Don't Miss!
- Sports
ಭಾರತ vs ಆಸ್ಟ್ರೇಲಿಯಾ: ಅದುವೇ ನನ್ನ ಜೀವನದ ಅತ್ಯಂತ ಶ್ರೇಷ್ಠ ಸರಣಿ ಎಂದ ಚೇತೇಶ್ವರ್ ಪೂಜಾರ
- News
ರಾಯಚೂರು: ನೇಣುಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ, ಕಾಲೇಜು ಪ್ರಾಂಶುಪಾಲರ ವಿರುದ್ಧ ಅತ್ಯಾಚಾರ, ಕೊಲೆ ಪ್ರಕರಣ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತಮಿಳು ಸಿನಿಮಾ ಘೋಷಿಸಿದ ಹೊಂಬಾಳೆ ಸಂಸ್ಥೆ: ಕೀರ್ತಿ ಸುರೇಶ್ ನಟನೆಯ 'ರಘುತಥಾ' ಸಿನಿಮಾ ಕಥೆಯೇನು?
ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಇದೀಗ ಹೊಂಬಾಳೆ ಸಂಸ್ಥೆ ನೇರವಾಗಿ ಕಾಲಿವುಡ್‌ಗೆ ಎಂಟ್ರಿ ಕೊಟ್ಟಿದೆ. ಕೀರ್ತಿ ಸುರೇಶ್ ನಾಯಕಿಯಾಗಿ ಒಂದು ಮಹಿಳಾ ಪ್ರಧಾನ ಸಿನಿಮಾ ಘೋಷಿಸಿದೆ. ಸಿನಿಮಾ ಹೆಸರು 'ರಘುತಥಾ'.
ಕೆಲ ದಿನಗಳಿಂದ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಮಹಿಳಾ ಪ್ರಧಾನ ಚಿತ್ರವೊಂದನ್ನು ನಿರ್ಮಾಣ ಮಾಡುವ ಬಗ್ಗೆ ಗುಸುಗುಸು ಶುರುವಾಗಿತ್ತು. ಈ ಚಿತ್ರದಲ್ಲಿ ನಯನತಾರ ನಾಯಕಿಯಾಗಿ ನಟಿಸುವ ಬಗ್ಗೆ ಮಾತುಗಳು ಕೇಳಿಬಂದಿತ್ತು. ಆದರೆ ದಿಢೀರನೆ ಕೀರ್ತಿ ಸುರೇಶ್ ನಟನೆಯ ಸಿನಿಮಾವನ್ನು ಸಂಸ್ಥೆ ಘೋಷಿಸಿದೆ. 'ಫ್ಯಾಮಿಲಿಮ್ಯಾನ್' ಸೀರಿಸ್‌ಗೆ ಬರಹಗಾರರಾಗಿ ಕೆಲಸ ಮಾಡಿದ್ದ ಸುಮನ್ ಕುಮಾರ್ 'ರಘುತಥಾ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. "ಮನೆಯಿಂದಲೇ ಕ್ರಾಂತಿ ಆರಂಭವಾಗುತ್ತದೆ" ಎಂದು ಬರೆದು 'ರಘುತಥಾ' ಪೋಸ್ಟರ್ ಶೇರ್ ಮಾಡಿದ್ದಾರೆ.
ಮತ್ತೆ
ಸಂಕಷ್ಟದಲ್ಲಿ
'ಕಾಂತಾರ':
ರಿಷಬ್,
ಹೊಂಬಾಳೆ,
ಅಮೆಜಾನ್,
ಪೃಥ್ವಿರಾಜ್
ಸುಕುಮಾರನ್‌ಗೆ
ನೊಟೀಸ್
'ಮಹಾನಟಿ' ಚಿತ್ರದಲ್ಲಿ ತಮ್ಮ ಅದ್ಭುತ ನಟನೆಯಿಂದ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಕೀರ್ತಿ ಸುರೇಶ್ ಈ ಚಿತ್ರದ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ರಘುತಥಾ' ಚಿತ್ರಕ್ಕೆ ಯಾಮಿನಿ ಯಗ್ಞಮೂರ್ತಿ ಸಿನಿಮಾಟೋಗ್ರಫಿ, ಸೀನ್ ರೋಲ್ಡನ್ ಸಂಗೀತ, ತೇಜ್‌ಲಬಾನಿ ಪ್ರೊಡಕ್ಷನ್ ಡಿಸೈನರ್ ಆಗಿ ಕೆಲಸ ಮಾಡಿಲಿದ್ದಾರೆ.

