For Quick Alerts
  ALLOW NOTIFICATIONS  
  For Daily Alerts

  ಥಲಾ ಅಜಿತ್ ಮುಂದಿನ ಸಿನಿಮಾ 'ತುನಿವು': ಈ ಟೈಟಲ್ ಅರ್ಥ ಏನು?

  |

  ಕಾಲಿವುಡ್‌ನಲ್ಲಿ ನಟ ಅಜಿತ್‌ಗೆ ದೊಡ್ಡ ಅಭಿಮಾನಿಗಳ ಬಳಗ ಇದೆ. ರಜನಿಕಾಂತ್, ದಳಪತಿ ವಿಜಯ್ ಬಿಟ್ಟರೆ ಥಲಾಗೆ ಅಭಿಮಾನಿಗಳು ಹೆಚ್ಚು. ಕ್ರೇಜ್‌ಗೆ ತಕ್ಕಂತೆ ಅಜಿತ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಾವೆ. ಅಭಿಮಾನಿಗಳ ಪ್ರೀತಿಯ ಥಲಾ ನಟನೆಯ 61ನೇ ಚಿತ್ರಕ್ಕೆ 'ತುನಿವು' ಎನ್ನುವ ಟೈಟಲ್ ಫಿಕ್ಸ್ ಆಗಿದೆ. ಬೋನಿ ಕಪೂರ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ಹೆಚ್‌. ವಿನೋದ್ ಆಕ್ಷನ್ ಕಟ್ ಹೇಳ್ತಿದ್ದಾರೆ.

  ಅಜಿತ್, ವಿನೋದ್ ಹಾಗೂ ಬೋನಿ ಕಪೂರ್ ಹ್ಯಾಟ್ರಿಕ್ ಕಾಂಬಿನೇಷನ್‌ ಸಿನಿಮಾ 'ತುನಿವು'. ಈ ಹಿಂದೆ 'ನೇರ್ಕೊಂಡ ಪಾರ್ವೈ' ಹಾಗೂ 'ವಾಲಿಮೈ' ಸಿನಿಮಾಗಳಲ್ಲ ಮೂವರು ಒಟ್ಟಿಗೆ ಕೆಲಸ ಮಾಡಿದ್ದರು. ಸ್ಟಾರ್ ನಟನೊಬ್ಬ ಹೀಗೆ ಸೇಮ್ ಕಾಂಬಿನೇಷನ್‌ನಲ್ಲಿ ಬ್ಯಾಕ್ ಟು ಬ್ಯಾಕ್ 3 ಸಿನಿಮಾಗಳನ್ನು ಮಾಡ್ತಿರೋದು ಇದೇ ಮೊದಲು ಅನ್ನಿಸ್ತಿದೆ. ಈಗಾಗಲೇ ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಮುಂದಿನ ಶೆಡ್ಯೂಲ್‌ಗಾಗಿ ಚಿತ್ರತಂಡ ಬ್ಯಾಂಕಾಕ್ ಕಡೆ ಪಯಣ ಬೆಳಸಲಿದೆ.

  ಲಡಾಖ್‌ನಲ್ಲಿ ಕೆಟ್ಟು ನಿಂತಿದ್ದ ಕನ್ನಡಿಗನ ಬೈಕ್ ಸರಿಪಡಿಸಿ ಸಹಾಯ ಮಾಡಿದ ತಮಿಳು ನಟ ಅಜಿತ್ಲಡಾಖ್‌ನಲ್ಲಿ ಕೆಟ್ಟು ನಿಂತಿದ್ದ ಕನ್ನಡಿಗನ ಬೈಕ್ ಸರಿಪಡಿಸಿ ಸಹಾಯ ಮಾಡಿದ ತಮಿಳು ನಟ ಅಜಿತ್

  ಖಡಕ್ ಫಸ್ಟ್‌ ಲುಕ್ ಪೋಸ್ಟರ್ ಜೊತೆಗೆ ಚಿತ್ರತಂಡ 'ತುನಿವು' ಸಿನಿಮಾ ಟೈಟಲ್ ಅನೌನ್ಸ್ ಮಾಡಿದೆ. 'ತುನಿವು' ಎಂದರೆ ತಮಿಳಿನಲ್ಲಿ ಧೈರ್ಯ, ಸ್ಥೈರ್ಯ ಅನ್ನುವ ಅರ್ಥ ಇದೆ. 'ನೋ ಗಟ್ಸ್ ನೋ ಗ್ಲೋರಿ' ಎನ್ನುವ ಟ್ಯಾಗ್‌ಲೈನ್ ಕೂಡ ಇದೆ. ಅದಕ್ಕೆ ತಕ್ಕಂತೆ ಪೋಸ್ಟರ್‌ನಲ್ಲಿ ಅಜಿತ್ ಜಬರ್ದಸ್ತ್‌ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಗ್ರೇ ಹೇರ್‌ ಸ್ಟೈಲ್ ಹಾಗೂ ಗಡ್ಡದಲ್ಲಿ ಗನ್ ಹಿಡ್ದು ಕೂತಿರುವ ರೀತಿ ಅಭಿಮಾನಿಗಳಿಗೆ ಇಷ್ಟವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಫಸ್ಟ್ ಲುಕ್‌ ಪೋಸ್ಟರ್ ರಿಲೀಸ್‌ನ ಕೆಲವೆಡೆ ಅಭಿಮಾನಿಗಳ ಹಬ್ಬದ ರೀತಿ ಸೆಲೆಬ್ರೇಷನ್ ಮಾಡಿದ್ದಾರೆ.

