For Quick Alerts
  ALLOW NOTIFICATIONS  
  For Daily Alerts

  ನಟಿ ಸಾಯಿ ಪಲ್ಲವಿ ಬಗ್ಗೆ ಎಂಟು ಕುತೂಹಲಕಾರಿ ಸಂಗತಿಗಳು

  |

  ತೆಲುಗು, ಮಲೆಯಾಳಂ, ತಮಿಳು ಸಿನಿರಂಗದಲ್ಲಿ ಬಹು ಬೇಡಿಕೆಯ ನಟಿ ಸಾಯಿ ಪಲ್ಲವಿ. ಅದ್ಭುತ ಅಭಿನಯ, ನೃತ್ಯ, ಮುದ್ದಾದ ದಕ್ಷಿಣ ಭಾರತದ ಮುಖ ಹೊಂದಿದ ಈ ಚೆಲುವೆಯ ಕಾಲ್‌ಶೀಟ್‌ಗಾಗಿ ನಿರ್ಮಾಪಕರು ಸಾಲುಗಟ್ಟಿದ್ದಾರೆ.

  ಡಾನ್ಸ್ ರಿಯಾಲಿಟಿ ಶೋ ನಲ್ಲಿ ನೃತ್ಯ ಮಾಡುತ್ತಿದ್ದ ಸಾಯಿ ಪಲ್ಲವಿ, ಒಂದೊಂದೇ ಮೆಟ್ಟಿಲು ಹತ್ತಿ, ಇಂದು ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ.

  ಯಾವುದೇ ಗಾಡ್‌ಫಾದರ್‌ಗಳಿಲ್ಲದೆ ಕೇವಲ ಪ್ರತಿಭೆಯಿಂದಲೇ ಇಂದಿರುವ ಮಟ್ಟಕ್ಕೆ ಬೆಳೆದಿರುವ ಸಾಯಿ ಪಲ್ಲವಿ ತಮ್ಮ ಸಮಕಾಲಿನ ಇತರ ನಾಯಕಿರಿಗಿಂತಲೂ ಹಲವು ವಿಷಯಗಳಲ್ಲಿ ಭಿನ್ನ.

  ಇಂಥಹಾ ಸಾಯಿ ಪಲ್ಲವಿ ಅವರ ಕುರಿತಾಗಿ ಕಡಿಮೆ ಜನಕ್ಕೆ ಗೊತ್ತಿರುವ, ಅಥವಾ ಹೆಚ್ಚು ಜನಕ್ಕೆ ಗೊತ್ತಿರದ ಕೆಲವು ಸಂಗತಿಗಳನ್ನು ಇಲ್ಲಿ ನೀಡಲಾಗಿದೆ. ಮುಂದೆ ಓದಿ...

  ಸಾಯಿ ಪಲ್ಲವಿ ಹುಟ್ಟಿದ್ದು ತಮಿಳುನಾಡಿನಲ್ಲಿ

  ಸಾಯಿ ಪಲ್ಲವಿ ಹುಟ್ಟಿದ್ದು ತಮಿಳುನಾಡಿನಲ್ಲಿ

  ಮಲೆಯಾಳಂ ಮೂಲಕ ಸಿನಿಮಾ ಪ್ರವೇಶಿಸಿದರೂ ಸಾಯಿ ಪಲ್ಲವಿ ಹುಟ್ಟಿದ್ದು, ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂಟಗಿರಿಯಲ್ಲಿ ಜನಿಸಿದವರು. ಊಟಿ, ಕೂನೂರಿಗೆ ಸಮೀಪವೇ ಇರುವ ತಾಲ್ಲೂಕು ಕೇಂದ್ರ ಇದು.

  ವಿದ್ಯಾವಂತೆ ಸಾಯಿ ಪಲ್ಲವಿ ಏನು ಓದಿದ್ದಾರೆ?

  ವಿದ್ಯಾವಂತೆ ಸಾಯಿ ಪಲ್ಲವಿ ಏನು ಓದಿದ್ದಾರೆ?

  ಅಭಿನಯದಲ್ಲಿ ನಂ 1 ಎನಿಸಿಕೊಂಡಿರುವ ಸಾಯಿ ಪಲ್ಲವಿ, ಓದಿನಲ್ಲೂ ನಂ 1 . ಅವರು ಜಾರ್ಜಿಯಾದಲ್ಲಿ ಎಂಬಿಬಿಎಸ್ ಓದಿದ್ದಾರೆ. ಹೃದಯತಜ್ಞೆ ಆಗಬೇಕೆಂಬುದು ಅವರ ಆಸೆ. ಆದರೆ ಸಾಯಿ ಪಲ್ಲವಿ ಅವರು ಮೆಡಿಕಲ್ ಪ್ರಾಕ್ಟೀಶನರ್ ಆಗಿ ಭಾರತದಲ್ಲಿ ನೊಂದಾಯಿಸಿಕೊಂಡಿಲ್ಲ.

