ಮುತ್ತಯ್ಯ ಮುರಳೀಧರನ್ ಬಯೋಪಿಕ್ ರಿಜೆಕ್ಟ್ ಮಾಡಿದ ಯುವ ನಟ
ಶ್ರೀಲಂಕಾ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಬಯೋಪಿಕ್ ಸಿನಿಮಾ ಸೆಟ್ಟೇರುವುದಕ್ಕೆ ಮುಂಚೆಯೇ ಭಾರಿ ವಿವಾದ ಸೃಷ್ಟಿಸಿದೆ. ಮುರಳೀಧರನ್ ಬಯೋಪಿಕ್ ಮೂಲಕ ತಮಿಳಿಗರ ಭಾವನೆಗಳಿಗೆ ಧಕ್ಕೆ ತರಲಾಗುತ್ತದೆ ಎಂಬ ಕಾರಣಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಟೀಕೆ, ವಿವಾದಕ್ಕೆ ತಲೆಕೆಡಿಸಿಕೊಳ್ಳದ ಚಿತ್ರತಂಡ ಇದು ಸಂಪೂರ್ಣವಾಗಿ ಕ್ರೀಡಾ ಆಧಾರಿತ ಚಿತ್ರ, ತಮಿಳು ಸಮುದಾಯಕ್ಕೆ ಸೇರಿದ ಶ್ರೀಲಂಕಾದ ಕ್ರಿಕೆಟಿಗನೊಬ್ಬನ ಸ್ಫೂರ್ತಿದಾಯಕ ಕಥೆ ಎಂದು ಚಿತ್ರತಂಡ ಸ್ಪಷ್ಟನೆ ಮಾಡಿದೆ.
ಈ ನಡುವೆ ತಮಿಳು ನಟ ತೇಜಯ್ ಅರುಣಸಲಂ '800' ಚಿತ್ರದಲ್ಲಿ ನಟಿಸುವ ಆಫರ್ ಬಂದಾಗ ತಿರಸ್ಕರಿಸಿದ್ದಾರೆ. ಸಿನಿಮಾ ಸುತ್ತ ರಾಜಕೀಯ ವಿವಾದ ಅಂಟಿಕೊಂಡಿದೆ ಎಂಬ ಕಾರಣಕ್ಕೆ ಸಿನಿಮಾದಿಂದ ಹಿಂದೆ ಸರಿದಿದ್ದಾರೆ. ಧನುಶ್ ನಟಿಸಿದ್ದ 'ಅಸುರನ್' ಸಿನಿಮಾದಲ್ಲಿ ತೇಜಯ್ ಅರುಣಸಲಂ ಪ್ರಮುಖ ಪಾತ್ರ ಮಾಡಿದ್ದರು. ಈ ಚಿತ್ರದ ನಟನೆಗಾಗ ಎಲ್ಲರಿಂದಲೂ ಮೆಚ್ಚುಗೆ ಸಹ ಗಳಿಸಿಕೊಂಡಿದ್ದರು.

ಇದೀಗ, ಮುತ್ತಯ್ಯ ಮುರಳೀಧರನ್ ಬಯೋಪಿಕ್‌ನಲ್ಲಿ ಚಿಕ್ಕವಯಸ್ಸಿನ ಪಾತ್ರ ಬರಲಿದ್ದು, ಅದನ್ನು ತೇಜಯ್ ಅರುಣಸಲಂ ಅವರಿಂದ ಮಾಡಿಸಲು ಚಿತ್ರತಂಡ ಮುಂದಾಗಿತ್ತು. ಆದರೆ, ಈ ಅವಕಾಶವನ್ನು ಬೇಡ ಎಂದು ನಿರಾಕರಿಸಿದ್ದಾರೆ.
ಇನ್ನುಳಿದಂತೆ ವಿಜಯ್ ಸೇತುಪತಿ ಮುರಳೀಧರನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಶ್ರೀಪತಿ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಹಾಗೂ ಪೋಷನ್ ಪೋಸ್ಟರ್ ಸಹ ಬಿಡುಗಡೆ ಮಾಡಲಾಗಿದೆ.


Click it and Unblock the Notifications











