For Quick Alerts
  ALLOW NOTIFICATIONS  
  For Daily Alerts

  ಚಿಯಾನ್ ವಿಕ್ರಂ 'ಕೋಬ್ರಾ' ಬಾಲ ಕತ್ತರಿಸಿದ್ಯಾಕೆ?

  |

  ಪ್ರಯೋಗಾತ್ಮಕ ಸಿನಿಮಾಗಳಿಗೆ ಕೇರ್ ಆಫ್ ಅಡ್ರೆಸ್ ಕಾಲಿವುಡ್ ನಟ ಚಿಯಾನ್ ವಿಕ್ರಂ. ಅಜಯ್ ಜ್ಞಾನಮೂರ್ತಿ ನಿರ್ದೇಶನದಲ್ಲಿ ವಿಕ್ರಂ ನಟನೆಯ 'ಕೋಬ್ರಾ' ಈ ವಾರ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣ್ತದೆ. ಚಿತ್ರದಲ್ಲಿ ನಾಯಕಿಯಾಗಿ 'KGF' ಬೆಡಗಿ ಶ್ರೀನಿಧಿ ಶೆಟ್ಟಿ ಮಿಂಚಿದ್ದಾರೆ. ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ 'ಕೋಬ್ರಾ' ಚಿತ್ರಕ್ಕೆ ಕತ್ತರಿ ಹಾಕಲಾಗಿದೆ. ಮೊದಲ ದಿನವೇ ಚಿತ್ರ 18 ಕೋಟಿ ರೂ. ಕಲೆಕ್ಷನ್ ಮಾಡಿದೆ.

  ಆಕ್ಷನ್ ಥ್ರಿಲ್ಲರ್ 'ಕೋಬ್ರಾ' ಚಿತ್ರದಲ್ಲಿ ವಿಕ್ರಂ ಒಂದಲ್ಲ ಎರಡಲ್ಲ 10 ವಿಭಿನ್ನ ಗೆಟಪ್‌ಗಳಲ್ಲಿ ದರ್ಶನ ಕೊಟ್ಟಿದ್ದಾರೆ. 3 ವರ್ಷ ತಡವಾಗಿ ಈ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದೆ. ಗಣೇಶ ಹಬ್ಬದ ಸಂಭ್ರಮದಲ್ಲಿ ಬುಧವಾರವೇ ಸಿನಿಮಾ ರಿಲೀಸ್ ಆಗಿದ್ದು, ತೆಲುಗಿಗೂ ಡಬ್ ಆಗಿ ತೆರೆಗಪ್ಪಳಿಸಿದೆ. ಸಿನಿಮಾ ಚೆನ್ನಾಗಿದ್ದರೂ ಎಡಿಟಿಂಗ್ ಸರಿಯಾಗಿ ಇಲ್ಲ ಎಂದು ಕೆಲವರು ಬೇರಸ ವ್ಯಕ್ತಪಡಿಸುತ್ತಿದ್ದಾರೆ. ಇದೇ ಕಾರಣಕ್ಕೆ ಒಳ್ಳೆ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಹಿನ್ನಡೆ ಅನುಭವಿಸುತ್ತಿದೆ ಎಂದು ವಿಮರ್ಶಕರು ಕೂಡ ಹೇಳಿದ್ದರು. ಇದೀಗ 'ಕೋಬ್ರಾ' ಚಿತ್ರವನ್ನು 20 ನಿಮಿಷ ಟ್ರಿಮ್ ಮಾಡಲಾಗಿದೆ.

  ತಮಿಳಿನಲ್ಲಿ 'ಕೆಜಿಎಫ್' ಮಾಡುತ್ತಿದ್ದೇನೆ, ಸಿನಿಮಾಕ್ಕೆ ಆಸ್ಕರ್ ಗ್ಯಾರೆಂಟಿ: ವಿಕ್ರಂ ಘೋಷಣೆತಮಿಳಿನಲ್ಲಿ 'ಕೆಜಿಎಫ್' ಮಾಡುತ್ತಿದ್ದೇನೆ, ಸಿನಿಮಾಕ್ಕೆ ಆಸ್ಕರ್ ಗ್ಯಾರೆಂಟಿ: ವಿಕ್ರಂ ಘೋಷಣೆ

  ಎರಡು ಗಂಟೆಗಿಂತ ಜಾಸ್ತಿ ಪ್ರೇಕ್ಷಕರನ್ನು ಥಿಯೇಟರ್‌ನಲ್ಲಿ ಕೂರಿಸಿಕೊಳ್ಳುವುದು ಸವಾಲಿನ ಕೆಲಸ. ಎಷ್ಟೇ ದೊಡ್ಡ ಬಜೆಟ್ ಸಿನಿಮಾ ಆದರೂ ಧಮ್ ಇಲ್ಲ ಅಂದರೆ ಸಿನಿಮಾ ನೋಡಿಸಿಕೊಂಡು ಹೋಗುವುದು ಕಷ್ಟ. ಇತ್ತೀಚೆಗೆ ಎರಡು ಮುಕ್ಕಾಲು ಗಂಟೆ ಕಾಲಾವಧಿಯ ಸಿನಿಮಾಗಳು ಬರ್ತಿವೆ. ಅದಕ್ಕೆ ರಾಜಮೌಳಿ ನಿರ್ದೇಶನದ 'RRR' ಬೆಸ್ಟ್ ಎಕ್ಸಾಂಪಲ್. 'ಕೋಬ್ರಾ' ಸಿನಿಮಾ ಬರೋಬ್ಬರಿ 3 ಗಂಟೆ 3 ನಿಮಿಷ ಕಾಲಾವಧಿ ಇದೆ. ಪ್ರೇಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಚಿತ್ರತಂಡ 20 ನಿಮಿಷ ಕತ್ತರಿಸಿದೆ. ಈ ಬಗ್ಗೆ ಮಾಹಿತಿಯನ್ನು ನೀಡಿದೆ.