  ಸಾಯಿ ಪಲ್ಲವಿ ಮೊದಲ ಸಿನಿಮಾ 'ಪ್ರೇಮಂ' ಅಲ್ಲ

  ಸಾಯಿ ಪಲ್ಲವಿ ಮೊದಲ ಸಿನಿಮಾ 'ಪ್ರೇಮಂ' ಅಲ್ಲ

  ಎಲ್ಲರೂ ಅಂದುಕೊಂಡಿರುವಂತೆ ಸಾಯಿ ಪಲ್ಲವಿ ಅವರ ಮೊದಲ ಸಿನಿಮಾ ಮಲೆಯಾಳಂ ನ 'ಪ್ರೇಮಂ' ಅಲ್ಲ. ಅದಕ್ಕೂ ಮೊದಲಿಗೆ 2003 ರಲ್ಲಿ 'ಕಸ್ತೂರಿಮನ್' ಎಂಬ ಮಲೆಯಾಳಂ ಸಿನಿಮಾದಲ್ಲಿ ನಟಿಸಿದ್ದರು. ನಂತರ 2008 ರಲ್ಲಿ ಕಂಗನಾ ರನೌತ್ ಅಭಿನಯದ 'ದಾಮ್ ದೂಂ' ಎಂಬ ಸಿನಿಮಾದಲ್ಲಿ ನಾಯಕಿಯ ಗೆಳತಿಯಾಗಿ ಕಾಣಿಸಿಕೊಂಡಿದ್ದರು. ಇಲ್ಲಿದೆ ನೋಡಿ ಚಿತ್ರ.

  ಸಿನಿಮಾದಲ್ಲಿ ನಟಿಸುವ ಮುನ್ನಾ ಏನು ಮಾಡುತ್ತಿದ್ದರು ಸಾಯಿ ಪಲ್ಲವಿ?

  ಸಿನಿಮಾದಲ್ಲಿ ನಟಿಸುವ ಮುನ್ನಾ ಏನು ಮಾಡುತ್ತಿದ್ದರು ಸಾಯಿ ಪಲ್ಲವಿ?

  ಸಾಯಿ ಪಲ್ಲವಿ ಅವರು ಸಿನಿಮಾದಲ್ಲಿ ನಟಿಸುವ ಮೊದಲ 'ಉಂಗಲಿಲ್ ಯಾರ್ ಅಡುತ್ತ ಪ್ರಭುದೇವ' ಎಂಬ ಡಾನ್ಸ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿ ಜನರ ಮನಸ್ಸು ಗೆದ್ದಿದ್ದರು. ಇದು ಮಾತ್ರವಲ್ಲದೆ ಡೀ 4 ಎಂಬ ಡಾನ್ಸ್ ರಿಯಾಲಿಟಿ ಶೋ ನಲ್ಲಿ ಸಹ ಭಾಗವಹಿಸಿದ್ದರು.

  ಸಾಯಿ ಪಲ್ಲವಿ ಅದ್ಭುತ ನೃತ್ಯದ ಹಿಂದಿನ ಗುಟ್ಟು ಏನು?

  ಸಾಯಿ ಪಲ್ಲವಿ ಅದ್ಭುತ ನೃತ್ಯದ ಹಿಂದಿನ ಗುಟ್ಟು ಏನು?

  ಸಾಯಿ ಪಲ್ಲವಿ ಅವರ 'ಪ್ರೇಮಂ' ಬ್ರೇಕ್ ಡಾನ್ಸ್, ಫಿಧಾ ಸಿನಿಮಾದ ನೃತ್ಯ, ರೌಡಿ ಬೇಬಿಯಾಗಿ ಮಾಡಿದ ಟಪಾಂಗುಚಿ ನೃತ್ಯ ಯಾರೂ ಮರೆಯುವಂತಿಲ್ಲ. ನಿಜವೆಂದರೆ ಸಾಯಿ ಪಲ್ಲವಿ ಯಾವುದೇ ನೃತ್ಯ ತರಬೇತಿ ಇಲ್ಲಿಯವರೆಗೆ ಪಡೆದಿಲ್ಲ. ನೃತ್ಯ ಅವರ ಹವ್ಯಾಸವಷ್ಟೆ.

  ಸಾಯಿ ಪಲ್ಲವಿ ಸಹೋದರಿ ಯಾರು?

  ಸಾಯಿ ಪಲ್ಲವಿ ಸಹೋದರಿ ಯಾರು?

  ಸಾಯಿ ಪಲ್ಲವಿ ತಂದೆ ಹೆಸರು ಸೆಂಥಮಾರಾಯ್ ಕನ್ನನ್, ತಾಯಿ ಹೆಸರು ರಾಧಾ. ಸಾಯಿ ಪಲ್ಲವಿ ಅವರಿಗೆ ಕಿರಿಯ ಸಹೋದರಿ ಇದ್ದು ಅವರ ಹೆಸರು ಪೂಜಾ ಕನ್ನನ್, ಇವರು ಈಗಾಗಲೇ ಕೆಲವು ಕಿರು ಚಿತ್ರಗಳಲ್ಲಿ ಅಭಿನಯಿಸಿದ್ದು, ಬೆಳ್ಳಿ ತೆರೆಗೆ ಬರಲು ತಯಾರಾಗಿದ್ದಾರೆ.

  English summary
  Here is eight less known facts about south Indian actress Sai Pallavi. She is one of the most busiest actress in south.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X