For Quick Alerts
  ALLOW NOTIFICATIONS  
  For Daily Alerts

  ಐತಿಹಾಸಿಕ ಪ್ಯಾನ್ ಇಂಡಿಯಾ ಚಿತ್ರಕ್ಕೆ ಸಜ್ಜಾದ ಎಆರ್ ಮುರುಗದಾಸ್?

  |

  ಸೂಪರ್ ಸ್ಟಾರ್ ರಜನಿಕಾಂತ್ ಜೊತೆ 'ದರ್ಬಾರ್' ಸಿನಿಮಾ ಮಾಡಿದ ಬಳಿಕ ನಿರ್ದೇಶಕ ಎಆರ್ ಮುರುಗದಾಸ್ ಬೇರೆ ಯಾವ ಚಿತ್ರವನ್ನು ಆರಂಭಿಸಿಲ್ಲ. ತಮಿಳು ನಟ ವಿಜಯ್ ಮುಂದಿನ ಸಿನಿಮಾ ಮಾಡುವುದಾಗಿ ಕೆಲವು ದಿನ ಸುದ್ದಿಗಳು ಹರಿದಾಡಿದವು. ಅಂತಿಮವಾಗಿ ಆ ಪ್ರಾಜೆಕ್ಟ್‌ಗೆ ಮುರುಗದಾಸ್ ಓಕೆ ಆಗಲಿಲ್ಲ. ಅವರ ಜಾಗಕ್ಕೆ ಯುವ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಎಂಟ್ರಿಯಾದರು.

  ಇದೀಗ, ಮುರುಗದಾಸ್ ಬಹುದೊಡ್ಡ ಪ್ಯಾನ್ ಇಂಡಿಯಾ ಚಿತ್ರಕ್ಕೆ ಯೋಜನೆ ರೂಪಿಸಿದ್ದಾರೆ ಎಂಬ ಸುದ್ದಿ ಸಿನಿಮಾಲೋಕದಲ್ಲಿ ಚರ್ಚೆಗೆ ಬಂದಿದೆ. ಸದ್ಯ ಪ್ರಿ-ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ಈ ವರ್ಷದ ಮೊದಲಾರ್ಧದಲ್ಲಿ ಈ ಪ್ರಾಜೆಕ್ಟ್ ಅಧಿಕೃತವಾಗಿ ಸೆಟ್ಟೇರಲಿದೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ, ಮುರುಗದಾಸ್ ಕೈಗೆತ್ತಿಕೊಳ್ಳಲಿರುವ ಕಥೆ ಯಾವುದು? ಯಾವ ಸ್ಟಾರ್ ನಟರು ಈ ಚಿತ್ರದಲ್ಲಿ ಇರಲಿದ್ದಾರೆ? ಮುಂದೆ ಓದಿ...

  ಐತಿಹಾಸಿಕ ಕಥೆ ಆಯ್ಕೆ

  ಐತಿಹಾಸಿಕ ಕಥೆ ಆಯ್ಕೆ

  ಪ್ರಸ್ತುತ ಮುರುಗದಾಸ್ ನಿರ್ದೇಶನಕ್ಕಿಂತ ನಿರ್ಮಾಣದ ಕಡೆ ಹೆಚ್ಚು ಆಸಕ್ತಿ ತೋರಿದ್ದಾರೆ. ಓಂ ಪ್ರಕಾಶ್ ಭಟ್ ಜೊತೆ ಸೇರಿ ಪ್ಯಾನ್ ಇಂಡಿಯಾ ಚಿತ್ರವೊಂದನ್ನು ನಿರ್ಮಿಸಲು ಮುಂದಾಗಿದ್ದಾರೆ ಎಂಬ ಸುದ್ದಿ ಹೊರಬದ್ದಿದೆ. ಈ ಚಿತ್ರ ಐತಿಹಾಸಿಕ ಕಥೆಯಾಧರಿಸಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

  ವಿಜಯ್ 65ನೇ ಚಿತ್ರದಿಂದ ಸ್ಟಾರ್ ನಿರ್ದೇಶಕ ಎಆರ್ ಮುರುಗದಾಸ್ ಔಟ್!

  ಚಿತ್ರಕ್ಕೆ 1947 ಶೀರ್ಷಿಕೆ?

  ಚಿತ್ರಕ್ಕೆ 1947 ಶೀರ್ಷಿಕೆ?

