Just In
Don't Miss!
- News
ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 7,865ಕ್ಕೆ ಇಳಿಕೆ
- Automobiles
2021ರ ಜೀಪ್ ಕಂಪಾಸ್ ಫೇಸ್ಲಿಫ್ಟ್ ಎಸ್ಯುವಿ ವೆರಿಯೆಂಟ್ ಮಾಹಿತಿ ಬಹಿರಂಗ
- Sports
ಸಯ್ಯದ್ ಮುಷ್ತಾಕ್ ಅಲಿ ಟಿ20: ಕ್ವಾರ್ಟರ್ ಫೈನಲ್ಗೇರಿದ ಕರ್ನಾಟಕ
- Education
SBI PO Mains Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದರ್ಬಾರ್ 'ನಿಜವಾದ ಕಲೆಕ್ಷನ್' ಬಹಿರಂಗ: ಕರ್ನಾಟಕದಲ್ಲಿ ಗಳಿಸಿದ್ದೆಷ್ಟು?
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ದರ್ಬಾರ್ ಸಿನಿಮಾ ಮೊದಲ ದಿನ ಭರ್ಜರಿ ಒಪನಿಂಗ್ ಮಾಡಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಿನಿಮಾ ಚೆನ್ನಾಗಿದೆ ಎಂದು ಹೇಳುತ್ತಿರುವವರ ಸಂಖ್ಯೆಯೇ ಹೆಚ್ಚಿದೆ.
ಸಿನಿಮಾ ರೆಸ್ಪಾನ್ಸ್ ಪಕ್ಕಕ್ಕಿಟ್ಟು ಬಾಕ್ಸ್ ಆಫೀಸ್ ವರದಿ ನೋಡಿದ್ರೆ ರಜನಿ ದರ್ಬಾರ್ ಮೊದಲ ದಿನ ಸಕ್ಸಸ್ ಕಂಡಿದೆ. ನಿನ್ನೆಯವರೆಗೂ ದರ್ಬಾರ್ ಮೊದಲ ದಿನದ ಗಳಿಕೆ ಬಗ್ಗೆ ಸ್ಪಷ್ಟ ಮಾಹಿತಿ ಇರಲಿಲ್ಲ. ಚೆನ್ನೈ, ಯುಎಸ್ ಎ, ಹಿಂದಿ ವರ್ಷನ್ ಹೀಗೆ ಪ್ರಾದೇಶಿಕವಾರು ಗಳಿಕೆ ಮಾತ್ರ ಲೆಕ್ಕಕ್ಕೆ ಸಿಕ್ಕಿತ್ತು.
Darbar Review: ಅದ್ಭುತವಂತೂ ಅಲ್ಲ, ಇಷ್ಟ ಆಗುತ್ತೆ ರಜನಿ 'ಪೊಲೀಸ್ ಸ್ಟೋರಿ'
ಇದೀಗ, ಪ್ರಪಂಚದಾದ್ಯಂತ ದರ್ಬಾರ್ ಸಿನಿಮಾ ಗಳಿಸಿದ್ದೆಷ್ಟು? ಭಾರತದಲ್ಲಿ ರಜನಿ ಚಿತ್ರ ಕಲೆಕ್ಷನ್ ಎಷ್ಟು? ಕರ್ನಾಟಕದಲ್ಲಿ ತಲೈವಾ ಸಿನಿಮಾದ ಬಿಸಿನೆಸ್ ಹೇಗಿದೆ ಎಂಬುದರ ಕಂಪ್ಲೀಟ್ ವಿವರ ಇಲ್ಲಿದೆ...ಮುಂದೆ ಓದಿ...

ತಮಿಳುನಾಡಿನಲ್ಲಿ ದರ್ಬಾರ್ ಗಳಿಕೆ?
ತಮಿಳುನಾಡಿನಲ್ಲಿ ರಜನಿಕಾಂತ್ ದರ್ಬಾರ್ ಗೆ ಮೊದಲ ದಿನ ದೊಡ್ಡ ಓಪನಿಂಗ್ ಸಿಕ್ಕಿದೆ. ಖ್ಯಾತ ಚಿತ್ರ ವಿಶ್ಲೇಷಕ ರಮೇಶ್ ಬಾಲ ಟ್ವೀಟ್ ಮಾಡಿರುವ ಪ್ರಕಾರ, ತಮಿಳುನಾಡಿನಲ್ಲಿ ಮೊದಲ ದಿನ ದರ್ಬಾರ್ ಸಿನಿಮಾ 18.3 ಕೋಟಿ ಗಳಿಸಿದೆ. ಚೆನ್ನೈ ನಗರದಲ್ಲಿ ಮಾತ್ರ 2.37 ಕೋಟಿ ಬಿಸಿನೆಸ್ ಮಾಡಿತ್ತು.

