For Quick Alerts
  ALLOW NOTIFICATIONS  
  For Daily Alerts

  ಸರೋಗಸಿ ವಿವಾದ.. ನಯನ್‌ಗೆ ಕೆಟ್ಟದು ಬಯಸಿದ್ಯಾರು? ವಿಘ್ನೇಶ್ ಶಿವನ್ ಹೇಳಿದ್ದೇನು?

  |

  ಕಳೆದ ಮೂರ್ನಾಲ್ಕು ದಿನಗಳಿಂದ ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ದಂಪತಿ ಸರೋಗಸಿ ವಿವಾದ ಜೋರಾಗಿ ಸದ್ದು ಮಾಡ್ತಿದೆ. ಅವಳಿ ಗಂಡು ಮಕ್ಕಳಿಗೆ ತಂದೆ- ತಾಯಿ ಆಗಿರುವುದಾಗಿ ದಂಪತಿ ಘೋಷಿಸಿದ್ದಾರೆ. ಮದುವೆ ಆದ 4ನೇ ತಿಂಗಳಿಗೆ ಮಕ್ಕಳು ಹೇಗೆ? ಸರೋಗಸಿ ವಿಧಾನದಲ್ಲಿ ಮಕ್ಕಳನ್ನು ಪಡೆದಿದ್ದಾರಾ? ಎನ್ನುವ ಚರ್ಚೆ ನಡೀತಿದೆ. ಆದರೆ ಈ ಬಗ್ಗೆ ಗಂಡ- ಹೆಂಡತಿ ಇಬ್ಬರೂ ಸೈಲೆಂಟ್ ಆಗಿದ್ದಾರೆ. ಸದ್ಯ ವಿಕ್ಕಿ ಪರೋಕ್ಷವಾಗಿ ಒಂದಷ್ಟು ಕಾಮೆಂಟ್ಸ್ ಮಾಡ್ತಿದ್ದಾರೆ.

  ಮದುವೆಗೂ ಮೊದಲೇ ವಿಕ್ಕಿ- ನಯನ್ ದಂಪತಿ ಸರೋಗಸಿ ಪ್ಲ್ಯಾನ್ ಮಾಡಿಕೊಂಡಿದ್ದರು ಎನ್ನಲಾಗುತ್ತಿದೆ. ಭಾರತದಲ್ಲಿ ಬಾಡಿಗೆ ತಾಯ್ತನ ಮೂಲಕ ಮಕ್ಕಳು ಪಡೆಯುವುದಕ್ಕೆ ಒಂದಷ್ಟು ನಿಯಮಗಳಿವೆ. ಕೆಲವರು ದೇಶದಲ್ಲಿ ಈ ವಿಧಾನವನ್ನು ಬ್ಯಾನ್ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಹಾಗಾಗಿ ಈ ಜೋಡಿ ಈ ವಿಧಾನದಲ್ಲಿ ಮಕ್ಕಳು ಪಡೆದಿದ್ದಾರೆ ಎನ್ನುವುದು ವಿವಾದವಾಗಿ ಮಾರ್ಪಟ್ಟಿದೆ. ಕಾಲಿವುಡ್ ಹಾಟ್ ಕಪಲ್ ಸಾಕಷ್ಟು ಟೀಕೆಗಳನ್ನು ಎದುರಿಸುವಂತಾಗಿದೆ. ತಮಿಳುನಾಡು ಸರ್ಕಾರ ಈ ವಿಚಾರವಾಗಿ ತನಿಖೆ ನಡೆಸುವಂತೆ ಸೂಚಿಸಿರುವುದಾಗಿ ತಮಿಳುನಾಡು ಆರೋಗ್ಯ ಸಚಿವ ಮಾ. ಸುಬ್ರಮಣಿಯನ್ ಹೇಳಿರುವುದು ಗೊತ್ತಾಗಿದೆ. ಹಾಗಾಗಿ ವಿಕ್ಕಿ- ನಯನ್ ಸಂಕಷ್ಟಕ್ಕೆ ಸಿಲುಕಿದಂತೆ ಕಾಣುತ್ತಿದೆ.

  ಸರೋಗಸಿ ವಿಧಾನದಲ್ಲಿ ಅವಳಿ ಮಕ್ಕಳು? ನಯನ್- ವಿಕ್ಕಿ ದಂಪತಿಗೆ 5 ವರ್ಷ ಜೈಲು ಶಿಕ್ಷೆ?ಸರೋಗಸಿ ವಿಧಾನದಲ್ಲಿ ಅವಳಿ ಮಕ್ಕಳು? ನಯನ್- ವಿಕ್ಕಿ ದಂಪತಿಗೆ 5 ವರ್ಷ ಜೈಲು ಶಿಕ್ಷೆ?

