For Quick Alerts
  ALLOW NOTIFICATIONS  
  For Daily Alerts

  ದಳಪತಿ ವಿಜಯ್- ಸಂಗೀತಾ ದಂಪತಿ ಡಿವೋರ್ಸ್ ಸುದ್ದಿ? ಕಿಡಿಗೇಡಿಗಳು ತಪ್ಪು ಮಾಡಿದ್ದೆಲ್ಲಿ?

  |

  ಒಂದ್ಕಡೆ ದಳಪತಿ ವಿಜಯ್ ನಟನೆಯ 'ವಾರಿಸು' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಮತ್ತೊಂದು ಕಡೆ ನಟ ವಿಜಯ್ ಹಾಗೂ ಸಂಗೀತಾ ಸೊರ್ಣಲಿಂಗಂ ದಂಪತಿ ಡಿವೋರ್ಸ್ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ.

  ಕಾಲಿವುಡ್‌ನಲ್ಲಿ ರಜನಿಕಾಂತ್‌ ರೀತಿ ಕ್ರೇಜ್ ಇರುವ ಮತ್ತೊಬ್ಬ ನಟ ದಳಪತಿ ವಿಜಯ್. ಒಂದೇ ಭಾಷೆಯಲ್ಲಿ ವಿಜಯ್ ಸಿನಿಮಾಗಳು 200, 300 ಕೋಟಿ ಬ್ಯುಸಿನೆಸ್ ಮಾಡ್ತಾವೆ. ಇನ್ನು ತಮ್ಮ ಸರಳ ಸಜ್ಜನ ವ್ಯಕ್ತಿತ್ವದಿಂದಲೂ ವಿಜಯ್ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ವಿಜಯ್ ತಮ್ಮ ಅಭಿಮಾನಿಯನ್ನೇ ಪ್ರೀತಿಸಿ ಮದುವೆ ಆಗಿದ್ದಾರೆ. ವಿಜಯ್ ತಂದೆ ಕ್ರಿಶ್ಚಿಯನ್, ತಾಯಿ ಹಿಂದೂ. ಆದರೆ ಮನೆಯಲ್ಲಿ ಧರ್ಮದ ಬಗ್ಗೆ ಎಂದೂ ಚರ್ಚೆ ನಡೆದಿಲ್ಲ. ವಿಜಯ್ ಕೂಡ ಹಿಂದೂ ಹುಡುಗಿ ಸಂಗೀತಾ ಅವರನ್ನು 1999ರಲ್ಲಿ ಪ್ರೀತಿಸಿ ಮದುವೆ ಆಗಿದ್ದರು. ಆದರೆ ಈಗ ಇದ್ದಕ್ಕಿದಂತೆ ದಂಪತಿ ದೂರಾಗಿದ್ದಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿತ್ತು.

  Varisu trailer: ಮಾಸ್‌ಗೆ ಮಾಸ್, ಕ್ಲಾಸ್‌ಗೆ ಕ್ಲಾಸ್: ವಾರಸ್ದಾರನಾಗಿ ದಳಪತಿ ದಂಗಲ್Varisu trailer: ಮಾಸ್‌ಗೆ ಮಾಸ್, ಕ್ಲಾಸ್‌ಗೆ ಕ್ಲಾಸ್: ವಾರಸ್ದಾರನಾಗಿ ದಳಪತಿ ದಂಗಲ್

  ಇತ್ತೀಚೆಗೆ ವಿಜಯ್ ಜೊತೆ ಪತ್ನಿ ಸಂಗೀತಾ 'ವಾರಿಸು' ಆಡಿಯೋ ಲಾಂಚ್ ಈವೆಂಟ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. ನಿರ್ದೇಶಕ ಅಟ್ಲಿ ಪತ್ನಿ ಪ್ರಿಯಾ ಸೀಮಂತ ಕಾರ್ಯಕ್ರಮದಲ್ಲೂ ಆಕೆಯ ಅನುಪಸ್ಥಿತಿ ಕಂಡಿತ್ತು. ಇದು ಡಿವೋರ್ಸ್ ಸುದ್ದಿಗೆ ಮತ್ತಷ್ಟು ತುಪ್ಪ ಸುರಿದಂತಾಗಿತ್ತು.+

  ಡಿವೋರ್ಸ್ ಗಾಸಿಪ್ ಹುಟ್ಟಿಕೊಂಡಿದ್ದೇಗೆ?

