For Quick Alerts
  ALLOW NOTIFICATIONS  
  For Daily Alerts

  ನಟಿ ತ್ರಿಷಾ ಕೃಷ್ಣನ್‌ ಬಂಧಿಸಲು ಒತ್ತಾಯ

  |

  ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ ವಿವಾದಕ್ಕೆ ಸಿಲುಕಿದ್ದಾರೆ ಈ ಚೆಲುವೆಯನ್ನು ಬಂಧಿಸುವಂತೆ ಆಗ್ರಹಿಸಲಾಗಿದೆ.

  ಚಿತ್ರೀಕರಣದ ಸಂದರ್ಭದಲ್ಲಿ ತ್ರಿಷಾ ಮಾಡಿರುವ ಯಡವಟ್ಟಿನಿಂದಾಗಿ ನಟಿ ಸಂಕಷ್ಟಕ್ಕೆ ಸಿಲುಕಿದ್ದು, ಹಿಂದು ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

  ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಸಿನಿಮಾದಲ್ಲಿ ತ್ರಿಷಾ ಕೃಷ್ಣನ್ ನಟಿಸುತ್ತಿದ್ದು, ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಇಂಧೋರ್‌ನ ಪ್ರಸಿದ್ಧ ದೇವಾಲಯವೊಂದರಲ್ಲಿ ಚಿತ್ರೀಕರಣ ಸಾಗುತ್ತಿದ್ದು, ಚಿತ್ರೀಕರಣದಲ್ಲಿ ಭಾಗವಹಿಸಿರುವ ತ್ರಿಷಾ ಚಪ್ಪಲಿ ಧರಿಸಿ ದೇವಾಲಯದಲ್ಲಿ ಓಡಾಡಿದ್ದಾರೆ. ಇದು ಹಿಂದು ಸಂಘಟನೆಗಳ ಕಣ್ಣು ಕೆಂಪಾಗುವಂತೆ ಮಾಡಿದೆ.

  ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ನಟಿ ತ್ರಿಷಾ ದೇವಾಲಯದ ಒಳಗೆ ಅದರಲ್ಲೂ ಗರ್ಭಗುಡಿ ಮುಂಭಾಗ ಚಪ್ಪಲಿ ಧರಿಸಿ ಓಡಾಡಿದ್ದಾರೆ. ಶಿವಲಿಂಗ ನಂದಿಯ ಮಧ್ಯೆ ತ್ರಿಷಾ ಚಪ್ಪಲಿ ಧರಿಸಿ ಓಡಾಡುತ್ತಿರುವ ಚಿತ್ರಗಳನ್ನು ಸ್ಥಳೀಯರು ಕ್ಲಿಕ್ಕಿಸಿದ್ದಾರೆ. ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  ತ್ರಿಷಾ ಕೃಷ್ಣನ್ ನಡೆಗೆ ಹಿಂದು ಸಂಘಟನೆಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದು, ಕೆಲವು ಸಂಘಟನೆಗಳು ಇಂಧೋರ್‌ನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿವೆ. ಹಿಂದು ಭಾವನೆಗಳಿಗೆ ಧಕ್ಕೆ ತಂದಿರುವ ತ್ರಿಷಾ ಕೃಷ್ಣನ್ ಅನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.

  ಕೆಲವು ದಿನಗಳ ಹಿಂದಷ್ಟೆ 'ಪೊನ್ನಿಯಿನ್ ಸೆಲ್ವನ್' ಚಿತ್ರೀಕರಣ ಸೆಟ್‌ನಲ್ಲಿ ಅವಘಡವೊಂದು ಸಂಭವಿಸಿತ್ತು. ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಕುದುರೆಯೊಂದು ನಿಧನವಾಗಿತ್ತು. ಈ ಬಗ್ಗೆ ಪೊಲೀಸ್ ದೂರು ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಘಟನೆಗೆ ಸಂಬಂಧಿಸಿದಂತೆ ನಿರ್ದೇಶಕ ಮಣಿರತ್ನಂ ವಿರುದ್ಧ ಎಫ್‌ಐಆರ್ ಸಹ ದಾಖಲಾಗಿದೆ.

