For Quick Alerts
  ALLOW NOTIFICATIONS  
  For Daily Alerts

  ಸೂರ್ಯಗೆ ಶುಭಕೋರಿ ಟ್ವೀಟ್: ದೊಡ್ಡ ಸಿಗ್ನಲ್ ಕೊಡ್ತಾ ಹೊಂಬಾಳೆ ಸಂಸ್ಥೆ?

  |

  ತಮಿಳಿನ 'ಸೂರರೈ ಪೊಟ್ರು' ಚಿತ್ರದ ಅಭಿನಯಕ್ಕಾಗಿ ನಟ ಸೂರ್ಯ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ನಡಿಪಿನ್ ನಾಯಕನ್ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಅಭಿಮಾನಿಗಳು, ಸೆಲೆಬ್ರೆಟಿಗಳು‌ ಸೋಶಿಯಲ್ ಮೀಡಿಯಾ ಮೂಲಕ ಅಭಿನಂದನೆ ತಿಳಿಸುತ್ತಿದ್ದಾರೆ. 'ಸೂರರೈ ಪೊಟ್ರು' ಚಿತ್ರ ಒಟ್ಟು 5 ರಾಷ್ಟ್ರ ಪ್ರಶಸ್ತಿಗಳನ್ನು‌ ಬಾಚಿಕೊಂಡಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ‌ಕೂಡ ಟ್ವೀಟ್ ‌ಮಾಡಿ ಇಡೀ ತಂಡಕ್ಕೆ ಅಭಿನಂದನೆ ತಿಳಿಸಿದೆ. ಇದನ್ನು ನೋಡಿದ ಸೂರ್ಯ ಅಭಿಮಾನಿಗಳು‌ ಕೋಡ್ ವರ್ಡ್ ಗೊತ್ತಾಯ್ತು ಬಿಡಿ ಅಂತ ಹಬ್ಬ ಮಾಡ್ತಿದ್ದಾರೆ.

  ಈಗಾಗಲೇ 'ಸುರರೈ ಪೊಟ್ರು' ಸಿನಿಮಾ ನಿರ್ದೇಶಕಿ ಸುಧಾ ಕೊಂಗರ ಕಾಂಬಿನೇಷನ್‌ನಲ್ಲಿ ಹೊಂಬಾಳೆ ಸಂಸ್ಥೆ ಒಂದು ಪ್ಯಾನ್ ಇಂಡಿಯಾ ಸಿನಿಮಾ ಘೋಷಿಸಿದೆ. ಆದರೆ ಆ ಚಿತ್ರಕ್ಕೆ ಹೀರೊ ಯಾರು ಅನ್ನೋದು ಮಾತ್ರ ಕನ್ಫರ್ಮ್ ಆಗಿಲ್ಲ. ಕೆಲವರು ಸೂರ್ಯ ಜೊತೆಗೆ ಈ‌ ಸಿನಿಮಾ ಅಂತ ಗೆಸ್ ಮಾಡಿದ್ದರು. ಮತ್ತೆ ಕೆಲವರು ಯಶ್ ಹೀರೋ ಆಗ್ತಾರಾ? ಅಥವಾ ಬಾಲಿವುಡ್ ನಟನನ್ನು ಹೀರೊ ಆಗಿ ಕರೆ ತರ್ತಾರಾ ? ಅನ್ನೋ ಅನುಮಾನದಲ್ಲಿದ್ದರು. ಆದರೆ ಇದೊಂದು ಟ್ವೀಟ್‌ನಿಂದ ಆ ಚಿತ್ರಕ್ಕೆ ಸೂರ್ಯನೇ ಹೀರೊ ಅಂತ ಅಭಿಮಾನಿಗಳು ಫಿಕ್ಸ್ ಆಗಿಬಿಟ್ಟಿದ್ದಾರೆ. ಕಾಮೆಂಟ್ ಬಾಕ್ಸ್ ತುಂಬಾ ಇದೇ ಚರ್ಚೆ ನಡೀತಿದೆ. ಸೂರ್ಯ, ಸುಧಾ ಕೊಂಗರ, ಹೊಂಬಾಳೆ ಫಿಲ್ಮ್ಸ್ ಕಾಂಬಿನೇಷನ್ ಸಿನಿಮಾ ಗ್ಯಾರಂಟಿ ಬರೆದಿಟ್ಟುಕೊಳ್ಳಿ ಅಂತ ಕಾಲಿವುಡ್ ಮಂದಿ ಹೇಳ್ತಿದ್ದಾರೆ.