  ನಾಳೆ(ಆಗಸ್ಟ್ 02) 'ಕೋಬ್ರಾ' ಸಿನಿಮಾ ಎಡಿಟೆಡ್ ವರ್ಷನ್ ಪ್ರದರ್ಶನವಾಗಲಿದೆ. ಇನ್ನು ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಅದೇ ಕಾರಣಕ್ಕೆ ಚಿತ್ರತಂಡ ಕಾಲಾವಧಿ ತಗ್ಗಿಸುವ ಪ್ರಯತ್ನವನ್ನು ಮಾಡಿದೆ. ಒರಿಸ್ಸಾ ಮುಖ್ಯಮಂತ್ರಿ, ಸ್ಕಾಟ್ಲೆಂಡ್ ಯುವರಾಜ, ರಷ್ಯಾದಲ್ಲಿ ಒಬ್ಬ ಮಂತ್ರಿ ಈ ಸಾಲು ಸಾಲಾಗಿ ಪ್ರಮುಖ ನಾಯಕರ ಹತ್ಯೆ ನಡೆಯುತ್ತದೆ. ಈ ಹತ್ಯೆಗಳ ಬಗ್ಗೆ ತನಿಖೆ ನಡೆಸುತ್ತಿರುವ ಟರ್ಕಿಷ್ ಇಂಟರ್‌ಪೋಲ್ ಅಧಿಕಾರಿ ಅಸ್ಲನ್ (ಇರ್ಫಾನ್ ಪಠಾಣ್)ಗೆ ಈ ಕೇಸ್ ದೊಡ್ಡ ತಲೆ ನೋವಾಗಿ ಪರಿಣಮಿಸುತ್ತದೆ. ಚೆನ್ನೈನ ಕ್ರಿಮಿಲಾಲಿಜಿ ಸ್ಟೂಡೆಂಟ್ ಜೂಡಿ (ಮೀನಾಕ್ಷೀ ಗೋವಿಂದ್ ರಾಜನ್) ಸಹಾಯದಿಂದ ಕೋಬ್ರಾ ಈ ಕೊಲೆಗಳನ್ನು ಮಾಡುತ್ತಿದ್ದಾನೆ ಎನ್ನುವುದು ಗೊತ್ತಾಗುತ್ತದೆ. ಆದರೆ ಈ ಕೋಬ್ರಾ ಯಾರು ಅನ್ನುವುದು ಯಕ್ಷ ಪ್ರಶ್ನೆಯಾಗುತ್ತದೆ. ಅಸ್ಲನ್ ಚೆನ್ನೈಗೆ ಬಂದು ಇಲ್ಲಿನ ಲೋಕಲ್ ಪೊಲೀಸರ ಸಹಾಯದಿಂದ ತನಿಖೆ ಶುರು ಮಾಡುತ್ತಾನೆ.

  Chiyaan Vikram Starrer Cobra Movie Trimmed by 20 Minutes

  ಅಸ್ಲನ್ ತನಿಖೆಯಲ್ಲಿ ಆ ಕೋಬ್ರಾ ಒಬ್ಬ ಗಣಿತಶಾಸ್ತ್ರಜ್ಞ ಅನ್ನುವುದು ಗೊತ್ತಾಗುತ್ತದೆ. ಹಾಗಾಗಿ ಗಣಿತ ಮಾಸ್ಟರ್ ಮದಿ (ವಿಕ್ರಮ್) ಮೇಲೆ ಅನುಮಾನ ಶುರುವಾಗುತ್ತದೆ. ಅಷ್ಟಕ್ಕೂ ಈ ಕೋಬ್ರಾ ಹಾಗೂ ಮದಿ ಇಬ್ಬರೂ ಒಬ್ಬರೇನಾ? ಅದೇ ನಿಜವಾಗಿದ್ದರೆ ಆತ ಈ ಕೊಲೆಗಳನ್ನೆಲ್ಲಾ ಯಾಕೆ ಮಾಡ್ತಿದ್ದಾನೆ .? ಹತ್ಯೆಗೊಳಗಾದವರಿಗೂ ಮಿಲೇನಿಯರ್ ರಿಷಿ (ರೋಷನ್ ಮ್ಯಾಥ್ಯೂ)ಗೂ ಇರುವ ನಂಟು ಏನು? ಮದಿಯನ್ನು ಪ್ರೀತಿಸುತ್ತಿರುವ ಭಾವನಾ (ಶ್ರೀನಿಧಿ ಶೆಟ್ಟಿ) ಕಥೆಯೇನು? ಕೊನೆಗೂ ಮದಿಯನ್ನು ಪೊಲೀಸರು ಬಂಧಿಸುತ್ತಾರಾ? ಕೋಬ್ರಾ ತಪ್ಪಿಸಿಕೊಳ್ತಾನಾ ? ಅನ್ನುವ ಪ್ರಶ್ನೆಗಳಿಗೆ ಉತ್ತರ ಬೇಕು ಅಂದರೆ ನೀವು ಸಿನಿಮಾ ನೋಡಲೇಬೇಕು.

  English summary
  Chiyaan Vikram Starrer Cobra Movie Trimmed by 20 Minutes. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X