For Quick Alerts
  ALLOW NOTIFICATIONS  
  For Daily Alerts

  ಅಜಿತ್ ಅಭಿಮಾನಿಗಳ ಬೇಡಿಕೆ; ಭಾರತ-ನ್ಯೂಜಿಲ್ಯಾಂಡ್ ಪಂದ್ಯದ ವೇಳೆ ಗಮನ ಸೆಳೆದ ಫ್ಯಾನ್

  |

  ತಮಿಳು ಸಿನಿಮಾರಂಗದ ಖ್ಯಾತ ನಟರಲ್ಲಿ ತಲಾ ಅಜಿತ್ ಕೂಡ ಒಬ್ಬರು. ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ಅಜಿತ್ ಸದ್ಯ ವಲಿಮೈ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನೆಚ್ಚಿನ ನಟನನ್ನು ತೆರೆಮೇಲೆ ನೋಡದೆ ಅಭಿಮಾನಿಗಳು ಎರಡು ವರ್ಷಗಳಾಗಿದೆ. ಹಾಗಾಗಿ ವಲಿಮೈ ಸಿನಿಮಾಗಾಗಿ ಕಾತರದಿಂದ ಕಾಯುತ್ತಿದ್ದಾರೆ.

  ಅನೇಕ ಕಾರಣಗಳಿಂದ ಸಿನಿಮಾ ತವಾಗಲುತ್ತಲೇ ಇದೆ. ಇದರಿಂದ ಬೇಸರಗೊಂಡಿರುವ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಿನಿಮಾದ ಅಪ್ ಡೇಟ್ ನೀಡುವಂತೆ ಇಟ್ಟಿದ್ದಾರೆ. ಟ್ವಿಟ್ಟರ್ ವಲಿಮೈ ಅಪ್ ಡೇಟ್ ಅಂತ ಟ್ರೆಂಡ್ ಮಾಡುತ್ತಿದ್ದಾರೆ.

  ಅಷ್ಟೆಯಲ್ಲ ಅಭಿಮಾನಿಗಳು ಬೇಡಿಕೆ ಎಷ್ಟರ ಮಟ್ಟಿಗೆ ಇದೆ ಎಂದರೆ ಭಾರತ ಮತ್ತು ನ್ಯೂಜಿಲ್ಯಾಂಡ್ ಟೆಸ್ಟ್ ಕ್ರಿಕೆಟ್ ಮ್ಯಾಚ್ ನಲ್ಲೂ ವಲಮೈ ಸಿನಿಮಾ ಸದ್ದು ಮಾಡಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಅಜಿತ್ ಅಭಿಮಾನಿಗಳು "ವಲಿಮೈ ಅಪ್ ಡೇಟ್" ಎಂದು ಬರೆದಿರುವ ಫಲಕವನ್ನು ಹಿಡಿದು ಮ್ಯಾಚ್ ನೋಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಈ ಚಿತ್ರ ಈಗ ಎಲ್ಲರ ಗಮನ ಸೆಳೆಯುತ್ತಿದ್ದು, ಅಜಿತ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಶೇರ್ ಮಾಡಿ ವೈರಲ್ ಮಾಡಿದ್ದಾರೆ. ಜೊತೆಗೆ ವಲಿಮೈ ಸಿನಿಮಾದ ಅಪ್ ಡೇಟ್ ನೀಡುವಂತೆ ಚಿತ್ರತಂಡದ ಬೆನ್ನುಬಿದ್ದಿದ್ದಾರೆ.

  ಚಿತ್ರೀಕರಣ ಪ್ರಾರಂಭವಾಗಿದೆ ಒಂದು ಮೇಲಾಗಿದೆ. ಆದರೂ ಸಿನಿಮಾದ ಬಗ್ಗೆ ಯಾವುದೇ ಅಪ್ ಡೇಟ್ ಸಿಕ್ಕಿಲ್ಲ ಎನ್ನುವುದು ಅಭಿಮಾನಿಗಳ. ಹಾಗಾಗಿ ಅಜಿತ್ ಫ್ಯಾನ್ಸ್ ಅವಕಾಶ ಸಿಕ್ಕಕಡೆಗಳಲೆಲ್ಲಾ ಸಿನಿಮಾದ ಅಪ್ ಡೇಟ್ ಎಂದು ಪೀಡಿಸುತ್ತಿದ್ದಾರೆ.

  ಚಿತ್ರದಲ್ಲಿ ನಟಿ ಅಜಿತ್ ಜೊತೆ ಬಾಲಿವುಡ್ ನಟಿ ಹುಮಾ ಖುರೇಷಿ ಕೂಡ ನಟಿಸಿದ್ದಾರೆ. ವಿನೋದ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಚಿತ್ರಕ್ಕೆ ನಟಿ ಶ್ರೀದೇವಿ ಪತಿ, ಬಾಲಿವುಡ್ ನ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಅಜಿತ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

  ತಂದೆ ಆಗ್ತಿದ್ದಾರೆ Nikhil Kumaraswamy | Filmibeat Kannada

  ಸದ್ಯ ಕೋವಿಡ್ ಕಾರಣದಿಂದ ಚಿತ್ರೀಕರಣ ಮತ್ತೆ ಸ್ಥಗಿತಗೊಳಸಲಾಗಿದೆ. ಕಳೆದ ವರ್ಷ ಚಿತ್ರೀಕರಣ ವೇಳೆ ನಟ ಅಜಿತ್ ಗೆ ಏಟಾಗಿದ್ದರಿಂದ ಚಿತ್ರೀಕರಣ ಮತ್ತಷ್ಟು ತಡವಾಗಿತ್ತು. ಬೈಕ್ ಸ್ಟಂಟ್ ವೇಳೆ ಅಜಿತ್ ಗಾಯಗೊಂಡಿದ್ದರು. ಸದ್ಯ ಚೇತರಿಸಿಕೊಂಡಿರುವ ಅಜಿತ್ ಮತ್ತೆ ಚಿತ್ರೀಕರಣಕ್ಕೆ ಹೊರಡಲು ಸಿದ್ಧರಾಗಿದ್ದಾರೆ.

  English summary
  Tamil Actor Ajith Kumar fan asks Valimai movie update during India and New Zealand test Championship.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X