For Quick Alerts
  ALLOW NOTIFICATIONS  
  For Daily Alerts

  ಆರ್ಯಗೆ ರಿಲೀಫ್: ನಿಜವಾದ ಆರೋಪಿಗಳನ್ನು ಬಂಧಿಸಿದ ಪೊಲೀಸರು

  |

  ಜರ್ಮನಿ ಮೂಲದ ಮಹಿಳೆ ನಟ ಆರ್ಯ ವಿರುದ್ಧ 70 ಲಕ್ಷ ರೂಪಾಯಿ ವಂಚನೆ ಆರೋಪ ಮಾಡಿದ್ದರು. ಆನ್‌ಲೈನ್‌ನಲ್ಲಿ ನಟ ಆರ್ಯ ತನ್ನನ್ನು ಪ್ರೀತಿಸಿ, ಮದುವೆಯಾಗುವುದಾಗಿ ಹೇಳಿ ಭರವಸೆ ನೀಡಿದ್ದರು. ಆದರೀಗ ಬೇರೆ ಯುವತಿ ಜೊತೆ ಮದುವೆಯಾಗಿದ್ದಾರೆ ಎಂದು ಆ ವಿದ್ಜಾ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು.

  ಈ ಹಿನ್ನೆಲೆ ನಟ ಆರ್ಯಗೆ ಸೈಬರ್ ಪೊಲೀಸರು ನೋಟಿಸ್ ನೀಡಿ ವಿಚಾರಣೆ ಮಾಡಿದ್ದರು. ಖುದ್ದು ಆರ್ಯ ವಿಚಾರಣೆಗೆ ಹಾಜರಾಗಿ ಈ ಮಹಿಳೆಗೂ ನನಗೂ ಪರಿಚಯ ಇಲ್ಲ, ಯಾರೋ ನನ್ನ ಹೆಸರು ದುರ್ಬಳಕೆ ಮಾಡಿಕೊಂಡು ವಂಚಿಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು.

  ಮದುವೆಯಾಗುವುದಾಗಿ ಯುವತಿಗೆ ವಂಚನೆ ಪ್ರಕರಣ: ವಿಚಾರಣೆಗೆ ಹಾಜರಾದ ನಟ ಆರ್ಯಮದುವೆಯಾಗುವುದಾಗಿ ಯುವತಿಗೆ ವಂಚನೆ ಪ್ರಕರಣ: ವಿಚಾರಣೆಗೆ ಹಾಜರಾದ ನಟ ಆರ್ಯ

  ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆರ್ಯ ಹೆಸರಿನಲ್ಲಿ ಆ ಮಹಿಳೆಗೆ ವಂಚಿಸಿರುವ ಇಬ್ಬರು ಆರೋಪಿಗಳನ್ನು ಚೆನ್ನೈ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿದ್ಜಾ ಜೊತೆ ಚಾಟ್ ಮಾಡಿರುವ ಮೊಬೈಲ್ ಸಂಖ್ಯೆಯನ್ನು ಪತ್ತೆಯಾಚಿದ ಪೊಲೀಸರಿಗೆ ಚೆನ್ನೈನ ಪುಲೈಂತೋಪ್ ಪ್ರದೇಶಕ್ಕೆ ಸೇರಿದ ಮೊಹಮ್ಮದ್ ಅರ್ಮಾನ್ ಮತ್ತು ಮೊಹಮ್ಮದ್ ಹುಸೇನಿ ಎಂಬ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಅವರ ವಿರುದ್ಧ ಕಾನೂನು ಅಡಿಯಲ್ಲಿ ಕೇಸ್ ದಾಖಲಿಸಿ ಕ್ರಮ ಜರುಗಿಸಲಾಗುತ್ತಿದೆ.

  ಆರೋಪಿಗಳು ಸಿಕ್ಕಿಬಿದ್ದ ಮಾಹಿತಿ ಹೊರಬಿದ್ದ ನಂತರ ಆರ್ಯ ಟ್ವಿಟ್ಟರ್‌ನಲ್ಲಿ ಚೆನ್ನೈ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ. ''ನಿಜವಾದ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾದ ಚೆನ್ನೈ ಪೊಲೀಸ್ ಆಯುಕ್ತರಿಗೆ, ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ಹಾಗೂ ಸೈಬರ್ ಕ್ರೈಂ ಪೊಲೀಸರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇದು ನಿಜಕ್ಕೂ ಮಾನಸಿಕವಾಗಿ ಘಾಸಿ ಉಂಟು ಮಾಡಿತ್ತು. ನನ್ನನ್ನು ನಂಬಿದ ಎಲ್ಲರಿಗೂ ಪ್ರೀತಿಯ ಧನ್ಯವಾದ'' ಎಂದು ಟ್ವೀಟ್ ಮಾಡಿದ್ದಾರೆ.

  'ಯುವರತ್ನ' ಸುಂದರಿ ಸಯೇಶಾ ಹುಟ್ಟುಹಬ್ಬ: ನಾನು ತುಂಬಾ ಅದೃಷ್ಟವಂತ ಎಂದ ಪತಿ ಆರ್ಯ'ಯುವರತ್ನ' ಸುಂದರಿ ಸಯೇಶಾ ಹುಟ್ಟುಹಬ್ಬ: ನಾನು ತುಂಬಾ ಅದೃಷ್ಟವಂತ ಎಂದ ಪತಿ ಆರ್ಯ

  ಆನ್‌ಲೈನ್‌ನಲ್ಲಿ ದೋಖಾ

  ವಂಚನೆಗೊಳಗಾದ ವಿದ್ಜಾ ತನ್ನ ದೂರಿನಲ್ಲಿ ಆರ್ಯ ಮದುವೆಯಾಗುವುದಾಗಿ ಭರವಸೆ ನೀಡಿದ್ದರು ಮತ್ತು ತನ್ನಿಂದ 70 ಲಕ್ಷ ಸಾಲ ಪಡೆದಿದ್ದರು ಎಂದು ಉಲ್ಲೇಖಿಸಿದ್ದರು. ಆರು ತಿಂಗಳೊಳಗೆ ಸಯೇಶಾಗೆ ವಿಚ್ಛೇದನ ನೀಡಿ ತನ್ನನ್ನು ಮದುವೆ ಆಗುವುದಾಗಿಯೂ ಹೇಳಿದ್ದರು. ಹಾಗಾಗಿ ಆರ್ಯ ಮದುವೆಗೆ ಒಪ್ಪಿಗೆ ನೀಡಿದೆ ಎಂದು ವಿದ್ಜಾ ದೂರಿನಲ್ಲಿ ತಿಳಿಸಿದ್ದರು. ಆದರೆ, ಆನ್‌ಲೈನ್‌ನಲ್ಲಿ ಮಹಿಳೆಗೆ ವಂಚಿಸಿರುವುದು ಆರ್ಯ ಅಲ್ಲ, ಅವರ ಹೆಸರು ಬಳಸಿಕೊಂಡು ದುಷ್ಕರ್ಮಿಗಳು ಎಂದು ಪೊಲೀಸರ ತನಿಖೆಯಿಂದ ಹೊರಬಿದ್ದಿದೆ.

  English summary
  The Chennai police have arrested 2 conmen who posed as actor Arya online to cheat a woman.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X