ಮಹೇಶ್ ಹಾಗೂ ವಿಜಯ್ ಚಿತ್ರಗಳನ್ನು ಹಿಂದಿಕ್ಕುವಲ್ಲಿ ವಿಫಲವಾಯಿತು ಅಜಿತ್ 'ತುನಿವು' ಟ್ರೈಲರ್

Ajith Kumars Thunivu trailer failed to beat Vijays Beast trailer views in 24 hours

ಕಳೆದ ವರ್ಷ 'ವಾಲಿಮೈ' ಎಂಬ ಸಾಧಾರಣ ಚಿತ್ರವನ್ನು ನೀಡಿದ್ದ ನಟ ಅಜಿತ್ ಕುಮಾರ್ ಹಾಗೂ ನಿರ್ದೇಶಕ ಎಚ್ ವಿನೋದ್ ಜೋಡಿ ಈ ವರ್ಷದ ಸಂಕ್ರಾಂತಿಗೆ 'ತುನಿವು' ಎಂಬ ಚಿತ್ರದ ಮೂಲಕ ಪ್ರೇಕ್ಷಕರೆದುರು ಬರಲಿದೆ. ಇದೇ ತಿಂಗಳ 12ರಂದು ತುನಿವು ಚಿತ್ರ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲು ತಯಾರಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ಓಕೆ ಓಕೆ ಎಂಬ ಪ್ರತಿಕ್ರಿಯೆ ಪಡೆದುಕೊಂಡಿದ್ದವು.

ಇನ್ನು ಚಿತ್ರದ ಹೈಪ್ ಹೆಚ್ಚಿಸುವ ಸಲುವಾಗಿ ಹೊಸ ವರ್ಷದ ಹಿಂದಿನ ದಿನವೇ ತುನಿವು ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಗಿತ್ತು. ಈ ಟ್ರೈಲರ್‌ನಲ್ಲಿ ನಟ ಅಜಿತ್ ಕುಮಾರ್ ಯಾವುದೇ ಕನಿಕರವಿಲ್ಲದೇ ದುಡ್ಡನ್ನು ಕಬಳಿಸುವ ದೃಶ್ಯಗಳು ತುಂಬಿವೆ. ಹೀಗಾಗಿ ಇದೊಂದು ಮನಿ ಹೈಸ್ಟ್ ಕೆಟಗರಿಗೆ ಸೇರುವ ಚಿತ್ರ ಎಂದು ಸಿನಿ ಪಂಡಿತರು ಮಾತನಾಡಿಕೊಳ್ಳುತ್ತಿದ್ದು ಚಿತ್ರದ ಟ್ರೈಲರ್ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.

ಇನ್ನು ಈ ಟ್ರೈಲರ್‌ ಬಿಡುಗಡೆಯಾದ 24 ಗಂಟೆಗಳಲ್ಲಿ ತಮಿಳು ನಟ ವಿಜಯ್ ನಟನೆಯ ಕೊನೆಯ ಚಿತ್ರ ಬೀಸ್ಟ್ ಟ್ರೈಲರ್ ದಾಖಲೆಯನ್ನು ಅಳಿಸಿ ಹಾಕಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ತುನಿವು ಟ್ರೈಲರ್ ಈ ದಾಖಲೆಯನ್ನು ಮುರಿಯುವಲ್ಲಿ ವಿಫಲವಾಗಿದ್ದು, ಮೊದಲ 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡ ದಕ್ಷಿಣ ಭಾರತದ ಟ್ರೈಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಬಿಡುಗಡೆಯಾದ ಮೊದಲ 24 ಗಂಟೆಗಳಲ್ಲಿ ಯುಟ್ಯೂಬ್‌ನಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡ ದಕ್ಷಿಣ ಭಾರತ ಚಿತ್ರರಂಗಗಳ ಟಾಪ್ 5 ಚಿತ್ರಗಳ ಟ್ರೈಲರ್‌ಗಳ ಪಟ್ಟಿ ಈ ಕೆಳಕಂಡಂತಿದೆ..

1. ಬೀಸ್ಟ್ : 29.08 ಮಿಲಿಯನ್ ವೀಕ್ಷಣೆ

2. ಸರ್ಕಾರು ವಾರಿ ಪಾಟ: 26.7 ಮಿಲಿಯನ್ ವೀಕ್ಷಣೆ

3. ತುನಿವು: 24.9 ಮಿಲಿಯನ್ ವೀಕ್ಷಣೆ

4. ರಾಧೆ ಶ್ಯಾಮ್: 23.2 ಮಿಲಿಯನ್ ವೀಕ್ಷಣೆ

5. ಆಚಾರ್ಯ: 21.9 ಮಿಲಿಯನ್ ವೀಕ್ಷಣೆ

More from Filmibeat

English summary
Ajith Kumar's Thunivu trailer failed to beat Vijay's Beast trailer views in 24 hours
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X