Don't Miss!
- Sports
ಶುಭ್ಮನ್ ಗಿಲ್ಗಿದೆ ಶಿಖರ್ ಧವನ್ರ ಈ 3 ದಾಖಲೆ ಮುರಿಯುವ ಅವಕಾಶ
- News
ಬಿಬಿಎಂಪಿಯಿಂದ ಫೆಬ್ರುವರಿ. 2 ರಿಂದ 5 ರವರೆಗೆ 'ಖಾತಾ ಮೇಳ' ಆಯೋಜನೆ
- Lifestyle
ಈ ಚಿಕ್ಕ ಬದಲಾವಣೆ ಮಾಡಿದರೆ ಸಾಕು ತೂಕ ಕಡಿಮೆಯಾಗುವುದು
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ ನಟಿ ಮೀನಾ ಹೃದಯಸ್ಪರ್ಶಿ ಸಂದೇಶ
ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಮೀನಾ ಯಾರಿಗೆ ತಾನೆ ಪರಿಚಯ ಇಲ್ಲ. ರವಿಚಂದ್ರನ್ ನಟನೆಯ ಪುಟ್ನಂಜ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ಮೀನಾ, ರೋಜಾ ಪಾತ್ರದ ಮೂಲಕ ಕನ್ನಡ ಚಿತ್ರ ಪ್ರೇಕ್ಷಕರ ಹೃದಯ ಗೆದ್ದಿದ್ದರು. ಕನ್ನಡದ ಮೊದಲ ಸಿನಿಮಾದಲ್ಲೇ ಮೀನಾ ದೊಡ್ಡ ಮಟ್ಟದ ಖ್ಯಾತಿ ಗಳಿಸಿದ್ದರು.
ತಮಿಳು, ತೆಲುಗು, ಮಲಯಾಳಂ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ನಟಿಸಿ ಸೈ ಎನಿಸಿಕೊಂಡಿರುವ ಮೀನಾ ಬಣ್ಣದ ಲೋಕದಲ್ಲಿ 40 ವರ್ಷಗಳನ್ನು ಪೂರೈಸಿದ್ದಾರೆ. 1981ರಲ್ಲಿ ಬಾಲಕಲಾವಿದೆಯಾಗಿ ಮೀನಾ ತಮಿಳು ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದರು. ಆಗಿನ್ನು ಮೀನಾಗೆ 4 ವರ್ಷ. ಶಿವಾಜಿ ಗಣೇಸನ್ ನಾಯಕನಾಗಿ ಕಾಣಿಸಿಕೊಂಡಿರುವ ಚಿತ್ರದಲ್ಲಿ ಪುಟ್ಟ ಪೋರಿ ಮೀನಾ ಮೊದಲ ಬಾರಿಗೆ ನಟಿಸುವ ಮೂಲಕ ಎಲ್ಲರ ಗಮನ ಸಳೆದಿದ್ದರು.

90 ದಶಕದ ಬಹುಬೇಡಿಕೆಯ ನಟಿ
ಬಾಲನಟಿಯಾಗಿ ಮೀನಾ ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಸುಮಾರು 45 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಬಳಿಕ 1989ರಲ್ಲಿ ಒರು ಪುದಿಯ ಕಥೈ ಚಿತ್ರದ ಮೂಲಕ ಮೀನಾ ನಾಯಕಿಯಾಗಿ ಮೊದಲ ಬಾರಿಗೆ ಬೆಳ್ಳಿ ಪರದೆ ಮೇಲೆ ಮಿಂಚಿದರು. ಬಳಿಕ ಹಿಂದೆ ತಿರುಗಿ ನೋಡಿ ನೋಡಿದ್ದೆ ಇಲ್ಲ. 90 ದಶಕದಲ್ಲಿ ದಕ್ಷಿಣ ಭಾರತೀಯ ಸಿನಿಮಾರಂಗದ ಬಹುಬೇಡಿಕೆಯ ನಟಿಯಲ್ಲಿ ಒಬ್ಬರಾಗಿದ್ದ ಮೀನಾ ಬಹುತೇಕ ಸ್ಟಾರ್ ಕಲಾವಿದ ಜೊತೆ ತೆರೆಹಂಚಿಕೊಂಡಿದ್ದಾರೆ. ಅನೇಕ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ.