  ಇಷ್ಟೆಲ್ಲಾ ರಾದ್ದಾಂತ ಆಗುತ್ತಿದ್ದರೂ ನಯನತಾರಾ ಹಾಗೂ ವಿಘ್ನೇಶ್ ಶಿವನ್ ದಂಪತಿ ಪ್ರತಿಕ್ರಿಯಿಸುವ ಗೋಜಿಗೆ ಹೋಗುತ್ತಿಲ್ಲ. ಆದರೆ ವಿಕ್ಕಿ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಪರೋಕ್ಷವಾಗಿ ಒಂದಷ್ಟು ಪೋಸ್ಟ್‌ಗಳನ್ನು ಮಾಡ್ತಿದ್ದು, ಅದು ಸಖತ್ ವೈರ್ ಆಗಿದೆ. ಸಾಕಷ್ಟು ಚರ್ಚೆ ಹುಟ್ಟಾಕ್ಕಿದೆ.

   ನಯನ್‌ಗೆ ಕೆಟ್ಟದು ಬಯಸಿದ್ಯಾರು?

  ನಯನ್‌ಗೆ ಕೆಟ್ಟದು ಬಯಸಿದ್ಯಾರು?

  ಮಕ್ಕಳನ್ನು ಹೇಗೆ ಪಡೆದುಕೊಂಡರು ಎನ್ನುವುದರ ಬಗ್ಗೆ ನಯನತಾರಾ- ವಿಘ್ನೇಶ್ ಶಿವನ್ ದಂಪತಿ ಮಾತನಾಡುತ್ತಿಲ್ಲ. ಆದರೆ ಪರೋಕ್ಷವಾಗಿ ವಿಘ್ನೇಶ್ ಶಿವನ್ ಒಂದಷ್ಟು ಕೋಟ್‌ಗಳನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ. "ನಿನ್ನ ಸುತ್ತಲೂ ಇರುವವರನ್ನು ಗಮನಿಸು. ನಿನ್ನ ಜೊತೆಗಿದ್ದು, ನಿಮ್ಮ ಕ್ಷೇಮಂ ಕೋರುವವರೇ ಇನ್ನವರು. ಇದು ಯಾವಾಗಲೂ ವಾಸ್ತವ" ಎಂದು ವಿಗ್ನೇಶ್ ಶಿವನ್ ಪೋಸ್ಟ್ ಮಾಡಿದ್ದಾರೆ. ಇದನ್ನು ಕೇಳಿದ ಅಭಿಮಾನಿಗಳು ನಯನ್ ಸುತ್ತಾ ಇರುವವರು ಯಾರು? ಆಕೆಗೆ ಕೆಟ್ಟದು ಕೋರುವವರು ಯಾರು? ಎಂದು ಕೆಲವರು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.

   ಸಮಯ ಬಂದಾಗ ಎಲ್ಲವೂ ಗೊತ್ತಾಗುತ್ತದೆ

  ಸಮಯ ಬಂದಾಗ ಎಲ್ಲವೂ ಗೊತ್ತಾಗುತ್ತದೆ

  ಮತ್ತೊಂದು ಕೋಟ್‌ನಲ್ಲಿ "ಸಮಯ ಬಂದಾಗ ಎಲ್ಲವೂ ನಿನ್ನನ್ನು ಬಂದು ಸೇರುತ್ತದೆ. ಅಲ್ಲಿಯವರೆಗೂ ಸಹನೆಯಿಂದ ಇರು. ಯಾವಾಗಲೂ ಕೃತಜ್ಞನಾಗಿರು" ಎಂದು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಸಮಯ ಬಂದಾಗ ಎಲ್ಲದಕ್ಕೂ ಉತ್ತರ ಸಿಗುತ್ತದೆ ಎಂದು ಪರೋಕ್ಷವಾಗಿ ವಿಘ್ನೇಶ್ ಶಿವನ್ ಹೇಳಿದ್ದಾರೆ ಎನ್ನುವುದು ಕೆಲವರ ವಾದ. ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

