twitter
    For Quick Alerts
    ALLOW NOTIFICATIONS  
    For Daily Alerts

    'ವಲಿಮೈ' ಸಿನಿಮಾದ ಕೆಲವು ದೃಶ್ಯ, ಹಾಡಿಗೆ ಕತ್ತರಿ

    |

    ಅಜಿತ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ವಲಿಮೈ' ಫೆಬ್ರವರಿ 24 ರಂದು ಬಿಡುಗಡೆ ಆಗಿದ್ದು, ಮೂರು ವರ್ಷಗಳ ನಂತರ ಬಿಡುಗಡೆ ಆಗುತ್ತಿರುವ ಅಜಿತ್ ಸಿನಿಮಾ ಆದ್ದರಿಂದ ನಿರೀಕ್ಷೆ ಹೆಚ್ಚಿಗೇ ಇದೆ.

    ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆಯಾದರೂ ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅದರಲ್ಲಿಯೂ ಸಿನಿಮಾದಲ್ಲಿನ ಕೌಟುಂಬಿಕ ಸೆಂಟಿಮೆಂಟ್‌ ದೃಶ್ಯಗಳು ತೀರಾ ಮೆಲೊಡ್ರಾಮಾ ಮಾದರಿಯಲ್ಲಿದ್ದು, ಬಲವಂತವಾಗಿ ಎಳೆದಂತಿವೆ ಎಂದು ಹಲವರು ಅಭಿಪ್ರಾಯ ವ್ಯಕ್ತವಾಗಿವೆ.

    Valimai Movie Review In Kannada: ಕಥೆಯಲ್ಲ, ಬೈಕುಗಳದ್ದೇ ಅಬ್ಬರValimai Movie Review In Kannada: ಕಥೆಯಲ್ಲ, ಬೈಕುಗಳದ್ದೇ ಅಬ್ಬರ

    ಫ್ಯಾಮಿಲಿ ಸೆಂಟಿಮೆಂಟ್ ದೃಶ್ಯಗಳು ಸಿನಿಮಾದ ರೋಚಕತೆಗೆ ಅಡ್ಡಗಾಲು ಹಾಕಿದೆ. ಈ ದೃಶ್ಯಗಳು ಅನವಶ್ಯ ಎಂದು ಅಜಿತ್ ಅಭಿಮಾನಿಗಳು ಸಹ ಫೀಡ್‌ಬ್ಯಾಕ್ ನೀಡಿದ್ದಾರೆ. ಹಾಗಾಗಿ ಈ ದೃಶ್ಯಗಳಿಗೆ ಕತ್ತರಿ ಹಾಕಲು ಚಿತ್ರತಂಡ ತೀರ್ಮಾನಿಸಿದೆ.

    Ajith Kumar s Valimai Movie To Be Trimmed For 18 Minutes

    ಸಿನಿಮಾದ ದ್ವಿತೀಯಾರ್ಧದಲ್ಲಿ ಕೆಲವು ಅನವಶ್ಯಕ ದೃಶ್ಯಗಳಿದ್ದು ಆ ದೃಶ್ಯಗಳನ್ನು ಕತ್ತರಿಸಿ ಒಗೆಯಲು ನಿರ್ದೇಶಕ ಎಚ್‌ ವಿನೋತ್, ನಿರ್ಮಾಪಕ ಬೋನಿ ಕಪೂರ್ ಹಾಗೂ ನಟ ಅಜಿತ್ ಒಟ್ಟಿಗೆ ತೀರ್ಮಾನಿಸಿದ್ದಾರೆ. ಸಿನಿಮಾದ ಅವಧಿಯನ್ನು ಕಡಿಮೆಗೊಳಿಸಿ ಇನ್ನಷ್ಟು 'ಗ್ರಿಪ್ಪಿಂಗ್' ಮಾಡುವುದು ಅವರ ಉದ್ದೇಶ.

