For Quick Alerts
  ALLOW NOTIFICATIONS  
  For Daily Alerts

  ಸೌತ್ ಇಂಡಸ್ಟ್ರಿಗೆ ಫಿದಾ ಆದ ಬೋನಿ ಕಪೂರ್: ಮತ್ತೊಮ್ಮೆ ಸ್ಟಾರ್ ನಟನ ಚಿತ್ರ ನಿರ್ಮಾಣ?

  |

  ಬಾಲಿವುಡ್ ಸ್ಟಾರ್ ನಿರ್ಮಾಪಕ ಬೋನಿ ಕಪೂರ್ ದಕ್ಷಿಣ ಚಿತ್ರರಂಗದ ಮೇಲೆ ಹೆಚ್ಚು ಒಲವು ತೋರುತ್ತಿದ್ದಾರೆ. ಸತತವಾಗಿ ಸೌತ್ ಸಿನಿಮಾಗಳನ್ನು ನಿರ್ಮಿಸುವುದರ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ.

  ಒಂದು ಸಮಯದಲ್ಲಿ ಬಾಲಿವುಡ್‌ ಚಿತ್ರಗಳನ್ನು ಮಾತ್ರ ನಿರ್ಮಾಣ ಮಾಡುತ್ತಿದ್ದ ಬೋನಿ ಕಪೂರ್, ಈಗ ಬ್ಯಾಕ್ ಟು ಬ್ಯಾಕ್ ತಮಿಳು-ತೆಲುಗು ಚಿತ್ರಗಳಿಗೆ ಬಂಡವಾಳ ಹಾಕುತ್ತಿದ್ದಾರೆ.

  2017ರಲ್ಲಿ ಅಜಿತ್ ನಟನೆಯ 'ನೇರ್ಕೊಂಡ ಪಾರ್ವೈ' ಚಿತ್ರಕ್ಕೆ ಬಂಡವಾಳ ಹಾಕುವ ಮೂಲಕ ಬೋನಿ ಕಪೂರ್ ಮೊದಲ ಬಾರಿಗೆ ಸೌತ್ ಸಿನಿಮಾ ನಿರ್ಮಿಸಿದರು. ಪ್ರಸ್ತುತ ಅಜಿತ್ ಅಭಿನಯದ 'ವಾಲಿಮೈ' ಹಾಗೂ ಪವನ್ ಕಲ್ಯಾಣ್ ಅಭಿನಯದ 'ವಕೀಲ್ ಸಾಬ್' ಚಿತ್ರಗಳನ್ನು ನಿರ್ಮಿಸಿದ್ದಾರೆ.

  ಈ ಎರಡು ಚಿತ್ರಗಳು ಇನ್ನು ಬಿಡುಗಡೆಯಾಗಿಲ್ಲ. ಅಷ್ಟರಲ್ಲೇ ಮತ್ತೊಮ್ಮೆ ಅಜಿತ್ ಜೊತೆ ಇನ್ನೊಂದು ಸಿನಿಮಾ ಮಾಡುವುದಾಗಿ ಪಿಂಕ್ ವಿಲ್ಲಾ ವೆಬ್‌ಸೈಟ್‌ಗೆ ನೀಡಿರುವ ಸಂರ್ದಶನದಲ್ಲಿ ಹೇಳಿಕೊಂಡಿದ್ದಾರೆ.

  ಎಸ್‌ಎಸ್‌ ರಾಜಮೌಳಿ ನಿರ್ಧಾರಕ್ಕೆ ಬೇಸರಗೊಂಡ ನಿರ್ಮಾಪಕ ಬೋನಿ ಕಪೂರ್

  ''ನಮ್ಮಿಬ್ಬರ (ಅಜಿತ್) ಸ್ನೇಹ ಮತ್ತು ಸಂಬಂಧ ಬಹಳ ಚೆನ್ನಾಗಿದೆ. ಬಹುಶಃ ಇದು ಹೀಗೆ ಮುಂದುವರಿಯಲಿದೆ. ನನ್ನಂತೆಯೇ ಅವರಿಗೂ ಅನಿಸುತ್ತಿದೆ ಎಂದು ಭಾವಿಸಿದ್ದೇನೆ'' ಎಂದು ಹೇಳುವ ಮೂಲಕ ಮುಂದಿನ ಪ್ರಾಜೆಕ್ಟ್ ಸಾಧ್ಯತೆ ಬಗ್ಗೆ ಸುಳಿವು ನೀಡಿದ್ದಾರೆ.

  ಈ ಮಧ್ಯೆ ಅಜಯ್ ದೇವಗನ್ ಅಭಿನಯದ ಮೈದಾನ್ ಸಿನಿಮಾಗೂ ಬೋನಿ ಕಪೂರ್ ಬಂಡವಾಳ ಹೂಡಿದ್ದು, ಅಕ್ಟೋಬರ್ 15 ರಂದು ಈ ಸಿನಿಮಾ ತೆರೆಗೆ ಬರಲಿದೆ.

  Congress ನಿಂದ ಸೈಟ್ ಮಾರಿಬಿಟ್ಟೆ,ಕಾಫಿ ಪುಡಿಗೂ ದುಡ್ಡಿರ್ಲಿಲ್ಲ ಅಂದ್ರು Jaggesh | Filmibeat Kannada

  ಇನ್ನುಳಿದಂತೆ ಮೇ 1 ರಂದು ವಾಲಿಮೈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಲಿದೆ. ಸಿನಿಮಾ ರಿಲೀಸ್ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ.

  English summary
  Bollywood Producer Boney Kapoor Set To Produce Another Project With Ajith Kumar?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X