For Quick Alerts
  ALLOW NOTIFICATIONS  
  For Daily Alerts

  ಧನುಶ್, ರಾಣಾ ಮತ್ತು ರಕ್ಷಿತ್ ಶೆಟ್ಟಿ ಲಾಂಚ್ ಮಾಡಲಿರುವ ಹೊಸ ಸಿನಿಮಾ ಯಾವುದು?

  |

  ರಕ್ಷಿತ್ ಶೆಟ್ಟಿ ನಟನೆಯ 'ಚಾರ್ಲಿ-777' ಸಿನಿಮಾ ಚಿತ್ರೀಕರಣ ಬಹುತೇಕ ಮುಗಿದಿದೆ. ಚಾರ್ಲಿ ಮುಗಿಯುತ್ತಿದ್ದಂತೆ 'ಪುಣ್ಯಕೋಟಿ', 'ಸಪ್ತಸಾಗರದಾಚೆ' ಹಾಗೂ 'ರಿಚ್ಚಿ' ಹೆಸರಿನಲ್ಲಿ ಗುರುತಿಸಿಕೊಂಡಿರುವ ಹೊಸ ಪ್ರಾಜೆಕ್ಟ್ ಸಾಲಿನಲ್ಲಿದೆ.

  ನಿಮಗೆಲ್ಲರಿಗೂ ಬಿಗ್ ಸುದ್ದಿ ಕಾದಿದೆ ಅಂದ್ರು ರಕ್ಷಿತ್ ಶೆಟ್ಟಿ | Rakshit Shetty | Rana | Dhanush

  ನವೆಂಬರ್ 6 ರಂದು ಬೆಳಗ್ಗೆ 7.30ಕ್ಕೆ 'ಚಾರ್ಲಿ-777' ಸಿನಿಮಾ ಕುರಿತಂತೆ ಸರ್ಪ್ರೈಸ್ ನೀಡಲಿದ್ದು, ಪ್ರಮುಖ ಘೋಷಣೆಯೊಂದು ಮಾಡಲಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ. ಇದರ ಜೊತೆ ತಮಿಳು ನಟ ಧನುಶ್, ರಾಣಾ ದಗ್ಗುಬಾಟಿ ಹಾಗೂ ರಕ್ಷಿತ್ ಶೆಟ್ಟಿ ಅವರಿಂದ ಹೊಸ ಸಿನಿಮಾದ ಕುರಿತು ಪ್ರಕಟಣೆ ಇದೆ ಎನ್ನುವ ಮತ್ತೊಂದು ಪೋಸ್ಟರ್ ಸಹ ಹರಿದಾಡುತ್ತಿದೆ. ಏನಿದು? ಮುಂದೆ ಓದಿ...

  ಹೊಸ ಸಿನಿಮಾ ಘೋಷಣೆ

  ಹೊಸ ಸಿನಿಮಾ ಘೋಷಣೆ

  ಎಸ್‌ಆರ್‌ಟಿ ಎಂಟರ್‌ಟೈನ್‌ಮೆಂಟ್ ಮತ್ತು ಮಧುರಾ ಫಿಲಂ ಫ್ಯಾಕ್ಟರಿ ನಿರ್ಮಾಣ ಸಂಸ್ಥೆಯಲ್ಲಿ ತಯಾರಾಗುತ್ತಿರುವ ಮೊದಲ ಚಿತ್ರದ ಕುರಿತು ಧನುಶ್, ರಕ್ಷಿತ್ ಶೆಟ್ಟಿ ಹಾಗು ರಾಣಾ ಅವರು ಘೋಷಣೆ ಮಾಡಲಿದ್ದು, ಚಿತ್ರದ ಫಸ್ಟ್ ಲುಕ್ ಸಹ ಬಿಡುಗಡೆ ಮಾಡಲಿದ್ದಾರೆ.

  ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಕಾದಿದೆ ಬಿಗ್ ಸರ್ಪ್ರೈಸ್; ಏನದು?

  ಯಾರು ಹೀರೋ?

  ಯಾರು ಹೀರೋ?

  ಈ ಚಿತ್ರದ ಹೆಸರೇನು, ಯಾವೆಲ್ಲ ಕಲಾವಿದರು ಈ ಸಿನಿಮಾದಲ್ಲಿ ಇರಲಿದ್ದಾರೆ ಎಂಬ ಕುತೂಹಲ ಸೃಷ್ಟಿಯಾಗಿದೆ. ಸದ್ಯದ ಮಾಹಿತಿ ಪ್ರಕಾರ ಬಾಬಿ ಸಿಂಹ ಪ್ರಮುಖ ಪಾತ್ರ ಮಾಡಲಿದ್ದಾರೆ. ಜೊತೆಗೆ ನಟಿ ಕಾಶ್ಮೀರಾ ಸಹ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ಮೂರು ಭಾಷೆಯಲ್ಲಿ ಸಿನಿಮಾ

  ಮೂರು ಭಾಷೆಯಲ್ಲಿ ಸಿನಿಮಾ

  ಅಂದ್ಹಾಗೆ, ಈ ಚಿತ್ರ ಮೂರು ಭಾಷೆಯಲ್ಲಿ ಬಿಡುಗಡೆಯಾಗಲಿದೆ. ತಮಿಳುನಲ್ಲಿ ನಟ ಧನುಶ್ ಫಸ್ಟ್ ಲುಕ್ ರಿಲೀಸ್ ಮಾಡಲಿದ್ದಾರೆ. ತೆಲುಗಿನಲ್ಲಿ ರಾಣಾ ದಗ್ಗುಬಾಟಿ ಹಾಗೂ ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ಫಸ್ಟ್ ಲುಕ್ ಅನಾವರಣಗೊಳಿಸಲಿದ್ದಾರೆ.

  ಇಂಡಿಯನ್ 2 ಚಿತ್ರದಲ್ಲಿ ಬಾಬಿ

  ಇಂಡಿಯನ್ 2 ಚಿತ್ರದಲ್ಲಿ ಬಾಬಿ

  ಬಾಬಿ ಸಿಂಹ ತಮಿಳು ಮತ್ತು ತೆಲುಗಿನಲ್ಲಿ ಬೇಡಿಕೆಯ ನಟ. ಸ್ಟಾರ್ ನಟರ ಚಿತ್ರಗಳಲ್ಲಿ ಪ್ರಮುಖ ಪಾತ್ರವಹಿಸುವ ಸಿಂಹ, ಸೋಲೋ ಆಗಿಯೂ ಸಿನಿಮಾಗಳನ್ನು ಮಾಡಿದ್ದಾರೆ. ಪ್ರಸ್ತುತ, ಕಮಲ್ ಹಾಸನ್ ನಟಿಸುತ್ತಿರುವ ಇಂಡಿಯನ್ 2 ಚಿತ್ರದಲ್ಲಿ ನಟಿಸುತ್ತಿದ್ದಾರೆ.

  English summary
  Top Indian Stars dhanush, Rana Daggubati and rakshit shetty will launch SRTMFF Production No 1 First Look on November 5th, tomorrow at 7 P.M.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X