For Quick Alerts
  ALLOW NOTIFICATIONS  
  For Daily Alerts

  'ಸರ್ಪಟ್ಟ ಪರಂಬರೈ' ಹಿಂದಿ ರಿಮೇಕ್‌ಗೆ ಈ ನಾಯಕನ ಹೆಸರು ಸೂಚಿಸಿದ ನಟ ಆರ್ಯ

  |

  ತಮಿಳಿನ ಖ್ಯಾತ ನಟ ಆರ್ಯ ಅಭಿನಯದ 'ಸರ್ಪಟ್ಟ ಪರಂಬರೈ' ಸಿನಿಮಾ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಿರ್ದೇಶಕ ಪಾ. ರಂಜಿತ್ ಸಾರಥ್ಯದಲ್ಲಿ ಬಂದ ಸರ್ಪಟ್ಟ ಸಿನಿಮಾದಲ್ಲಿ ಆರ್ಯ ಬಾಕ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. 80ರ ದಶಕದ ಉತ್ಸಾಹಿ ಬಾಕ್ಸರ್ ಪಾತ್ರದ ಜೊತೆಗೆ ಜಾತಿ ಸಮಾಜದ ಅನಾವರಣವಾಗಿದೆ.

  ಚಿತ್ರಕ್ಕೆ ಎಲ್ಲಾ ಕಡೆಯಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪಾತ್ರಕ್ಕಾಗಿ ಆರ್ಯ ಪಟ್ಟಕಷ್ಟ, ಶ್ರಮ ಚಿತ್ರದಲ್ಲಿ ಎದ್ದು ಕಾಣುತ್ತಿದೆ. ಇತ್ತೀಚಿಗೆ ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆರ್ಯ ಸರ್ಪಟ್ಟ ಹಿಂದಿ ರಿಮೇಕ್ ಬಗ್ಗೆ ಮಾತನಾಡಿದ್ದಾರೆ. ಒಂದುವೇಳೆ ಹಿಂದಿಗೆ ರಿಮೇಕ್ ಆದರೆ ಯಾವ ನಾಯಕ ಸೂಕ್ತ ಎನ್ನುವುದನ್ನು ಬಹಿರಂಗಪಡಿಸಿದ್ದಾರೆ.

  ತಾಯಿಯಾದ ಸಂಭ್ರಮದಲ್ಲಿ 'ಯುವರತ್ನ' ನಟಿ ಸಯೇಶಾ ಸೈಗಲ್ತಾಯಿಯಾದ ಸಂಭ್ರಮದಲ್ಲಿ 'ಯುವರತ್ನ' ನಟಿ ಸಯೇಶಾ ಸೈಗಲ್

  ಸಂದರ್ಶನದಲ್ಲಿ ಆರ್ಯ, "ನಾನು ಕ್ರೀಡಾ ಆಧಾರಿತ ಸಿನಿಮಾಗಾಗಿ ತುಂಬಾ ಸಮಯದಿಂದ ಕಾಯುತ್ತಿದ್ದೆ. ಏಕೆಂದರೆ ನನ್ನ ಶಾಲಾ ದಿನಗಳಲ್ಲಿ ಕ್ರೀಡೆ ನನ್ನ ಜೀವನವಾಗಿತ್ತು. ಇದೀಗ ನನಗೆ ಸರ್ಪಟ್ಟ ಪರಂಬರೈ ಮೂಲಕ ನನ್ನ ಕನಸು ನನಸಾಯಿತು" ಎಂದು ಆರ್ಯ ಹೇಳಿದ್ದಾರೆ.