   4 ತಿಂಗಳ ಹಿಂದೆ ನಯನ್-ವಿಕ್ಕಿ ಮದುವೆ

  4 ತಿಂಗಳ ಹಿಂದೆ ನಯನ್-ವಿಕ್ಕಿ ಮದುವೆ

  ವಿಘ್ನೇಶ್ ಶಿವನ್ ನಿರ್ದೇಶನದ 'ನಾನುಂ ರೌಡಿತಾನ್' ಚಿತ್ರದಲ್ಲಿ ನಯನತಾರ ನಾಯಕಿಯಾಗಿ ನಟಿಸಿದ್ದರು. ಅದೇ ಸಮಯದಲ್ಲಿ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಆ ಸ್ನೇಹ ಪ್ರೀತಿಗೆ ತಿರುಗಿ ನಾಲ್ಕೈದು ವರ್ಷ ಪ್ರೀತಿಲಿ ಮುಳುಗಿದ್ದ ಜೋಡಿ ಜೂನ್ 9ರಂದು ಮಹಾಬಲೀಪುರಂನಲ್ಲಿರೋ ರೆಸಾರ್ಟ್‌ವೊಂದರಲ್ಲಿ ನಯನ್- ವಿಕ್ಕಿ ಮದುವೆ ನೆರವೇರಿತ್ತು. ಶಾರುಕ್ ಖಾನ್, ರಜನಿಕಾಂತ್ ಸೇರಿದಂತೆ ಹಲವರು ಮದುವೆ ಸಮಾರಂಭದಲ್ಲಿ ಭಾಗಿ ಆಗಿ ನವಜೋಡಿಗೆ ಶುಭ ಹಾರೈಸಿದ್ದರು.

   ಸಂಕಷ್ಟಕ್ಕೆ ಸಿಲುಕಿದ ನಯನ್-ವಿಕ್ಕಿ ಜೋಡಿ?

  ಸಂಕಷ್ಟಕ್ಕೆ ಸಿಲುಕಿದ ನಯನ್-ವಿಕ್ಕಿ ಜೋಡಿ?

  ಸರೋಗಸಿ ವಿಧಾನ ಎಂದರೆ ಬೇರೆ ಮಹಿಳೆ, ಪುರುಷನಿಗೆ ಸೇರಿದ ಮಗುವನ್ನು ಮತ್ತೊಂದು ಮಹಿಳೆ ತನ್ನ ಗರ್ಭದಲ್ಲಿ ಹೊತ್ತು ಹೆರುವುದು. ಪ್ರಸವದ ನಂತರ ಮಗುವನ್ನು ಹೊತ್ತು ಹೆತ್ತ ಮಹಿಳೆಗೆ ಆ ಮಗುವಿನ ಮೇಲೆ ಯಾವುದೇ ಹಕ್ಕು ಇರುವುದಿಲ್ಲ. ಅಂಡಾಣು, ವೀರ್ಯ ಕೊಟ್ಟವರೇ ಆ ಮಗುವಿನ ಪೋಷಕರು. ಪ್ರಿಯಾಂಕ ಚೋಪ್ರಾ ಸೇರಿದಂತೆ ಹಲವರು ಸೆಲೆಬ್ರೆಟಿಗಳು ಇದೇ ವಿಧಾನದಲ್ಲಿ ಮಕ್ಕಳನ್ನು ಪಡೆದಿದ್ದಾರೆ. ಸದ್ಯ ಇದು ಭಾರತದಲ್ಲಿ ಬ್ಯಾನ್ ಆಗಿದೆ ಎನ್ನಲಾಗುತ್ತಿದ್ದು, ನಯನ್- ವಿಕ್ಕಿ ಕಾನೂನು ಉಲ್ಲಂಘಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

  ನಯನತಾರಾಗೆ ಅವಳಿ ಮಕ್ಕಳು.. ನಯನ್ ಸೊಂಟದ ಮೇಲಿನ ಮಚ್ಚೆ ನೋಡಿ ಅಂದೇ ಜ್ಯೂ. ಎನ್‌ಟಿಆರ್ ಭವಿಷ್ಯ?ನಯನತಾರಾಗೆ ಅವಳಿ ಮಕ್ಕಳು.. ನಯನ್ ಸೊಂಟದ ಮೇಲಿನ ಮಚ್ಚೆ ನೋಡಿ ಅಂದೇ ಜ್ಯೂ. ಎನ್‌ಟಿಆರ್ ಭವಿಷ್ಯ?

  English summary
  Amid Nayanthara and Vignesh Shivan's surrogacy controversy Vignesh Shivan cryptic post Viral. Know More.
  Wednesday, October 12, 2022, 19:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X