಅನೇಕರು ಐಶ್ವರ್ಯಾ ಮಗಳು ಆರಾಧ್ಯಾ ಎಷ್ಟು ಎತ್ತರವಾಗಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 9 ವರ್ಷದ ಆರಾಧ್ಯಾ ಎತ್ತರದಲ್ಲಿ ಐಶ್ವರ್ಯಾಗಿಂತ ಸ್ವಲ್ಪ ಕಡಿಮೆ ಕಾಣುತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

  English summary
  Actress Aishwarya Rai, Abhishek and Aaradhya meet Sarathkumar family in Puducherry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X