  ಚಿತ್ರಕ್ಕಾಗಿ ನಡೆಸಿದ ತಯಾರಿ ಬಗ್ಗೆ ಮಾತನಾಡಿದ ಆರ್ಯ, ಬಾಕ್ಸಿಂಗ್ ಸಿನಿಮಾಗಳನ್ನು ನೋಡುತ್ತಾ ಬೆಳೆದಿರುವುದಾಗಿ ಹೇಳಿದ್ದಾರೆ. "ನಿಜ ಜೀವನದಲ್ಲಿ 2 ನಿಮಿಷ ಬಾಕ್ಸಿಂಗ್ ರಿಂಗ್ ನಲ್ಲಿ ಇರಲು ಕಷ್ಟ. ನಾನು ರಾಕಿ, ರಾಗಿಂಗ್ ಬುಲ್ ಸೇರಿದಂತೆ ಅನೇಕ ಬಾಕ್ಸಿಂಗ್ ಆಧಾರಿತ ಸಿನಿಮಾಗಳನ್ನು ನೋಡುತ್ತಾ ಬೆಳೆದವನು. ಹಾಗಾಗಿ ಇದರ ಬಗ್ಗೆ ಆಸಕ್ತಿ ಹೆಚ್ಚಿತ್ತು" ಎಂದಿದ್ದಾರೆ.

  ಇದೇ ಸಿನಿಮಾದಲ್ಲಿ ಹಿಂದಿಯಲ್ಲಿ ರಿಮೇಕ್ ಆದರೆ ಯಾವ ನಟ ಬಾಕ್ಸರ್ ಆಗಲು ಸೂಕ್ತ ಎನ್ನುವುದನ್ನು ರಿವೀಲ್ ಮಾಡಿದ್ದಾರೆ. "ಒಂದು ವೇಳೆ ಹಿಂದಿಯಲ್ಲಿ ರಿಮೇಕ್ ಮಾಡಿದರೆ ರಣ್ವೀರ್ ಸಿಂಗ್ ಈ ಪಾತ್ರಕ್ಕೆ ನಾನು ಸೂಕ್ತ ಎಂದು ಭಾವಿಸುತ್ತೇನೆ" ಎಂದಿದ್ದಾರೆ. ಜೊತೆಗೆ ಹಿಂದಿ ಸಿನಿಮಾದ ಪ್ರೀತಿಯನ್ನು ವಿವರಿಸಿದ್ದಾರೆ.

  ಶಾರುಖ್ ಖಾನ್ ಅವರನ್ನು ತುಂಬಾ ಪ್ರೀತಿಸುತ್ತೇನೆ ಎನ್ನುವ ಆರ್ಯ ಅವಕಾಶ ಸಿಕ್ಕರೆ ಖಂಡಿತ ಅವರ ಜೊತೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಆಮೀರ್ ಖಾನ್, ಸಲ್ಮಾನ್ ಖಾನ್ ಸಹ ತುಂಬಾ ಇಷ್ಟ" ಎಂದು ಹೇಳುವ ಮೂಲಕ ಬಾಲಿವುಡ್ ನಲ್ಲಿ ನಟಿಸುವ ಕನಸಿನ ಬಗ್ಗೆಯೂ ಬಹಿರಂಗ ಪಡಿಸಿದರು.

  ನಟ ಆರ್ಯ ಡಬಲ್ ಸಂತಸದಲ್ಲಿದ್ದಾರೆ. ಇತ್ತೀಚಿಗಷ್ಟೆ ಆರ್ಯ ಪತ್ನಿ ಸಯೇಶಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸರ್ಪಟ್ಟ ಸೂಪರ್ ಸಕ್ಸಸ್ ಜೊತೆಗೆ ತಂದೆಯಾದ ಸಂಭ್ರಮವೂ ಸೇರಿಕೊಂಡಿದೆ. ಡಬಲ್ ಖುಷಿಯಲ್ಲಿರುವ ಆರ್ಯಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಅಭಿನಂದನೆಗಳು ಹರಿದುಬರುತ್ತಿದೆ.

  English summary
  Tamil Actor Arya suggests name Ranveer Singh for hindi remake of Sarpatta Parambarai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X