For Quick Alerts
  ALLOW NOTIFICATIONS  
  For Daily Alerts

  ಮಗಳಿಗೆ ಸಿಕ್ತು ಅಪರೂಪದ ಅವಕಾಶ.. ಹಿರಿ ಹಿರಿ ಹಿಗ್ಗಿದ ಐಶ್ವರ್ಯ ರೈ!

  |

  ಮಣಿರತ್ನಂ ನಿರ್ದೇಶನದ ಪ್ರಿಡಿಯಾಟಿಕಲ್ ಡ್ರಾಮಾ 'ಪೊನ್ನಿಯಿನ್ ಸೆಲ್ವನ್' ರಿಲೀಸ್‌ಗೆ 4 ದಿನಗಳಷ್ಟೆ ಬಾಕಿಯಿದೆ. ಚಿತ್ರತಂಡ ಊರೂರು ಸುತ್ತಿ ಸಿನಿಮಾ ಪ್ರಮೋಷನ್‌ನಲ್ಲಿ ಭಾಗಿಯಾಗಿದೆ. ಚಿತ್ರದಲ್ಲಿ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ದ್ವಿಪಾತ್ರದಲ್ಲಿ ನಟಿಸ್ತಿದ್ದು, ಸಿನಿಮಾ ಪ್ರಮೋಷನ್‌ ವೇಳೆ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

  ಚಿಯಾನ್ ವಿಕ್ರಂ, ಕಾರ್ತಿ, ಜಯಂ ರವಿ, ಐಶ್ವರ್ಯಾ ರೈ, ತ್ರಿಶಾ, ಶರತ್‌ ಕುಮಾರ್, ಪ್ರಕಾಶ್‌ ರೈ, ಕಿಶೋರ್ ಸೇರಿದಂತೆ ಘಟಾನುಘಟಿ ಕಲಾವಿದರು 'ಪೊನ್ನಿಯಿನ್ ಸೆಲ್ವನ್' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಮದ್ರಾಸ್ ಟಾಕೀಸ್ ಹಾಗೂ ಲೈಕಾ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಬಹಳ ಅದ್ದೂರಿಯಾಗಿ ಸಿನಿಮಾ ಮೂಡಿ ಬಂದಿದೆ. 400 ಕೋಟಿ ರೂ. ಬಜೆಟ್‌ನಲ್ಲಿ ಈ ಕಾಸ್ಟ್ಯೂಮ್‌ ಡ್ರಾಮಾನ ಕಟ್ಟಿಕೊಡಲಾಗಿದೆ. 1000 ವರ್ಷಗಳ ಹಿಂದಿನ ಚೋಳ ಸಾಮ್ರಾಜ್ಯದ ಕಥೆಯನ್ನು ಈ ಚಿತ್ರದಲ್ಲಿ ಬಹಳ ರೋಚಕವಾಗಿ ತೆರೆಗೆ ತರಲಾಗ್ತಿದೆ.

  ಐಶ್ವರ್ಯಾ ರೈ-ತ್ರಿಶಾಗೆ 'ನೀವು ಸ್ನೇಹಿತರಾಗಲು ಸಾಧ್ಯವಿಲ್ಲ' ಎಂದಿದ್ದ ಮಣಿರತ್ನಂ: ಯಾಕೆ?ಐಶ್ವರ್ಯಾ ರೈ-ತ್ರಿಶಾಗೆ 'ನೀವು ಸ್ನೇಹಿತರಾಗಲು ಸಾಧ್ಯವಿಲ್ಲ' ಎಂದಿದ್ದ ಮಣಿರತ್ನಂ: ಯಾಕೆ?

  'ಪೊನ್ನಿಯಿನ್ ಸೆಲ್ವನ್' ಸಿನಿಮಾ ಚಿತ್ರೀಕರಣದ ವೇಳೆ ಐಶ್ ಪತಿ ಅಭಿಷೇಕ್ ಬಚ್ಚನ್ ಹಾಗೂ ಮಗಳು ಆರಾಧ್ಯ ಕೂಡ ಸೆಟ್‌ಗೆ ಭೇಟಿ ನೀಡಿದ್ದರು. ಆಗ ಆರಾಧ್ಯ ಪ್ರತಿಕ್ರಿಯೆ ಹೇಗಿತ್ತು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಐಶ್ವರ್ಯ ರೈ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಸೆಟ್‌ ನೋಡಿ ಅರಾಧ್ಯ ಅಚ್ಚರಿಕೊಂಡಿದ್ದಳು. ಒಂದು ಪ್ರಿಡಿಯಾಟಿಕಲ್ ಡ್ರಾಮಾ ಸಿನಿಮಾ ಶೂಟಿಂಗ್ ನೋಡಿ ಬಹಳ ಎಕ್ಸೈಟ್ ಆಗಿದ್ದಳು. ಪ್ರತಿ ಸೀನ್ ಆಕೆಯನ್ನು ಮಂತ್ರಮುಗ್ಧಳನ್ನಾಗಿತ್ತು. ಆಕೆಯ ಕಣ್ಣುಗಳಲ್ಲಿ ಆ ಸಂತೋಷ, ಅಚ್ಚರಿಯನ್ನು ನಾನು ನೋಡಿದ್ದೆ. ಮಣಿರತ್ನಂ ಜೊತೆ ಕೆಲಸ ಮಾಡುವುದು ನನ್ನ ಅದೃಷ್ಟ. ಅವರ ಕೆಲಸ ನೋಡಿ ಆರಾಧ್ಯ ಅಚ್ಚರಿಕೊಂಡಿದ್ದಳು."

