For Quick Alerts
  ALLOW NOTIFICATIONS  
  For Daily Alerts

  ಆರೋಗ್ಯದಲ್ಲಿ ವ್ಯತ್ಯಯ: ಆಸ್ಪತ್ರೆಗೆ ದಾಖಲಾದ ರಜನೀಕಾಂತ್

  |

  ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದ ಕಾರಣ ನಟ ರಜನೀಕಾಂತ್ ಇಂದು (ಡಿಸೆಂಬರ್ 25) ರಂದು ಬೆಳಿಗ್ಗೆ ಹೈದರಾಬಾದ್‌ನ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದಾರೆ.

  ಅನಾರೋಗ್ಯದಿಂದ Rajinikanth ಆಸ್ಪತ್ರೆಗೆ ದಾಖಲು!! | Filmibeat Kannada | Oneindia Kannada

  ಅಪೋಲೊ ಆಸ್ಪತ್ರೆ ಬಿಡುಗಡೆ ಮಾಡಿರುವ ಹೇಳಿಕೆಯಂತೆ, ನಟ ರಜನೀಕಾಂತ್ ಅವರ ರಕ್ತದ ಒತ್ತಡದಲ್ಲಿ ಏರಿಳಿತ ಕಂಡುಬಂದ ಕಾರಣ ಆಸ್ಪತ್ರೆಗೆ ದಾಖಲು ಮಾಡಿಕೊಂಡಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

  ರಜನೀಕಾಂತ್ ಕಳೆದ ಕೆಲವು ದಿನಗಳಿಂದ ಸತತವಾಗಿ 'ಅನ್ನಾತೆ' ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಅನ್ನಾತೆ ಸೆಟ್‌ನಲ್ಲಿದ್ದ ಕೆಲವರಿಗೆ ಕೊರೊನಾ ಪಾಸಿಟಿವ್ ಆಗಿತ್ತು, ಹಾಗಾಗಿ ಚಿತ್ರೀಕರಣವನ್ನು ಸ್ಥಗಿತಗೊಳಿಸಿ ರಜನೀಕಾಂತ್ ವಾಪಸ್ ಬಂದಿದ್ದರು.

  ಡಿಸೆಂಬರ್ 22 ರಂದು ರಜನೀಕಾಂತ್ ಅವರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ಅವರ ವರದಿ ನೆಗೆಟಿವ್ ಬಂದಿದೆ. ಹಾಗಿದ್ದೂ ಅವರು ಐಸೋಲೇಶನ್‌ ನಲ್ಲಿದ್ದರು.

  ಇದೀಗ ರಜನೀಕಾಂತ್ ಅವರ ರಕ್ತದ ಒತ್ತಡದಲ್ಲಿ ಏರಿಳಿತ ಬಂದಿರುವ ಕಾರಣ ಅವರನ್ನು ನಿಗಾದಲ್ಲಿ ಇಡಲಾಗಿದ್ದು, ಸಾಮಾನ್ಯ ಸ್ಥಿತಿಗೆ ಬರುವವರೆಗೆ ರಜನೀಕಾಂತ್ ಆಸ್ಪತ್ರೆಯಲ್ಲಿಯೇ ಇರಲಿದ್ದಾರೆ.

  English summary
  Rajinikant hospitalized in Hyderabad on December 25 morning. Doctors said his BP fluctuating and doctors were monitoring Rajini's health closely.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X