    'ವಲಿಮೈ' ತಮಿಳು ಆವೃತ್ತಿಯ 12 ನಿಮಿಷದ ದೃಶ್ಯಕ್ಕೆ ಕತ್ತರಿ ಹಾಕಿದರೆ ಹಿಂದಿಯ 15 ನಿಮಿಷಕ್ಕೆ ಕತ್ತರಿ ಹಾಕಲಿದೆ ಚಿತ್ರತಂಡ. ''ಸಿನಿಮಾದ ಅವಧಿಯ ಬಗ್ಗೆ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ಅಭಿಪ್ರಾಯ ಸದುದ್ದೇಶದಿಂದ ಕೂಡಿದ್ದು, ಸಿನಿಮಾದ ಒಳಿತಾಗಿ ಈ ನಿರ್ಣಯವನ್ನು ಚಿತ್ರತಂಡ ತೆಗೆದುಕೊಳ್ಳುತ್ತಿದೆ'' ಎಂದು ನಿರ್ದೇಶಕರು ಹೇಳಿದ್ದಾರೆ.

    ಅಜಿತ್ ಅಭಿಮಾನಿಗಳ ಮೇಲೆ ಪೆಟ್ರೋಲ್ ಬಾಂಬ್ ದಾಳಿ! ಹುಚ್ಚಾಟ ಮೆರೆದ ಅಭಿಮಾನಿಗಳುಅಜಿತ್ ಅಭಿಮಾನಿಗಳ ಮೇಲೆ ಪೆಟ್ರೋಲ್ ಬಾಂಬ್ ದಾಳಿ! ಹುಚ್ಚಾಟ ಮೆರೆದ ಅಭಿಮಾನಿಗಳು

    ಸಿನಿಮಾದ ದೃಶ್ಯಗಳನ್ನು ಮಾತ್ರವೇ ಅಲ್ಲ ಸಿನಿಮಾದ 'ನಾಂಗಾ ವಾರ ಮಾರಿ' ಎಂಬ ಹಾಡನ್ನು ಸಹ ಕಿತ್ತೊಗೆಯುತ್ತಿದ್ದಾರೆ. ಆ ಮೂಲಕ ಒಟ್ಟು ಸಿನಿಮಾದ ಅವಧಿಯನ್ನು 18 ನಿಮಿಷ ಕಡಿಮೆ ಮಾಡಲಾಗುತ್ತಿದೆ. ಎಡಿಟ್ ಮಾಡಿರುವ ಸಿನಿಮಾ ಶನಿವಾರದಿಂದ ವೀಕ್ಷಣೆಗೆ ಲಭ್ಯವಾಗಲಿದೆ.

    'ವಲಿಮೈ' ಸಿನಿಮಾ ಪೊಲೀಸ್ ಹಾಗೂ ಅಪರಾಧಿ ಗುಂಪಿನ ನಡುವೆ ನಡೆವ ಕತೆಯನ್ನು ಹೊಂದಿದೆ. ಭಯಾನಕ ಬೈಕರ್‌ಗಳ ಗುಂಪೊಂದು ಚೆನ್ನೈನಲ್ಲಿ ಸರಣಿ ಅಪರಾಧಗಳನ್ನು ಮಾಡುತ್ತಿರುವಾಗ ಅಲ್ಲಿಗೆ ವರ್ಗವಾಗಿ ಬರುವ ಪೊಲೀಸ್ ಅಧಿಕಾರಿ ಅಜಿತ್ ಹೇಗೆ ಆ ಗುಂಪನ್ನು ತಡೆಯುತ್ತಾರೆ ಎಂಬುದು 'ವಲಿಮೈ' ಸಿನಿಮಾದ ಕತೆ.

    English summary
    Ajith Kumar's Valimai movie to be trimmed for 18 minutes. Many people said Valimai movie is too long.
    Saturday, February 26, 2022, 10:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X