  'ತುನಿವು' ಚಿತ್ರದಲ್ಲಿ ನಾಯಕಿಯಾಗಿ ಮಂಜು ವಾರಿಯರ್ ನಟಿಸ್ತಿದ್ದಾರೆ. ಸಮುದ್ರ ಖನಿ, ಜಿ ಎಮ್ ಸುಂದರ್ ಸೇರಿದಂತೆ ಸಾಕಷ್ಟು ಜನ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಜೀ ಸ್ಟುಡಿಯೋ ಜೊತೆ ಸೇರಿ ಬೋನಿ ಕಪೂರ್ ಬಹಳ ಅದ್ಧೂರಿಯಾಗಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ಚಿತ್ರವನ್ನು ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಚಿತ್ರದಲ್ಲಿ ಅಜಿತ್ ನೆಗೆಟಿವ್ ಶೇಡ್‌ ರೋಲ್‌ನಲ್ಲಿ ನಟಿಸಿದ್ದಾರೆ ಎನ್ನಲಾಗ್ತಿದೆ. ಫಸ್ಟ್ ಲುಕ್ ಪೋಸ್ಟರ್ ಅಭಿಮಾನಿಗಳಿಗೆ ಇಷ್ಟವಾಗಿದೆ.

  ನಟ ಅಜಿತ್ ತೆರೆಮೇಲೆ ಮಾತ್ರ ಸೂಪರ್ ಸ್ಟಾರ್. ನಿಜ ಜೀವನದಲ್ಲಿ ಸಿಕ್ಕಾಪಟ್ಟೆ ಸಿಂಪಲ್. ಅದರಲ್ಲೂ ಬೈಕ್, ಕಾರ್‌ ಕ್ರೇಜ್ ಜಾಸ್ತಿ. ಬಿಡುವು ಸಿಕ್ಕಾಗಲೆಲ್ಲಾ ರೋಡ್ ಟ್ರಿಪ್ ಹೊರಟುಬಿಡುತ್ತಾರೆ. ವಾರಗಳಗಟ್ಟಲೆ ಬೈಕ್ ಏರಿ ಊರುರು ಸುತ್ತಾಡುತ್ತಾರೆ. ಲಡಾಖ್ ಬೈಕ್ ರೈಡ್ ಕೈಗೊಂಡಿದ್ದ ಕನ್ನಡಿಗನೋರ್ವನಿಗೆ ನಟ ಅಜಿತ್ ಬೈಕ್ ರಿಪೇರಿ ಮಾಡಿ ಸಹಾಯ ಮಾಡಿದ್ದಾರೆ. ಮಂಜು ಕಶ್ಯಪ ಎಂಬ ಕನ್ನಡಿಗ ಬೈಕ್‌ ಏರಿ ಲಡಾಕ್ ಟ್ರಿಪ್ ಮಾಡುತ್ತಿದ್ದರು. ಆದರೆ ಮಾರ್ಗ ಮಧ್ಯೆ ಮಂಜು ಕಶ್ಯಪ್ ಅವರ ಬೈಕ್‌ನ ಟೈರ್ ಗಾಳಿ ಖಾಲಿಯಾಗಿ ಕೈಕೊಟ್ಟಿತ್ತು. ಈ ಸಂದರ್ಭದಲ್ಲಿ ಅಲ್ಲಿಯೇ ಬೈಕ್‌ನಲ್ಲಿ ತೆರಳುತ್ತಿದ್ದವರ ಬಳಿ ಮಂಜು ಸಹಾಯ ಕೇಳಿದ್ದಾರೆ.

  Finally the much awaited Thala Ajith Starrer Thunivu First Look out

  ಅದೇ ಮಾರ್ಗವಾಗಿ ಹೋಗುತ್ತಿದ್ದ ನಟ ಅಜಿತ್, ಬೈಕ್ ನಿಲ್ಲಿಸಿ ತಾವೇ ಖುದ್ದು ಟೈರಿಗೆ ಗಾಳಿ ತುಂಬಿಸಲು ಸಹಾಯ ಮಾಡಿದ್ದಾರೆ. ಜೊತೆಗೆ ಒಂದಷ್ಟು ದೂರ ಮಂಜು ಕಶ್ಯಪ ಅವರ ಜೊತೆ ಬೈಕ್ ರೈಡ್‌ನಲ್ಲಿಯೂ ಭಾಗಿಯಾಗಿದ್ದಾರೆ. ಈ ವಿಷಯವನ್ನು ಸ್ವತಃ ಮಂಜು ಕಶ್ಯಪ ಫೋಟೊ ಸಮೇತ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆ ಸಂಪೂರ್ಣ ಘಟನೆಯನ್ನು ಬರೆದುಕೊಂಡಿದ್ದಾರೆ.

  English summary
  Finally the much awaited Thala Ajith Starrer Thunivu First Look out. The makers of Ajith Kumar's 61st project, revealed the film's title and first look. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X