  ಆರಾಧ್ಯ ಸೆಟ್‌ನಲ್ಲಿ ಇದ್ದಾಗ ಮಣಿ ಸರ್ ಆಕೆಗೆ ಆಕ್ಷನ್ ಕಟ್ ಹೇಳುವ ಅವಕಾಶ ಕೊಟ್ಟಿದ್ದರು. ಒಂದು ದೃಶ್ಯಕ್ಕೆ ನೀನೆ ಕಟ್ ಹೇಳು ಎಂದಿದ್ದರು. ಅದು ನಮ್ಮಿಬ್ಬರ ಜೀವನದಲ್ಲಿ ಮರೆಯಲಾಗದ ನೆನಪಾಗಿರುತ್ತದೆ. ಇಲ್ಲಿವರೆಗೂ ನಮಗ್ಯಾರಿಗೂ ಕೂಡ ಅಂತ ಅವಕಾಶ ಸಿಕ್ಕಿಲ್ಲ. ಕೆಲ ವರ್ಷಗಳ ನಂತರ ಆಕೆಗೆ ಇದಕ್ಕೆಲ್ಲಾ ಎಷ್ಟು ಮಹತ್ವ ಇದೆ ಎನ್ನುವುದು ಅರ್ಥವಾಗುತ್ತದೆ" ಎಂದು ಐಶ್ವರ್ಯ ರೈ ವಿವರಿಸಿದ್ದಾರೆ. ಚಿತ್ರದಲ್ಲಿ ಐಶ್ ಪಳುವೂರು ರಾಣಿ ನಂದಿನಿ ಮತ್ತು ಆಕೆಯ ತಾಯಿ ಮಂದಾಕಿನಿ ದೇವಿ ಆಗಿ ಎರಡು ಪಾತ್ರಗಳಲ್ಲಿ ನಟಿಸಿದ್ದಾರೆ.

  Aishwarya Rai recalls daughter Aaradhya Excitement when she arrived on sets of Ponniyin selvan

  ಸೆಪ್ಟೆಂಬರ್ 30ಕ್ಕೆ ವಿಶ್ವದಾದ್ಯಂತ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗಲಿದೆ. ಇನ್ನು ಚಿತ್ರದಲ್ಲಿ ನಟಿ ತ್ರಿಶಾ ಕುಂದವೈ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ನಂದಿನಿ ಹಾಗೂ ಕುಂದವೈ ನಡುವೆ ಸಾಕಷ್ಟು ಗಂಭೀರವಾದ ಸನ್ನಿವೇಶಗಳು ಇದೆಯಂತೆ. ಆದರೆ ಇದನ್ನು ಶೂಟ್ ಮಾಡಲು ಮಣಿರತ್ನಂ ಬಹಳ ಕಷ್ಟಪಟ್ಟರಂತೆ. ಕಾರಣ ಐಶ್ ಹಾಗೂ ತ್ರಿಶಾ ಸೆಟ್‌ನಲ್ಲಿ ಸ್ನೇಹಿತರಾಗಿಬಿಟ್ಟಿದ್ದರು. ಇಬ್ಬರನ್ನು ಒಂದು ಫ್ರೇಮ್‌ನಲ್ಲಿ ಗಂಭೀರವಾಗಿ ನಟಿಸುವಂತೆ ಮಾಡಲು ಕಷ್ಟವಾಗುತ್ತಿತ್ತಂತೆ. ಶಾಟ್‌ ವೇಳೆಯೂ ಇಬ್ಬರು ನಗುತ್ತಾ ಇರುತ್ತಿದ್ದರಂತೆ. ಇದರಿಂದ ಬೇಸತ್ತ ಮಣಿರತ್ನಂ ನೀವಿಬ್ಬರು ಸ್ವಲ್ಪ ದಿನ ಆತ್ಮೀಯತೆ ಪಕ್ಕಕ್ಕಿಟ್ಟು ದೂರ ಇರಿ ಎಂದು ಎಚ್ಚರಿಕೆ ಕೊಟ್ಟಿದ್ದರಂತೆ. ಇದನ್ನು ಸ್ವತಃ ನಿರ್ದೇಶಕರೇ ಹೇಳಿದ್ದಾರೆ.

  English summary
  Aishwarya Rai recalls daughter Aaradhya reaction when she arrived on sets of Ponniyin selvan. Know More.
  Sunday, September 25, 2022, 16:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X