ಮೀನಾ ಕನ್ನಡ ಸಿನಿಮಾಗಳು
ಕನ್ನಡದಲ್ಲಿ ಪುಟ್ನಂಜ, ಸಿಂಹಾದ್ರಿಯ ಸಿಂಹ, ಸ್ವಾತಿ ಮುತ್ತು, ಮೈ ಆಟೋಗ್ರಾಫ್ ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಕೊನೆಯದಾಗಿ ಹೆಂಡ್ತೀರ್ ದರ್ಬಾರ್ ಚಿತ್ರದಲ್ಲಿ ನಟಿಸಿದ್ದಾರೆ. ರಮೇಶ್ ಅರವಿಂದ್ ನಟನೆಯ ಚಿತ್ರದಲ್ಲಿ ಮೀನಾ ಮಿಂಚಿದ್ದಾರೆ. ಬಳಿಕ ಮತ್ತೆ ಕನ್ನಡ ಚಿತ್ರರಂಗದ ಕಡೆ ಮುಖ ಮಾಡಿಲ್ಲ.

'ಸ್ವಾತಿ ಮುತ್ತು' ನಟಿಯ ಹೃದಯಸ್ಪರ್ಶಿ ಸಂದೇಶ
ಸದ್ಯ ಚಿತ್ರರಂಗದಲ್ಲಿ 40 ವರ್ಷ ಪೂರೈಸಿರುವ ಮೀನಾ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. '1981ರಲ್ಲಿ ನನ್ನನ್ನು ಬಾಲಕಲಾವಿದೆಯಾಗಿ ಲೆಜೆಂಡ್ ಶಿವಾಜಿ ಅಪ್ಪ ಪರಿಚಯಿಸಿದರು. ಬಳಿಕ ನಾಯಕಿಯಾಗಿ ಅನೇಕ ಪಾತ್ರಗಳನ್ನು ಮಾಡಿದ್ದೇನೆ. ಕಳೆದ 40 ವರ್ಷಗಳಿಂದ ಚಿತ್ರರಂಗದಲ್ಲಿ ನನ್ನದೇ ಆದ ಚಾಪು ಮೂಡಿಸಿದೆ' ಎಂದಿದ್ದಾರೆ.

ವಿಡಿಯೋ ಹಂಚಿಕೊಂಡಿರುವ ನಟಿ
'ನನ್ನ ಮೇಲೆ ನಂಬಿಕೆ ಇಟ್ಟು ಸಿನಿಮಾ ಅವಕಾಶ ನೀಡಿದ ಪ್ರತಿಯೊಬ್ಬರು ಕೃತಜ್ಞಳು. ನನ್ನ ಪ್ರತಿಭೆ ಗುರುತಿಸಿ, ನನ್ನ ಶ್ರಮಕ್ಕೆ ಪ್ರಶಂಸೆ ನೀಡಿದ ಎಲ್ಲರಿಗೂ ಧನ್ಯವಾದಗಳು' ಎಂದಿದ್ದಾರೆ. ಜೊತೆಗೆ 1981ರಲ್ಲಿ ಮೊದಲ ಬಾರಿಗೆ ತೆರೆಮೇಲೆ ಮಿಂಚಿದ ಬೇಬಿ ಮೀನಾ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ತಾವು ನಟಿಸಿದ ಸಿನಿಮಾಗಳ ತುಣುಕನ್ನು ಶೇರ್ ಮಾಡಿ ಕೊನೆಯಲ್ಲಿ ಧನ್ಯವಾದ ತಿಳಿಸಿದ್ದಾರೆ.
Recommended Video

ಮೀನಾ ಬಳಿ ಇರುವ ಸಿನಿಮಾಗಳು
ಈಗಲೂ ಕೈತುಂಬ ಸಿನಿಮಾಗಳನ್ನು ಇಟ್ಟುಕೊಂಡಿರುವ ಮೀನಾ ಇತ್ತೀಚಿಗೆ ಬಿಡುಗಡೆಯಾದ ದೃಶ್ಯಂ-2 ಮೂಲಕ ಮತ್ತೊಂದು ಸೂಪರ್ ಹಿಟ್ ಸಿನಿಮಾ ನೀಡಿದ್ದಾರೆ. ಸದ್ಯ ಮೀನಾ ದೃಶ್ಯಂ-2 ತೆಲುಗು ಆವೃತ್ತಿಯ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಅಣ್ಣಾತೆ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಮತ್ತೆ ಕನ್ನಡಕ್ಕೆ ಯಾವಾಗ ಬರ್ತಾರೆ ಎನ್ನುವುದು ಅಭಿಮಾನಿಗಳ ಸದ್ಯದ ಕುತೂಹಲ.