For Quick Alerts
  ALLOW NOTIFICATIONS  
  For Daily Alerts

  ಕೊರೊನಾ ವಿರುದ್ಧ ಹೋರಾಟಕ್ಕೆ ನಟ ಚಿಯಾನ್ ವಿಕ್ರಮ್ ನೆರವು

  |

  ದೇಶವನ್ನೆ ಬೆಚ್ಚಿಬೀಳಿಸಿರುವ ಮಾರಕ ಕೊರೊನಾ ವೈರಸ್ ವಿರುದ್ಧ ಹೋರಾಡಲು ಸಾಕಷ್ಟು ಮಂದಿ ಸಹಾಯ ಮಾಡುತ್ತಿದ್ದಾರೆ. ಅನೇಕ ಸಿನಿ ಸೆಲೆಬ್ರಿಟಗಳು ಸಹಾಯ ಹಸ್ತ ಚಾಚಿದ್ದು, ತಮ್ಮ ಕೈಲಾದಷ್ಟು ನೆರವು ನೀಡುತ್ತಿದ್ದಾರೆ. ಇದೀಗ ತಮಿಳಿನ ಖ್ಯಾತ ನಟ ಚಿಯಾನ್ ವಿಕ್ರಮ್ ಕೂಡ ಸರ್ಕಾರದ ಜೊತೆ ಕೈ ಜೋಡಿಸಿದ್ದಾರೆ.

  ನಟ ವಿಕ್ರಮ್ ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿಗೆ 30 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಕೊರೊನಾ ವಿರುದ್ಧ ಹೋರಾಟಕ್ಕೆ ನೆರವಾಗಿದ್ದಾರೆ. ತಮಿಳುನಾಡಿನ ನೂತನ ಸಿಎಂ ಎಂ.ಕೆ ಸ್ಟಾಲಿನ್ ಅವರಿಗೆ ಚೆಕ್ ವಿತರಿಸಿದ್ದಾರೆ. ಆದರೆ ಈ ಬಗ್ಗೆ ಚಿಯಾನ್ ವಿಕ್ರಮ್ ಎಲ್ಲೂ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ.

  ಕೊರೊನಾ ವಿರುದ್ಧದ ಹೋರಾಟಕ್ಕೆ 50 ಲಕ್ಷ ನೀಡಿದ ರಜನಿಕಾಂತ್ಕೊರೊನಾ ವಿರುದ್ಧದ ಹೋರಾಟಕ್ಕೆ 50 ಲಕ್ಷ ನೀಡಿದ ರಜನಿಕಾಂತ್

  ಇತ್ತೀಚಿಗಷ್ಟೆ ನಟ ಸೂರ್ಯ ಸಹೋದರರು ಸಿಎಂ ಭೇಟಿಯಾಗಿ 1 ಕೋಟಿ ರೂ ದೇಣಿಗೆ ನೀಡಿದ್ದರು. ನಟ ಅಜಿತ್ ಕೂಡ 25 ಲಕ್ಷ ರೂ. ನೆರವು ನೀಡಿದರು. ಇತ್ತೀಚಿಗಷ್ಟೆ ನಟ ರಜನಿಕಾಂತ್ ಹಾಗೂ ಪುತ್ರಿ ಸೌಂದರ್ಯ ಕೂಡ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡುವ ಮೂಲಕ ಕೊರೊನಾ ವಿರುದ್ಧ ಹೋರಾಟಕ್ಕೆ ನೆರವಾಗಿದ್ದಾರೆ.

  Bigg Boss ವಾಟ್ಸಾಪ್ ಗ್ರೂಪ್ ನಲ್ಲಿ ಈ ಮೂವರಿಗೆ ಮಾತ್ರ ನೋ ಎಂಟ್ರಿ | Filmibeat Kannada

  ನಟ ಚಿಯಾನ್ ವಿಕ್ರಮ್ ಸದ್ಯ ಕೋಬ್ರ ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಕೆಜಿಎಫ್ ನಟಿ, ಕನ್ನಡತಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಸಿನಿಮಾ ಜೊತೆಗೆ ವಿಕ್ರಮ್ ಮಣಿರತ್ನಂ ನಿರ್ದೇಶನದ ಪೊನ್ನಿಯಮ್ ಸೆಲ್ವನ್ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಇದಲ್ಲದೆ ಇನ್ನು ಹೆಸರಿಡದ ಮತ್ತೊಂದು ಚಿತ್ರದಲ್ಲಿ ವಿಕ್ರಮ್ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Actor Chiyaan Vikram donates 30 lakh for Tamil Nadu CM Relief fund.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X