Don't Miss!
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- News
Breaking; ಫೆ. 26ಕ್ಕೆ ದಾವಣಗೆರೆಗೆ ಕೇಜ್ರಿವಾಲ್ ಭೇಟಿ
- Sports
ಮತ್ತೆ ವಿವಾದದ ಸುಳಿಯಲ್ಲಿ ವಿನೋದ್ ಕಾಂಬ್ಳಿ: ಪತ್ನಿಯ ಮೇಲೆ ಹಲ್ಲೆ ನಡೆಸಿದ ಆರೋಪ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Automobiles
ಪ್ರಮುಖ ಮಾದರಿಗಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ರಿಯಾಯಿತಿ ಘೋಷಿಸಿದ ಟಾಟಾ ಮೋಟಾರ್ಸ್
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸೈನಾ ನೆಹ್ವಾಲ್‌ಗೆ ದ್ವಂದ್ವಾರ್ಥದ ಟ್ವೀಟ್: ಪೊಲೀಸರಿಂದ ನಟ ಸಿದ್ಧಾರ್ಥ್‌ಗೆ ಸಮನ್ಸ್
ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್‌ಗೆ ದ್ವಂದ್ವಾರ್ಥರ ಟ್ವೀಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುಭಾಷಾ ನಟ ಸಿದ್ಧಾರ್ಥ್‌ಗೆ ಚೆನ್ನೈ ಪೊಲೀಸರು ಸಮನ್ಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
Recommended Video
''ಸಿದ್ಧಾರ್ಥ್ ಮಾಡಿರುವ ಟ್ವೀಟ್‌ಗೆ ಸಂಬಂಧಿಸಿದಂತೆ ನಮಗೆ ಎರಡು ದೂರುಗಳು ಬಂದಿವೆ. ಒಂದು ದೂರು ಹೈದರಾಬಾದ್‌ನಲ್ಲಿ ಸಲ್ಲಿಕೆಯಾಗಿದ್ದರೆ, ಮತ್ತೊಂದು ಮಾನನಷ್ಟ ಪ್ರಕರಣ ದಾಖಲಾಗಿದೆ. ನಾವು ಈಗಾಗಲೇ ಸಿದ್ಧಾರ್ಥ್‌ಗೆ ಸಮನ್ಸ್ ಜಾರಿ ಮಾಡಿದ್ದೇವೆ. ಕೊರೊನಾ ಸಮಯ ಇರುವ ಕಾರಣ ಅವರ ಹೇಳಿಕೆಯನ್ನು ಹೇಗೆ ದಾಖಲು ಮಾಡಬೇಕು ಎಂಬ ಬಗ್ಗೆ ಚಿಂತಿಸುತ್ತಿದ್ದೇವೆ'' ಎಂದು ಚೆನ್ನೈ ಪೊಲೀಸ್ ಆಯುಕ್ತ ಶಂಕರ್ ಜೈವಾಲ್ ಹೇಳಿದ್ದಾರೆ.
ಪಂಜಾಬ್‌ನಲ್ಲಿ ಪ್ರಧಾನಿ ಮೋದಿ ಸಂಚಾರಕ್ಕೆ ರೈತರು ಅಡ್ಡಿ ಮಾಡಿ ಪ್ರತಿಭಟನೆ ವಿಚಾರವಾಗಿ ಆಕ್ರೋಶಭರಿತ ಟ್ವೀಟ್ ಮಾಡಿದ್ದ ಸೈನಾ, ಭದ್ರತಾ ವೈಫಲ್ಯವನ್ನು ಟೀಕಿಸಿದ್ದರು. ಸೈನಾರ ಈ ಟ್ವೀಟ್‌ಗೆ ಪ್ರತಿಯಾಗಿ ಟ್ವೀಟ್ ಮಾಡಿದ್ದ ಸಿದ್ಧಾರ್ಥ್ ದ್ವಂದ್ವಾರ್ಥ ಹೊಮ್ಮುವಂತೆ 'ಸಟಲ್ ಕಾಕ್ ವಿಶ್ವಚಾಂಪಿಯನ್' ಎಂದು ಸೈನಾರನ್ನು ವ್ಯಂಗ್ಯ ಮಾಡಿದ್ದರು.
