For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ನಿರ್ದೇಶಕನ ಚಿತ್ರದಲ್ಲಿ ವಿಕ್ರಮ್ ಮತ್ತು ಮಗ ಧ್ರುವ್ ನಟನೆ!

  |

  ತಮಿಳು ಸ್ಟಾರ್ ನಟ ಚಿಯಾನ್ ವಿಕ್ರಮ್ ಮತ್ತು ಅವರ ಮಗ ಧ್ರುವ್ ಕಾಂಬಿನೇಷನ್‌ನಲ್ಲಿ ಸಿನಿಮಾವೊಂದು ಬರಲಿದೆ. ಅದಕ್ಕಾಗಿ ಎಲ್ಲ ತಯಾರಿ ನಡೆಯುತ್ತಿದೆ ಎಂಬ ಸುದ್ದಿಗಳು ಕಳೆದ ಒಂದು ವರ್ಷದಿಂದ ಸದ್ದು ಮಾಡ್ತಾನೆ ಇದೆ.

  ಆದ್ರೆ, ಈ ಚಿತ್ರವನ್ನು ಯಾರು ನಿರ್ದೇಶನ ಮಾಡಲಿದ್ದಾರೆ ಎಂಬುದಕ್ಕೆ ಸ್ಪಷ್ಟ ಉತ್ತರ ಇರಲಿಲ್ಲ. ಈ ಹಿಂದೆ ವೆಟ್ರಿಮಾರನ್ ಈ ಮೆಗಾ ಪ್ರಾಜೆಕ್ಟ್ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಯ್ತು. ಬಳಿಕ, ವೆಟ್ರಿಮಾರನ್ ಬೇರೆ ಚಿತ್ರಗಳಲ್ಲಿ ಬ್ಯುಸಿಯಾದರು. ಇದೀಗ, ಅಪ್ಪ-ಮಗನ ಚಿತ್ರ ಮತ್ತೆ ಸದ್ದು ಮಾಡ್ತಿದ್ದು, ಈ ಸಲ ಸ್ಟಾರ್ ನಿರ್ದೇಶಕರು ಡೈರೆಕ್ಷನ್ ಕ್ಯಾಪ್ ತೊಡಲಿದ್ದಾರೆ. ಮುಂದೆ ಓದಿ....

  ಕಾರ್ತಿಕ್ ಸುಬ್ಬರಾಜು ನಿರ್ದೇಶನ

  ಕಾರ್ತಿಕ್ ಸುಬ್ಬರಾಜು ನಿರ್ದೇಶನ

  ಚಿಯಾನ್ ವಿಕ್ರಮ್ ನಟಿಸಲಿರುವ 60ನೇ ಚಿತ್ರಕ್ಕೆ ತಮಿಳಿನ ಸ್ಟಾರ್ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಡೈರೆಕ್ಟ್ ಮಾಡಲಿದ್ದಾರೆ ಎಂದು ಕಳೆದ ತಿಂಗಳೇ ಪ್ರಕಟಣೆ ಆಗಿದೆ. ವಿಶೇಷ ಅಂದ್ರೆ ಈ ಚಿತ್ರದಲ್ಲಿ ವಿಕ್ರಮ್ ಅವರ ಮಗ ಧ್ರುವ್ ಸಹ ನಟಿಸಲಿದ್ದಾರೆ. ಹಾಗಾಗಿ, ಈ ಪ್ರಾಜೆಕ್ಟ್ ಆರಂಭಕ್ಕೂ ಮುನ್ನವೇ ಭಾರಿ ಕುತೂಹಲ ಮೂಡಿಸಿದೆ.

  ಒಂದೇ ಸಿನಿಮಾದಲ್ಲಿ ಜೊತೆಯಾಗುತ್ತಿದ್ದಾರೆ ಅಪ್ಪ, ಮಗ

  ಫೆಬ್ರವರಿ 2021ಕ್ಕೆ ಆರಂಭ

  ಫೆಬ್ರವರಿ 2021ಕ್ಕೆ ಆರಂಭ

  ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಲಿದ್ದು, ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಲಲಿತ್ ಕುಮಾರ್ ನಿರ್ಮಾಣ ಮಾಡಲಿದ್ದಾರೆ. ಸದ್ಯ ಪ್ರಿ- ಪ್ರೊಡಕ್ಷನ್ ಕೆಲಸದಲ್ಲಿರುವ ಚಿತ್ರತಂಡ ಫೆಬ್ರವರಿ 2021ಕ್ಕೆ ಚಿತ್ರೀಕರಣ ಆರಂಭಿಸಲಿದೆಯಂತೆ.

  ಜನವರಿಯಲ್ಲಿ ಕೋಬ್ರಾ ಪೂರ್ಣ

  ಜನವರಿಯಲ್ಲಿ ಕೋಬ್ರಾ ಪೂರ್ಣ

  ಚಿಯಾನ್ ವಿಕ್ರಮ್ ಪ್ರಸ್ತುತ ಕೋಬ್ರಾ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಜನವರಿ ತಿಂಗಳಿನಲ್ಲಿ ಸಂಪೂರ್ಣವಾಗಿ ಮುಗಿಯಲಿದೆ. ಇದಾದ ಬಳಿಕ ಕಾರ್ತಿಕ್ ಸುಬ್ಬುರಾಜ್ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ.

  ನಟ ಚಿಯಾನ್ ವಿಕ್ರಂ ಮನೆಗೆ ಬಾಂಬ್ ಬೆದರಿಕೆ ಕರೆ

  ಮಣಿರತ್ನಂ ಪ್ರಾಜೆಕ್ಟ್ ಇದೆ

  ಮಣಿರತ್ನಂ ಪ್ರಾಜೆಕ್ಟ್ ಇದೆ

  ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಪೊನ್ನಿಯನ್ ಸೆಲ್ವೆನ್' ಸಿನಿಮಾದಲ್ಲೂ ವಿಕ್ರಮ್ ನಟಿಸುತ್ತಿದ್ದಾರೆ. ಆ ಕಡೆ ಕಾರ್ತಿಕ್ ಸುಬ್ಬರಾಜು ಧನುಶ್ ಜೊತೆ 'ಜಗಮೇ ತಂತೀರಮ್' ಚಿತ್ರ ಮಾಡುತ್ತಿದ್ದು, ಸಿನಿಮಾ ಬಹುತೇಕ ಮುಗಿಸಿದ್ದಾರೆ.

  ಧ್ರುವ್ ಸಹ ಬ್ಯುಸಿ!

  ಧ್ರುವ್ ಸಹ ಬ್ಯುಸಿ!

  ಅರ್ಜುನ್ ರೆಡ್ಡಿ ಚಿತ್ರದ ರೀಮೇಕ್ ಆದಿತ್ಯ ವರ್ಮಾ ಸಿನಿಮಾ ಮೂಲಕ ಚಿತ್ರಜಗತ್ತಿಗೆ ಎಂಟ್ರಿ ಕೊಟ್ಟ ವಿಕ್ರಮ್ ಮಗ ಧ್ರುವ್, ಈಗ ಮರಿ ಸೆಲ್ವರಾಜ್ ನಿರ್ದೇಶನದ ಇನ್ನು ಹೆಸರಿಡದ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾದ ಜೊತೆಗೆ ಕಾರ್ತಿಕ್ ಸುಬ್ಬರಾಜ್-ವಿಕ್ರಮ್ ಕಾಂಬಿನೇಷನ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.

  English summary
  Tamil actor Chiyaan Vikram and Dhruv Vikram’s next movie with Karthik Subbaraj to start in February 2021?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X