  ಡಿವೋರ್ಸ್ ಗಾಸಿಪ್ ಹುಟ್ಟಿಕೊಂಡಿದ್ದೇಗೆ?

  ವಿಜಯ್ ಆಪ್ತ ವಲಯದ ಮಾಹಿತಿ ಪ್ರಕಾರ ಈ ಡಿವೋರ್ಸ್ ಸುದ್ದಿಗೆ ತಳಬುಡ ಇಲ್ಲ. ಇದು ಬರೀ ಗಾಸಿಪ್ ಅಷ್ಟೆ. 'ವಾರಿಸು' ಸಿನಿಮಾ ರಿಲೀಸ್ ಸಮಯದಲ್ಲಿ ಇಂತಾದೊಂದು ಸುದ್ದಿಯನ್ನು ತೇಲಿಬಿಟ್ಟಿದ್ದಾರೆ. ವಿಜಯ್‌ಗೆ ಇರುವ ಕ್ರೇಜ್‌ಗೆ ತಕ್ಕಂತೆ ಅಭಿಮಾನಿಗಳು ಕೂಡ ಈ ಸುದ್ದಿ ಕೇಳಿ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಇಂತಾದೊಂದು ಸುದ್ದಿ ಹೇಗೆ ಹುಟ್ಟಿಕೊಳ್ತು ಎಂದು ಹುಡುಕುತ್ತಾ ಹೋದರೆ ಸಿಕ್ಕಿದ್ದು ವಿಕಿಪಿಡಿಯ ಫೇಕ್ ಎಡಿಟ್. ಕಿಡಿಗೇಡಿಗಳು ವಿಜಯ್ ವಿಕಿಪಿಡಿಯ ಪೇಜ್‌ನಲ್ಲಿ ಪತ್ನಿಗೆ ಡೈವೋರ್ಸ್ ಕೊಟ್ಟಿದ್ದಾರೆ ಎನ್ನುವಂತೆ ಎಡಿಟ್ ಮಾಡಿ ಸ್ಕ್ರೀನ್‌ಶಾಟ್ ವೈರಲ್ ಮಾಡಿದ್ದಾರೆ.

  ವಿಜಯ್ ಪತ್ನಿ ಕೀರ್ತಿ ಸುರೇಶ್ ?

  ವಿಜಯ್ ಪತ್ನಿ ಕೀರ್ತಿ ಸುರೇಶ್ ?

  ಸಾಮಾನ್ಯವಾಗಿ ಸೆಲೆಬ್ರೆಟಿಗಳ ಮಾಹಿತಿಗಾಗಿ ಜನ ವಿಕಿಪಿಡಿಯ ಫಾಲೋ ಮಾಡುತ್ತಾರೆ. ಆದರೆ ಯಾರೋ ಕಿಡಿಗೇಡಿಗಳು ವಿಜಯ್ ವಿಕಿಪಿಡಿಯ ಪೇಜ್‌ನ ಪರ್ಸನಲ್ ಡಿಟೈಲ್ಸ್‌ನಲ್ಲಿ ತಪ್ಪು ತಪ್ಪಾಗಿ ಎಡಿಟ್ ಮಾಡಿ ವಿಕಿಪಿಡಿಯ ವೈರಲ್ ಮಾಡಿದ್ದಾರೆ. ಆದರೆ ವಿಕಿಪಿಡಿಯ ಪೇಜ್‌ಗೆ ಹೋಗಿ ನೋಡಿದರೆ ಅಂತಹ ತಪ್ಪು ಕಾಣಿಸುತ್ತಿಲ್ಲ. ಇದು ಕಿಡಿಗೇಡಿ ಮಾಡಿರುವ ಕೃತ್ಯ ಎನ್ನುವುದು ಗೊತ್ತಾಗುತ್ತಿದೆ. ಇನ್ನು ಮತ್ತೊಂದು ಸ್ಕ್ರೀನ್‌ಶಾಟ್‌ನಲ್ಲಿ ವಿಜಯ್ ಪತ್ನಿ ನಟಿ ಕೀರ್ತಿ ಸುರೇಶ್, ಅವರಿಗೆ 3 ಮಕ್ಕಳು ಎಂದು ಎಡಿಟ್ ತಿದ್ದಲಾಗಿದೆ.