  ಮಲಯಾಳಂಗೆ ಹೊಂಬಾಳೆ ಎಂಟ್ರಿ: ಪೃಥ್ವಿರಾಜ್ 'ಟೈಸನ್'ಮಲಯಾಳಂಗೆ ಹೊಂಬಾಳೆ ಎಂಟ್ರಿ: ಪೃಥ್ವಿರಾಜ್ 'ಟೈಸನ್'

  'ಕೆಜಿಎಫ್' ಸರಣಿ ಸಿನಿಮಾಗಳ ನಂತರ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಪರಭಾಷಾ ಫಿಲ್ಮ್ ಮೇಕರ್ಸ್ ಜೊತೆ ಸಿನಿಮಾಗಳನ್ನು ನಿರ್ಮಿಸಲು ಮುಂದಾಗಿದೆ. ತಮಿಳಿನ ಸುಧಾ ಕೊಂಗರ ಮಾತ್ರವಲ್ಲದೇ ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಜೊತೆಗೂ 'ಟೈಸನ್' ಅನ್ನೋ ಸಿನಿಮಾ ಘೋಷಿಸಿದೆ. ಬಾಲಿವುಡ್‌ನಲ್ಲೂ ಸಿನಿಮಾ ಮಾಡುವ ಲೆಕ್ಕಾಚಾರದಲ್ಲಿದ್ದು, ದೊಡ್ಡ ದೊಡ್ಡ ಸೂಪರ್ ಸ್ಟಾರ್‌ಗಳ ಜೊತೆ ಮತ್ತಷ್ಟು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ನಿರ್ಮಿಸಲು ನಿರ್ಮಾಪಕ ವಿಜಯ್ ಕಿರಗಂದೂರ್ ತಯಾರಿ ನಡೆಸಿದ್ದಾರೆ.

  ಟ್ವೀಟ್ ಮಾಡಿ ಹೊಂಬಾಳೆ ಅಭಿನಂದನೆ

  'ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಅದ್ಭುತ ಪ್ರತಿಭೆ ನಮ್ಮ ನೆಚ್ಚಿನ ಸಿನಿಮಾ‌ ನಿರ್ದೇಶಕಿ ಸುಧಾ ಕೊಂಗರ ಅವರಿಗೆ ಅಭಿನಂದನೆ. ನಿಮ್ಮ ಜೊತೆ ಸಿನಿಮಾ ಮಾಡಲು ಕಾತರದಿಂದ ಕಾಯುತ್ತಿದ್ದೇವೆ' ಎಂದು ಟ್ವೀಟ್ ಮಾಡಿದ್ದಾರೆ. ಅದೇ ಟ್ವೀಟ್ ರೀ-ಟ್ವೀಟ್ ಮಾಡಿ ನಡಿಪ್ಪಿನ್ ನಾಯಗನ್ ಸೂರ್ಯ ಅವರಿಗೂ ಅಭಿನಂದನೆಗಳು‌. ನಿಜಕ್ಕೂ ಅತ್ಯದ್ಭುತ ಅಭಿನಯ, ನಿಮ್ಮ ಮುಕುಟಕ್ಕೆ ಮತ್ತೊಂದು ಗರಿ' ಎಂದು ಬರೆದಿದ್ದಾರೆ.

   ಸೂರ್ಯ ಹುಟ್ಟುಹಬ್ಬಕ್ಕೆ ಬೊಂಬಾಟ್ ಗಿಫ್ಟ್

  ಸೂರ್ಯ ಹುಟ್ಟುಹಬ್ಬಕ್ಕೆ ಬೊಂಬಾಟ್ ಗಿಫ್ಟ್

  ಕೊರೊನಾ ಅಟ್ಟಹಾಸದ ಕಾರಣ ಥಿಯೇಟರ್‌ಗಳು ಬಂದ್ ಆಗಿದ್ದ ಸಮಯದಲ್ಲಿ ಒಟಿಟಿಯಲ್ಲಿ 'ಸೂರರೈ ಪೊಟ್ರು' ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು. ನೆಡುಮಾರನ್ ಪಾತ್ರದಲ್ಲಿ ಅದ್ಭುತ ಅಭಿನಯದಿಂದ ಸೂರ್ಯ ಮೋಡಿ ಮಾಡಿದ್ದರು. ಅವರ ಅಭಿನಯ ನೋಡಿದವರು ರಾಷ್ಟ್ರ ಪ್ರಶಸ್ತಿ ಸಿಗೋದು ಗ್ಯಾರೆಂಟಿ ಅಂದಿದ್ದರು. ಇಂದು (ಜುಲೈ.23) ಸೂರ್ಯ ಹುಟ್ಟುಹಬ್ಬ. ಒಂದು ದಿನ ಮೊದಲೇ ಹುಟ್ಟುಹಬ್ಬಕ್ಕೆ ರಾಷ್ಟ್ರಪ್ರಶಸ್ತಿ ರೂಪದಲ್ಲಿ ಮರೆಯಲಾಗದ ಉಡುಗೊರೆ ದೊರೆತಿದೆ.

