For Quick Alerts
  ALLOW NOTIFICATIONS  
  For Daily Alerts

  'ಸಿಂಗಂ' ನಿರ್ದೇಶಕ ಹರಿ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

  |

  ತಮಿಳಿನ ಖ್ಯಾತ ನಿರ್ದೇಶಕ ಹರಿ ಗೋಪಾಲಕೃಷ್ಣ ಅವರ ಆರೋಗ್ಯದಲ್ಲಿ ಏರುಪೇರು ಉಂಟಾದ ಕಾರಣ ಪಳನಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

  ನಿರ್ದೇಶಕ ಹರಿ ಅವರಿಗೆ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಎರಡು ದಿನಗಳಿಂದ ಪಳನಿಯಲ್ಲಿ ನಟ ಅರುಣ್ ವಿಜಯ್ ಜೊತೆ ಹೊಸ ಸಿನಿಮಾದ ಚಿತ್ರೀಕರಣ ಮಾಡುತ್ತಿದ್ದರು.

  ಸಹಾಯ ಮಾಡಿದ್ದ ನಿರ್ದೇಶಕ ಸಾವು: ಕುಟುಂಬಕ್ಕೆ ಆಸರೆಯಾದ ವಿಜಯ್ ಸೇತುಪತಿ

  ಈ ಸಿನಿಮಾದ ಸೆಟ್‌ನಲ್ಲಿ ಓರ್ವ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ. ಇದರ ಬೆನ್ನಲ್ಲೆ ಹರಿ ಅವರಿಗೆ ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡಿತ್ತು. ಮುಂಜಾಗ್ರತೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

  ಕೊರೊನಾ ಪರೀಕ್ಷೆ ಸಹ ಮಾಡಲಾಗಿದ್ದು, ಫಲಿತಾಂಶ ನೆಗಟಿವ್ ಬಂದಿದೆ. ಹರಿ ಅವರ ಆರೋಗ್ಯದ ಕುರಿತು ಮಾಧ್ಯಮ ಪ್ರಕಟಣೆ ಸಹ ಬಿಡುಗಡೆ ಮಾಡಿದ್ದು, ಜ್ವರ ಮತ್ತು ಕೆಮ್ಮು ಇದೆ. ಆದರೆ, ಕೊರೊನಾ ನೆಗಟಿವ್ ಬಂದಿದೆ ಎಂದು ತಿಳಿಸಲಾಗಿದೆ.

  ಹರಿ ಗೋಪಾಲಕೃಷ್ಣ ತಮಿಳಿನಲ್ಲಿ ಹಲವು ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸಾಮಿ, ಕೋವಿಲ್, ಅರುಳ್, ಅಯ್ಯ, ಸಿಂಗಂ, ಸಿಂಗಂ 2, ಸಿಂಗಂ 3, ಪೂಜೈ, ಸಾಮಿ 2 ಸೇರಿದಂತೆ ಹಲವು ಚಿತ್ರಗಳನ್ನು ಡೈರೆಕ್ಟ್ ಮಾಡಿದ್ದಾರೆ. ಸಿಂಗಂ ಸರಣಿ ಮೂಲಕ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದಾರೆ.

  ರಾಷ್ಟ್ರಪ್ರಶಸ್ತಿ ಪುರಸ್ಕೃತ ಖ್ಯಾತ ನಿರ್ದೇಶಕ ಎಸ್.ಪಿ ಜನನಾಥನ್ ನಿಧನ

  ಆಟೋದಲ್ಲಿ ಓಡಾಡುತ್ತಿರುವ ನಟ ಅಜಿತ್ ಸರಳತೆಗೆ ಅಭಿಮಾನಿಗಳು ಫಿದಾ | Filmibeat Kannada

  ಸದ್ಯ ಅರುಣ್ ವಿಜಯ್ ಮತ್ತು ಪ್ರಿಯಾ ಭವಾನಿ ಜೊತೆ ಹೊಸ ಸಿನಿಮಾ ಮಾಡ್ತಿದ್ದಾರೆ. ಪ್ರಕಾಶ್ ರಾಜ್, ರಾಧಿಕಾ ಶರತ್ ಕುಮಾರ್, ಯೋಗಿ ಬಾಬು, ಕೆಜಿಎಫ್ ಖ್ಯಾತಿಯ ಗರುಡ ರಾಮ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.

  English summary
  Singam Fame Director Hari gopalakrishna Admitted In Hospital Due To High Fever.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X