For Quick Alerts
  ALLOW NOTIFICATIONS  
  For Daily Alerts

  "ಕಾಲಿವುಡ್ ಹೆಮ್ಮೆ ವಿಕ್ರಮ್": ಚಿಯಾನ್ ವಿಕ್ರಮ್ ನಿವೃತ್ತಿ ವದಂತಿ ಬೆನ್ನಲೆ ಫ್ಯಾನ್ಸ್ ಟ್ರೆಂಡ್

  |

  ಕಾಲಿವುಡ್ ನ ಖ್ಯಾತ ನಟ ಚಿಯಾನ್ ವಿಕ್ರಮ್ ಲಾಕ್ ಡೌನ್ ನಡುವೆಯೂ ಸುದ್ದಿಯಲ್ಲಿದ್ದಾರೆ. ವಿಕ್ರಮ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಿಕ್ರಮ್ ಕಾಲಿವುಡ್ ನ ಹೆಮ್ಮೆ ಎಂದು ಟ್ರೆಂಡ್ ಮಾಡುತ್ತಿದ್ದಾರೆ. ಅಂದ್ಹಾಗೆ ವಿಕ್ರಮ್ ಅಭಿಮಾನಿಗಳು ದಿಢೀರನೆ ರೊಚ್ಚಿಗೇಳಲು ಕಾರಣವಾಗಿದ್ದು ವಿಕ್ರಮ್ ನಿವೃತ್ತಿಯ ವದಂತಿ.

  ಹೌದು, ಇತ್ತೀಚಿಗೆ ಚಿಯಾನ್ ವಿಕ್ರಮ್ ಸಿನಿಮಾದಿಂದ ನಿವೃತ್ತಿ ಹೊಂದುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ವಿಕ್ರಮ್ ಬಳಿ ಸದ್ಯ ಇರುವ ಸಿನಿಮಾಗಳು ಮುಗಿದ ನಂತರ ವಿಕ್ರಮ್ ಮತ್ತೆ ನಟಿಸುವುದಿಲ್ಲ, ಸಿನಿಮಾರಂಗದಿಂದ ದೂರ ಆಗುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಇದರ ಬೆನ್ನಲೆ ಅಭಿಮಾನಿಗಳೀಗ "ಕಾಲಿವುಡ್ ಹೆಮ್ಮೆ ವಿಕ್ರಮ್" ಎಂದು ಟ್ರೆಂಡ್ ಮಾಡುತ್ತಿದ್ದಾರೆ. ಮುಂದೆ ಓದಿ..

  ನಿವೃತ್ತಿ ಬಗ್ಗೆ ವಿಕ್ರಮ್ ಪ್ರತಿಕ್ರಿಯೆ

  ನಿವೃತ್ತಿ ಬಗ್ಗೆ ವಿಕ್ರಮ್ ಪ್ರತಿಕ್ರಿಯೆ

  ವಿಕ್ರಮ್ ಬಳಿ ಸದ್ಯ ಇರುವ ಸಿನಿಮಾಗಳು ಮುಗಿದ ಮೇಲೆ ಮತ್ತೆ ಬಣ್ಣಹಚ್ಚಲ್ಲ, ನಿವೃತ್ತಿ ಹೊಂದುತ್ತಾರೆ, ಎನ್ನುವ ಸುದ್ದಿ ವೈರಲ್ ಆಗುತ್ತಿದ್ದಂತೆ ಸ್ವತಹ ಚಿಯಾನ್ ಪ್ರತಿಕ್ರಿಯೆ ನೀಡಿದ್ದರು. ನಿವೃತ್ತಿ ವಿಚಾರವನ್ನು ತಳ್ಳಿಹಾಕಿದ್ದ ನಟ ಇದೆಲ್ಲ ಸುಳ್ಳು ಸುದ್ದಿ, ನಾನು ಅಭಿನಯಿಸುತ್ತೇನೆ ಎಂದು ಹೇಳುವ ಮೂಲಕ ಗಾಳಿ ಸುದ್ದಿಗೆ ತೆರೆ ಎಳೆದಿದ್ದರು.

  VIKRAMPrideOfKwood ಟ್ರೆಂಡ್

  VIKRAMPrideOfKwood ಟ್ರೆಂಡ್

  ವಿಕ್ರಮ್ ಹೇಳಿಕೆ ನಂತರ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ VIKRAMPrideOfKwood ಎಂದು ಹ್ಯಾಟ್ ಟ್ಯಾಕ್ ಹಾಕಿ ಟ್ರೆಂಡ್ ಮಾಡುತ್ತಿದ್ದಾರೆ. ಜೊತೆಗೆ ಅಭಿಮಾನಿಗಳು "ವಿಕ್ರಮ್ ಯಾವಾಗಲು ಕಾಲಿವುಡ್ ನ ಹೆಮ್ಮೆಯ ನಟ. ಅವರು ಯಾವಾಗಲು ನಿವೃತ್ತಿ ಹೊಂದಲ್ಲ". ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕೇವಲ ವಿಕ್ರಮ್ ಅಭಿಮಾನಿಗಳ ಮಾತ್ರವಲ್ಲದೆ ತಮಿಳಿನ ಉಳಿದ ಸ್ಟಾರ್ಸ್ ಅಭಿಮಾನಿಗಳು ಸಹ ಅಭಿಯಾನಕ್ಕೆ ಸಾಥ್ ನೀಡಿರುವುದು ವಿಶೇಷ.

  ಕೋಬ್ರಾ ಸಿನಿಮಾದಲ್ಲಿ ವಿಕ್ರಮ್ ಬ್ಯುಸಿ

  ಕೋಬ್ರಾ ಸಿನಿಮಾದಲ್ಲಿ ವಿಕ್ರಮ್ ಬ್ಯುಸಿ

  ವಿಕ್ರಮ್ ಸದ್ಯ ಕೋಬ್ರಾ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಅಜಯ್ ಜ್ಞಾನಮುತ್ತು ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾವಿದು. ಚಿತ್ರದಲ್ಲಿ ವಿಕ್ರಮ್ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೆ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

  ಮಣಿರತ್ನಂ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ

  ಮಣಿರತ್ನಂ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ

  ಕೋಬ್ರಾ ಸಿನಿಮಾ ಜೊತೆಗೆ ಮಣಿರತ್ನಂ ನಿರ್ದೇಶನದ ಸಿನಿಮಾದಲ್ಲಿ ವಿಕ್ರಮ್ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ವಿಕ್ರಮ್ ಚೋಳ ರಾಜ ಆದಿತ್ಯ ಕರಿಕಾಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ ತ್ರಿಷಾ ಸೇರಿದಂತೆ ದೊಡ್ಡ ಕಲಾವಿದರ ಬಳಗವೆ ಇದೆ. ಜೊತೆಗೆ ವಿಕ್ರಮ್ ಇನ್ನೂ ಎರಡು ಸಿನಿಮಾಗಳಿವೆ.

  English summary
  Tamil Actor Chiyan Vikram Fans trend VikramprideofKwood on Twitter after rumours his retirment.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X