ಅತಿ ಹೆಚ್ಚು ಸ್ಕ್ರೀನ್ ನಲ್ಲಿ ದರ್ಬಾರ್ ಬಿಡುಗಡೆ: ಬಾಹುಬಲಿ ದಾಖಲೆ ಮುರಿತಾ?
ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿರುವ ದರ್ಬಾರ್ ಸಿನಿಮಾ ಜನವರಿ 9 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಎ ಆರ್ ಮುರುಗದಾಸ್ ನಿರ್ದೇಶನದ ಈ ಚಿತ್ರದಲ್ಲಿ ರಜನಿ ಪೊಲೀಸ್ ಆಫೀಸರ್ ಆಗಿ ಅಭಿನಯಿಸಿದ್ದಾರೆ.
ಎರಡು ದಶಕದ ಬಳಿಕ ರಜನಿಕಾಂತ್ ಪೊಲೀಸ್ ಬಟ್ಟೆ ತೊಟ್ಟಿದ್ದು, ಸಹಜವಾಗಿ ನಿರೀಕ್ಷೆ ಹೆಚ್ಚಿಸಿದೆ. ಅದಕ್ಕೆ ತಕ್ಕಂತೆ ಟ್ರೈಲರ್, ಹಾಡುಗಳು ಕೂಡ ಸಾಥ್ ನೀಡಿದೆ. ಬಿಡುಗಡೆ ವಿಚಾರದಲ್ಲಿ ದರ್ಬಾರ್ ಸಿನಿಮಾ ವಿಶೇಷವಾದ ದಾಖಲೆ ಬರೆದಿದೆ. ಅತಿ ಹೆಚ್ಚು ಸ್ಕ್ರೀನ್ ನಲ್ಲಿ ದರ್ಬಾರ್ ತೆರೆಕಾಣುತ್ತಿದೆ. ಮುಂದೆ ಓದಿ....

7000 ಸಾವಿರ ಸ್ಕ್ರೀನ್ ನಲ್ಲಿ ದರ್ಬಾರ್
ಇದೇ ಮೊದಲ ಸಲ ರಜನಿಕಾಂತ್ ಸಿನಿಮಾ 7 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ತೆರೆಕಾಣುತ್ತಿದೆ. ಇದಕ್ಕೂ ಮೊದಲು ಯಾವ ಚಿತ್ರವೂ ಇಷ್ಟು ದೊಡ್ಡ ಮಟ್ಟದ ಬಿಡುಗಡೆ ಕಂಡಿರಲಿಲ್ಲ. ಜಗತ್ತಿನಾದ್ಯಂತ 7 ಸಾವಿರ ಸ್ಕ್ರೀನ್, ನಮ್ಮ ದೇಶದಲ್ಲಿ 4 ಸಾವಿರ ಸ್ಕ್ರೀನ್ ಗಳಲ್ಲಿ ಬರ್ತಿದೆ.

ಬೆಂಗಳೂರಿನಲ್ಲಿ ಎಷ್ಟು ಶೋ ಇದೆ
ತಮಿಳುನಾಡಿನಲ್ಲಿ ಮೊದಲ ದಿನ ಸುಮಾರು 800 ರಿಂದ 900 ಶೋಗಳು ದರ್ಬಾರ್ ಸಿನಿಮಾ ಪ್ರದರ್ಶಿಸಲಿದೆ. ಇನ್ನು ಬೆಂಗಳೂರಿನಲ್ಲಿ ರಜನಿ ಚಿತ್ರಕ್ಕೆ ಒಳ್ಳೆಯ ಸ್ವಾಗತ ಮಾಡುತ್ತಿದ್ದು, 450 ರಿಂದ 550 ಶೋಗಳು ಮೊದಲ ದಿನ ನೀಡಿದೆ ಎನ್ನಲಾಗಿದೆ.

ಬಾಹುಬಲಿ ದಾಖಲೆ ಹಿಂದಿಕ್ಕಿಲ್ಲ
ಈ ಹಿಂದಿ ದಾಖಲೆ ಬಾಹುಬಲಿ ಸಿನಿಮಾದ ಹೆಸರಿನಲ್ಲಿದೆ. ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಸುಮಾರು 9 ಸಾವಿರ ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿತ್ತು. ಭಾರತದ ಸಿನಿಮಾವೊಂದು ಇಷ್ಟೊ ದೊಡ್ಡ ಮಟ್ಟದಲ್ಲಿ ತೆರೆಕಂಡಿರುವ ದಾಖಲೆ ಪ್ರಭಾಸ್ ಹೆಸರಿನಲ್ಲಿದೆ.

ಮೊದಲ ದಿನದ ಗಳಿಕೆ ಎಷ್ಟಾಗಬಹುದು?
ಸುಮಾರು 7 ಸಾವಿರ ಸ್ಕ್ರೀನ್ ಗಳಲ್ಲಿ ದರ್ಬಾರ್ ಬಿಡುಗಡೆಯಾಗುತ್ತಿರುವುದು ಬಾಕ್ಸ್ ಆಫೀಸ್ ಲೆಕ್ಕಾಚಾರದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಮೊದಲ ದಿನದ ಗಳಿಕೆ ಎಷ್ಟಾಗಬಹುದು ಎಂಬ ಚರ್ಚೆ ನಡೆಯುತ್ತಿದೆ.


Click it and Unblock the Notifications