ಆಂಧ್ರ-ತೆಲಂಗಾಣದಲ್ಲಿ ರಜನಿ ಕಲೆಕ್ಷನ್?
ದರ್ಬಾರ್ ಸಿನಿಮಾ ತಮಿಳಿನಲ್ಲಿ ಮಾತ್ರವಲ್ಲ, ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿತ್ತು. ಆಂಧ್ರ ಮತ್ತು ತೆಲಂಗಾಣದಲ್ಲಿ ರಜನಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ದರ್ಬಾರ್ ಸಿನಿಮಾ ಮೊದಲ ದಿನ 7.5 ಕೋಟಿ ಬಾಚಿಕೊಂಡಿದೆ.
ಮೊದಲ ದಿನವೇ ರಜನಿಕಾಂತ್ ದರ್ಬಾರ್ ಗೆ ಆಘಾತ!

ಕರ್ನಾಟಕದಲ್ಲಿ ಎಷ್ಟು ಗಳಿಸಿದೆ
ಇನ್ನು ಕರ್ನಾಟಕದಲ್ಲಿ ಬಹುದೊಡ್ಡ ರಿಲೀಸ್ ಕಂಡಿದ್ದ ದರ್ಬಾರ್ ಸಿನಿಮಾ ಕರ್ನಾಟಕ ಮತ್ತು ಕೇರಳದಲ್ಲಿ ಸೇರಿ ಒಟ್ಟು 8 ಕೋಟಿ ಗಳಿಸಿದೆಯಂತೆ. ಇದರಲ್ಲಿ ಕರ್ನಾಟಕದ ಗಳಿಕೆ ಹೆಚ್ಚಿದೆ. ಒಟ್ಟಾರೆ ದಕ್ಷಿಣ ಭಾರತದಲ್ಲಿ 33.5 ಕೋಟಿ ಗಳಿಸಿದ್ದು, ಇತರೆ ರಾಜ್ಯಗಳಲ್ಲಿ 1.5 ಕೋಟಿ ಬಂದಿದೆ ಎಂಬ ಮಾಹಿತಿ ಇದೆ. ಅಲ್ಲಿಗೆ ಭಾರತದಲ್ಲಿ ದರ್ಬಾರ್ ಗಳಿಸಿದ್ದು 35.3 ಕೋಟಿ.
'ದರ್ಬಾರ್' ಕಲೆಕ್ಷನ್: 'ಸರ್ಕಾರ್'-'2.0' ಸಿನಿಮಾ ರೆಕಾರ್ಡ್ ಬ್ರೇಕ್ ಮಾಡುವಲ್ಲಿ 'ದರ್ಬಾರ್' ವಿಫಲ

ವಿದೇಶದಲ್ಲೂ ದರ್ಬಾರ್
ವಿಶ್ವದಾದ್ಯಂತ ದರ್ಬಾರ್ ಸಿನಿಮಾ ತೆರೆಕಂಡಿತ್ತು. ಭಾರತದಲ್ಲೂ ಒಳ್ಳೆಯ ಗಳಿಕೆ ಕಂಡಿರುವ ದರ್ಬಾರ್, ವಿದೇಶದಲ್ಲೂ ಮೋಡಿ ಮಾಡಿದೆ. ಯುಎಸ್ ನಲ್ಲಿ ಮಾತ್ರ ಎರಡು ದಿನಕ್ಕೆ 5 ಕೋಟಿ ಗಳಿಕೆಯಾಗಿದೆಯಂತೆ. (ಪ್ರೀಮಿಯರ್ ಶೋ ಮತ್ತು ಮೊದಲ ದಿನ) ಒಟ್ಟಾರೆ ಹೊರದೇಶಗಳಲ್ಲಿ ಮೊದಲ ದಿನ ಸುಮಾರು 14.5 ಕೋಟಿವರೆಗೂ ಬಿಸಿನೆಸ್ ಆಗಿದೆ ಎಂಬ ವರದಿಯಾಗಿದೆ.
ದರ್ಬಾರ್ ಸಿನಿಮಾ ಈ ಪೊಲೀಸ್ ಅಧಿಕಾರಿಯ ಜೀವನಕಥೆ!

ವರ್ಲ್ಡ್ ವೈಡ್ ಗಳಿಕೆ ಎಷ್ಟಾಯಿತು?
ತಮಿಳುನಾಡು, ಆಂಧ್ರ-ತೆಲಂಗಾಣ, ಕರ್ನಾಟಕ, ಕೇರಳ ಮತ್ತು ಇತರೆ ರಾಜ್ಯಗಳು ಹಾಗೂ ವಿದೇಶ ಎಲ್ಲವೂ ಸೇರಿದ ದರ್ಬಾರ್ ಸಿನಿಮಾ ಮೊದಲ ದಿನ 49.8 ಕೋಟಿ ಆಗಿದೆಯಂತೆ. ಇದಕ್ಕೂ ಮುಂಚೆ ತೆರೆಕಂಡಿದ್ದ ಪೇಟಾ ಸಿನಿಮಾ ಮೊದಲ 33 ಕೋಟಿ ಗಳಿಸಿತ್ತು. 2.0 ಸಿನಿಮಾ ಸುಮಾರು 70 ಕೋಟಿ ಮೊದಲ ದಿನ ಕಲೆಕ್ಷನ್ ಮಾಡಿತ್ತು ಎನ್ನಲಾಗಿದೆ.