  ಓಂ ಪ್ರಕಾಶ್ ಭಟ್ ಮತ್ತು ಮುರುಗದಾಸ್ ಜಂಟಿಯಾಗಿ ನಿರ್ಮಾಣ ಮಾಡಲಿರುವ ಚಿತ್ರದ ಕುರಿತು ಇದುವರೆಗೂ ಯಾವ ಮಾಹಿತಿ ಅಧಿಕೃತವಾಗಿ ಸಿಕ್ಕಿಲ್ಲ. ಮೂಲಗಳ ಪ್ರಕಾರ ಬಹಿರಂಗವಾಗಿರುವಂತೆ ಇದೊಂದು ಐತಿಹಾಸಿಕ ವಿಷಯವಾಗಿದ್ದು, ತಾತ್ಕಾಲಿಕವಾಗಿ ಚಿತ್ರಕ್ಕೆ 1947 ಎಂದು ಶೀರ್ಷಿಕೆ ಇರಿಸಲಾಗಿದೆಯಂತೆ. ಇನ್ನುಳಿದಂತೆ ಕಲಾವಿದರು, ತಂತ್ರಜ್ಞರು ಸಹ ಆಯ್ಕೆಯಾಗಿಲ್ಲ.

  ಮುರುಗದಾಸ್ ನಿರ್ದೇಶನದಲ್ಲಿ ಮುಂದಿನ ಸಿನಿಮಾ ಯಾವುದು?

  ಮುರುಗದಾಸ್ ನಿರ್ದೇಶನದಲ್ಲಿ ಮುಂದಿನ ಸಿನಿಮಾ ಯಾವುದು?

  ಎಆರ್ ಮುರುಗದಾಸ್ ನಿರ್ದೇಶನದ ಮುಂದಿನ ಸಿನಿಮಾ ಸದ್ಯದಲ್ಲೇ ಘೋಷಣೆಯಾಗಲಿದೆ ಎಂಬ ಸುದ್ದಿ ವರದಿಯಾಗಿದೆ. ದೊಡ್ಡ ಪ್ರಾಜೆಕ್ಟ್‌ನಲ್ಲಿ ಈ ಚಿತ್ರ ಸಿದ್ಧವಾಗಲಿದ್ದು, ಸಂಪೂರ್ಣವಾಗಿ ಆನಿಮೇಷನ್‌ನಿಂದ ಕೂಡಿರುತ್ತದೆ ಎಂದು ವಿಶ್ಲೇಷಿಸಲಾಗಿದೆ. ಕಲಾವಿದರ ಬಗ್ಗೆ ಸುಳಿವು ನೀಡಿಲ್ಲ.

  Drishyam 2 ಸಿನಿಮಾಗೆ ರೆಡಿ ಅಂದ್ರು ಕ್ರೇಜಿಸ್ಟಾರ್ ರವಿಚಂದ್ರನ್ | Filmibeat Kannada
  ವಿಜಯ್ 65ನೇ ಪ್ರಾಜೆಕ್ಟ್‌ನಿಂದ ಹೊರಬಂದಿದ್ದ ನಿರ್ದೇಶಕ?

  ವಿಜಯ್ 65ನೇ ಪ್ರಾಜೆಕ್ಟ್‌ನಿಂದ ಹೊರಬಂದಿದ್ದ ನಿರ್ದೇಶಕ?

  ಸನ್ ಪಿಕ್ಚರ್ಸ್ ಜೊತೆ ವಿಜಯ್ ನಟನೆಯ 65ನೇ ಚಿತ್ರವನ್ನು ಮುರುಗದಾಸ್ ನಿರ್ದೇಶಿಸಬೇಕಿತ್ತು. ಆದರೆ, ನಿರ್ಮಾಣ ಸಂಸ್ಥೆ ಜೊತೆಗಿನ ಭಿನ್ನಾಭಿಪ್ರಾಯದಿಂದ ಈ ಚಿತ್ರ ಮುಂದುವರಿಸಲು ಸಾಧ್ಯವಾಗಲಿಲ್ಲ. ಹಾಗಾಗಿ, ಸಿನಿಮಾ ಆರಂಭಕ್ಕೂ ಮುನ್ನವೇ ಕೈಬಿಟ್ಟರು. ಈ ನಡುವೆ ತೆಲುಗು ನಟ ಮಹೇಶ್ ಬಾಬು ಜೊತೆ ಪ್ರಾಜೆಕ್ಟ್‌ವೊಂದರ ಕುರಿತು ಮಾತುಕತೆ ನಡೆಸುತ್ತಿದ್ದಾರೆ ಎಂಬ ವಿಷಯ ಬಹಿರಂಗವಾಗಿದೆ.

  English summary
  South industry Successful director AR murugadoss Planning To Produce Biggest Pan India Movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X