  ಇನ್ನು ನಟಿ ತ್ರಿಷಾ ಬಹುಭಾಷಾ ನಟಿಯಾಗಿದ್ದು ಈಗಾಗಲೇ ಕನ್ನಡದ 'ಪವರ್' ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆಗೆ ನಟಿಸಿದ್ದಾರೆ. ಈ ಸಿನಿಮಾ 2014 ರಲ್ಲಿ ಬಿಡುಗಡೆ ಆಗಿತ್ತು. ಇದೀಗ ಮತ್ತೆ ಪುನೀತ್ ರಾಜ್‌ಕುಮಾರ್ ಜೊತೆ ತೆರೆ ಹಂಚಿಕೊಳ್ಳಲಿದ್ದು, 'ದ್ವಿತ್ವ' ಕನ್ನಡ ಸಿನಿಮಾದಲ್ಲಿ ತ್ರಿಷಾ ನಾಯಕಿಯಾಗಿ ನಟಿಸಲಿದ್ದಾರೆ. ಈ ಸಿನಿಮಾವನ್ನು 'ಲೂಸಿಯಾ' ಖ್ಯಾತಿಯ ಪವನ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ.

  ನಟಿ ತ್ರಿಷಾ 'ಪೊನ್ನಿಯಿನ್ ಸೆಲ್ವನ್' ಸಿನಿಮಾದಲ್ಲಿ ಚೋಳರ ರಾಣಿ ಕುಂದವೈ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಐಶ್ವರ್ಯಾ ರೈ, ಚಿಯಾನ್ ವಿಕ್ರಂ, ಪ್ರಕಾಶ್ ರೈ, ಕಾರ್ತಿ ಇನ್ನೂ ಹಲವಾರು ಮಂದಿ ಪ್ರಮುಖ ನಟರು ನಟಿಸುತ್ತಿದ್ದಾರೆ. ಸಿನಿಮಾವನ್ನು ಮಣಿರತ್ನಂ ನಿರ್ದೇಶನ ಮಾಡುತ್ತಿದ್ದು, ಎ.ಆರ್.ರೆಹಮಾನ್ ಸಂಗೀತ ನೀಡಿದ್ದಾರೆ. ಚೋಳ ಸಾಮ್ರಾಜ್ಯದ ಕತೆಯನ್ನು ಈ ಸಿನಿಮಾ ಹೊಂದಿದೆ.

  'ಪೊನ್ನಿಯಿನ್ ಸೆಲ್ವನ್' ಸಿನಿಮಾ ಹೊರತುಪಡಿಸಿ ಮಲಯಾಳಂನ 'ರಾಮ್' ಸಿನಿಮಾದಲ್ಲಿ ತ್ರಿಷಾ ನಟಿಸುತ್ತಿದ್ದಾರೆ ಈ ಸಿನಿಮಾದಲ್ಲಿ ಮೋಹನ್‌ಲಾಲ್ ನಾಯಕ. ತಮಿಳಿನ 'ಗರ್ಜನೈ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮತ್ತೊಂದು ತಮಿಳು ಸಿನಿಮಾ 'ಸತುರಂಗ ವೇಟೈ 2' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. 'ರಾಂಗಿ' ಹೆಸರಿನ ತಮಿಳು ಸಿನಿಮಾದಲ್ಲಿಯೂ ನಟಿಸುತ್ತಿದ್ದು, ಇದು ಮಹಿಳಾ ಪ್ರಧಾನ ಸಿನಿಮಾ ಆಗಿದೆ.

  English summary
  Some Hindu outfits demand an arrest of actress Trishna Krishnan. They accused Trisha hurts Hindu sentiments by wearing slippers in the Shiva temple.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X