For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್ ಸ್ಟೈಲ್ ಫಾಲೋ ಮಾಡಿದ ಧನುಶ್

  |

  ಕಾಲಿವುಡ್ ಸ್ಟಾರ್ ನಟ ಧನುಶ್ ಪಾಲಿಗೆ 2019 ಖುಷಿ ಕೊಟ್ಟ ವರ್ಷ. 'ಅಸುರನ್' ಮತ್ತು 'ಎನೈ ನೋಕಿ ಪಾಯೂಮ್ ಥೋಟಾ' ಚಿತ್ರಗಳು ಬಿಡುಗಡೆಯಾಗಿ ಸಕ್ಸಸ್ ಕಂಡಿದ್ದವು. ಇದೀಗ, ಹೊಸ ಸಿನಿಮಾದಲ್ಲಿ ಧನುಶ್ ಬ್ಯುಸಿಯಾಗಿದ್ದಾರೆ.

  ಇನ್ನು ಹೆಸರಿಡದ ಚಿತ್ರದಲ್ಲಿ ಧನುಶ್ ನಟಿಸುತ್ತಿದ್ದು, ಮೇಕಿಂಗ್ ಚಿತ್ರಗಳು ವೈರಲ್ ಆಗಿದೆ. ಕಾರ್ತಿಕ್ ಸುಬ್ಬರಾಜು ಈ ಚಿತ್ರ ನಿರ್ದೇಶನ ಮಾಡುತ್ತಿದ್ದು, ಧನುಶ್ ಅವರ ಸ್ಟೈಲಿಶ್ ಲುಕ್ ಈಗ ಚರ್ಚೆಗೆ ಕಾರಣವಾಗಿದೆ.

  'ಅವನೇ ಶ್ರೀಮನ್ನಾರಾಯಣ' ಟ್ರೈಲರ್ ಕಂಡು 'ಪೇಟಾ' ನಿರ್ದೇಶಕ ಹೇಳಿದ್ದೇನು?'ಅವನೇ ಶ್ರೀಮನ್ನಾರಾಯಣ' ಟ್ರೈಲರ್ ಕಂಡು 'ಪೇಟಾ' ನಿರ್ದೇಶಕ ಹೇಳಿದ್ದೇನು?

  ಉದ್ದನೇಯ ಮೀಸೆ ಬಿಟ್ಟು ಸೂಪರ್ ಸ್ಟಾರ್ ರಜನಿಕಾಂತ್ ಸ್ಟೈಲ್ ನಲ್ಲಿ ಮಿಂಚಿದ್ದಾರೆ. ಈ ಹಿಂದೆ ರಜನಿಕಾಂತ್ 'ಪೇಟಾ' ಸಿನಿಮಾದಲ್ಲಿ ಈ ರೀತಿ ಕಾಣಿಸಿಕೊಂಡಿದ್ದರು. ಪೇಟಾ ಚಿತ್ರದ ಫ್ಲ್ಯಾಶ್ ಬ್ಯಾಕ್ ದೃಶ್ಯದಲ್ಲಿ ರಜನಿ ಕೂಡ ಉದ್ದನೇಯ ಮೀಸೆ ಬಿಟ್ಟಿದ್ದರು. ಈ ಲುಕ್ ವೈರಲ್ ಆಗಿತ್ತು.

  ಇದೀಗ, ಧನುಶ್ ಹೊಸ ಸಿನಿಮಾದಲ್ಲಿ ರಜನಿಯಂತೆ ಮೀಸೆ ಬಿಟ್ಟು ಮಿಂಚಿದ್ದಾರೆ. ಅಲ್ಲಿ ಪೇಟಾ ಚಿತ್ರವನ್ನು ಕೂಡ ಕಾರ್ತಿಕ್ ಸುಬ್ಬರಾಜು ನಿರ್ದೇಶನ ಮಾಡಿದ್ದರು. ಈಗ ಧನುಶ್ ಚಿತ್ರವನ್ನು ಸುಬ್ಬರಾಜು ಅವರೇ ನಿರ್ದೇಶನ ಮಾಡುತ್ತಿದ್ದಾರೆ.

  ಪೇಟಾದಲ್ಲಿ ಮಾಡಿದ್ದ ಕಮಾಲ್ ಈಗ ಧನುಶ್ ಮೂಲಕ ಮಾಡಲು ಹೊರಟಿದ್ದಾರೆ ಕಾರ್ತಿಕ್ ಸುಬ್ಬರಾಜು. ಜನವರಿವೊತ್ತಿಗೆ ಈ ಧನುಶ್ 40ನೇ ಚಿತ್ರದ ಚಿತ್ರೀಕರಣ ಮುಗಿಸಲು ಪ್ಲಾನ್ ಮಾಡಲಾಗಿದೆ. ಇನ್ನುಳಿದಂತೆ ಮಲಯಾಳಂ ಯುವನಟಿ ಐಶ್ವರ್ಯ ಲಕ್ಷ್ಮಿ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

  English summary
  Kollywood Actor Dhanush busy in yet-titled movie with karthik subbaraj. now, dhanush stylish look went viral in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X