twitter
    For Quick Alerts
    ALLOW NOTIFICATIONS  
    For Daily Alerts

    ಪೊನ್ನಿಯಿನ್ ಸೆಲ್ವನ್ ಗೇಮ್ ಆಫ್ ಥ್ರೋನ್ಸ್‌ನ ಕಾಪಿ ಎಂದವರಿಗೆ ನಿರ್ದೇಶಕ ಮಣಿರತ್ನಂ ಎಪಿಕ್ ರಿಪ್ಲೇ!

    |

    ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ 1 ಚಿತ್ರ ಬಿಡುಗಡೆಗೆ ಇನ್ನೆರಡು ದಿನಗಳು ಮಾತ್ರ ಬಾಕಿ ಉಳಿದಿವೆ. ಚಿತ್ರ ಇದೇ ಶುಕ್ರವಾರ ( ಸೆಪ್ಟೆಂಬರ್ 30 ) ವಿಶ್ವದಾದ್ಯಂತ ಬಿಡುಗಡೆಗೊಳ್ಳಲಿದೆ. ಮೂಲತಃ ತಮಿಳು ಚಿತ್ರವಾದ ಪೊನ್ನಿಯಿನ್ ಸೆಲ್ವನ್ ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ಬಿಡುಗಡೆಯಾಗಲಿದ್ದು, ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದೆ.

    ಇನ್ನು ಪೊನ್ನಿಯಿನ್ ಸೆಲ್ವನ್ ಚಿತ್ರದ ಪೋಸ್ಟರ್, ಟ್ರೈಲರ್ ಮತ್ತು ಪಾತ್ರಗಳನ್ನು ಗಮನಿಸಿದ ಕೆಲ ಸಿನಿ ರಸಿಕರು ಯಾಕೋ ಈ ಚಿತ್ರ ಖ್ಯಾತ ವೆಬ್ ಸರಣಿ ಗೇಮ್ ಆಫ್ ಥ್ರೋನ್ಸ್‌ನಿಂದ ಪ್ರೇರೇಪಿತವಾಗಿ ತಯಾರಾದಂತಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮೀಮ್ಸ್ ಕೂಡ ಹರಿದಾಡಿದ್ದವು. ಆದರೆ ಚಿತ್ರತಂಡ ಇದೊಂದು ಅಪ್ಪಟ ಸ್ವಮೇಕ್ ಸಿನಿಮಾ ಎಂಬ ವಿಚಾರವನ್ನು ತಿಳಿಸಿತ್ತು.

    ಆದರೂ ಸಹ ಈ ಅನಗತ್ಯ ಹೋಲಿಕೆಯನ್ನು ಜನ ನಿಲ್ಲಿಸಲಿಲ್ಲ. ಈ ಹೋಲಿಕೆ ವಿಚಾರ ಮಣಿರತ್ನಂ ಭಾಗವಹಿಸಿದ್ದ ಸಂದರ್ಶನದಲ್ಲಿಯೂ ಕೂಡ ಚರ್ಚೆಯಾಗುವ ಮಟ್ಟಿಗೆ ತಲುಪಿಬಿಟ್ಟಿದೆ. ಹೌದು, ಫಿಲ್ಮ್ ಕಂಪ್ಯಾನಿಯನ್ ಯುಟ್ಯೂನ್ ಚಾನೆಲ್‌ನ ಸಂದರ್ಶನದಲ್ಲಿ ಈ ರೀತಿಯ ಚರ್ಚೆ ನಡೆಯುತ್ತಿದೆ, ಪೊನ್ನಿಯಿನ್ ಸೆಲ್ವನ್ ತಮಿಳಿನ ಗೇಮ್ ಆಫ್ ಥ್ರೋನ್ಸ್ ಎನ್ನಲಾಗ್ತಿದೆ ಇದರ ಬಗ್ಗೆ ಏನು ಹೇಳ್ತೀರ ಎಂಬ ಪ್ರಶ್ನೆಯನ್ನು ನಿರೂಪಕಿ ಚಿತ್ರತಂಡಕ್ಕೆ ಎಸೆದರು.

    Game of Thrones is English version of Ponniyin Selvan says Maniratnam

    ಈ ಪ್ರಶ್ನೆಗೆ ಉತ್ತರಿಸಿದ ಚಿತ್ರದ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಇಲ್ಲ ಪೊನ್ನಿಯಿನ್ ಸೆಲ್ವನ್ ಚಿತ್ರ ನೈಜ ಘಟನೆ ಆಧಾರಿತ ಎಂದು ಉತ್ತರಿಸಿದರು ಹಾಗೂ ನಿರ್ದೇಶಕ ಮಣಿರತ್ನಂ ಇಲ್ಲ ಪೊನ್ನಿಯಿನ್ ಸೆಲ್ವನ್ ತಮಿಳಿನ ಗೇಮ್ ಆಫ್ ಥ್ರೋನ್ಸ್ ಅಲ್ಲ, ಗೇಮ್ ಆಫ್ ಥ್ರೋನ್ಸ್ ಇಂಗ್ಲಿಷ್‌ನ ಪೊನ್ನಿಯಿನ್ ಸೆಲ್ವನ್ ಎಂಬ ಎಪಿಕ್ ಉತ್ತರವನ್ನು ನೀಡುವ ಮೂಲಕ ಹೋಲಿಕೆ ಮಾಡುವವರಿಗೆ ನಗುತ್ತಲೇ ಚಾಟಿ ಬೀಸಿದ್ದಾರೆ.

    ಇನ್ನು ಪೊನ್ನಿಯಿನ್ ಸೆಲ್ವನ್ ಚಿತ್ರ 1955ರಲ್ಲಿ ಕಲ್ಕಿ ಕೃಷ್ಣಮೂರ್ತಿ ಬರೆದ ಪೊನ್ನಿಯಿನ್ ಸೆಲ್ವನ್ ಎಂಬ ಕಾದಂಬರಿ ಆಧಾರಿತ ಸಿನಿಮಾವಾಗಿದೆ ಎಂಬುದನ್ನು ಚಿತ್ರತಂಡ ಈಗಾಗಲೇ ತಿಳಿಸಿದೆ. ಈ ಚಿತ್ರದಲ್ಲಿ ಚೋಳ ಸಾಮ್ರಾಜ್ಯದ ಒಂದನೇ ರಾಜ ರಾಜ ಚೋಳನ ಆರಂಭದ ದಿನಗಳ ಬಗ್ಗೆ ತಿಳಿಸಲಾಗುತ್ತದೆ ಎಂಬುದನ್ನೂ ಸಹ ಚಿತ್ರತಂಡ ಈಗಾಗಲೇ ಸ್ಪಷ್ಟವಾಗಿ ತಿಳಿಸಿದೆ. ಹೀಗೆ ಬೃಹತ್ ಇತಿಹಾಸವಿರುವ ನಮ್ಮ ಭಾರತದ ಮಣ್ಣಿನ ಕಥೆಯನ್ನು ಹೊರಟಿರುವ ಚಿತ್ರವನ್ನು ನಿನ್ನೆ ಮೊನ್ನೆ ಬಂದ ಅಮೆರಿಕನ್ ಫ್ಯಾಂಟಸಿ ವೆಬ್ ಸರಣಿ ಜೊತೆ ಹೋಲಿಸಿದರೆ ಇಂಥ ಉತ್ತರ ಪಡೆಯುವುದು ಸಹಜ.

    English summary
    Game of Thrones is English version of Ponniyin Selvan says Maniratnam. Read on
    Wednesday, September 28, 2022, 18:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X