ಸಿದ್ಧಾರ್ಥ್‌ರ ಈ ದ್ವಂದ್ವಾರ್ಥದ ಟ್ವೀಟ್ ತೀವ್ರ ವಿವಾದ ಎಬ್ಬಿಸಿತ್ತು. ಮಹಿಳಾ ಆಯೋಗ, ಸೈನಾ ನೆಹ್ವಾಲ್‌ರ ತಂದೆ ಹಾಗೂ ಪತಿ ಇನ್ನೂ ಹಲವರು ಸಿದ್ಧಾರ್ಥ್‌ರ ಟ್ವೀಟ್ ಅನ್ನು ಖಂಡಿಸಿದ್ದರು. ಮಹಿಳಾ ಆಯೋಗ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದರೆ, ಹೈದರಾಬಾದ್‌ನಲ್ಲಿ ಮಹಿಳೆಯೊಬ್ಬರು ಸಿದ್ಧಾರ್ಥ್ ವಿರುದ್ಧ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದರು.
ತಮ್ಮ ಟ್ವೀಟ್ ವಿವಾದ ಎಬ್ಬಿಸಿದ ಬಳಿಕ ಸೈನಾರ ಬಳಿ ಟ್ವೀಟ್ ಮೂಲಕ ಬಹಿರಂಗ ಕ್ಷಮೆ ಕೇಳಿದ ಸಿದ್ಧಾರ್ಥ್,''ನಿಮ್ಮ ಅಭಿಪ್ರಾಯಕ್ಕೆ ಪ್ರತಿಯಾಗಿ ನಾನು ಮಾಡಿದ ಒರಟು ಜೋಕ್ ಬಗ್ಗೆ ಕ್ಷಮೆ ಕೇಳುತ್ತೇನೆ. ನಿಮ್ಮೊಂದಿಗೆ ಅನೇಕ ವಿಷಯಗಳ ಬಗ್ಗೆ ನನಗೆ ಭಿನ್ನಾಭಿಪ್ರಾಯ ಇರಬಹುದು. ಆದರೆ ನಿಮ್ಮ ಟ್ವೀಟ್‌ಗೆ ಪ್ರತಿಯಾಗಿ ನಾನು ಮಾಡಿದ ಟ್ವೀಟ್ ಅದಕ್ಕೆ ಬಳಸಿದ ಪದಗಳು ಸೂಕ್ತವಾಗಿರಲಿಲ್ಲ. ಸ್ವತಃ ನಾನು ಅಷ್ಟು ಕೆಳಮಟ್ಟದವನಲ್ಲ ಎಂಬ ನಂಬಿಕೆ ನನಗೆ ಇದೆ. ಮತ್ತು ನಾನು ಮಾಡಿದ ಜೋಕ್‌ನ ವಿಷಯಕ್ಕೆ ಬರುವುದಾದರೆ. ಆ ಒರಟು ಜೋಕ್ ಬಗ್ಗೆ ಕ್ಷಮೆ ಇರಲಿ. ಯಾವುದೇ ಜೋಕ್ ಅನ್ನು ಹೇಳಿದ ಮೇಲೆ ಅದರ ಅರ್ಥವನ್ನು ವಿವರಿಸುವ ಅವಶ್ಯಕತೆ ಎದುರಾಗುತ್ತದೆಯೆಂದರೆ ಅದು ಖಂಡಿತ ಒಳ್ಳೆಯ ಜೋಕ್ ಅಲ್ಲ. ನಾನು ಹೇಳಿದ ಕೆಟ್ಟ ಜೋಕ್ ಬಗ್ಗೆ ಕ್ಷಮೆ ಕೋರುವೆ'' ಎಂದಿದ್ದರು ಸಿದ್ಧಾರ್ಥ್.
ಸಿದ್ಧಾರ್ಥ್‌ಗೆ ತಿರುಗೇಟು ನೀಡಿದ್ದ ಸೈನಾ ನೆಹ್ವಾಲ್, "ಅವರ ಯಾವ ಅರ್ಥದಲ್ಲಿ ಹೇಳಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ಅವರನ್ನು ನಾನು ಒಬ್ಬ ನಟನಾಗಿ ಇಷ್ಟ ಪಟ್ಟಿದ್ದೇನೆ. ಆದರೆ ಈ ಹೇಳಿಕೆ ಒಳ್ಳೆಯದಲ್ಲ. ಅವರು ತಮ್ಮ ಅಭಿಪ್ರಾಯಗಳನ್ನು ಉತ್ತಮ ಪದಗಳ ಬಳಸಿ ಹೇಳಬಹುದಿತ್ತು" ಎಂದಿದ್ದಾರೆ.