  ವಿಜಯ್- ಸಂಗೀತಾ ಲವ್‌ಸ್ಟೋರಿ

  ವಿಜಯ್- ಸಂಗೀತಾ ಲವ್‌ಸ್ಟೋರಿ

  ನಿಜಕ್ಕೂ ದಳಪತಿ ವಿಜಯ್ ಲವ್‌ಸ್ಟೋರಿ ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಆಗಿದೆ. 1996ರಲ್ಲಿ ವಿಜಯ್ ನಟನೆಯ 'ಪೂವೆ ಉನಕ್ಕಾಗ' ಸಿನಿಮಾ ರಿಲೀಸ್ ಆಗಿ ಹಿಟ್ ಆಗಿತ್ತು. ಆ ಸಿನಿಮಾದಲ್ಲಿ ವಿಜಯ್ ನಟನೆ ನೋಡಿ ಯುಕೆಯಲ್ಲಿದ್ದ ಸಂಗೀತಾ ಫಿದಾ ಆಗಿದ್ದರು. ನೆಚ್ಚಿನ ನಟನನ್ನು ನೋಡಲು ಚೆನ್ನೈಗೆ ಬರುತ್ತಿದ್ದರು. ಒಮ್ಮೆ ಸಿನಿಮಾ ಶೂಟಿಂಗ್ ಸೆಟ್‌ಗೆ ಹೋಗಿ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದರು. ಇದನ್ನು ತಿಳಿದು ವಿಜಯ್‌ಗೆ ಅಚ್ಚರಿ ಆಗಿ ಇಬ್ಬರ ನಡುವೆ ಸ್ನೇಹ ಹುಟ್ಟಿಕೊಂಡಿತ್ತು. ಮುಂದೆ ಸಾಕಷ್ಟು ಬಾರಿ ಆಕೆ ವಿದೇಶದಿಂದ ವಿಜಯ್‌ಗಾಗಿ ಬರೋಕೆ ಆರಂಭಿದ್ದರು. ಆಕೆಯ ಅಭಿಮಾನಕ್ಕೆ ಸೋತ ವಿಜಯ್ ತಮ್ಮ ಕುಟುಂಬ ಸದಸ್ಯರ ಜೊತೆ ಭೇಟಿ ಮಾಡಿಸಿದ್ದರು. ಮುಂದೆ ಇಬ್ಬರು ಮದುವೆ ಆಗಲು ನಿರ್ಧರಿಸಿದ್ದರು. ಪೋಷಕರ ಒಪ್ಪಿಗೆ ಪಡೆದು 1999 ಆಗಸ್ಟ್ 25ರಂದು ವಿಜಯ್- ಸಂಗೀತಾ ಹಸೆಮಣೆ ಏರಿದ್ದರು.

  'ವಾರಿಸು' ವರ್ಸಸ್ 'ತುನಿವು'

  'ವಾರಿಸು' ವರ್ಸಸ್ 'ತುನಿವು'

  ಸದ್ಯ ಸಂಗೀತಾ ಮಕ್ಕಳ ಜೊತೆ ಅಮೇರಿಕಾ ಪ್ರವಾಸದಲ್ಲಿದ್ದಾರೆ. ಹಾಗಾಗಿ ಇತ್ತೀಚೆಗೆ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇನ್ನು ಕಾಲಿವುಡ್‌ನಲ್ಲಿ ದಳಪತಿ ವಿಜಯ್, ಥಲಾ ಅಜಿತ್ ನಡುವೆ ಸ್ಟಾರ್‌ವಾರ್, ಇಬ್ಬರ ಫ್ಯಾನ್ಸ್ ವಾರ್ ನಡೀತಾನೇ ಇರುತ್ತದೆ. ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ವಿಜಯ್ ನಟನೆಯ 'ವಾರಿಸು' ಹಾಗೂ ಅಜಿತ್ ನಟನೆಯ 'ತುನಿವು' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಎದುರುಬದಿರಾಗುತ್ತಿದೆ. ಈಗಾಗಲೇ ಎರಡೂ ಸಿನಿಮಾಗಳ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದ್ದು ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಸಂಕ್ರಾಂತಿ ಫೈಟ್‌ನಲ್ಲಿ ಯಾರ ಕೈ ಮೇಲಾಗುತ್ತದೆ ಎನ್ನುವ ಲೆಕ್ಕಾಚಾರ ಕಾಲಿವುಡ್‌ನಲ್ಲಿ ನಡೀತಿದೆ.

  English summary
  Fact Check: Varisu actor Vijay & wife Sangeetha Heading For Divorce After 22 Years Of Marriage? the rumours of their separation began after Vijay's Wikipedia page stated that They are getting divorced with mutual consent. Know more.
  Thursday, January 5, 2023, 18:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X