For Quick Alerts
  ALLOW NOTIFICATIONS  
  For Daily Alerts

  ಶಿವಮೊಗ್ಗದಲ್ಲಿ ಒಂದಾಗುತ್ತಿದ್ದಾರೆ ತಮಿಳು ಸ್ಟಾರ್ಸ್

  |

  ನಟ ವಿಜಯ್ ಅಭಿನಯದ 'ಇಳಯದಳಪತಿ 64' ಸಿನಿಮಾದ ಚಿತ್ರೀಕರಣ ಶಿವಮೊಗ್ಗದಲ್ಲಿ ನಡೆಯಲಿದೆ. ಡಿಸೆಂಬರ್ 1 ರಿಂದ ಸಿನಿಮಾದ ಶೂಟಿಂಗ್ ಮಲೆನಾಡಿನಲ್ಲಿ ಮುಂದುವರೆಯಲಿದೆ.

  ಈ ಸಿನಿಮಾದಲ್ಲಿ ನಟ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಸಿನಿಮಾದ ಎರಡು ಶೆಡ್ಯೂಲ್ ಶೂಟಿಂಗ್ ಮುಗಿದಿದ್ದು, ಮೂರನೇ ಶೆಡ್ಯೂಲ್ ಶಿವಮೊಗ್ಗದಲ್ಲಿ ನಡೆಯಲಿದೆ. ಈಗಾಗಲೇ ಚಿತ್ರತಂಡ ಶಿವಮೊಗ್ಗಕ್ಕೆ ಬಂದಿದೆ. ಇಷ್ಟು ದಿನ ದೆಹಲಿಯಲ್ಲಿ ಚಿತ್ರೀಕರಣ ನಡೆದಿತ್ತು.

  'ಸಂಭಾವನೆ ಬಿಟ್ಟರೂ ಈ ಪಾತ್ರ ಬಿಡಲ್ಲ' ಎಂದು ಬೇಡಿಕೊಂಡಿದ್ದರು ವಿಜಯ್ ಸೇತುಪತಿ'ಸಂಭಾವನೆ ಬಿಟ್ಟರೂ ಈ ಪಾತ್ರ ಬಿಡಲ್ಲ' ಎಂದು ಬೇಡಿಕೊಂಡಿದ್ದರು ವಿಜಯ್ ಸೇತುಪತಿ

  ಸದ್ಯ, ವಿಜಯ್ ಹಾಗೂ ವಿಜಯ್ ಸೇತುಪತಿ ನಡುವಿನ ಮುಖ್ಯಗಳನ್ನು ಚಿತ್ರೀಕರಣ ಮಾಡಲಾಗುತ್ತಿದೆ. ಶಿವಮೊಗ್ಗದಲ್ಲಿಯೇ ಚಿತ್ರತಂಡ ಕೆಲವು ದಿನ ಉಳಿದುಕೊಳ್ಳಲಿದೆ. ಮಲೆಯಾಳಂ ನಟ ಅಂಟೋನಿ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ಮಾಳವಿಕಾ ಮೆನನ್ ಸಿನಿಮಾದ ನಾಯಕಿ ಆಗಿದ್ದಾರೆ.

  ಲೋಕೇಶ್ ಕನಕರಾಜ್ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಬಿಡುಗಡೆಯಾದ 'ಖೈದಿ' ಸಿನಿಮಾವನ್ನು ಇವರೇ ನಿರ್ದೇಶನ ಮಾಡಿದ್ದರು. ಸಿನಿಮಾದ ಪ್ರಯೋಗಕ್ಕೆ ದೊಡ್ಡ ಮಟ್ಟದ ಮೆಚ್ಚುಗೆ ವ್ಯಕ್ತವಾಗಿತ್ತು.

  ಸೇಲ್ಸ್ ಮ್ಯಾನ್ ಆಗಿದ್ದ ವಿಜಯ್ ಸೇತುಪತಿ ಸ್ಟಾರ್ ಆಗಿಬಿಟ್ರು!ಸೇಲ್ಸ್ ಮ್ಯಾನ್ ಆಗಿದ್ದ ವಿಜಯ್ ಸೇತುಪತಿ ಸ್ಟಾರ್ ಆಗಿಬಿಟ್ರು!

  ವಿಜಯ್ ಅಭಿನಯದ 64ನೇ ಸಿನಿಮಾ ಮುಂದಿನ ವರ್ಷ ಬಿಡುಗಡೆ ಆಗಲಿದೆ. ಅನಿರುದ್ಧ್ ಸಿನಿಮಾಗೆ ಸಂಗೀತ ನೀಡಿದ್ದಾರೆ.

  English summary
  'Ilayathalapathy 64' tamil movie team is now headed to Shivamogga.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X