'ರಘು ತಾತ' ಆಗಿ ಎಂ ಎಸ್ ಭಾಸ್ಕರ್
ಚಿತ್ರದ ಪ್ರಮುಖ ಪಾತ್ರದಲ್ಲಿ ತಮಿಳಿನ ಹಿರಿಯ ಎಂ. ಎಸ್ ಭಾಸ್ಕರ್ ನಟಿಸುತ್ತಿದ್ದಾರೆ. ಬಹುತೇಕ ತಮಿಳು ತಂತ್ರಜ್ಞರೇ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ತಾತ, ಮೊಮ್ಮೊಗಳ ಕ್ರಾಂತಿಯ ಕಥೆಯನ್ನು ಚಿತ್ರದಲ್ಲಿ ಹೇಳುತ್ತಿರುವಂತೆ ಕಾಣುತ್ತಿದೆ. ಇತ್ತೀಚೆಗೆ 'ಸಾನಿ ಕಾಯಿದಂ' ಚಿತ್ರದಲ್ಲಿ ಕೀರ್ತಿ ಸುರೇಶ್ ಪವರ್‌ಫುಲ್ ರೋಲ್‌ನಲ್ಲಿ ಮಿಂಚಿದ್ದರು. ಅಂತದ್ಧೇ ಖಡಕ್ ಪಾತ್ರ 'ರಘು ತಾತ' ಚಿತ್ರದಲ್ಲೂ ನಿಭಾಯಿಸುತ್ತಿರುವಂತೆ ಕಾಣುತ್ತಿದೆ. ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ.

ಕಾಲಿವುಡ್‌ನಲ್ಲಿ ಖಾತೆ ತೆರೆದ ಹೊಂಬಾಳೆ
'KGF' ಫಸ್ಟ್ ಚಾಪ್ಟರ್ ನಂತರ ಹೊಂಬಾಳೆ ಸಂಸ್ಥೆ ಅಕ್ಕಪಕ್ಕದ ಇಂಡಸ್ಟ್ರಿಗೆ ಲಗ್ಗೆ ಇಟ್ಟಿದೆ. ಪ್ರಭಾಸ್ ಹೀರೊ ಆಗಿ ತೆಲುಗಿನಲ್ಲಿ 'ಸಲಾರ್' ಸಿನಿಮಾ ನಿರ್ಮಾಣವಾಗುತ್ತಿದೆ. ಪೃಥ್ವಿರಾಜ್ ಸುಕುಮಾರ್ ಸಾರಥ್ಯದ ಮಲಯಾಳಂ ಸಿನಿಮಾ 'ಟೈಸನ್' ಕುತೂಹಲ ಕೆರಳಿಸಿದೆ. ಫಹಾದ್ ಫಾಸಿಲ್ ಲೀಡ್ ರೋಲ್‌ನಲ್ಲಿ 'ಧೂಮಂ' ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ. ಇದೀಗ 'ರಘುತಥಾ' ಮೂಲಕ ಕಾಲಿವುಡ್‌ನಲ್ಲಿ ಹೊಂಬಾಳೆ ಖಾತೆ ತೆರೆದಿದೆ.

ವಲ್ಲುವನ್‌ಪೇಟೈಯಲ್ಲಿ ನಡೆಯುವ ಕಥೆ
ಹೋರಾಟಕ್ಕೆ ಸಿದ್ಧ ಎನ್ನುವಂತೆ ಕೀರ್ತಿ ಸುರೇಶ್ ಪೋಸ್ಟರ್‌ನ ಡಿಸೈನ್ ಮಾಡಲಾಗಿದೆ. ಇನ್ನು ವಲ್ಲುವನ್‌ಪೇಟೈ ರೈಲು ನಿಲ್ದಾಣದ ಚಿತ್ರವನ್ನು ನೋಡಬಹುದು. ಹಾಗಾಗಿ ಇದು ವಲ್ಲುವನ್‌ಪೇಟೈಯಲ್ಲಿ ನಡೆಯುವ ಕಥೆ ಎನ್ನುವುದು ಗೊತ್ತಾಗುತ್ತದೆ. 'ಒಂದು ಹಳ್ಳಿಯಲ್ಲಿ ಒಬ್ಬ ರೈತ' ಎಂದು ಬರೆದು ಕೀರ್ತಿ ಸುರೇಶ್ ಪೋಸ್ಟರ್ ಶೇರ್ ಮಾಡಿದ್ದಾರೆ. ಹಾಗಾಗಿ ಇದು ವಲ್ಲುವನ್‌ಪೇಟೈಯಲ್ಲಿ ಕೃಷಿಕನೊಬ್ಬನ ಕಥೆಯೂ ಚಿತ್ರದಲ್ಲಿದೆ. ಕಾಮಿಡಿಯಾಗಿ ಚಿತ್ರದ ಕಥೆಯನ್ನು ಹೇಳುವ ಪ್ರಯತ್ನ ಮಾಡಲಾಗುತ್ತದೆ.

'ರಘು ತಾತ' ಚಿತ್ರಕ್ಕೆ ಚಾಲನೆ
ಈಗಾಗಲೇ 'ರಘು ತಥಾ' ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಚಿತ್ರತಂಡ ಒಂದೆಡೆ ಸೇರಿ ಚರ್ಚೆ ನಡೆಸಿ, ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಮುಂದಿನ ವರ್ಷವೇ ಸಿನಿಮಾ ತೆರೆಗೆ ಬರಲಿದೆ. ಸದ್ಯ ಭಾರತೀಯ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಪ್ಯಾನ್ ಇಂಡಿಯಾ ಸಿನಿಮಾಗಳ ಟ್ರೆಂಡ್ ನಡೀತಿದೆ. ಇದೇ ಸಾಲಿಗೆ 'ರಘುತಥಾ' ಕೂಡ ಸೇರಿಕೊಳ್ಳಲಿದೆ.