  ಜಿ. ಆರ್ ಗೋಪಿನಾಥನ್ ಜೀವನಾಧರಿತ ಸಿನಿಮಾ

  'ಏರ್ ಡೆಕ್ಕನ್' ಸಂಸ್ಥಾಪಕ ಜಿ. ಆರ್‌ ಗೋಪಿನಾಥ್ ಅವರ ಪುಸ್ತಕ 'ಸಿಂಪ್ಲಿ ಫ್ಲೈ' ಪುಸ್ತಕ ಆಧರಿಸಿ 'ಸೂರರೈ ಪೊಟ್ರು' ಸಿನಿಮಾ ಮಾಡಲಾಗಿತ್ತು. ಕನ್ನಡ ಮಾಧ್ಯಮದಲ್ಲಿಯೇ ಓದಿ ಸೇನೆ ಸೇರಿದ ಗೋಪಿನಾಥ್ ಬಳಿಕ ಸೇನೆಯಿಂದ ವಾಪಸ್ ಬಂದು 'ಏರ್ ಡೆಕ್ಕನ್' ವಿಮಾನಯಾನ ಸಂಸ್ಥೆ ಪ್ರಾರಂಭ ಮಾಡುತ್ತಾರೆ. ಕಡಿಮೆ ವೆಚ್ಚದಲ್ಲಿ ವಿಮಾನಯಾನ ಅನ್ನುವ ಹೊಸ ಪರಿಕಲ್ಪನೆ ಹುಟ್ಟುಹಾಕಿದ ಹೆಗ್ಗಳಿಕೆ ಅವರದ್ದು. ಅವರ ಜೀವನ ಚರಿತ್ರೆ ಕುರಿತ ಈ ಚಿತ್ರದಲ್ಲಿ ಗೋಪಿನಾಥ್ ಪಾತ್ರಕ್ಕೆ ಸೂರ್ಯ ಬಣ್ಣ ಹಚ್ಚಿ ನಟಿಸಿದ್ದರು. ಈ ಚಿತ್ರಕ್ಕೆ ಹಿಂದೆ ರೀಮೇಕ್ ಆಗುತ್ತಿದೆ.

   'ಸೂರರೈ ಪೊಟ್ರು' ರೀಮೇಕ್‌ನಲ್ಲಿ ಅಕ್ಷಯ್ ಕುಮಾರ್ ನಟನೆ

  'ಸೂರರೈ ಪೊಟ್ರು' ರೀಮೇಕ್‌ನಲ್ಲಿ ಅಕ್ಷಯ್ ಕುಮಾರ್ ನಟನೆ

  ಸೂಪರ್ ಹಿಟ್ 'ಸೂರರೈ ಪೊಟ್ರು' ಚಿತ್ರವನ್ನು ಬಾಲಿವುಡ್ ಪ್ರೇಕ್ಷಕರ ಮುಂದಿಡಲು ನಿರ್ದೇಶಕಿ ಸುಧಾ ಕೊಂಗರ ಮುಂದಾಗಿದ್ದು, ಅಕ್ಷಯ್ ಕುಮಾರ್ ಕ್ಯಾಪ್ಟನ್ ಗೋಪಿನಾಥನ್ ಪಾತ್ರದಲ್ಲಿ ನಟಿಸ್ತಿದ್ದಾರೆ. 'ಸೂರರೈ ಪೊಟ್ರು' ಚಿತ್ರಕ್ಕೆ ರಾಷ್ಟ್ರಪ್ರಶಸ್ತಿಗಳ ಸುರಿಮಳೆ ಆಗಿರುವುದಕ್ಕೆ ಸೂರ್ಯ, ಸುಧಾ ಕೊಂಗರ, ಅಪರ್ಣ ಬಾಲಮುರಳಿಗೆ ಅಭಿನಂದನೆ ತಿಳಿಸಿರುವ ಅಕ್ಷಯ್ ಕುಮಾರ್, ಇಂತಾದೊಂದು ಅದ್ಭುತ ಚಿತ್ರದ ಹಿಂದಿ ರೀಮೇಕ್‌ನಲ್ಲಿ ನಟಿಸೋಕೆ ಉತ್ಸುಕರಾಗಿರುವುದಾಗಿ ಟ್ವೀಟ್ ಮಾಡಿದ್ದಾರೆ.

  English summary
  Films Tweet Hints Collaboration With Surya And Sudha Kongara New Film, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X